Saturday, 14 November 2009

ಇದೀಗ ಬಂದ ಸುದ್ದಿ...!!


ಪ್ರತಿ ಪುಟದಲ್ಲೂ ತುಂಬಿ ತುಳುಕುವ ಸರಕು
ನಮ್ಮ ವಿಶೇಷ ವರದಿ, ಮೇಲಿಂದ ಬಹುಪರಾಕು..!
ಕೊಲೆ ಸುಲಿಗೆ ರಾದ್ದಾಂತ...
ಕಳ್ಳ ಸ್ವಾಮಿಯ ಪೊಳ್ಳು ವೇದಾಂತ...
ರಾಜಕೀಯದವರ ದೊಂಬರಾಟ..
ಭಯೋತ್ಪಾದಕರ ಹಾರಾಟ..
ಕ್ರಿಕೆಟ್ಟಿನವರ ಜೂಜಾಟ..
ಅಸ್ತಮಾ, ಮೂಲವ್ಯಾದಿಗೆ ಹೊಸ ಮದ್ದು...
ನಾಲ್ಕೇ ದಿನದಲ್ಲಿ ಬೊಕ್ಕ ತಲೆ
ಮೇಲೆ ಮಾರುದ್ದದ ಕೇಶರಾಶಿ...!
ಹಾಸಿಗೆ ಸುಖಕ್ಕಾಗಿ ಶಕ್ತಿಶಾಲಿ ಗುಳಿಗೆ..!!
ಪುಟದ ತುಂಬಾ ಅರೆಬೆತ್ತಲೆ ಬಾಲೆ...
ಬಡವರ ಬವಣೆಗೆ ಮಾತ್ರ ಸಿಗದ ಬೆಲೆ...
ಇದೆಲ್ಲದರ ನಡುವೆ...
ಇದೀಗ ಬಂದ ಸುದ್ದಿ...
ಇಂದಿನ ನ್ಯೂಸ್ ಪೇಪರ್
ನಾಳಿನ ರದ್ದಿ...!!




13 comments:

  1. ಸಸ್ಪೆನ್ಸ್ ಚೆನ್ನಾಗಿದೆ.......!!!!!!

    ReplyDelete
  2. ಇಂದಿನ ನ್ಯೂಸ್ ಪೇಪರ್ ನಾಳಿನ ರದ್ದಿ... ಹಹಹ ಹ್ಹ ಹ್ಹ ಹ್ಹ... ಚೆನ್ನಾಗಿದೆ ಸರ್..
    ರಾಘು.

    ReplyDelete
  3. ನ್ಯೂಜ್ ಪೇಪರುಗಳ ಬಗೆಗೆ ಉತ್ತಮ ಒಳನೋಟ!

    ReplyDelete
  4. ನಿಜ ನಿಜ..... ಈಗ ಬಿಸಿ ಇದ್ದದ್ದು , ಸ್ವಲ್ಪ ಹೊತ್ತಿಗೆ ತಂಡಾ ಹೊಡೆದ ಹಾಗೆ ಆಲ್ವಾ....

    ReplyDelete
  5. ದಿಲೀಪ್,

    ಎಷ್ಟು ನಿಜ ಅಲ್ವಾ...ಇಂದಿನ ಪತ್ರಿಕೆ ನಾಳಿನ ರದ್ದಿ. ಅದಕ್ಕೆ ತಕ್ಕಂತೆ ಚಿತ್ರ.

    ReplyDelete
  6. tumbaa chennagide..

    ReplyDelete
  7. ಚುಕ್ಕಿಚಿತ್ತಾರ...
    ಕವನ ಮತ್ತು ಕವನದಲ್ಲಿನ ಸಸ್ಪೆನ್ಸ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು..
    ಬರುತ್ತಿರಿ...

    ReplyDelete
  8. This comment has been removed by the author.

    ReplyDelete
  9. ರಘು..
    ಇಂದಿನ ನ್ಯೂಸ್ ಪೇಪರ್ ಬಗ್ಗೆ ಅದೆಷ್ಟೋ expectation ಇರುತ್ತದೆ.. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳ ನಂತರದ ಮಹತ್ವದ ಸ್ಥಾನ ಮಾದ್ಯಮಗಳದ್ದು.. ಆದರೆ ಬೇಸರದ ಸಂಗತಿಯೆಂದರೆ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯವನ್ನು ಹಣಗಳಿಕೆಗಷ್ಟೇ ಸೀಮಿತಗೊಳಿಸಿಕೊಂಡಿರೋದು...ಜನರ ಸಮಸ್ಯೆಗಳಿಗೆ ಸ್ಫಂದಿಸಬೇಕಾಗಿದ್ದ ಪತ್ರಿಕೆಗಳು ತಮ್ಮ ಬೆಲೆ ಕಳೆದುಕೊಂಡಿವೆ... ರದ್ದಿಯಂತೆ ಕಾಣುತ್ತಿವೆ...

    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ಬರುತ್ತಿರಿ..

    ReplyDelete
  10. ಸುನಾಥ್ ಸರ್...
    ಸುದ್ದಿಯ ಗುಣಮಟ್ಟದಲ್ಲಿ, ತಿರುಳಿನಲ್ಲಿ ಬದಲಾವಣೆ, ಅಭಿವೃದ್ದಿ ತರಬೇಕಾಗಿದ್ದ ಪತ್ರಿಕೆಗಳು ತಮ್ಮ ಬಾಹ್ಯ ಅಂದ ಚಂದ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿವೆ.. ಒಂದು ಪತ್ರಿಕೆ ಪ್ರಕಟಿಸುವ ವಿಷಯಗಳಲ್ಲಿ ಯಾವುದೇ ತಿರುಳಿಲ್ಲ ಅಂತಾದ್ರೆ ಅದು ರದ್ದಿಯಲ್ಲದೆ ಮತ್ಯಾವುದೇ ಬೆಲೆ ಅದಕ್ಕಿಲ್ಲ.... ಪ್ರತಿಕ್ರಿಯೆಗಾಗಿ ತುಂಬಾ ತುಂಬಾ thanks...

    ReplyDelete
  11. ದಿನಕರ್ ಸರ್...
    ಈಗ ಬಿಸಿ ಇದ್ದದ್ದು ಸ್ವಲ್ಪ ಸಮಯದಲ್ಲೇ ತಂಡಾ ಹೊಡೆಯುತ್ತದೆ ಅನ್ನೋದು ನಿಜ.. ಆದರೆ ಇಂದಿನ ಪತ್ರಿಕೆಗಳು ನಮ್ಮ ಕೈ ಸೇರುವಾಗಲೇ ತಂಡಾ ಹೊಡೆಯುತ್ತಿರುತ್ತವೆ....
    ಪ್ರತಿಕ್ರಿಯೆಗಾಗಿ ಧನ್ಯವಾದಗಳು... ನನ್ನ ಬ್ಲಾಗ್ ಅಂಗಳಕ್ಕೆ ಆಗಾಗ ಬರುತ್ತಿರಿ...

    ReplyDelete
  12. ಶಿವೂ ಸರ್...
    ಮೊದಲಿಗೆ ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಅದ್ಭುತ ಯಶಸ್ಸಿಗಾಗಿ ಹಾರ್ದಿಕ ಅಭಿನಂದನೆಗಳು...
    ಇನ್ನು ಇಂದಿನ ಪತ್ರಿಕೆಗಳ ಬಗ್ಗೆ... ಎಷ್ಟು ಹೇಳಿದರೂ ಮುಗಿಯೋದಿಲ್ಲ... ಎಲ್ಲಿಯೋ ಭಯಾನಕ ಅವಗಡ ಸಂಭವಿಸಿ ನೂರಾರು ಬಡ ಕೃಷಿಕರು ಪ್ರಾಣ ತೆತ್ತರೆ ಅದು ಮಧ್ಯದ ಪುಟದಲ್ಲೆಲ್ಲೋ ಚಿಕ್ಕದಾಗಿ ಪ್ರಕಟಗೊಂಡಿರುತ್ತದೆ... ಅದೇ ಇಲ್ಲಿ ಬೆಂಗಳೂರಿನಲ್ಲಿ ಒಬ್ಬ MNC ನೌಕರ ಸತ್ತರೆ ಆ ಸುದ್ದಿಗೆ ಮುಖಪುಟದಲ್ಲಿ ಸ್ಥಾನ ಸಿಗುತ್ತದೆ....
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ thanks...

    ReplyDelete
  13. ಆಕಾಶಬುಟ್ಟಿ (ಚೇತನಾ)
    ಕವನ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ thanks...

    ReplyDelete