Wednesday, 9 December 2009
ಸಂಸತ್ತಿನ ಗಮ್ಮತ್ತು..!!
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
16
comments

ಪರಿವರ್ತನೆ..!!
ಆಗ ಹೀಗಿರಲಿಲ್ಲ..
ಮುಖದಲ್ಲಿ ಮುಗ್ಧತೆ..
ತುಟಿಯಂಚಲ್ಲಿ ಕಿರುನಗೆ..
ಕಣ್ಣುಗಳಲ್ಲಿ ಕುತೂಹಲ..
ನಿನ್ನೆಯಷ್ಟೇ ಆತ ಕೇಳಿದ ನೆನಪು...
ನೋಡಿಯೇನ ಅಕ್ಕ..?
ಪಾತರಗಿತ್ತಿ ಪಕ್ಕ..??
ಕಾಲ ಚಕ್ರ ಉರುಳಿದೆ...
ಮಗು ಈಗ ಮಗುವಲ್ಲ...
ಮುಗ್ದತೆ ಎಲ್ಲೋ ಮಾಯವಾಗಿದೆ..
ಮುಖದಲ್ಲೀಗ ಕಪಟ ನಗು..
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ..ತೀರದ ದಾಹ..
ಮತ್ತೀಗ ಆತ ಯಾರ ಕೈಗೂ ಸಿಕ್ಕ..
ಈಗಲೂ ಬಟ್ಟೆ ಕಳಚಿ ಬಿದ್ದಿರಬೇಕು
ಅದೋ..ಅಲ್ಲೇ..
ದುಡ್ದೆಂಬ ಹಾದರಗಿತ್ತಿಯ ಪಕ್ಕ...!!!
ಪರಿವರ್ತನೆ ಜಗದ ನಿಯಮ...!!
Monday, 7 December 2009
ಇನ್ವಿಸಿಬಲ್...!!!!
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
17
comments

ಪರಿಹಾರ ನಿಧಿ
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
5
comments

Sunday, 6 December 2009
ಬೆಲೆ ಏರಿಕೆ
Posted by
Dileep Hegde
Labels:
Kannada Cartoon,
ಕನ್ನಡ ಕಾರ್ಟೂನ್,
ಕಾರ್ಟೂನ್ ಕಾರ್ನರ್ Cartoon Corner,
ವ್ಯಂಗ್ಯಚಿತ್ರ
14
comments

Saturday, 5 December 2009
Thursday, 3 December 2009
ಕಳೆದು ಹೋಗಿದ್ದೇನೆ...!!
ಮಿತಿಯಿಲ್ಲದಂತೆ
ಮತ್ತನೇರಿಸುವ
ನಿನ್ನ ನೋಟದ ನಶೆ ಜಾಮಿನಲ್ಲಿ..
ಮೈ-ಮನದ ತುಂಬ
ಕುಣಿದೆದ್ದು ಸಂಚರಿಸಿದ
ಭಾವನೆಗಳ ಟ್ರಾಫಿಕ್ ಜಾಮಿನಲ್ಲಿ..
ಮನದ ಮಳಿಗೆಯಲಿ
ಒಪ್ಪವಾಗಿ ಜೋಡಿಸಿಟ್ಟ
ನಿನ್ನ ನೆನಪ ಸರಂಜಾಮಿನಲ್ಲಿ..
ಮಿಲನವೋ-ಅಗಲಿಕೆಯೊ
ಜೀವನವೋ-ಮರಣವೋ
ತಿಳಿಯದ ಅಂಜಾಮಿನಲ್ಲಿ...
ಕಳೆದು ಹೋಗಿದ್ದೇನೆ...!
ಬರುವುದೋ ಬಿಡುವುದೋ
ನಿರ್ಧಾರ ನಿನಗೆ ಬಿಟ್ಟಿದ್ದು...
ಹೋಗುವ ಮುನ್ನ
ನಿನ್ನೆದೆಯ ಪುಟಗಳಲಿ
ನನ್ನ ವಿಳಾಸ
ಬರೆದು ಹೋಗಿದ್ದೇನೆ...!!
ಚಿತ್ರ ಕೃಪೆ : ಅಂತರ್ಜಾಲ
Wednesday, 25 November 2009
55 ಪದಗಳ ಕಥೆ.. 55 Word Fiction..
ಇಂಗ್ಲಿಷ್ ನಲ್ಲಿ 55 Word Fiction ತುಂಬಾ ಪ್ರಖ್ಯಾತ.. ಕೇವಲ 55 ಪದಗಳಲ್ಲಿ ಒಂದು ಕಥೆಯನ್ನು ಹೇಳೋ ಈ ಕಥಾ ಪ್ರಾಕಾರ ಯಾಕೋ ಇಷ್ಟವಾಯಿತು... ಕನ್ನಡದಲ್ಲೂ ಯಾಕೆ ಪ್ರಯತ್ನಿಸಬಾರದು ಅಂತ ಅನ್ನಿಸಿತು... ಇದು ನನ್ನ ಮೊದಲ ಪ್ರಯತ್ನ... ಹೇಗಿದೆ..? ಹೇಳ್ತೀರಾ ಅಲ್ವಾ...???
ಶಿಲಾ ಬಾಲಿಕೆ

ಅವನು ಒಬ್ಬ ಶಿಲ್ಪಿ.. ಕಲ್ಲಿನಲ್ಲಿ ಜೀವ ತುಂಬಬಲ್ಲ ಚತುರ... ಅವಳೋ ಅಪ್ಸರೆಯೇ ನಾಚಬೇಕು.. ಅಷ್ಟು ಸುಂದರಿ... ಈತ ಅವಳ ಚೆಲುವಿಗೆ ಮನಸೋತ... ಅವಳು ಇವನ ಕಲೆಗೆ ಸೋತು ಹೃದಯ ಒಪ್ಪಿಸಿದಳು.... ಇವಳ ಮೂರ್ತಿಯನ್ನೇ ಆತ ಕೆತ್ತತೊಡಗಿದ... ಹಗಲು-ಇರುಳು.. ಬಿಸಿಲು-ಮಳೆ.. ಯಾವುದನ್ನೂ ಲೆಕ್ಕಿಸದೆ ಕಲ್ಲು ಕಡೆಯುವುದರಲ್ಲಿ ಮಗ್ನನಾದ...ದಿನ..ವಾರ.. ತಿಂಗಳು.. ವರ್ಷಗಳೇ ಗತಿಸಿದವು... ಅವಳ ಸುಂದರ ಪ್ರತಿಕೃತಿ ತಯಾರಾಯಿತು... ಅವಳು ಇವನಿಗಾಗಿ ಕಾದು ಕಾದು ಸುಸ್ತಾದಳು.. ನೊಂದಳು... ವಿರಹದ ಬೇಗೆಯಲ್ಲಿ ಬೆಂದಳು... ಕಲ್ಲಾಗಿ ಹೋದಳು...!!
ಚಿತ್ರ ಕೃಪೆ : ಅಂತರ್ಜಾಲ..
Thursday, 19 November 2009
ನನ್ನ ಕಣ್ಣೀರಿಗೆ ಬೆಲೆ ಸಿಕ್ಕಿದೆ...!!
ನಾ ಬೇಡ ಎಂದರೂ
ಬೇಗೆಯಲಿ ಬೆಂದು ನೊಂದರೂ..

ನೀ ತೊರೆದೆ ನನ್ನ ಒಡಲು...
ಕಣ್ಣುಗಳಲಿ ಮೂಡಿದ್ದು
ನೀನಂದುಕೊಂಡಂತೆ
ಬರೀ ಒರತೆಯಲ್ಲ...
ಅದು ಕೊನೆಯಿರದ ಕಡಲು...
ಕುಂತಲ್ಲಿ.. ನಿಂತಲ್ಲಿ..
ಹೋದಲ್ಲಿ.. ಬಂದಲ್ಲಿ...
ಅತ್ತೆ... ಮತ್ತೆ.. ಮತ್ತೆ... ಅತ್ತೆ..
ಆ ಒಣ ಮರವನ್ನೂ ತಬ್ಬಿ ಅತ್ತಿದ್ದೆ...
ಅದರಲ್ಲೀಗ ಹೊಸ ಚಿಗುರು...
ಹೊಸ ಹಸಿರು ಮೂಡಿದೆ...
ನನ್ನ ಕಣ್ಣೀರಿಗೆ ಬೆಲೆ ಸಿಕ್ಕಿದೆ...!!
Tuesday, 17 November 2009
ಕನ್ನಡಪ್ರಭದಲ್ಲಿ ಹನಿ ಹನಿ...!!
ಕನ್ನಡ ಪ್ರಭದ ಅಂತರ್ಜಾಲ ತಾಣದಲ್ಲಿ ಬ್ಲಾಗಾಯಣ ಶೀರ್ಷಿಕೆಯಡಿ ಬ್ಲಾಗ್ ಒಂದನ್ನು ಪರಿಚಯಿಸಲಾಗುತ್ತಿದೆ ಮತ್ತು ಆ ಬ್ಲಾಗ್ ನ ಒಂದು ಪ್ರಕಟಣೆಯನ್ನು ಅಲ್ಲಿ ಪ್ರಕಟಿಸಲಾಗುತ್ತದೆ... ಖುಷಿ ವಿಚಾರ ಅಂದ್ರೆ ನನ್ನ ಹನಿ ಹನಿ ಬ್ಲಾಗ್ ಬಗ್ಗೆ ಆಗಸ್ಟ್ ೮ ರ ಸಂಚಿಕೆಯಲ್ಲೇ ಪ್ರಕಟಿಸಲಾಗಿದೆ.. ಅಂತರ್ಜಾಲದಿಂದ ಸ್ವಲ್ಪ ದಿನ ದೂರವಿದ್ದದ್ದರಿಂದ ಇದು ನನ್ನ ಗಮನಕ್ಕೆ ಬಂದಿರಲಿಲ್ಲ... (ಇದಕ್ಕೆ ನನ್ನ ಅತಿಯಾದ ಆಲಸ್ಯವಲ್ಲದೆ ಮತ್ತೇನೂ ಕಾರಣವಿಲ್ಲ..) ಇಂದು ಇದನ್ನು ಗಮನಿಸಿದೆ.. ಖುಷಿಯಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ .. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಬ್ಲಾಗಿನ ಮೇಲಿರಲಿ....
ಹನಿ ಹನಿಯ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿರೋದರ ಕೊಂಡಿ ....
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090808011417&nDate=
Saturday, 14 November 2009
ಇದೀಗ ಬಂದ ಸುದ್ದಿ...!!
.jpg)
ಪ್ರತಿ ಪುಟದಲ್ಲೂ ತುಂಬಿ ತುಳುಕುವ ಸರಕು
ನಮ್ಮ ವಿಶೇಷ ವರದಿ, ಮೇಲಿಂದ ಬಹುಪರಾಕು..!
ಕೊಲೆ ಸುಲಿಗೆ ರಾದ್ದಾಂತ...
ಕಳ್ಳ ಸ್ವಾಮಿಯ ಪೊಳ್ಳು ವೇದಾಂತ...
ರಾಜಕೀಯದವರ ದೊಂಬರಾಟ..
ಭಯೋತ್ಪಾದಕರ ಹಾರಾಟ..
ಕ್ರಿಕೆಟ್ಟಿನವರ ಜೂಜಾಟ..
ಅಸ್ತಮಾ, ಮೂಲವ್ಯಾದಿಗೆ ಹೊಸ ಮದ್ದು...
ನಾಲ್ಕೇ ದಿನದಲ್ಲಿ ಬೊಕ್ಕ ತಲೆ
ಮೇಲೆ ಮಾರುದ್ದದ ಕೇಶರಾಶಿ...!
ಹಾಸಿಗೆ ಸುಖಕ್ಕಾಗಿ ಶಕ್ತಿಶಾಲಿ ಗುಳಿಗೆ..!!
ಪುಟದ ತುಂಬಾ ಅರೆಬೆತ್ತಲೆ ಬಾಲೆ...
ಬಡವರ ಬವಣೆಗೆ ಮಾತ್ರ ಸಿಗದ ಬೆಲೆ...
ಇದೆಲ್ಲದರ ನಡುವೆ...
ಇದೀಗ ಬಂದ ಸುದ್ದಿ...
ಇಂದಿನ ನ್ಯೂಸ್ ಪೇಪರ್
ನಾಳಿನ ರದ್ದಿ...!!
Wednesday, 11 November 2009
ಮಹಾಪ್ರಳಯ...!!! (ಪೋಲಿಸ್ ನ್ಯೂಸ್ ನಲ್ಲಿ ಪ್ರಕಟಿತ)
ಜಗತ್ತಿನೆಲ್ಲೆಡೆ ಈಗ 2012 ರಲ್ಲಿ ಪ್ರಳಯವಾಗಿ ಭೂಮಿ ಸರ್ವನಾಶವಾಗುತ್ತದೆ ಎನ್ನುವ ಬಗ್ಗೆ ಗುಲ್ಲೆದ್ದಿದೆ... ಈ ಬಗ್ಗೆ ವಿಶೇಷ ವರದಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ , ದೂರದರ್ಶನ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.. ಹಾಗೆಯೇ ಈ ಕುರಿತು ಭಾರಿ ಬಜೆಟ್ ನ ಹಾಲಿವುಡ್ ಚಲನಚಿತ್ರವೊಂದು ಕೂಡಾ ಬಿಡುಗಡೆಯಾಗಿದೆ.. ಇದೇ ವಿಷಯದ ಬಗ್ಗೆ ಪೋಲಿಸ್ ನ್ಯೂಸ್ ಪತ್ರಿಕೆಗಾಗಿ ಮಿತ್ರ ವಿನಯ್ ಭಟ್ ರವರ ಜೊತೆಗೂಡಿ ಬರೆದ ಚಿಕ್ಕ ಪುಸ್ತಕವೊಂದರ ಪ್ರತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ... ಓದಿ... ಪ್ರತಿಕ್ರಿಯಿಸಿ... :)
















(ಕೃಪೆ: ಪೋಲಿಸ್ ನ್ಯೂಸ್ )
Saturday, 10 October 2009
Monday, 5 October 2009
Friday, 2 October 2009
Sunday, 27 September 2009
Saturday, 26 September 2009
ನಿಶ್ಯಬ್ದ ಗಾನ...!!
ಅವಳು ಕನಸಿನ ಕದ ತಟ್ಟಿದಳು..
ಕದ ತೆರೆದು ಬಳಿ ಕರೆದು
ಮನದ ಮಡಿಲಲ್ಲಿ ಬೆಚ್ಚಗೆ ಬಚ್ಚಿಟ್ಟರೂ...
ಮಾತಿಲ್ಲ ಕಥೆಯಿಲ್ಲ...
ಅವಳದ್ದು ದಿವ್ಯ ಮೌನ...!!
ಎಂದಿನಂತೆಯೇ ಇಂದು ಕೂಡ
ಅವಳು ನನ್ನೆದುರಲ್ಲಿ ನಿಂತಳು...
ಕೈ ಹಿಡಿದು ಬೆರಳುಗಳ ಬೆಸೆದು
ಕಣ್ಣ ಕನ್ನಡಿಯಲ್ಲಿ ಕದಲದಂತೆ ಮುಚ್ಚಿಟ್ಟರೂ...
ಮೌನ ಮಾತಾಗಲಿಲ್ಲ...
ಅವಳದ್ದು ಅವಿಚ್ಛಿನ್ನ ಧ್ಯಾನ..!!
ಇಂದಿನಂತೆ ಎಂದೆಂದಿಗೂ
ಜೊತೆ ಬಾಳುವ ಭಾಷೆಯಿತ್ತಳು...
ತುಟಿಗಳಲಿ ತುಟಿ ಬೆಸೆದು
ನಶೆಗಡಲ ಅಲೆಯಲ್ಲಿ ಮುಳುಗಿ ಮೈಮರೆತರೂ...
ಅವಳ ಎದೆಯಾಸೆ ಹಾಡಾಗಲಿಲ್ಲ...
ಅವಳದ್ದು ನಿಶ್ಯಬ್ದ ಗಾನ...!!
Wednesday, 23 September 2009
ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೨

ಸುತ್ತಲಿನ ಜನರ ನೋಟವೆಲ್ಲ ನಮ್ಮ ಮೇಲೇ ನೆಟ್ಟಿತ್ತು... ಪುಕ್ಕಟೆ ಮನೋರಂಜನೆ ಸಿಗ್ತಿದ್ರೆ ಯಾವೊನ್ ಬಿಡ್ತಾನೆ ಹೇಳಿ..? ನನಗೆ ಏನು ಮಾಡುವದು, TC ಜೊತೆ ಹೇಗೆ ಮಾತಾಡುವದು ಒಂದೂ ಗೊತ್ತಾಗ್ತಿಲ್ಲ... ನನ್ನ ಕೊಲೀಗ್ ಇಬ್ಬರಿಗೂ ಒಂದೇ ಟಿಕೆಟ್ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ...
"ಕ್ಷಮಿಸಿ ಸಾರ್.. ಎರಡೂ ಟಿಕೆಟ್ ಒಬ್ರೆ ಮಾಡ್ಸಿದ್ದು... ಒಬ್ಬರ ಬಳಿ ಐಡೆಂಟಿಟೀ ಪ್ರೂಫ್ ಇದ್ರೆ ಸಾಕು ಅಂತ ನಾವು ತಿಳಿದಿದ್ದೆವು.. ನನ್ನ ಆಫೀಸ್ ID ಬೇಕಾದ್ರೆ ಇದೆ... ನೋಡಿ ಸಾರ್..." ಅಂತ ಹೇಳ್ತಾ ನನ್ನ ಆಫೀಸ್ ID ಎದುರಿಗೆ ಹಿಡಿದೆ...
"ಇದೆಲ್ಲಾ ನಡೆಯಲ್ಲಪ್ಪಾ... ಸರ್ಕಾರದವ್ರು issue ಮಾಡಿರೋ ಐಡಿ ಪ್ರೂಫ್ ಇದ್ರೆ ಕೊಡು" ಟೀಸಿ ಇನ್ನೂ ಗಟ್ಟಿಯಾಗಿ ಹೇಳಿದ...
"ಇದೊಂದು ಸಾರ್ತಿ ನಮ್ಮ ತಪ್ಪನ್ನ ಕ್ಷಮಿಸಿಬಿಡಿ ಸಾರ್.. Please..." ನಾನು ಹಲ್ಲು ಗಿಂಜಿದೆ..
"ಆಯ್ತು.. ಇನ್ನೊಮ್ಮೆ ಈ ರೀತಿ ಮಾಡಬೇಡಿ... ಏನೋ Educated ತರ ಕಾಣಿಸ್ತೀರಾ... ನೀವೇ ಹೀಗೆ ಮಾಡಿದ್ರೆ ಇನ್ನು ಕಲೀದೇ ಇರೋವ್ರ ಪರಿಸ್ಥಿತಿ ಹೇಗಿರತ್ತೆ..? ಯಾವಾಗ ಸುಧಾರಿಸ್ತೀರೋ ದೇವರಿಗೆ ಗೊತ್ತು" TC ಟಿಕೆಟ್ ಮೇಲೆ ಸಹಿ ಮಾಡಿ ಮುಂದಿನ ಬೋಗಿಗೆ ನಡೆದ...
ನಾವಿಬ್ಬರೂ ಒಮ್ಮೆ ನಿಟ್ಟುಸಿರು ಬಿಟ್ಟೆವು... ಅಬ್ಬಾ... ಅಂತೂ ಬೀಸೊ ದೊಣ್ಣೆಯಿ೦ದ ತಪ್ಪಿಸಿಕೊಂಡೇವಲ್ಲ... TC ಗೆ ಮನಸ್ಸಿನಲ್ಲೇ ಧನ್ಯವಾದ ಸಲ್ಲಿಸಿದೆವು...ಏನೋ ನಡೆಯಲಿದೆ ಅಂತ ನಿದ್ದೆ ಬಿಟ್ಟು ನೋಟ ನಮ್ಮತ್ತ ನೆಟ್ಟಿದ್ದ ಜನರಿಗೆಲ್ಲ ನಿರಾಸೆಯಾಯ್ತೋ ಏನೋ... ಮತ್ತೆ ಸೀಟಿಗೊರಗಿ ನಿದ್ದೆ ಹೋದರು...
ನಾವಿಬ್ಬರೂ ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ನಮ್ಮ ಹರಟೆ ಅಲ್ಲಿಂದಿಲ್ಲಿಗೆ ವಾಕಿಂಗ್ ಮುಂದುವರೆಸಿದೆವು... ಇನ್ನೊಂದು ಸ್ಟೇಶನ್ ಕಳೆದರೆ ಮುಂದಿನದೇ ಹಾವೇರಿ... TC ಯಿಂದ ತಪ್ಪಿಸಿಕೊಂಡದ್ದು ಒಂದಾದರೆ ಇನ್ನೇನು ಸ್ವಲ್ಪ ಸಮಯದಲ್ಲೇ ನಾನು ಮನೆ ಸೇರಿರುತ್ತೇನೆ... ಹಾಯಾಗಿ ಅಮ್ಮನ ಕೈ ಅಡುಗೆ ಉಂಡು ಭರ್ಜರಿ ನಿದ್ದೆ ಹೊಡೆಯಬಹುದು ಅನ್ನೋದು ಇನ್ನೊಂದು... ನಾನು ಖುಷಿಯಾಗಿದ್ದೆ...
ಅಷ್ಟರಲ್ಲೇ ಮತ್ತೊಮ್ಮೆ ನಮ್ಮ ಬೋಗಿಯಲ್ಲಿನ ಪ್ರಯಾಣಿಕರೆಲ್ಲ ತಮ್ಮ ಬ್ಯಾಗ್ ಕೆಳಗಿಳಿಸಿ ಟಿಕೆಟ್ ಹೊರ ತೆಗೆಯತೊಡಗಿದರು..ನೋಡಿದರೆ ಇನ್ನೊಬ್ಬ TC ಪ್ರತ್ಯಕ್ಷನಾಗಿದ್ದ...!! ಆದರೆ ನಮಗೀಗ ಧೈರ್ಯ ಬಂದಿತ್ತು.. ಆಗಲೇ ಒಬ್ಬ ಟೀಸಿ ಎಲ್ಲವನ್ನೂ ಪರೀಕ್ಷಿಸಿ ಓಕೇ ಅಂತ ಹೇಳಿದ್ದನಲ್ಲ..! ನಾವೂ ಟಿಕೆಟ್ ಕೈಲಿ ಹಿಡಿದು ನಿಂತೆವು...
ಈ ಬಾರಿ ನನ್ನ ಕೊಲೀಗ್ ಎರಡೂ ಟಿಕೆಟ್ ಮತ್ತು ತನ್ನ ಡ್ರೈವಿಂಗ್ ಲೈಸೆನ್ಸ್ ಕೊಟ್ಟ...
"ಎರಡು ಟಿಕೆಟ್ ಇದೆ.. ಇನ್ನೊಂದು ಐಡೀ ಎಲ್ಲಿ ಸರ್..?? ಒಂದೇ ಕೊಟ್ಟಿದ್ದೀರಾ... " TC ಕೇಳಿದ...
"ಎರಡೂ ಟಿಕೆಟ್ ಮಾಡಿದ್ದು ಒಬ್ಬರೇ ಸರ್.. ಅದಕ್ಕೇ ಒಂದೇ ಐಡೀ ಕೊಟ್ಟಿರೋದು" ನನ್ನ ಕೊಲೀಗ್ ನ ಉತ್ತರ...
"ಅದು ಹೇಗೆ ಆಗತ್ತೆ..?? ಎರಡು ಪ್ರತ್ಯೇಕ ಟಿಕೆಟ್ ಇದೆ ಅಂದ್ರೆ, ಎರಡು ಪ್ರತ್ಯೇಕ ಐಡೀ ಇರಲೇ ಬೇಕು... ಹತ್ತು ಜನರ ಹೆಸರಲ್ಲಿ ಒಂದೇ ಟಿಕೆಟ್ ಮಾಡಿಸಿ, ಒಂದೇ ಐಡೀ ಕೊಡಿ... ನಡೆಯುತ್ತೆ... ಆದರೆ ನೀವು ಕೊಟ್ಟಿರೋದು ಎರಡು ಟಿಕೆಟ್... ಮತ್ತೊಂದು ಐಡೀ ತೆಗೀರಿ ಬೇಗ..." TC ಧ್ವನಿ ಏರಿಸಿದ...
"ಆಗಲೇ ಇನ್ನೊಬ್ರು TC ಬಂದು, ಎಲ್ಲಾ check ಮಾಡಿ ಸಹಿ ಮಾಡಿ ಹೋಗಿದ್ದಾರೆ... ನಿಮಗೆ ಮತ್ತೇನು ಕಷ್ಟ..? ನಮ್ಮ ಬಳಿ ಇರೋದು ಒಂದೇ ಐಡೀ ಪ್ರೂಫ್..." ಈ ಸಾರಿ ನಾನು ಸೋಲು ಒಪ್ಪಿಕೊಳ್ಳಲು ತಯಾರಿರಲಿಲ್ಲ...
"ಏನು ತಮಾಷೆ ಮಾಡ್ತಿದೀರಾ..?? ಈ ಟಿಕೆಟ್ ಮೇಲೆ ಸಹಿ ಎಲ್ಲಿದೆ...?? ನಿಜವಾಗಲೂ ಟಿಕೆಟ್ ವೆರಿಫೈ ಮಾಡ್ಸಿದ್ರಾ...?? ಇಲ್ಲಾ TC ಬಂದಾಗ ಮತ್ತೆಲ್ಲೋ ಅಡಗಿ ಕುಳ್ತಿದ್ರಾ...?? Rules ಅಂದ್ರೆ Rules.. ಹೆಚ್ಚಿಗೆ ಮಾತಾಡದೆ ಇನ್ನೊಂದು ಪ್ರೂಫ್ ತೋರ್ಸಿ... ಇಲ್ಲಾ ಅಂದ್ರೆ ದಂಡ ಕಟ್ಟಿ..." TC ಧ್ವನಿ ಕೇಳಿ ಪಕ್ಕದ ಬೋಗಿಯ ಒಂದಷ್ಟು ಪ್ರಯಾಣಿಕರೂ ಮಜಾ ಸವಿಯಲು ನಮ್ಮ ಬೋಗಿಯಲ್ಲಿ ತೂರಿಕೊಂಡರು...
ಅವನಿಂದ ಟಿಕೆಟ್ ತಗೊಂಡು ನೋಡಿದ ನಮಗೆ ಶಾಕ್ ಹೊಡೆದಂತೆ ಭಾಸವಾಯ್ತು...
ಮೊದಲು ಬಂದ TC ಎರಡೂ ಟಿಕೆಟ್ ಮೇಲೆ ಸಹಿ ಮಾಡಿದ್ದಾನೆ ಅಂತಲೇ ನಮ್ಮ ಕಲ್ಪನೆಯಾಗಿತ್ತು... ಆದರೆ ಆ ಮಹಾನುಭಾವ ಕೇವಲ ನನ್ನ ಕೊಲೀಗ್ ಟಿಕೆಟ್ ಮೇಲೆ ಮಾತ್ರ ಸಹಿ ಮಾಡಿದ್ದ...!!
"Rules ನಮಗೊಂದೇ apply ಆಗತ್ತಾ..?? ನಿಮಗೂ rules apply ಆಗಬೇಕು ತಾನೇ..? ಎಲ್ಲಿ ನಿಮ್ಮ uniform..? ನಿಮಗೂ ಒಂದು Identity Card ಅಂತ ಇರಬೇಕಲ್ಲ...! ಇಲ್ಲಾ ಅಂದ್ರೆ ನಿಮ್ಮನ್ನ ನಾವು ನಂಬೋದು ಹೇಗೆ..??" ನಮ್ಮ ಹುಂಬತನದ ಪ್ರಶ್ನೆ...!!
"ಒಹ್.. ನಿಮಗೂ ರೂಲ್ಸ್ ಗೊತ್ತು..! Uniform ಹಾಕಲೇ ಬೇಕಂತ ಯಾವುದೇ ನಿಯಮವಿಲ್ಲ.. ಇನ್ನು ನನ್ನ ID Card ವಿಷಯ... ಇಲ್ಲಿದೆ ನೋಡಿ... ಸರಿಯಾಗಿ ನೋಡಿಕೊಳ್ಳಿ... ಮತ್ತೀಗ ನಿಮ್ಮ ಇನ್ನೊಂದು ID Proof ಕೊಡಿ..." TC ತನ್ನ ID Card ನನ್ನ ಕೈಗಿತ್ತ..
"ಆಗಲ್ಲ ಸರ್.. ನಮ್ಮ ಬಳಿ ಇರೋದು ಒಂದೇ ID Card.. ಮತ್ತೆ ಆಗಲೇ ಮತ್ತೊಬ್ಬರು ಎಲ್ಲಾ verify ಮಾಡಿಯಾಗಿದೆ.. ಏನು ಮಾಡ್ತೀರೋ ಮಾಡಿಕೊಳ್ಳಿ..." ನಾವೂ ಧ್ವನಿ ಏರಿಸಿದೆವು...
"ಆಯ್ತು ಹಾಗಿದ್ರೆ... ಮುಂದಿನ station ನಲ್ಲಿ ಇಳಿದುಕೊಂಡು ಮಾತಾಡೋಣ.. ದಂಡ ಕಟ್ಟಿದರೆ ಸರಿ.. ಇಲ್ಲಾ ಅಂದ್ರೆ ನಿಮ್ಮನ್ನ ಇಲ್ಲೇ ಇಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ....." TC ಹೇಳಿದ ಮುಂದಿನ ಕ್ರಮ ಯಾವುದಿರಬಹುದೆಂಬ ಕಲ್ಪನೆ ನನಗೂ ಇರಲಿಲ್ಲ...
ಎಲ್ಲವೂ ಅತಿಯಾಯ್ತು ಅಂತ ಅನಿಸಿತು.. ಆಗಲೇ ಬೋಗಿಯಲ್ಲಿ ನಾವು ತಮಾಷೆಯ ವಸ್ತುವಾಗಿಯಾಗಿತ್ತು... ಇವತ್ತೂ ಈ ರೀತಿ ಖರ್ಚು ಮಾಡೋದು ನಮ್ಮ ಹಣೆಯಲ್ಲಿ ಬರೆದಿತ್ತು... ಅದೂ ಕೇವಲ 377 ರೂಪಾಯಿ ಗಳಿಗೆ ನಾವು ಇಷ್ಟೆಲ್ಲಾ ಗಲಾಟೆ ಮಾಡಿಕೊಂಡೆವಲ್ಲಾ ಅನ್ನಿಸತೊಡಗಿತು... 500 ರ ಒಂದು ನೋಟು ತೆಗೆದು ಅವನ ಕೈಗಿತ್ತೆ... ಅವನು ರಸೀತಿ ಬರೆಯತೊಡಗಿದ...
" 250 ರೂ.ದಂಡ ಮತ್ತು ಟಿಕೆಟ್ ನ 127 ರೂ. ಎರಡೂ ಸೇರಿ 377 ರೂ ಕಟ್ಟಬೇಕು... 500 ರೂ ಕೊಟ್ಟಿದ್ದೀರ.. ಇನ್ನು ಎರಡು ರೂಪಾಯಿ ಚಿಲ್ಲರೆ ಇದ್ರೆ ಕೊಡಿ.. ನಿಮಗೆ 125 ರೂ ವಾಪಸ್ ಕೊಡ್ತೇನೆ.." TC ರಸೀತಿ ಕೈಗಿಡುತ್ತಾ ಹೇಳಿದ...
ಯಾವತ್ತೂ ತಾಳ್ಮೆ ಕಳೆದುಕೊಳ್ಳದ ನನಗೆ ಅವತ್ತು ಏನಾಯ್ತೋ ಗೊತ್ತಿಲ್ಲ...
" ಚಿಲ್ಲರೆ ಏಕೆ ವಾಪಸ್ ಕೊಡ್ತೀರಾ..?? ನೀವೇ ಇಟ್ಟುಕೊಳ್ಳಿ...!" ನನ್ನಲ್ಲಿನ ಅಹಂ ಮಾತನಾಡಿತ್ತು..
"Mind your tongue mister...! ಮೈ ಮೇಲೆ ಎಚ್ಚರ ಇದ್ದು ಈ ರೀತಿ ಮಾತಾಡ್ತಿದೀರಾ ತಾನೇ..? ನಾಲಿಗೆ ಮೇಲೆ ಸ್ವಲ್ಪ ಹಿಡಿತ ಇಟ್ಟು ಮಾತಾಡಿ.. ಸರ್ಕಾರ ನಮಗೆ ಸಂಬಳ ಕೊಡುತ್ತೆ... ನಿಮ್ಮ ಚಿಲ್ಲರೆ ಇಟ್ಟುಕೊಂಡು ನನ್ನ ಜೀವನ ಸಾಗಿಸೋ ದುರ್ಗತಿ ನನಗೆ ಬಂದಿಲ್ಲ... ಏನೋ ಒಳ್ಳೇ ಓದಿ ಒಳ್ಳೇ job ಮಾಡ್ತಿರೋರ ಹಾಗೆ ಕಾಣಿಸ್ತೀರ... ನಿಮ್ಮ ಅಹಂಕಾರದ ಮಾತುಗಳೇನಿದ್ರೂ ನಿಮ್ಮ ಬಳಿಯೆ ಇಟ್ಟುಕೊಳ್ಳಿ.. ಮತ್ತೆ ಇಂತ ತಪ್ಪು ಮಾಡಬೇಡಿ" ಹೇಳಿ 125 ರೂ ನನ್ನ ಕೈಗಿತ್ತು ಆತ ಇಳಿದು ಹೊರಟು ಹೋದ...
ಎಲ್ಲರ ಮುಂದೆ ಉಗಿಸಿಕೊಂಡ ನನ್ನ ಗತಿ ದೇವರಿಗೆ ಪ್ರೀತಿ ಅನ್ನುವಂತಿತ್ತು... ಹೌದು.. ತಪ್ಪೆಲ್ಲ ನಮ್ಮದೇ ಇತ್ತು.. ಟಿಕೆಟ್ ಮೇಲಿನ ನಿಯಮಗಳನ್ನ ಸರಿಯಾಗಿ ಓದದೇ ಇದ್ದದ್ದು, ಜೊತೆಗೆ ID Card ತಗೊಂಡು ಹೋಗದೇ ಇದ್ದದ್ದು, ಮೊದಲ TC verification ಮುಗಿಸಿದಾಗ ಸಹಿ ಮಾಡಿದ್ದಾನಾ ಇಲ್ವಾ ಅಂತ ನೋಡದೇ ಇದ್ದದ್ದು, ಅನಾವಶ್ಯಕವಾಗಿ ಜಗಳಕ್ಕೆ ನಿಂತು ನಗೆಪಾಟಲಿಗೆ ಗುರಿಯಾಗಿದ್ದು.. ಒಂದೇ ಎರಡೇ..!!? ಒಂದರ ನಂತರ ಒಂದರಂತೆ ತಪ್ಪುಗಳ ಸರಮಾಲೆ...
TC ತನ್ನ ಕೆಲಸ ಸರಿಯಾಗೇ ಮಾಡಿದ್ದ.. ಆಮೇಲೆ ನನಗೆ ಅನಿಸಿದ್ದಿಷ್ಟು.. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಲ್ಲೂ ಇಂತಹ ನಿಷ್ಠಾವಂತ ಅಧಿಕಾರಿಗಳಿದ್ದರೆ ನಮ್ಮ ದೇಶದಲ್ಲಿ ಆಗ್ತಿರೋ ಎಷ್ಟೋ ಅವಗಡಗಳನ್ನ ತಪ್ಪಿಸಬಹುದಿತ್ತು.. ಅದೆಷ್ಟೋ ಪಾತಕಿಗಳನ್ನ, ದೇಶದ್ರೋಹಿಗಳನ್ನ ಸದೆಬಡಿಯಬಹುದಿತ್ತು..
ನಾನು ಮತ್ತದೇ ಟ್ರೈನ್ ನಲ್ಲಿ ಊರಿಗೆ ಹೋಗಲು ಎದುರು ನೋಡುತ್ತಿದ್ದೇನೆ.. ಈ ಬಾರಿ ID Card ಇಟ್ಟುಕೊಂಡೇ ಹೋಗ್ತೇನೆ... ಅದೇ TC ಮತ್ತೆ ಸಿಕ್ಕರೆ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಅವನ ಪ್ರಾಮಾಣಿಕತೆಗೊಂದು ಸಲ್ಯೂಟ್ ಹೊಡೆಯುತ್ತೇನೆ...!!
Subscribe to:
Posts (Atom)