ಅವಳು ಕನಸಿನ ಕದ ತಟ್ಟಿದಳು..
ಕದ ತೆರೆದು ಬಳಿ ಕರೆದು
ಮನದ ಮಡಿಲಲ್ಲಿ ಬೆಚ್ಚಗೆ ಬಚ್ಚಿಟ್ಟರೂ...
ಮಾತಿಲ್ಲ ಕಥೆಯಿಲ್ಲ...
ಅವಳದ್ದು ದಿವ್ಯ ಮೌನ...!!
ಎಂದಿನಂತೆಯೇ ಇಂದು ಕೂಡ
ಅವಳು ನನ್ನೆದುರಲ್ಲಿ ನಿಂತಳು...
ಕೈ ಹಿಡಿದು ಬೆರಳುಗಳ ಬೆಸೆದು
ಕಣ್ಣ ಕನ್ನಡಿಯಲ್ಲಿ ಕದಲದಂತೆ ಮುಚ್ಚಿಟ್ಟರೂ...
ಮೌನ ಮಾತಾಗಲಿಲ್ಲ...
ಅವಳದ್ದು ಅವಿಚ್ಛಿನ್ನ ಧ್ಯಾನ..!!
ಇಂದಿನಂತೆ ಎಂದೆಂದಿಗೂ
ಜೊತೆ ಬಾಳುವ ಭಾಷೆಯಿತ್ತಳು...
ತುಟಿಗಳಲಿ ತುಟಿ ಬೆಸೆದು
ನಶೆಗಡಲ ಅಲೆಯಲ್ಲಿ ಮುಳುಗಿ ಮೈಮರೆತರೂ...
ಅವಳ ಎದೆಯಾಸೆ ಹಾಡಾಗಲಿಲ್ಲ...
ಅವಳದ್ದು ನಿಶ್ಯಬ್ದ ಗಾನ...!!
ವಾಹ್! ನಿಜಕ್ಕೂ ಚೆನ್ನಾಗಿದೆ. ಆದರೆ ಕೇಳುವ ಹಸಿವೆ ಇರುವಾತನಿಗೆ ಅವಳ ನಿಶ್ಯಬ್ದ ಗಾನ ಕೂಡ ಹಿಂಸೆ ಅಲ್ಲವೇ?
ReplyDeleteಚೆನ್ನಾಗಿದೆ
ReplyDeleteಪಾಪ ಕಣ್ರೀ ಅವಳು..
ReplyDeleteತುಂಬಾ ಚೆನ್ನಾಗಿದೆ..
"ಅವಳ ಎದೆಯಾಸೆ ಹಾಡಾಗಲಿಲ್ಲ..
ಅವಳದ್ದು ನಿಶ್ಯಬ್ದ ಗಾನ.."
ಈ ಸಾಲುಗಳು ತುಂಬಾ ಇಷ್ಟ ಆಯ್ತು ಕಣ್ರೀ..
ತುಂಬಾ ಚೆನ್ನಾಗಿದೆ.
ReplyDeletechennagidhe..
ReplyDeleteದಿಲೀಪ್,
ReplyDeleteನಿಶ್ಯಬ್ದ ಮೌನದ ಬಗ್ಗೆ ಕವನ ತುಂಬಾ ಚೆನ್ನಾಗಿದೆ..
ಗುರು ಸರ್..
ReplyDeleteನಿಜಾ ಕಣ್ರೀ.. ಕೇಳಲೇ ಬೇಕು ಅಂತ ಹಸಿವೆ ಇರೋನಿಗೆ ನಿಶ್ಯಬ್ಧ ಒಂದು ರೀತಿಯಲ್ಲಿ ಹಿಂಸೆಯೇ...
ಪಾರಾಂಜಪೆ ಸರ್..
ReplyDeleteತುಂಬಾ ಥ್ಯಾಂಕ್ಸ್...
ಚೇತನಾ..
ReplyDeleteಹಾಡಾಗಿದ್ರೆ ನಾವೆಲ್ಲ ಕೇಳಿ ಖುಷಿ ಪಡಬಹುದಿತ್ತು ಅಲ್ವಾ..??
ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್..
SSK madom...
ReplyDeleteಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
ಮಹೇಶ್..
ReplyDeleteಧನ್ಯವಾದಗಳು.. :)
ಶಿವು ಸರ್..
ReplyDeleteನಿಶ್ಯಬ್ಧ ಮೌನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
Chennagide..
ReplyDeleteನಶೆಗಡಲ ಅಲೆಯಲ್ಲಿ ಮುಳುಗಿ ಮೈಮರೆತರೂ ಅವಳ ಎದೆಯಾಸೆ ಹಾಡಾಗಲಿಲ್ಲ... annuvalli mattomme nodabekaaytu!!
best,
wow wow...
ReplyDeletetumba channagide
ದಿಲೀಪ್,
ReplyDeleteಅವಳ ನಿಶ್ಶಬ್ದ ಗಾನಕ್ಕೆ ನಿಮ್ಮ ಮೌನ ಗೀತೆಯೇ ಸಂಗಾತಿಯಾಗುವುದೇ?
ಎಷ್ಟೋ ಸಲ , ಮಾತಿನಲ್ಲಿ ಹೇಳಲಾಗದ್ದನ್ನು ಮೌನವೆ ವಿವರಿಸುತ್ತದೆ ಅಲ್ಲವೇ? ತುಂಬಾ ಸುಂದರವಾದ ಕವನ !
ದಿಲೀಪ್ ಬಹಳ ದಿನದಿಂದ ನಿಮ್ಮ್ ಗೂಡಿಗೆ ಬರಲಾಗಲಿಲ್ಲ ಕ್ಷಮಿಸಿ.
ReplyDeleteನಿಮ್ಮ ಕಾರ್ಟೂನ್ ಎಂದಿನಂತೆ..ಮಾತನಾಡುತ್ತಿವೆ..ನಗಿಸುತ್ತಿವೆ..ಚಿಂತನೆಗೆ ದೂಡುತ್ತಿವೆ...ಮುಂದುವರೆಸಿ..
ನಿಮ್ಮ ಮೌನ ಕುರಿತ ಕವನ ಬಹಳ ಹಿಡಿಸಿತು..ಅದರ್ಲ್ಲೂ ಎರಡು ಸ್ಟಾಂಜ಼ಾವನ್ನು ಬಹು ಅರ್ಥವತ್ತಾಗಿ ಜೋಡಿಸುವ ಬಂಧ ಬೆಸೆದು
ಮಂಥನಕ್ಕೆಡೆಮಾಡುವ ಈ ಸಾಲುಗಳು ಇಷ್ಟವಾದವು..
ಮಾತಿಲ್ಲ ಕಥೆಯಿಲ್ಲ...
ಅವಳದ್ದು ದಿವ್ಯ ಮೌನ...!!
ಮೌನ ಮಾತಾಗಲಿಲ್ಲ...
ಅವಳದ್ದು ಅವಿಚ್ಛಿನ್ನ ಧ್ಯಾನ..!!
ಮಹೇಶ್..
ReplyDeleteಸಾಲುಗಳು ಮತ್ತೆ ನೋಡುವಂತೆ ಮಾಡಿದವು ಅಂತಂದ್ರೆ ನಾನು ಧನ್ಯ...!
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks...
ಶಿವಪ್ರಕಾಶ್,
ReplyDeleteಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ thanks...
ಚಿತ್ರಾ...
ReplyDeleteನಿಜ.. ಎಷ್ಟೋ ಸಾರ್ತಿ ಮಾತು ಮರೆತಾಗ ಮೌನ ಸಾತ್ ನೀಡುತ್ತದೆ.. ನಮ್ಮ ಮನಸೊಳಗಿನ ಬಾತ್ ತಲುಪಬೇಕಾದಲ್ಲಿ ತಲುಪಿಸುತ್ತದೆ..!
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..
ಜಲನಯನ ಸರ್..
ReplyDeleteಬಿಡುವು ಮಾಡಿಕೊಂಡು ಬಂದಿದ್ದಕ್ಕೆ ತುಂಬಾ ಸಂತೋಷ...
ಕಾರ್ಟೂನ್ ಗಳು ಮಾತನಾಡಿ, ನಗಿಸಿ, ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾದರೆ ನಾನು ಧನ್ಯ...
ಮೌನದ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..
tumba dinada nantra comment madta idini ,
ReplyDeletemouna kavana bahala chennagide .. sundara kalpane
ನಿಶ್ಯಬ್ದಗಾನ ತುಂಬಾ ಸುಮಧುರವಾಗಿದೆ.
ReplyDeleteಎಂದಿನಂತೆಯೇ ಇಂದು ಕೂಡ
ReplyDeleteಅವಳು ನನ್ನೆದುರಲ್ಲಿ ನಿಂತಳು...
ಕೈ ಹಿಡಿದು ಬೆರಳುಗಳ ಬೆಸೆದು
ಕಣ್ಣ ಕನ್ನಡಿಯಲ್ಲಿ ಕದಲದಂತೆ ಮುಚ್ಚಿಟ್ಟರೂ...
ಮೌನ ಮಾತಾಗಲಿಲ್ಲ...
ಅವಳದ್ದು ಅವಿಚ್ಛಿನ್ನ ಧ್ಯಾನ..!!
ವಾಹ್!! ತುಂಬಾ ಚನ್ನಾಗಿದೆ..
ಶ್ರೀದರ್ ರವರೆ...
ReplyDeleteಬ್ಲಾಗಿಗೆ ಸ್ವಾಗತ..
ಮೌನ ಕವನ ಮೆಚ್ಚಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು...
ಆಗಾಗ ಬಂದು ಪ್ರತಿಕ್ರಿಯೆ, ಪ್ರೋತ್ಸಾಹ ನೀಡುತ್ತಿರಿ....
ತೇಜಸ್ವಿನಿಯವರೇ....
ReplyDeleteಧನ್ಯೋಸ್ಮಿ... ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..
ಪ್ರೋತ್ಸಾಹ ಹೀಗೆ ಇರಲಿ..
ಧನ್ಯವಾದಗಳು....
ನಿವೇದಿತಾ..
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..
ಆಗಾಗ ಬರುತ್ತಿರಿ...
Thumba channagide.... ಕವನ line
ReplyDeleteಅವಳ ಎದೆಯಾಸೆ ಹಾಡಾಗಲಿಲ್ಲ...
ಅವಳದ್ದು ನಿಶ್ಯಬ್ದ ಗಾನ...!!
olleya kavana boss:)mast mast khushyat:)
ReplyDelete'ನಿಶ್ಯಬ್ದ ಗಾನ' ತುಂಬಾ ನಿಶ್ಯಬ್ದವಾಗಿ ಮನಸ್ಸಿಗೆ ಹಿಡಿಸಿದೆ.
ReplyDeletenishabda mouna namma manadali maatina ringana
ReplyDeleteSasi..
ReplyDeleteThanks a lot.. :)
ಗೌತಮ ಸರ್...
ReplyDeleteಕವನ ಮೆಚ್ಚಿ ಮಸ್ತ್ ಖುಶಿ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. )
ಗೌತಮ ಸರ್...
ReplyDeleteಕವನ ಮೆಚ್ಚಿ ಮಸ್ತ್ ಖುಶಿ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. )
ರಘು..
ReplyDeleteನಿಶ್ಯಬ್ಧ ಗಾನ ವನ್ನ ನಿಶ್ಯಬ್ಧವಾಗಿ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)
ಈಶಕುಮಾರ್ ಸರ್..
ReplyDeleteಸುಂದರವಾಗಿದೆ ಸಾಲು.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)