Wednesday, 23 September 2009

ಎಲ್ಲ ಕಡೆಯೂ ಇಂತವರು ಇರಬೇಕಿತ್ತು...!! ಭಾಗ ೨




ಸುತ್ತಲಿನ ಜನರ ನೋಟವೆಲ್ಲ ನಮ್ಮ ಮೇಲೇ ನೆಟ್ಟಿತ್ತು... ಪುಕ್ಕಟೆ ಮನೋರಂಜನೆ ಸಿಗ್ತಿದ್ರೆ ಯಾವೊನ್ ಬಿಡ್ತಾನೆ ಹೇಳಿ..? ನನಗೆ ಏನು ಮಾಡುವದು, TC ಜೊತೆ ಹೇಗೆ ಮಾತಾಡುವದು ಒಂದೂ ಗೊತ್ತಾಗ್ತಿಲ್ಲ... ನನ್ನ ಕೊಲೀಗ್ ಇಬ್ಬರಿಗೂ ಒಂದೇ ಟಿಕೆಟ್ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ...


"ಕ್ಷಮಿಸಿ ಸಾರ್.. ಎರಡೂ ಟಿಕೆಟ್ ಒಬ್ರೆ ಮಾಡ್ಸಿದ್ದು... ಒಬ್ಬರ ಬಳಿ ಐಡೆಂಟಿಟೀ ಪ್ರೂಫ್ ಇದ್ರೆ ಸಾಕು ಅಂತ ನಾವು ತಿಳಿದಿದ್ದೆವು.. ನನ್ನ ಆಫೀಸ್ ID ಬೇಕಾದ್ರೆ ಇದೆ... ನೋಡಿ ಸಾರ್..." ಅಂತ ಹೇಳ್ತಾ ನನ್ನ ಆಫೀಸ್ ID ಎದುರಿಗೆ ಹಿಡಿದೆ...


"ಇದೆಲ್ಲಾ ನಡೆಯಲ್ಲಪ್ಪಾ... ಸರ್ಕಾರದವ್ರು issue ಮಾಡಿರೋ ಐಡಿ ಪ್ರೂಫ್ ಇದ್ರೆ ಕೊಡು" ಟೀಸಿ ಇನ್ನೂ ಗಟ್ಟಿಯಾಗಿ ಹೇಳಿದ...


"ಇದೊಂದು ಸಾರ್ತಿ ನಮ್ಮ ತಪ್ಪನ್ನ ಕ್ಷಮಿಸಿಬಿಡಿ ಸಾರ್.. Please..." ನಾನು ಹಲ್ಲು ಗಿಂಜಿದೆ..


"ಆಯ್ತು.. ಇನ್ನೊಮ್ಮೆ ರೀತಿ ಮಾಡಬೇಡಿ... ಏನೋ Educated ತರ ಕಾಣಿಸ್ತೀರಾ... ನೀವೇ ಹೀಗೆ ಮಾಡಿದ್ರೆ ಇನ್ನು ಕಲೀದೇ ಇರೋವ್ರ ಪರಿಸ್ಥಿತಿ ಹೇಗಿರತ್ತೆ..? ಯಾವಾಗ ಸುಧಾರಿಸ್ತೀರೋ ದೇವರಿಗೆ ಗೊತ್ತು" TC ಟಿಕೆಟ್ ಮೇಲೆ ಸಹಿ ಮಾಡಿ ಮುಂದಿನ ಬೋಗಿಗೆ ನಡೆದ...


ನಾವಿಬ್ಬರೂ ಒಮ್ಮೆ ನಿಟ್ಟುಸಿರು ಬಿಟ್ಟೆವು... ಅಬ್ಬಾ... ಅಂತೂ ಬೀಸೊ ದೊಣ್ಣೆಯಿ೦ದ ತಪ್ಪಿಸಿಕೊಂಡೇವಲ್ಲ... TC ಗೆ ಮನಸ್ಸಿನಲ್ಲೇ ಧನ್ಯವಾದ ಸಲ್ಲಿಸಿದೆವು...ಏನೋ ನಡೆಯಲಿದೆ ಅಂತ ನಿದ್ದೆ ಬಿಟ್ಟು ನೋಟ ನಮ್ಮತ್ತ ನೆಟ್ಟಿದ್ದ ಜನರಿಗೆಲ್ಲ ನಿರಾಸೆಯಾಯ್ತೋ ಏನೋ... ಮತ್ತೆ ಸೀಟಿಗೊರಗಿ ನಿದ್ದೆ ಹೋದರು...


ನಾವಿಬ್ಬರೂ ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ನಮ್ಮ ಹರಟೆ ಅಲ್ಲಿಂದಿಲ್ಲಿಗೆ ವಾಕಿಂಗ್ ಮುಂದುವರೆಸಿದೆವು... ಇನ್ನೊಂದು ಸ್ಟೇಶನ್ ಕಳೆದರೆ ಮುಂದಿನದೇ ಹಾವೇರಿ... TC ಯಿಂದ ತಪ್ಪಿಸಿಕೊಂಡದ್ದು ಒಂದಾದರೆ ಇನ್ನೇನು ಸ್ವಲ್ಪ ಸಮಯದಲ್ಲೇ ನಾನು ಮನೆ ಸೇರಿರುತ್ತೇನೆ... ಹಾಯಾಗಿ ಅಮ್ಮನ ಕೈ ಅಡುಗೆ ಉಂಡು ಭರ್ಜರಿ ನಿದ್ದೆ ಹೊಡೆಯಬಹುದು ಅನ್ನೋದು ಇನ್ನೊಂದು... ನಾನು ಖುಷಿಯಾಗಿದ್ದೆ...


ಅಷ್ಟರಲ್ಲೇ ಮತ್ತೊಮ್ಮೆ ನಮ್ಮ ಬೋಗಿಯಲ್ಲಿನ ಪ್ರಯಾಣಿಕರೆಲ್ಲ ತಮ್ಮ ಬ್ಯಾಗ್ ಕೆಳಗಿಳಿಸಿ ಟಿಕೆಟ್ ಹೊರ ತೆಗೆಯತೊಡಗಿದರು..ನೋಡಿದರೆ ಇನ್ನೊಬ್ಬ TC ಪ್ರತ್ಯಕ್ಷನಾಗಿದ್ದ...!! ಆದರೆ ನಮಗೀಗ ಧೈರ್ಯ ಬಂದಿತ್ತು.. ಆಗಲೇ ಒಬ್ಬ ಟೀಸಿ ಎಲ್ಲವನ್ನೂ ಪರೀಕ್ಷಿಸಿ ಓಕೇ ಅಂತ ಹೇಳಿದ್ದನಲ್ಲ..! ನಾವೂ ಟಿಕೆಟ್ ಕೈಲಿ ಹಿಡಿದು ನಿಂತೆವು...


ಬಾರಿ ನನ್ನ ಕೊಲೀಗ್ ಎರಡೂ ಟಿಕೆಟ್ ಮತ್ತು ತನ್ನ ಡ್ರೈವಿಂಗ್ ಲೈಸೆನ್ಸ್ ಕೊಟ್ಟ...


"ಎರಡು ಟಿಕೆಟ್ ಇದೆ.. ಇನ್ನೊಂದು ಐಡೀ ಎಲ್ಲಿ ಸರ್..?? ಒಂದೇ ಕೊಟ್ಟಿದ್ದೀರಾ... " TC ಕೇಳಿದ...


"ಎರಡೂ ಟಿಕೆಟ್ ಮಾಡಿದ್ದು ಒಬ್ಬರೇ ಸರ್.. ಅದಕ್ಕೇ ಒಂದೇ ಐಡೀ ಕೊಟ್ಟಿರೋದು" ನನ್ನ ಕೊಲೀಗ್ ಉತ್ತರ...


"ಅದು ಹೇಗೆ ಆಗತ್ತೆ..?? ಎರಡು ಪ್ರತ್ಯೇಕ ಟಿಕೆಟ್ ಇದೆ ಅಂದ್ರೆ, ಎರಡು ಪ್ರತ್ಯೇಕ ಐಡೀ ಇರಲೇ ಬೇಕು... ಹತ್ತು ಜನರ ಹೆಸರಲ್ಲಿ ಒಂದೇ ಟಿಕೆಟ್ ಮಾಡಿಸಿ, ಒಂದೇ ಐಡೀ ಕೊಡಿ... ನಡೆಯುತ್ತೆ... ಆದರೆ ನೀವು ಕೊಟ್ಟಿರೋದು ಎರಡು ಟಿಕೆಟ್... ಮತ್ತೊಂದು ಐಡೀ ತೆಗೀರಿ ಬೇಗ..." TC ಧ್ವನಿ ಏರಿಸಿದ...


"ಆಗಲೇ ಇನ್ನೊಬ್ರು TC ಬಂದು, ಎಲ್ಲಾ check ಮಾಡಿ ಸಹಿ ಮಾಡಿ ಹೋಗಿದ್ದಾರೆ... ನಿಮಗೆ ಮತ್ತೇನು ಕಷ್ಟ..? ನಮ್ಮ ಬಳಿ ಇರೋದು ಒಂದೇ ಐಡೀ ಪ್ರೂಫ್..." ಸಾರಿ ನಾನು ಸೋಲು ಒಪ್ಪಿಕೊಳ್ಳಲು ತಯಾರಿರಲಿಲ್ಲ...

"ಏನು ತಮಾಷೆ ಮಾಡ್ತಿದೀರಾ..?? ಟಿಕೆಟ್ ಮೇಲೆ ಸಹಿ ಎಲ್ಲಿದೆ...?? ನಿಜವಾಗಲೂ ಟಿಕೆಟ್ ವೆರಿಫೈ ಮಾಡ್ಸಿದ್ರಾ...?? ಇಲ್ಲಾ TC ಬಂದಾಗ ಮತ್ತೆಲ್ಲೋ ಅಡಗಿ ಕುಳ್ತಿದ್ರಾ...?? Rules ಅಂದ್ರೆ Rules.. ಹೆಚ್ಚಿಗೆ ಮಾತಾಡದೆ ಇನ್ನೊಂದು ಪ್ರೂಫ್ ತೋರ್ಸಿ... ಇಲ್ಲಾ ಅಂದ್ರೆ ದಂಡ ಕಟ್ಟಿ..." TC ಧ್ವನಿ ಕೇಳಿ ಪಕ್ಕದ ಬೋಗಿಯ ಒಂದಷ್ಟು ಪ್ರಯಾಣಿಕರೂ ಮಜಾ ಸವಿಯಲು ನಮ್ಮ ಬೋಗಿಯಲ್ಲಿ ತೂರಿಕೊಂಡರು...


ಅವನಿಂದ ಟಿಕೆಟ್ ತಗೊಂಡು ನೋಡಿದ ನಮಗೆ ಶಾಕ್ ಹೊಡೆದಂತೆ ಭಾಸವಾಯ್ತು...


ಮೊದಲು ಬಂದ TC ಎರಡೂ ಟಿಕೆಟ್ ಮೇಲೆ ಸಹಿ ಮಾಡಿದ್ದಾನೆ ಅಂತಲೇ ನಮ್ಮ ಕಲ್ಪನೆಯಾಗಿತ್ತು... ಆದರೆ ಮಹಾನುಭಾವ ಕೇವಲ ನನ್ನ ಕೊಲೀಗ್ ಟಿಕೆಟ್ ಮೇಲೆ ಮಾತ್ರ ಸಹಿ ಮಾಡಿದ್ದ...!!



"Rules ನಮಗೊಂದೇ apply ಆಗತ್ತಾ..?? ನಿಮಗೂ rules apply ಆಗಬೇಕು ತಾನೇ..? ಎಲ್ಲಿ ನಿಮ್ಮ uniform..? ನಿಮಗೂ ಒಂದು Identity Card ಅಂತ ಇರಬೇಕಲ್ಲ...! ಇಲ್ಲಾ ಅಂದ್ರೆ ನಿಮ್ಮನ್ನ ನಾವು ನಂಬೋದು ಹೇಗೆ..??" ನಮ್ಮ ಹುಂಬತನದ ಪ್ರಶ್ನೆ...!!


"ಒಹ್.. ನಿಮಗೂ ರೂಲ್ಸ್ ಗೊತ್ತು..! Uniform ಹಾಕಲೇ ಬೇಕಂತ ಯಾವುದೇ ನಿಯಮವಿಲ್ಲ.. ಇನ್ನು ನನ್ನ ID Card ವಿಷಯ... ಇಲ್ಲಿದೆ ನೋಡಿ... ಸರಿಯಾಗಿ ನೋಡಿಕೊಳ್ಳಿ... ಮತ್ತೀಗ ನಿಮ್ಮ ಇನ್ನೊಂದು ID Proof ಕೊಡಿ..." TC ತನ್ನ ID Card ನನ್ನ ಕೈಗಿತ್ತ..



"ಆಗಲ್ಲ ಸರ್.. ನಮ್ಮ ಬಳಿ ಇರೋದು ಒಂದೇ ID Card.. ಮತ್ತೆ ಆಗಲೇ ಮತ್ತೊಬ್ಬರು ಎಲ್ಲಾ verify ಮಾಡಿಯಾಗಿದೆ.. ಏನು ಮಾಡ್ತೀರೋ ಮಾಡಿಕೊಳ್ಳಿ..." ನಾವೂ ಧ್ವನಿ ಏರಿಸಿದೆವು...



"ಆಯ್ತು ಹಾಗಿದ್ರೆ... ಮುಂದಿನ station ನಲ್ಲಿ ಇಳಿದುಕೊಂಡು ಮಾತಾಡೋಣ.. ದಂಡ ಕಟ್ಟಿದರೆ ಸರಿ.. ಇಲ್ಲಾ ಅಂದ್ರೆ ನಿಮ್ಮನ್ನ ಇಲ್ಲೇ ಇಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ....." TC ಹೇಳಿದ ಮುಂದಿನ ಕ್ರಮ ಯಾವುದಿರಬಹುದೆಂಬ ಕಲ್ಪನೆ ನನಗೂ ಇರಲಿಲ್ಲ...


ಎಲ್ಲವೂ ಅತಿಯಾಯ್ತು ಅಂತ ಅನಿಸಿತು.. ಆಗಲೇ ಬೋಗಿಯಲ್ಲಿ ನಾವು ತಮಾಷೆಯ ವಸ್ತುವಾಗಿಯಾಗಿತ್ತು... ಇವತ್ತೂ ರೀತಿ ಖರ್ಚು ಮಾಡೋದು ನಮ್ಮ ಹಣೆಯಲ್ಲಿ ಬರೆದಿತ್ತು... ಅದೂ ಕೇವಲ 377 ರೂಪಾಯಿ ಗಳಿಗೆ ನಾವು ಇಷ್ಟೆಲ್ಲಾ ಗಲಾಟೆ ಮಾಡಿಕೊಂಡೆವಲ್ಲಾ ಅನ್ನಿಸತೊಡಗಿತು... 500 ಒಂದು ನೋಟು ತೆಗೆದು ಅವನ ಕೈಗಿತ್ತೆ... ಅವನು ರಸೀತಿ ಬರೆಯತೊಡಗಿದ...


" 250 ರೂ.ದಂಡ ಮತ್ತು ಟಿಕೆಟ್ 127 ರೂ. ಎರಡೂ ಸೇರಿ 377 ರೂ ಕಟ್ಟಬೇಕು... 500 ರೂ ಕೊಟ್ಟಿದ್ದೀರ.. ಇನ್ನು ಎರಡು ರೂಪಾಯಿ ಚಿಲ್ಲರೆ ಇದ್ರೆ ಕೊಡಿ.. ನಿಮಗೆ 125 ರೂ ವಾಪಸ್ ಕೊಡ್ತೇನೆ.." TC ರಸೀತಿ ಕೈಗಿಡುತ್ತಾ ಹೇಳಿದ...

ಯಾವತ್ತೂ ತಾಳ್ಮೆ ಕಳೆದುಕೊಳ್ಳದ ನನಗೆ ಅವತ್ತು ಏನಾಯ್ತೋ ಗೊತ್ತಿಲ್ಲ...


" ಚಿಲ್ಲರೆ ಏಕೆ ವಾಪಸ್ ಕೊಡ್ತೀರಾ..?? ನೀವೇ ಇಟ್ಟುಕೊಳ್ಳಿ...!" ನನ್ನಲ್ಲಿನ ಅಹಂ ಮಾತನಾಡಿತ್ತು..


"Mind your tongue mister...! ಮೈ ಮೇಲೆ ಎಚ್ಚರ ಇದ್ದು ರೀತಿ ಮಾತಾಡ್ತಿದೀರಾ ತಾನೇ..? ನಾಲಿಗೆ ಮೇಲೆ ಸ್ವಲ್ಪ ಹಿಡಿತ ಇಟ್ಟು ಮಾತಾಡಿ.. ಸರ್ಕಾರ ನಮಗೆ ಸಂಬಳ ಕೊಡುತ್ತೆ... ನಿಮ್ಮ ಚಿಲ್ಲರೆ ಇಟ್ಟುಕೊಂಡು ನನ್ನ ಜೀವನ ಸಾಗಿಸೋ ದುರ್ಗತಿ ನನಗೆ ಬಂದಿಲ್ಲ... ಏನೋ ಒಳ್ಳೇ ಓದಿ ಒಳ್ಳೇ job ಮಾಡ್ತಿರೋರ ಹಾಗೆ ಕಾಣಿಸ್ತೀರ... ನಿಮ್ಮ ಅಹಂಕಾರದ ಮಾತುಗಳೇನಿದ್ರೂ ನಿಮ್ಮ ಬಳಿಯೆ ಇಟ್ಟುಕೊಳ್ಳಿ.. ಮತ್ತೆ ಇಂತ ತಪ್ಪು ಮಾಡಬೇಡಿ" ಹೇಳಿ 125 ರೂ ನನ್ನ ಕೈಗಿತ್ತು ಆತ ಇಳಿದು ಹೊರಟು ಹೋದ...


ಎಲ್ಲರ ಮುಂದೆ ಉಗಿಸಿಕೊಂಡ ನನ್ನ ಗತಿ ದೇವರಿಗೆ ಪ್ರೀತಿ ಅನ್ನುವಂತಿತ್ತು... ಹೌದು.. ತಪ್ಪೆಲ್ಲ ನಮ್ಮದೇ ಇತ್ತು.. ಟಿಕೆಟ್ ಮೇಲಿನ ನಿಯಮಗಳನ್ನ ಸರಿಯಾಗಿ ಓದದೇ ಇದ್ದದ್ದು, ಜೊತೆಗೆ ID Card ತಗೊಂಡು ಹೋಗದೇ ಇದ್ದದ್ದು, ಮೊದಲ TC verification ಮುಗಿಸಿದಾಗ ಸಹಿ ಮಾಡಿದ್ದಾನಾ ಇಲ್ವಾ ಅಂತ ನೋಡದೇ ಇದ್ದದ್ದು, ಅನಾವಶ್ಯಕವಾಗಿ ಜಗಳಕ್ಕೆ ನಿಂತು ನಗೆಪಾಟಲಿಗೆ ಗುರಿಯಾಗಿದ್ದು.. ಒಂದೇ ಎರಡೇ..!!? ಒಂದರ ನಂತರ ಒಂದರಂತೆ ತಪ್ಪುಗಳ ಸರಮಾಲೆ...


TC ತನ್ನ ಕೆಲಸ ಸರಿಯಾಗೇ ಮಾಡಿದ್ದ.. ಆಮೇಲೆ ನನಗೆ ಅನಿಸಿದ್ದಿಷ್ಟು.. ಸರ್ಕಾರದ ಎಲ್ಲ ಆಯಕಟ್ಟಿನ ಹುದ್ದೆಗಳಲ್ಲೂ ಇಂತಹ ನಿಷ್ಠಾವಂತ ಅಧಿಕಾರಿಗಳಿದ್ದರೆ ನಮ್ಮ ದೇಶದಲ್ಲಿ ಆಗ್ತಿರೋ ಎಷ್ಟೋ ಅವಗಡಗಳನ್ನ ತಪ್ಪಿಸಬಹುದಿತ್ತು.. ಅದೆಷ್ಟೋ ಪಾತಕಿಗಳನ್ನ, ದೇಶದ್ರೋಹಿಗಳನ್ನ ಸದೆಬಡಿಯಬಹುದಿತ್ತು..


ನಾನು ಮತ್ತದೇ ಟ್ರೈನ್ ನಲ್ಲಿ ಊರಿಗೆ ಹೋಗಲು ಎದುರು ನೋಡುತ್ತಿದ್ದೇನೆ.. ಬಾರಿ ID Card ಇಟ್ಟುಕೊಂಡೇ ಹೋಗ್ತೇನೆ... ಅದೇ TC ಮತ್ತೆ ಸಿಕ್ಕರೆ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಅವನ ಪ್ರಾಮಾಣಿಕತೆಗೊಂದು ಸಲ್ಯೂಟ್ ಹೊಡೆಯುತ್ತೇನೆ...!!

29 comments:

  1. ಹಾಂ ದಿಲೀಪ್,
    ಇದಾ ಮುಂದಿನ ಭಾಗ,
    ತುಂಬ ಚೆನ್ನಾಗಿದೆ..
    ಒಂದು ಕಡೆ ನಗು ಬಂದರೆ ಇನ್ನೊಂದು ಕಡೆ ನಿಮ್ಮ ಪರಿಸ್ಥಿತಿ ನೆನಸಿಕೊಂಡ್ರೆ ,ನಿಮ್ಮ ಪೇಚಾಟ, ಭೋಗಿಯಲ್ಲಿ ಎಲ್ಲರ entertainment ವಸ್ತು ಆಗಿದ್ದು ನಿಜಕ್ಕೂ ಬೇಸರ ತರಿಸುವಂಥದ್ದು ...
    ಹಾಗೇ, ರೈಲಿನಲ್ಲಿ ಪಯಣ ಮಾಡುವಾಗ ID card ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎನ್ನುವುದು ಎಲ್ಲರಿಗೂ ಒಂದು msg ಆಗುತ್ತದೆ ..
    ಚಂದದ ಲೇಖನ
    ಧನ್ಯವಾದಗಳು!!!

    ReplyDelete
  2. ದಿಲಿಪ್...

    ಸೊಗಸಾಗಿ ಬರೆದಿದ್ದೀರಿ...
    ಎಷ್ಟೋ ಸಾರಿ ಹಾಗೇ ಆಗುತ್ತದೆ..
    ನಮಗೆ ತೊಂದರೆಯಾಗುತ್ತದೆಂದು..
    ಪ್ರಾಮಾಣಿಕವಾಗಿ ಡ್ಯೂಟಿ ಮಡಿದ ಅಧಿಕಾರಿಗಳನ್ನು ಶಪಿಸುತ್ತೇವೆ...

    ತುಂಬಾ ಮನೋಜ್ಞವಾಗಿ ಮೂಡಿ ಬಂದಿದೆ..
    ಬರವಣಿಗೆಯ ಶೈಲಿ ಕೂಡ ಚೆನ್ನಾಗಿದೆ...

    ಅಭಿನಂದನೆಗಳು..

    ReplyDelete
  3. ದಿಲೀಪ್,
    ನಿಮ್ಮ ಎರಡೂ ಕಂತು ಬಂದ ಮೇಲೆ ಕಾಮೆಂಟ್ ಬಾರಿಯೋಣ ಅಂತ ಸುಮ್ಮನೇ ಇದ್ದೆ. ಚೆನ್ನಾಗಿದೆ ನಿರೂಪಣೆ.
    ಇಲ್ಲಿಯವರೆಗೆ ಹೊರ ರಾಜ್ಯಗಳಲ್ಲಿ ಇದ್ದ ಕಾರಣದಿಂದ ಭಾರತೀಯ ರೈಲು ನಮ್ಮ ಎರಡನೇಮನೆ ಆಗಿತ್ತು. ಹಾಗಾಗಿ ನಿಮ್ಮ ಪರಿಸ್ತಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ. ಎಲ್ಲರೂ TC ಯನ್ನ ಒಬ್ಬ ಭ್ರಷ್ಟ ಅಧಿಕಾರಿಯನ್ನಾಗೇ ನೋಡ್ತಾರೆ.. ಎಲ್ಲರೂ ಹಾಗೆ ಇರೋಲ್ಲ ಅನ್ನೋಕ್ಕೆ ನಿಮ್ಮ ಅನುಭವವೇ ಸಾಕ್ಷಿ. ನಿಮಗೆ ಸಿಕ್ಕಿದ ಎರಡನೆಯವ ನಿಜವಾಗಲೂ ಪ್ರಶಂಸಾರ್ಹ.
    ಜೊತೆಗೆ ನಮಗೆಲ್ಲರಿಗೂ ಒಂದು ಕಲಿಯಲೇಬೇಕಾದ ಪಾಠ ಕೂಡ ಇದೆ.
    Thanks a lot for enlightening us!! Hey folks dont forget your ID proof ever!!!!

    ReplyDelete
  4. ದಿಲೀಪ್,
    ಚೆನ್ನಾಗಿತ್ತು ನಿಮ್ಮ ಪ್ರಯಾಣದ ಕಥೆ....ಸ್ವಲ್ಪ ಜನ ಮಜಾ ತಗೊಂಡಿದ್ದಾರೆ ನಿಮ್ಮ ಪೇಚಾಟ ನೋಡಿ...
    ಚೆನ್ನಾಗಿ ನಿರೂಪಿಸಿದ್ದೀರ....

    ReplyDelete
  5. ನಮಸ್ಕಾರ ದಿಲೀಪ್....

    ಮುಂದಿನ ಕಂತು ಏನಾಗಬಹುದು ಎಂದು ಕಯ್ತಾಯಿದ್ದೆ....ತುಂಬಾ ಚನಾಗಿ ಬರೆದಿದ್ದೀರ.....ನಿಜವಾಗಲೂ ಆ TC ನಿಷ್ಟಾವಂತ ಅಧಿಕಾರಿ ಇಂತಹವರನ್ನು ನಾವು ಪ್ರಶಂಸಿಸಬೇಕು...ಯಾವಾಗಲೂ ಹಾಗೆ ಅಲ್ಲವೇ...ನಮಗೆ ತೊಂದರೆ ಆಗ್ತಿದ್ದರೆ ಬೇರೆಯವರಿಗೆ ಮಜಾ ತೆಗೆದುಕೊಳ್ಳುವ ಆಸೆ....ಆದರೆ ನಮಗೆಲ್ಲಾ ಒಂದು ಒಳ್ಳೆಯ ಪಾಠಕಲಿತ ಹಾಗಾಯ್ತು..ನಿಮ್ಮ ಬರವಣಿಗೆ ಪ್ರಶಂಸಾರ್ಹ....

    train ಒಂದೇ ಅಲ್ಲಾ ಅನೇಕ ಕಡೆ ID proof ಕೇಳುವ ಸಂಧರ್ಬ ಬರಬಹುದು...ನೆನೆಪಿರಲಿ IDಯನ್ನು ತೆಗೆದುಕೊಂಡು ಹೋಗಲು........

    once again superb writing....keep it up.....

    ReplyDelete
  6. ತುಂಬಾ ಚೆನ್ನಾಗಿದೆ ದಿಲೀಪ್...

    ನಮ್ಮ ಮರೆವಿನಿಂದ, ನಿರ್ಲಕ್ಷ್ಯ ಧೋರಣೆಯಿಂದ ಆಗುವ ಬವಣೆಯನ್ನು ಮನೋಜ್ಞವಾಗಿ ವಿವರಿಸಿದ್ದೀರಿ..
    ಬೇರೆ ದೇಶಗಳನ್ನು ನೋಡಿ, ನಮ್ಮ ತಾಯ್ನಾಡನ್ನು ನೋಡಿದಾಗ ಸಂಕಟವಾಗುತ್ತದೆ. ದೇಶದ ಸಂಕಷ್ಟಕ್ಕೆ ಭ್ರಷ್ಟರೆ ಕಾರಣವಲ್ಲವೇ?
    ಎಲ್ಲರೂ ನಿಮಗೆ ಸಿಕ್ಕ ಟಿಸಿ ಯ೦ತೆ ನಿಯತ್ತಿನಿಂದ ಕೆಲಸ ಮಾಡಿದರೆ ದೇಶ ಅಭಿವೃಧ್ಧಿ ಹೊಂದದೇ ಇರುತ್ತೆಯೇ??

    ಈ ಕಥೆ ಮೊದಲೇ ಗೊತ್ತಿದ್ದರೂ ಈಗ ವಿವರವಾಗಿ ಕೇಳಿದಂತಾಯಿತು..

    ReplyDelete
  7. ದಿಲೀಪ್,

    ಕೆಲಸದ ಒತ್ತಡದಿಂದಾಗಿ ಬ್ಲಾಗಿಗೆ ಬಂದಿರಲಾಗಲಿಲ್ಲ. ಅದಕ್ಕಾಗಿ ಈಗ ಮೊದಲ ಮತ್ತು ಎರಡನೇ ಭಾಗವನ್ನು ಒಟ್ಟಿಗೆ ಓದಿದೆ.

    ನಡೆದ ಘಟನೆಯನ್ನು ಚೆನ್ನಾಗಿ ಹೇಳಿದ್ದೀರಿ. ಕೆಲವೊಮ್ಮೆ ಹೀಗೆ ಆಗುತ್ತದೆ. ಆದ್ರೂ ತಪ್ಪು ಎಲ್ಲಿ ನಡೆದಿದೆ ಅನ್ನುವುದು ನಂತರವಾದರೂ ನಿಮಗೆ ಗೊತ್ತಾಯಿತಲ್ಲ...
    ಅಂತಹ TC ಗಳು ಇರಬೇಕು ಅನ್ನಿಸುವುದು ಸಹಜವಲ್ವ...

    ರೈಲಿನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  8. ನಿಮ್ಮ ಪ್ರಯಾಸದ ಊರಿನ ಪ್ರವಾಸವನ್ನ ಓದಿದೆ, ಚೆನ್ನಾಗಿ ಬರ್ದಿದ್ದಿರ, ಇದಿಷ್ಟನ್ನ ನೀವು ಕಂತಿನಲ್ಲಿ ಕೊಟ್ಟದ್ದು ಆಶ್ಚರ್ಯ ಆಯ್ತು, ಎರಡನೆ ಕಂತಿನಲ್ಲಿ ನಿಮ್ಮ ಮುಜುಗರವನ್ನ ನಾನು ಗಮನಿಸಿದೆ, ರೈಲಿನಲ್ಲಿ ಎಲ್ಲರೆದುರಿಗೂ ಆದ ಮುಜುಗರವನ್ನೇ ನೀವು ಇಲ್ಲಿ ನೀವು ಪ್ರಸ್ತುತ ಪಡಿಸ್ಬೇಕಾದ್ರೆ ಅನುಭವಿಸ್ದಿರಿ ಅಂತ ಅನ್ಸುತ್ತೆ. ಹೇಗಾದರಾಗಲಿ ಆ ಟಿ ಸಿ ಸಿಕ್ಕಿದ್ರೆ ನಿಮ್ಮ ಕ್ಷಮಾಪಣೆ ಕೇಳಿ ದೊಡ್ದವ್ರಾಗಿದ್ರೆ ಆಶೀರ್ವಾದ ಪಡಯಿರಿ

    ReplyDelete
  9. ಒಹ್.. ಹಾಗೆಲ್ಲ ಆಯ್ತಾ...
    ನಾನು ಟ್ರೈನ್ ನಲ್ಲಿ ಪ್ರಯಾಣ ಮಾಡಿ ಸರಿಯಾಗಿ ೨ ವರ್ಷ ಮೇಲೆ ಆಯ್ತು...
    ನನಗೆ ಇದರ ಬಗ್ಗೆ ಗೊತ್ತಿರ್ಲಿಲ್ಲ...
    ಇನ್ಮೇಲೆ ಟ್ರೈನ್ ನಲ್ಲಿ ಹೋಗೋವಾಗ ನೀವು ಹೇಳಿದ ಹಾಗೆ ಗುರುತಿನಿ ಚೀಟಿ ಇಟ್ಟುಕೊಂಡು ಹೋಗ್ತೀನಿ..
    ಮಾಹಿತಿಗಾಗಿ ಧನ್ಯವಾದಗಳು

    ReplyDelete
  10. ಮೊದಲ ಭಾಗ ಓದಿದಾಗ ಶೀರ್ಶಕೆಯ ಬಗ್ಗೆ ಒ೦ದು ಪ್ರಶ್ನೆ ಉಳಿದುಕೊ೦ಡಿತ್ತು. ನಿಮಗೆ ಆಗಿರುವ ತೊ೦ದರೆಯಿ೦ದ ಬೇಸರವಾದರೂ, TC ಯ ಪ್ರಾಮಾಣಿಕತೆಯ ಬಗ್ಗೆ ಖುಷಿ. ಚೆನ್ನಾಗಿ ನಿರೂಪಿಸಿದ್ದೀರ. ಧನ್ಯವಾದಗಳು.

    ReplyDelete
  11. odu oduttaa.... tappu nimmade alve antha manasige annistittu.... but by the end of it, I liked the conclusion and ended v.thoughtfully well.

    tumbaa ishtavaaytu.

    ReplyDelete
  12. tumbaa rasavattaagide nimma anubhava... aa TC yannu mecchale beku...

    ReplyDelete
  13. ಹೌದು ದಿವ್ಯಾ..
    ಇದೇ ಮುಂದೆ ನಡೆದ ಕಥೆ...
    ಎಲ್ಲರೂ ನಮ್ಮನ್ನೇ ನೋಡ್ತಾ ಇದ್ರೆ ತುಂಬಾ ಮುಜುಗರ ಆಗ್ತಾ ಇತ್ತು...
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  14. ಪ್ರಕಾಶಣ್ಣ...
    ಧನ್ಯೋಸ್ಮಿ...

    ಕವನಗಳನ್ನಷ್ಟೇ ಬರೆದು ಅಭ್ಯಾಸವಿದ್ದ ನಾನು ಇತ್ತೀಚೆಗಷ್ಟೆ ಲೇಖನಗಳನ್ನ ಬರೆಯಲು ಪ್ರಾರಂಭಿಸಿದ್ದು...
    ಬರವಣಿಗೆಯ ಶೈಲಿ ನಿಮಗೆ ಮೆಚ್ಚುಗೆಯಾಗಿದೆಯೆಂದರೆ ನನಗೆ ತುಂಬಾ ಖುಷಿ...

    ಹೌದು.. ನಮ್ಮ ಒಳಿತನ್ನಷ್ಟೇ ಯೋಚಿಸಿ ಕೆಲವೊಮ್ಮೆ ನಿಷ್ಠಾವಂತ ಅಧಿಕಾರಿಗಳನ್ನ ಶಪಿಸೋದು ತಪ್ಪು...

    ಧನ್ಯವಾದಗಳು...

    ReplyDelete
  15. ಸುಮನಾ Madom,,,

    ನಾನು ಒಟ್ಟಿಗೇ ಬರೆದರೆ ಲೇಖನ ತುಂಬಾ ದೀರ್ಘವಾಗಿ ಓದುವವರ patience test ಮಾಡಿದಂತೆ ಆಗಬಹುದು ಅಂತ ಅದನ್ನ ಎರಡು ಭಾಗಗಳಲ್ಲಿ post ಮಾಡಿದೆ ಅಷ್ಟೇ...

    ನಿಜ.. ಸರ್ಕಾರಿ ಹುದ್ದೆಗಳಲ್ಲಿ ಇರೋ ಅದೆಷ್ಟೋ ಮಂದಿ ತುಂಬಾ ನಿಷ್ಠಾವಂತರಿದ್ದಾರೆ... ಎಲ್ಲರೂ ಭ್ರಷ್ಟರು ಎನ್ನುವ ಭಾವನೆ ತಪ್ಪು...

    ಮತ್ತೊಂದು ವಿಷಯ.. ಕೇವಲ ಇಂಟರ್ನೆಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದರೆ ಮಾತ್ರ ID ಪ್ರೂಫ್ ಅತ್ಯವಶ್ಯ..

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  16. ಮಹೇಶ್..
    ನನ್ನ ಪ್ರಯಾಣದ ಕಥೆ ಓದಿ ಮೆಚ್ಚಿಕೊಂಡಿದ್ದಕ್ಕೆ ತುಂಬಾ thanks....
    ಧನ್ಯವಾದಗಳು...

    ReplyDelete
  17. ವೈಷ್ಣವಿ...
    ನಿಜ... ಆ ಅಧಿಕಾರಿ ನಿಜಕ್ಕೂ ಪ್ರಶಂಸೆಗೆ ಅರ್ಹ...
    ಇನ್ನು ಮಾತ್ರ ID Card ಮರೆತು ಹೋಗುವ ಪ್ರಮೇಯವೇ ಇಲ್ಲ...
    ಈ ಘಟನೆ ಒಳ್ಳೇ ಪಾಠ ಕಲಿಸಿದೆ...
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks...

    ReplyDelete
  18. ಚೇತನಾ...
    ಸತ್ಯವಾದ ಮಾತು.. ಭ್ರಷ್ಟಾಚಾರವೆ ದೇಶದ ಸಂಕಷ್ಟಕ್ಕೆ ಕಾರಣ... ಆದರೆ,
    ಭ್ರಷ್ಟಾಚಾರ ಎಲ್ಲ ದೇಶಗಳಲ್ಲಿಯೂ ಇದೆ... ನಮ್ಮ ದೇಶವೂ ಅದಕ್ಕೆ ಹೊರತಲ್ಲ...
    ನಿಮಗೆ ಮೊದಲು ಹೇಳಿದಾಗ ನಾನು ದಂಡ ಕಟ್ಟಿದ ವಿಷಯವನ್ನಷ್ಟೇ ಹೇಳಿದ್ದೆ..
    ಆದರೆ ನಾನು ಪಟ್ಟ ಪಾಡನ್ನು ಹೇಳಿರಲಿಲ್ಲ..
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  19. ಶಿವು ಸರ್...

    ತಪ್ಪು ಗೊತ್ತಿದ್ದರೂ ನಾವು ವಾದಕ್ಕೆ ಇಳಿದಿದ್ದು ಇನ್ನೂ ದೊಡ್ಡ ತಪ್ಪು...
    ಈ TC ತರದ ಅಧಿಕಾರಿಗಳು ಎಲ್ಲೆಡೆ ಇದ್ದಿದ್ದರೆ ಅಂತ ಅನ್ಸೋದೂ ಸಹಜ..
    ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ thanks..

    ಧನ್ಯವಾದಗಳು..

    ReplyDelete
  20. ಉಮೇಶ್ ಸರ್..
    ನಾನು ಆಗಲೆ ಹೇಳಿದಂತೆ ತುಂಬಾ ಧೀರ್ಘ ಬರಹವಾಗತ್ತೆ ಅನ್ನೋ ಕಾರಣಕ್ಕೆ ಎರಡು ಕಂತಿನಲ್ಲಿ ಬರೆದೆ..
    ಮುಜುಗರ ಇನ್ನೂ ಇದೆ... ಅವನಿಗೆ "ಚಿಲ್ಲರೆ ನೀವೇ ಇಟ್ಟುಕೊಳ್ಳಿ" ಅಂತ ಹೇಳಿದ್ದು ತುಂಬಾ ಬೇಸರವಾಯ್ತು.. ಅಂತಹ ಮಾತನ್ನ ನನಗೇ ಯಾರಾದರೂ ಹೇಳಿದ್ದರೆ..?
    ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  21. ಶಿವಪ್ರಕಾಶ್ ಸರ್..
    ನೀವು IRTC ಕೌಂಟರ್ ಗಳಲ್ಲೇ ಟಿಕೆಟ್ ತಗೊಂಡರೆ ಟ್ರೈನ್ ನಲ್ಲಿ ಗುರುತಿನ ಚೀಟಿ ಕೇಳೋದಿಲ್ಲ.. ಇದೇನಿದ್ದರೂ ಇಂಟರ್ನೆಟ್ ನ ದಾಸರಾಗಿ ಹೋಗಿರೋ ನಮ್ಮಂತವರಿಗೆ ಮಾತ್ರ...
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  22. ಪರಮೇಶ್ವರ್..
    ನಡೆದ ಕಹಿ ಘಟನೆ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕಲಿತ ಪಾಠವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋದು ಉದ್ದೇಶವಾಗಿತ್ತು.. ಅದಕ್ಕೇ ಆ ಶೀರ್ಷಿಕೆ... ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  23. ರೂಪಾ...
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  24. ರವಿಕಾಂತ್ ಸರ್..
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks..!
    ಧನ್ಯವಾದಗಳು..

    ReplyDelete
  25. ಹಾಯ್ ದಿಲೀಪ್....
    ಚೆಂದದ ಬರಹ. ನಾನಿಂದೇ ಹನಿಹನಿಯ ಅಂಗಳಕ್ಕೆ ಬಂದಿದ್ದು. ನಿಮ್ಮ ಅನುಭವ ಬೇಸರದ್ದಾಗಿದ್ದರೂ,ವಿಷಯ ಎಲ್ಲರೂ ತಿಳಿದುಕೊಳ್ಳಬೇಕಾದದ್ದೇ....... ಧನ್ಯವಾದಗಳು.
    ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.http://antharangadamaathugalu.blogspot.com/

    ಶ್ಯಾಮಲ

    ReplyDelete
  26. ಶ್ಯಾಮಲಾ ಮೇಡಂ..
    ಹನಿಹನಿಯ ಅಂಗಳಕ್ಕೆ ಸ್ವಾಗತ..
    ಅನುಭವಗಳು ಯಾವಾಗಲೂ ಹಾಗೆಯೇ... ಆ ಕ್ಷಣಕ್ಕೆ ಕಹಿ ಎನಿಸಿದರೂ ಅವು ಕಲಿಸುವ ಪಾಠ ಮುಂದೆ ಸಹಾಯವಾಗುತ್ತದೆ...
    ಹನಿಹನಿಯ ಅಂಗಳಕ್ಕೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಮತ್ತು ನಿಮ್ಮ ಬ್ಲಾಗ್ ಗೆ ಆಹ್ವಾನ ವಿತ್ತಿದ್ದಕ್ಕೆ ತುಂಬಾ thanks..

    ReplyDelete
  27. Dileep!!
    Sometimes such incident do occur. we just have to keep our calm
    Nice write up and i liked the toons too
    take care da
    :-)
    malathi S

    ReplyDelete
  28. ಮಾಲತಿಯವರೇ...
    ನನ್ನ ಬ್ಲಾಗ್ ಗೆ ಸ್ವಾಗತ...
    ನೀವು ಹೇಳಿದ್ದು ನಿಜ... ನಮ್ಮ ತಾಳ್ಮೆ ಕಳೆದುಕೊಳ್ದೆ ಸ್ವಲ್ಪ ಎಚ್ಚರಿಕೆಯಿಂದ ವ್ಯವಹರಿಸಿದರೆ ಇಂತಹ ಪರಿಸ್ಥಿತಿ ಗಳಿಂದ ನಾವು ಪಾರಾಗಬಹುದು....
    ಬರಹ ಮತ್ತು ವ್ಯಂಗ್ಯಚಿತ್ರಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ thanks...

    ReplyDelete
  29. Dileep, your blog is simply superb..

    ReplyDelete