ಊರಿಗೆ ಹೋಗಲೇ ಬೇಕಿತ್ತು... ಕಳೆದ ಮೂರು ನಾಲ್ಕು ವರ್ಷಗಳಿಂದ ಗಣೇಶ ಚತುರ್ಥಿ ಗೆ ಊರಿಗೆ ಹೋಗಿರಲಿಲ್ಲ... ನಮ್ಮ ಉತ್ತರ ಕನ್ನಡದ ಮಂದಿಗೆ ಗಣೇಶ ಚತುರ್ಥಿಯೆಂದರೆ ಅದೇನೋ ಸಡಗರ, ಸಂಭ್ರಮ... ದೀಪಾವಳಿ, ನವರಾತ್ರಿ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪ್ರಥಮ ಪೂಜಿತ ಗಣೇಶನ ಹಬ್ಬಕ್ಕೆ... ಆದರೆ ಕಳೆದ ಕೆಲವು ವರ್ಷಗಳಿಂದ ನನ್ನ ಉದ್ಯೋಗ ಈ ಸಡಗರ ಸಂಭ್ರಮ ಗಳಿಂದ ನನ್ನನ್ನು ದೂರ ಮಾಡಿತ್ತು..
ಆದರೆ ಈ ಬಾರಿ ತಪ್ಪದೇ ಹಬ್ಬಕ್ಕೆ ಊರಿಗೆ ಹೋಗಲೇ ಬೇಕೆಂದು ಗಟ್ಟಿ ಮನಸ್ಸು ಮಾಡಿದ್ದೆ... ನನ್ನ ಬಾಸ್ ಗೆ ರಜೆಯ ಮನವಿಯನ್ನೂ ಸಲ್ಲಿಸಿದ್ದಾಯ್ತು.. ಮಹಾಶಯ ಕೇಳಬೇಕಲ್ಲ.. ಸತಾಯಿಸಿ ಸತಾಯಿಸಿ ಕೊನೇ ಕ್ಷಣದಲ್ಲಿ ರಜೆ sanction ಆಯ್ತು... ಆದರೆ ಟಿಕೆಟ್..? ಸುಗಮ, VRL, KSRTC ಸೇರಿದಂತೆ ಎಲ್ಲ ಬಸ್ಸುಗಳೂ ೧೫ ದಿನಗಳ ಮುಂಚೆಯೇ ಭರ್ತಿಯಾಗಿದ್ದವಂತೆ...
ಇನ್ನೇನು ಮಾಡುವದು ಎನ್ನುವ ಯೋಚನೆಯಲ್ಲಿರುವಾಗಲೇ ನನ್ನ ಕೊಲೀಗ್ ಒಬ್ಬ ಸಹಾಯಕ್ಕೆ ಬಂದ.. ಅವನ ಊರು ಧಾರವಾಡ... ಶತಾಬ್ದಿ ಟ್ರೈನ್ ನಲ್ಲಿ ಹೋಗೋಣ.. ಟಿಕೆಟ್ ನ ಜವಾಬ್ದಾರಿ ನನಗೆ ಬಿಡಿ.. ಹಾವೇರಿಯಲ್ಲಿ ಇಳಿದುಕೊಂಡ್ರೆ ನಿಮ್ಮ ಊರಿಗೆ ಬೇಕಾದಷ್ಟು ಬಸ್ ಸಿಗುತ್ತವೆ.. ಮಧ್ಯಾಹ್ನ ೧.೩೦ - ೨ ಗಂಟೆಯೊಳಗೆ ನೀವು ಮನೆ ತಲುಪಬಹುದು ಅಂತ ಹೆಳಿದ... ಅವನ ಸಲಹೆ ನನಗೂ ಇಷ್ಟವಾಯ್ತು... ಆಯ್ತು ಮಾರಾಯ.. ನನಗೂ ಒಂದು ಟಿಕೆಟ್ ಮಾಡಿಸು ಅಂತ ಹೇಳಿದ್ದಾಯ್ತು..
ಕೊನೇ ಕ್ಷಣದಲ್ಲಿ ಟಿಕೆಟ್ ಮಾಡಿಸಿದ್ದರಿಂದ ಇಬ್ಬರಿಗೂ ಬೇರೆ ಬೇರೆ ಕಡೆ ಸೀಟ್ ಸಿಕ್ಕಿತ್ತು... ಒಂದೇ ಬೋಗಿಯಲ್ಲಿ ಸಿಕ್ಕಿದ್ದು ನಮ್ಮ ಅದೃಷ್ಟ..! ಕೊನೆಗೂ ಅಕ್ಕ ಪಕ್ಕ ಕುಳಿತವರೊಡನೆ ಹೊಂದಾಣಿಕೆ ಮಾಡಿಕೊಂಡು ಒಂದೇ ಕಡೆ ಕುಳಿತೆವು... ಬೆಳಿಗ್ಗೆ ಆಫೀಸ್ ನಿಂದ ಹಾಗೆ ಹೊರಟಿದ್ದರೂ ನಿದ್ದೆ ಬರುವ ಯಾವ ಲಕ್ಷಣವೂ ಕಾಣಿಸುತ್ತಿರಲಿಲ್ಲ... ಅದೂ ಇದು ಮಾತಾಡುತ್ತ, ಬೇಸರ ಬಂದರೆ ಟ್ರೈನ್ ನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ತಿರುಗುತ್ತ ಸಮಯ ಹೋದದ್ದೇ ತಿಳಿಯಲಿಲ್ಲ...
ಇಡ್ಲಿ ವಡೆ ತಿಂದು ಹೊಟ್ಟೆಯನ್ನು ಸ್ವಲ್ಪ ತಣ್ಣಗಾಗಿಸಿ ಚಹಾ ಕುಡಿಯುತ್ತಾ ಕುಳಿತೆವು.. ಅಷ್ಟರಲ್ಲಿ ನಾವಿದ್ದ ಬೋಗಿಯಲ್ಲಿ TC ಯ ಪ್ರವೇಶವಾಯ್ತು... TC ಹತ್ತಿರ ಬರುತ್ತಲೇ ನನ್ನ ಕೊಲೀಗ್ ಬ್ಯಾಗ್ನಿಂದ ಟಿಕೆಟ್ ಹೊರ ತೆಗೆದ... ಆನ್‌ಲೈನ್ ಬುಕ್ ಮಾಡಿಸಿದ್ದ ಎರಡು ಪ್ರತ್ಯೇಕ ಟಿಕೆಟ್ಟುಗಳು... ಒಂದು ನನ್ನದು... ಹಾವೇರಿ ವರೆಗಿನದ್ದು... ಇನ್ನೊಂದು ಅವನದ್ದು.. ಧಾರವಾಡ ವರೆಗಿನದು...ಅಲ್ಲಿಯವರೆಗೂ ನಾನು ಟಿಕೆಟ್ ನೋಡಿರಲಿಲ್ಲ....
TC ಕೊಲೀಗ್ ಬಳಿ ಐಡೆಂಟಿಟೀ ಪ್ರೂಫ್ ಕೇಳಿದ... ಅವ ತನ್ನ ಬಳಿಯಿದ್ದ ಡ್ರೈವಿಂಗ್ ಲೈಸೆನ್ಸ್ ತೆಗೆದು ತೋರಿಸಿದ.. ಈಗ ನನ್ನ ಸರದಿ.. TC ನನ್ನ ಬಳಿಯೂ ಐಡೆಂಟಿಟೀ ಪ್ರೂಫ್ ಕೇಳಿದ.. ನನ್ನ ಬಳಿ ನನ್ನ ಆಫೀಸ್ ಐಡೆಂಟಿಟೀ ಕಾರ್ಡ್ ಬಿಟ್ಟರೆ ಮತ್ತೇನು ಇರಲಿಲ್ಲ... ಟಿಕೆಟ್ ಮೇಲಿನ ಸೂಚನೆಗಳ ಪ್ರಕಾರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಎಲೆಕ್ಶನ್ ವೋಟರ್ ಐಡೆಂಟಿಟೀ ಕಾರ್ಡ್ ಅಥವಾ ಸರ್ಕಾರ ಅನುಮೋದಿಸಿರುವ ಇತರ ಯಾವುದೇ ಐಡೆಂಟಿಟೀ ಕಾರ್ಡ್ ಗಳಲ್ಲಿ ಯಾವುದಾದರೂ ಒಂದನ್ನು TC ಕೇಳಿದಾಗ ತೋರಿಸಲೇ ಬೇಕಿತ್ತು.. ಇಂಟರ್‌ನೆಟ್ ಮೂಲಕ ಟಿಕೆಟ್ ಬುಕ್ ಮಾಡಿಸಿದವರಿಗೆ ಮಾತ್ರ ಈ ನಿಯಮ... ಪ್ರಯಾಣಿಕನ ಬಳಿ ಪ್ರಯಾಣದ ಸಮಯದಲ್ಲಿ ಯಾವುದೇ ಐಡೆಂಟಿಟೀ ಕಾರ್ಡ್ ಇಲ್ಲವೆಂದಾದರೆ ಅದು ಟಿಕೆಟ್ ರಹಿತ ಪ್ರಯಾಣಕ್ಕೆ ಸಮ.... ಟಿಕೆಟ್ ನ ಹಣ, ಜೊತೆಗೆ ಅದರ ಎರಡರಷ್ಟು ಫೈನ್ ಕಟ್ಟಬೇಕಿತ್ತು...!! ನಾನು ಪೇಚಿನಲ್ಲಿ ಸಿಲುಕಿದೆ... TC ಇನ್ನೊಮ್ಮೆ ಗಟ್ಟಿಯಾಗಿ ಕೇಳಿದ.. " Show me any one of the Identity cards listed on your ticket.... ಯಾವುದಾದ್ರೂ ಒಂದು ಗುರುತಿನ ಚೀಟಿ ನಿಮ್ಮ ಬಳಿ ಇದ್ರೆ ತೋರ್ಸಿ.." ಒಂದರೆ ಕ್ಷಣ ನಾನು ನನ್ನ ಕೊಲೀಗ್ ಮುಖವನ್ನ, ಮತ್ತೆ TC ಮುಖವನ್ನ ನೋಡುತ್ತ ನಿಂತುಬಿಟ್ಟೆ...
(ಮುಂದುವರೆಯುವದು......)
ಹೈ ದಿಲೀಪ್,
ReplyDeleteಈ ನಿಮ್ಮ ಲೇಖನ ತುಂಬಾ interesting ಆಗಿದೆ ...
ತುಂಬಾ ಚೆನ್ನಾಗಿ ಬರೆದಿದ್ದೀರಿ..
ನಿಮ್ಮ ಪರಿಸ್ಥಿತಿ ಹೇಗಿರಬಹುದೆಂದು ಗೊತ್ತಾಗುತ್ತದೆ...
ಮುಂದೆ ಏನಾಯಿತೆಂಬ ಕುತೂಹಲವಿದೆ .....
ಆದಷ್ಟು ಬೇಗ ಮುಂದಿನ ಭಾಗವನ್ನು ಬರೆಯಿರಿ...:):)
ಧನ್ಯವಾದಗಳು..
This comment has been removed by a blog administrator.
ReplyDeleteನಮಸ್ಕಾರ ದಿಲೀಪ್.....
ReplyDeleteತುಂಬಾ ಚೆನ್ನಾಗಿ ಸನ್ನಿವೇಷವನ್ನು ವಿವರಿಸಿದ್ದೀರಿ....ಮುಂದಿನ ಕಂತನ್ನು ಆದಷ್ಟು ಬೇಗ ಬರಿಯಿರಿ....ಕುತೂಹಲ ತಡೆಯಲು ಸಾಧ್ಯವಿಲ್ಲ....
ಪಾಪ ನಿಮ್ಮ ಸ್ಥಿತಿ ನೆನೆಸಿಕೊಂಡರೆ....ಯಾರಿಗೂ ಇಂತಹ ಸ್ಥಿತಿ ಬರಬಾರದೆನ್ನಿಸುತ್ತದೆ.....
ದಿಲೀಪ್ ಅವರೇ,
ReplyDeleteಮುಂದೇನಾಯಿತು ಬೇಗ ಹೇಳಿ.....! ಕುತೂಹಲ ಹುಟ್ಟಿಸಿದ್ದೀರ ನೀವು, ಮುಂದಿನ ಭಾಗ ಬೇಗ ಬರಲಿ.
ದಿಲೀಪ್,
ReplyDeleteಚೆನ್ನಾಗಿತ್ತು....
ಮುಂದಿನ ಭಾಗ ಎನೂ ಅಂತ ಕುತೂಹಲ...
ಮಹೇಶ್
ಮುಂದೇನಾಯಿತು ರೀ.... ?
ReplyDeleteದಿವ್ಯ..
ReplyDeleteಲೇಖನ ಇಷ್ಟ ಪಟ್ಟಿದ್ದಕ್ಕೆ thanks..
ನನ್ನ ಪರಿಸ್ಥಿತಿ ನಿಜಕ್ಕೂ ಕಷ್ಟಕರವಾಗಿತ್ತು...
ಮುಂದೇನಾಯ್ತು ಅಂತ ಮುಂದಿನ ಭಾಗದಲ್ಲಿ ತಿಳಿಸುತ್ತೇನೆ..
ಧನ್ಯವಾದಗಳು..
ರವೀಂದ್ರ ರವರೆ..
ReplyDeleteಬಾಸ್ ಗೆ ಗೊತ್ತಾದ್ರೆ ಅಷ್ಟೇ...
ಅದರ ಬಗ್ಗೆ ಇನ್ನೊಂದು ಲೇಖನ ಬರೆಯಬೇಕಾಗಬಹುದು...!
ಪ್ರತಿಕ್ರಿಯೆಗೆ ತುಂಬಾ thanks...
ಪ್ರೀತಿ ಸದಾ ಹೀಗೆ ಇರಲಿ...
ಧನ್ಯವಾದಗಳು...
ವೈಷ್ಣವಿ..
ReplyDeleteಯಾರಿಗೂ ಬರಬಾರದ ಸನ್ನಿವೇಶದಲ್ಲಿ ನಾನು ಸಿಲುಕಿಬಿಟ್ಟಿದ್ದೆ...
ಮುಂದೆ ನಡೆದ ಘಟನೆ ಇನ್ನೂ ಕುತೂಹಲ ಭರಿತವಾಗಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
SSK
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು...
ಮಹೇಶ್..
ReplyDeleteಇಷ್ಟಪಟ್ಟಿದ್ದಕ್ಕೆ thanks..
ಬರುತ್ತಿರಿ..
ಧನ್ಯವಾದಗಳು..
ಶಿವಪ್ರಕಾಶ್ ಸರ್...
ReplyDeleteಮುಂದೆ ನಡೆದ ಘಟನೆ ಇನ್ನೂ interesting ಆಗಿದೆ...
ಮುಂದಿನ ಕಂತಿನಲ್ಲಿ ಬರೆಯುತ್ತೇನೆ...
ಪ್ರತಿಕ್ರಿಯೆಗೆ ಧನ್ಯವಾದಗಳು...