Wednesday, 25 November 2009

55 ಪದಗಳ ಕಥೆ.. 55 Word Fiction..



ಇಂಗ್ಲಿಷ್ ನಲ್ಲಿ 55 Word Fiction ತುಂಬಾ ಪ್ರಖ್ಯಾತ.. ಕೇವಲ 55 ಪದಗಳಲ್ಲಿ ಒಂದು ಕಥೆಯನ್ನು ಹೇಳೋ ಕಥಾ ಪ್ರಾಕಾರ ಯಾಕೋ ಇಷ್ಟವಾಯಿತು... ಕನ್ನಡದಲ್ಲೂ ಯಾಕೆ ಪ್ರಯತ್ನಿಸಬಾರದು ಅಂತ ಅನ್ನಿಸಿತು... ಇದು ನನ್ನ ಮೊದಲ ಪ್ರಯತ್ನ... ಹೇಗಿದೆ..? ಹೇಳ್ತೀರಾ ಅಲ್ವಾ...???




ಶಿಲಾ ಬಾಲಿಕೆ

ಅವನು ಒಬ್ಬ ಶಿಲ್ಪಿ.. ಕಲ್ಲಿನಲ್ಲಿ ಜೀವ ತುಂಬಬಲ್ಲ ಚತುರ... ಅವಳೋ ಅಪ್ಸರೆಯೇ ನಾಚಬೇಕು.. ಅಷ್ಟು ಸುಂದರಿ... ಈತ ಅವಳ ಚೆಲುವಿಗೆ ಮನಸೋತ... ಅವಳು ಇವನ ಕಲೆಗೆ ಸೋತು ಹೃದಯ ಒಪ್ಪಿಸಿದಳು.... ಇವಳ ಮೂರ್ತಿಯನ್ನೇ ಆತ ಕೆತ್ತತೊಡಗಿದ... ಹಗಲು-ಇರುಳು.. ಬಿಸಿಲು-ಮಳೆ.. ಯಾವುದನ್ನೂ ಲೆಕ್ಕಿಸದೆ ಕಲ್ಲು ಕಡೆಯುವುದರಲ್ಲಿ ಮಗ್ನನಾದ...ದಿನ..ವಾರ.. ತಿಂಗಳು.. ವರ್ಷಗಳೇ ಗತಿಸಿದವು... ಅವಳ ಸುಂದರ ಪ್ರತಿಕೃತಿ ತಯಾರಾಯಿತು... ಅವಳು ಇವನಿಗಾಗಿ ಕಾದು ಕಾದು ಸುಸ್ತಾದಳು.. ನೊಂದಳು... ವಿರಹದ ಬೇಗೆಯಲ್ಲಿ ಬೆಂದಳು... ಕಲ್ಲಾಗಿ ಹೋದಳು...!!




ಚಿತ್ರ ಕೃಪೆ : ಅಂತರ್ಜಾಲ..

45 comments:

  1. ತು೦ಬಾ ತು೦ಬಾ ಚೆನ್ನಾಗಿದೆ ದಿಲೀಪ್. ಸು೦ದರ ಲೇಖನಕ್ಕೆ ಅಭಿನ೦ದನೆಗಳು.

    ReplyDelete
  2. ಪಾಪ ಕಣ್ರೀ ಅವಳು..:(:(:(
    ಸಣ್ಣ ಕಥೆಗಳೆಂದರೆ ನೆನಪಾಯ್ತು..ಎಲ್ಲೋ ಓದಿದ್ದೆ..ಒಂದೇ ವಾಕ್ಯದ ಕಥೆ ಇದು..
    " ಆತ ಕಾರಿನ ಪೆಟ್ರೋಲ್ ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಎಂದು ಪರೀಕ್ಷಿಸಲು ಕಡ್ಡಿ ಗೀರಿದ, ಪೆಟ್ರೋಲ್ ಇತ್ತು..."

    ನಿಮ್ಮ ಕಥೆ ಸಕ್ಕತ್ತಾಗಿದೆ..ಅಂದ ಹಾಗೆ ೫೫ ಪದಗಳೇ ಯಾಕೆ? ಅದಕ್ಕೆ ಏನಾದ್ರೂ significance ಇದೆಯಾ?

    ReplyDelete
  3. ತುಂಬಾ ಇಷ್ಟವಾಯಿತು...ಇಬ್ಬರೂ ಪಾಪ ಅಲ್ವಾ? ಮುಂದಿನ ಕಥೆಯಲ್ಲಿ ಸುಖಾಂತ್ಯ ಕೊಡಿ plz....

    ReplyDelete
  4. ಪಾಪ ಅಲ್ವಾ ದಿಲೀಪ್....
    ಸುಖಾಂತ್ಯದ ಕಥೆ ಮುಂದೆ ಬರೆಯಿರಿ.....
    ಚೆನ್ನಾಗಿದೆ....

    ReplyDelete
  5. ದಿಲೀಪ್,
    ಮಾರ್ವೆಲ್ಲಸ್
    ಸಣ್ಣ ಕಥೆ ಎಷ್ಟೊಂದು ಅರ್ಥ ನೀಡುತ್ತದೆ

    ReplyDelete
  6. ದಿಲೀಪ್,
    ತುಂಬಾ ಸುಂದರವಾಗಿ ಮೂಡಿ ಬಂದಿದೆ . ಮೊದಲ ಪ್ರಯತ್ನ .. ಸೂಪರ್ ಸಕ್ಸೆಸ್ !! ಹೀಗೆ ಮುಂದುವರಿಯಲು ಯಾವ ತೊಂದರೆಯೂ ಇಲ್ಲ !

    ReplyDelete
  7. ದಿಲಿಪ್...

    ನಿಮ್ಮ ಪ್ರಯತ್ನ ಇಷ್ಟವಾಯಿತು...
    ಸೊಗಸಾಗಿದೆ...

    ಪ್ರೀತಿಗಾಗಿ ಕಾದು ಕಾದು ಬೆಂದವಳು..
    ಕಲ್ಲಾಗಿ ಹೋದಳು...

    ಇಂಥಹ ಇನ್ನಷ್ಟು ಕಥೆಗಳು ಬರಲಿ...

    ಅಭಿನಂದನೆಗಳು...

    ReplyDelete
  8. ಹೀಗಾಗಬಾರದಿತ್ತು....!!!

    ಉತ್ತಮ ಪ್ರಯತ್ನ :)

    ReplyDelete
  9. ದಿಲೀಪ್,
    ಕಥೆ ಚಿಕ್ಕದಾದರೂ ಅರ್ಥ ತುಂಬಾ ಇದೆ... ಕಥೆಗೆ ಪದಗಳನ್ನು ಚೆನ್ನಾಗಿ ಆರಿಸಿ ಹೆಣೆದಿದ್ದಿರ..
    ನಿಮ್ಮವ,
    ರಾಘು.

    ReplyDelete
  10. ಪರಮ್..
    ಅನಂತ ಧನ್ಯವಾದಗಳು.. ಆಗಾಗ ಬರುತ್ತಿರಿ..

    ReplyDelete
  11. @ಆಕಾಶಬುಟ್ಟಿ
    ನೀವ್ಹೇಳಿದ ಕಥೆ, ವೈ.ಎನ್.ಕೆ ಅವರು ಹೇಳಿದ್ದು ಅಂತ ನೆನಪು. ಇರಲಿ, ಅದು ಇನ್ನೂ ಒಂಚೂರು ಮುಂದುವರೆಯುತ್ತೆ.
    "ಆತ ಕಾರಿನ ಪೆಟ್ರೋಲ್ ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಎಂದು ಪರೀಕ್ಷಿಸಲು ಕಡ್ಡಿ ಗೀರಿದ, ಪೆಟ್ರೋಲ್ ಇತ್ತು. ವಯಸ್ಸು ನಲವತ್ತು."

    ದಿಲೀಪ್, ಕಥೆ ಚೆನ್ನಾಗಿದೆ.

    ReplyDelete
  12. ಚೇತನಾ...
    ಎರಡೇ ಸಾಲುಗಳಲ್ಲಿ ಎಷ್ಟು ದೊಡ್ಡ ಕಥೆ..!! ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...
    New Times ಎನ್ನುವ ಪತ್ರಿಕೆ ಮೊದಲ ಬಾರಿಗೆ ಈ ತರದ ಕತೆಗಳನ್ನು ಓದುಗರಿಂದ ಆಹ್ವಾನಿಸಿತು... ನಂತರ ಇದು ಎಲ್ಲೆಡೆ ಜನಪ್ರಿಯವಾಯಿತು.. ಆದರೆ ಏಕೆ ಕೇವಲ ೫೫ ಪದಗಳು...?? ಸಧ್ಯಕ್ಕೆ ನನಗೂ ಗೊತ್ತಿಲ್ಲ.. ಅಕಸ್ಮಾತ್ ಗೊತ್ತಾದರೆ ನಿಮಗೂ ತಿಳಿಸುತ್ತೇನೆ...
    ನನಗೂ ಅವಳು ಪಾಪ ಅನ್ನಿಸಿತು... ಪ್ರತಿಕ್ರಿಯೆಗಾಗಿ ಧನ್ಯವಾದಗಳು...

    ReplyDelete
  13. ಜ್ಯೋತಿ..
    ಖಂಡಿತಾ.. ಮುಂದಿನ ಸಾರ್ತಿ ಸುಖಾಂತ್ಯದ ಕತೆ ಬರೆಯಲು ಪ್ರಯತ್ನಿಸುತ್ತೇನೆ..
    ಜೀವಂತ ಇರುವ ಪ್ರೇಯಸಿಯನ್ನು ಬಿಟ್ಟು ಕಲ್ಲಿನ ಬೊಂಬೆ ಕೆತ್ತಲು ಕುಳಿತನಲ್ಲ.. ಅದಕ್ಕೆ ನನಗೆ ಆತ ಅಷ್ಟೊಂದು ಪಾಪ ಅನ್ನಿಸಲಿಲ್ಲ... ಅವಳು ಮಾತ್ರ ನಿಜಕ್ಕೂ ಪಾಪ..ಪ್ರತಿಕ್ರಿಯೆಗಾಗಿ ಧನ್ಯವಾದಗಳು..

    ReplyDelete
  14. ಮಹೇಶ್..
    ಖಂಡಿತಾ ಪ್ರಯತ್ನಿಸ್ತೇನೆ.. ಧನ್ಯವಾದಗಳು.. ಬರುತ್ತಿರಿ...

    ReplyDelete
  15. ಗುರುಮೂರ್ತಿ ಸರ್...
    ನಿಜ.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾರಲ್ಲ.. ಹಾಗೆಯೇ ಈ ಚಿಕ್ಕ ಚಿಕ್ಕ ಕಥೆಗಳು ದೊಡ್ಡ ಅರ್ಥ ನೀಡುತ್ತವೆ.. ಇಂಗ್ಲೀಶ್ ನಲ್ಲಿರೋ ಒಂದಷ್ಟು ಕಥೆಗಳನ್ನು ಓದಿದೆ.. ಅವುಗಳ ಎದುರು ನನ್ನ ಪ್ರಯತ್ನ ತುಂಬಾ ಚಿಕ್ಕದು... ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ReplyDelete
  16. ಚಿತ್ರಾ ಮೇಡಮ್..
    ಪ್ರೋತ್ಸಾಹಕ್ಕೆ, ಹಾರೈಕೆಗೆ ಅನಂತ ಧನ್ಯವಾದಗಳು....
    ಖಂಡಿತಾ ಹೀಗೆಯೇ ಮುಂದುವರೆಯುವ ಪ್ರಯತ್ನ ಮಾಡ್ತೇನೆ...
    ಬರುತ್ತಿರಿ...

    ReplyDelete
  17. ಪ್ರಕಾಶಣ್ಣ...
    ಮೊದಲ ಪ್ರಯತ್ನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..
    ಇನ್ನಷ್ಟು ಇಂತ ಕಥೆಗಳನ್ನು ಬರೆಯುವ ಪ್ರಯತ್ನ ಮುದ್ದಾಂ ಮಾಡ್ತೇನೆ..
    ಧನ್ಯವಾದಗಳು... ಆಗಾಗ ಬರುತ್ತಿರಿ...

    ReplyDelete
  18. ಶಿವಪ್ರಕಾಶ್...
    ನಿಜ... ಹಾಗಾಗಬಾರದಿತ್ತು.. ಆದರೆ ಆಗಿ ಹೋಯ್ತು...
    ಪ್ರಯತ್ನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

    ReplyDelete
  19. ಸುಭ್ರಹ್ಮಣ್ಯ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

    ReplyDelete
  20. ರಘು..
    ಕಥೆಗೆ ಪದಗಳನ್ನ ಆರಿಸುವದು ಸ್ವಲ್ಪ ಕಷ್ಟವೇ ಆಯ್ತು.. ಅದೂ ಮೊದಲ ಪ್ರಯತ್ನವಲ್ವಾ.. ೫೫ ಪದಗಳಿಗೆ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಬೇರೆ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ReplyDelete
  21. ಆನಂದ..
    ಕಥೆಯ ಮುಂದುವರೆದ ಭಾಗ ಮತ್ತು ಮೂಲ ಕರ್ತೃವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ತುಂಬಾ ಥ್ಯಾಂಕ್ಸ್...
    ವೈ.ಎನ್.ಕೆ ಅವರ ವಂಡರ್ ಕಣ್ಣು ಮತ್ತು ಅವರ ವಂಡರ್ ಮೈಂಡ್ ನಿಜಕ್ಕೂ ವಂಡರ್ಫುಲ್..!
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  22. ದಿಲೀಪ್ ಅವರೇ...
    ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದೀರಿ. ಕಾರ್ಡಿನಲ್ಲಿ ಕಥೆ ಅಂತ ಕರ್ಮವೀರದಲ್ಲಿ ಆಗಾಗ ಬರೆತ್ತೆ, ಆದರೆ ೫೫ ಶಬ್ದಗಳಲ್ಲಿ ಕಥೆ ಇದೇ ಮೊದಲು ಕೇಳಿದ್ದು... ಓದಿದ್ದು... ಚೆನ್ನಾಗಿದೆ ನಿಮ್ಮ ಪ್ರಯತ್ನ. ಮುಂದುವರೆಸಿ...
    ಶ್ಯಾಮಲ

    ReplyDelete
  23. ದಿಲೀಪಣ್ಣ ಒಳ್ಳೆ ಪ್ರಯತ್ನ ...

    ReplyDelete
  24. ದಿಲೀಪ್,

    ನಿಮ್ಮ ಪ್ರಯತ್ನ ಚೆನ್ನಾಗಿದೆ. ಕಥೆಯ ತಿರುಳು ಇಷ್ಟವಾಯಿತು.

    ReplyDelete
  25. ಶ್ಯಾಮಲಾ ಮೇಡಂ..
    ಕಾರ್ಡಿನಲ್ಲಿ ಕಥೆಗಳನ್ನ ಕರ್ಮವೀರದಲ್ಲಿ ಹಾಗೆ ಕನ್ನಡದ ಇತರ ಪತ್ರಿಕೆಗಳಲ್ಲಿ ನೋಡಿದ್ದೆ.. ಅಲ್ಲಿ ಅಕ್ಷರಗಳನ್ನ ಚಿಕ್ಕದಾಗಿ ಬರೆದು ಕಥೆ ದೊಡ್ಡದು ಮಾಡೋ ಸ್ವೇಚ್ಚೆಯಿದೆ.. ಅದು ಈ ೫೫ ಪದಗಳ ಕತೆಯಲ್ಲಿ ಸ್ವಲ್ಪ ಕಷ್ಟ... ಪ್ರಥಮ ಪ್ರಯತ್ನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಅನಂತ ನಮನಗಳು.

    ReplyDelete
  26. ಗೌತಮ...
    ಪ್ರಯತ್ನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ReplyDelete
  27. ಶಿವೂ ಸರ್..
    ಪ್ರಯತ್ನ ಮತ್ತು ಕಥೆಯ ತಿರುಳು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.

    ReplyDelete
  28. This is nice Dileep..

    ReplyDelete
  29. ದಿಲೀಪ್ ಸರ್,
    ತುಂಬಾ ಚೆನ್ನಾಗಿದೆ.... ಉತ್ತಮ ಪ್ರಯತ್ನ...... ನನ್ನ ಬ್ಲಾಗ್ನ ' ಹೀಗೊಂದು ಲವ್ ಸ್ತೋರಿಗಳ ಎಂಡ್' ಅಂತ ಬರೆದಿದ್ದೇನೆ ... ಟೈಮ್ ಇದ್ದರೆ ಓದಿ........

    ReplyDelete
  30. ದಿಲೀಪ್ ಅಭಿನಂದನೆಗಳು...ತುಂಬಾ ಇಷ್ಟವಾಯಿತು ನಿಮ್ಮ ಕಥೆ...ಹೌದು ಕಥೆ ಹೀಗೂ ಇಅರಬಹುದು ಎಂದರೆ ಸಾವಿರ ಕಥೆಗಳ ಸರದಾರ ಆಗುವುದು ಸುಲಭ....ಹಹಹ, ಈ ಪ್ರಯತ್ನ ನೀವೇ ಯಾಕೆ ಮಾಡಬಾರದು....?

    ReplyDelete
  31. ದಿಲೀಪ್ ಅವರೇ ,
    ನಿಮ್ಮ ಲೇಖನ ತುಂಬ ಚೆನ್ನಾಗಿದೆ ..ಭಾವನೆಗಳನ್ನು ಚೆನ್ನಾಗಿ ಬಣ್ಣಿಸಿದ್ದೀರಿ :)

    ReplyDelete
  32. ದಿನಕರ್ ಸರ್..
    ನಿಮ್ಮ ಬ್ಲಾಗ್ ನಲ್ಲಿನ ಲೇಖನ ಓದಿದೆ.. ಚೆನ್ನಾಗಿದೆ.. :)
    ನನ್ನ ಪ್ರಯತ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ಬರುತ್ತಿರಿ..

    ReplyDelete
  33. This comment has been removed by the author.

    ReplyDelete
  34. ಆಜಾದಣ್ಣ
    ತುಂಬಾ ತುಂಬಾ ಥ್ಯಾಂಕ್ಸ್... ಉತ್ತಮ ಸಲಹೆ.. ಪ್ರಯತ್ನ ಮಾಡ್ತೇನೆ.. :)

    ReplyDelete
  35. ಸುಮಾ..
    ಹನಿ ಹನಿಯ ಅಂಗಳಕ್ಕೆ ಸ್ವಾಗತ.. ಪ್ರತಿಕ್ರಿಯೆಗಾಗಿ ತುಂಬಾ ಥ್ಯಾಂಕ್ಸ್.. ಬರುತ್ತಿರಿ..

    ReplyDelete
  36. ಸೊಗಸಾದ ಲೇಖನ. ಒಳ್ಳೆ ಪ್ರಯತ್ನ.

    ReplyDelete
  37. ಸುಧೀಂದ್ರ ಸರ್...
    ಬ್ಲಾಗಿಗೆ ಸ್ವಾಗತ.. ಪ್ರೋತ್ಸಾಹಕ ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್.
    ಬರುತ್ತಿರಿ... :)

    ReplyDelete
  38. nimma dodda manasina comentninda,
    ondu sundara blogna parichaya aitu. thanks yar. realy beautiful

    ReplyDelete
  39. ಪ್ರವೀಣ್ ಚಂದ್ರ..
    ಹನಿ ಹನಿಯ ಅಂಗಳಕ್ಕೆ ಸ್ವಾಗತ...
    ನಿಮ್ಮ ಬ್ಲಾಗ್ ನಲ್ಲಿನ ಬರಹಗಳು ಇಷ್ಟವಾದವು.. ಪ್ರತಿಕ್ರಿಯಿಸಿದೆ..
    ಇದರಲ್ಲಿ ಮನಸ್ಸು ದೊಡ್ಡದು ಮಾಡಿಕೊಳ್ಳುವಂತದ್ದು ಏನಾದ್ರೂ ಇದ್ಯಾ...?? ಗೊತ್ತಿಲ್ಲ.. :P :P
    ನನ್ನ ಬ್ಲಾಗ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. :)
    ಆಗಾಗ ಬರುತ್ತಿರಿ... :)

    ReplyDelete
  40. ಆ ಶಿಲ್ಪಿಯ೦ಥಾ ಅಸಾಮಾನ್ಯರ ಕೊಡುಗೆಗಳಿ೦ದಲೇ ಇ೦ದು ಈ ನಮ್ಮ ಕಲಾ ಪ್ರಪ೦ಚ ಸಮೃದ್ಧಿಯಾಗಿದೆ. ಒಳ್ಳೆಯ ಪ್ರಯತ್ನ.

    ReplyDelete
  41. ಮನದಿಂದ ಬಂದ ನಿಮ್ಮ ಈ ಕೆತ್ತನೆ (ರಚನೆ) ಸುಂದರ.

    ReplyDelete
  42. Wow!!... Olle prayatha.. Thumba chennagide

    ReplyDelete