ಇಂಗ್ಲಿಷ್ ನಲ್ಲಿ 55 Word Fiction ತುಂಬಾ ಪ್ರಖ್ಯಾತ.. ಕೇವಲ 55 ಪದಗಳಲ್ಲಿ ಒಂದು ಕಥೆಯನ್ನು ಹೇಳೋ ಈ ಕಥಾ ಪ್ರಾಕಾರ ಯಾಕೋ ಇಷ್ಟವಾಯಿತು... ಕನ್ನಡದಲ್ಲೂ ಯಾಕೆ ಪ್ರಯತ್ನಿಸಬಾರದು ಅಂತ ಅನ್ನಿಸಿತು... ಇದು ನನ್ನ ಮೊದಲ ಪ್ರಯತ್ನ... ಹೇಗಿದೆ..? ಹೇಳ್ತೀರಾ ಅಲ್ವಾ...???
ಶಿಲಾ ಬಾಲಿಕೆ

ಅವನು ಒಬ್ಬ ಶಿಲ್ಪಿ.. ಕಲ್ಲಿನಲ್ಲಿ ಜೀವ ತುಂಬಬಲ್ಲ ಚತುರ... ಅವಳೋ ಅಪ್ಸರೆಯೇ ನಾಚಬೇಕು.. ಅಷ್ಟು ಸುಂದರಿ... ಈತ ಅವಳ ಚೆಲುವಿಗೆ ಮನಸೋತ... ಅವಳು ಇವನ ಕಲೆಗೆ ಸೋತು ಹೃದಯ ಒಪ್ಪಿಸಿದಳು.... ಇವಳ ಮೂರ್ತಿಯನ್ನೇ ಆತ ಕೆತ್ತತೊಡಗಿದ... ಹಗಲು-ಇರುಳು.. ಬಿಸಿಲು-ಮಳೆ.. ಯಾವುದನ್ನೂ ಲೆಕ್ಕಿಸದೆ ಕಲ್ಲು ಕಡೆಯುವುದರಲ್ಲಿ ಮಗ್ನನಾದ...ದಿನ..ವಾರ.. ತಿಂಗಳು.. ವರ್ಷಗಳೇ ಗತಿಸಿದವು... ಅವಳ ಸುಂದರ ಪ್ರತಿಕೃತಿ ತಯಾರಾಯಿತು... ಅವಳು ಇವನಿಗಾಗಿ ಕಾದು ಕಾದು ಸುಸ್ತಾದಳು.. ನೊಂದಳು... ವಿರಹದ ಬೇಗೆಯಲ್ಲಿ ಬೆಂದಳು... ಕಲ್ಲಾಗಿ ಹೋದಳು...!!
ಚಿತ್ರ ಕೃಪೆ : ಅಂತರ್ಜಾಲ..