ಆಗ ಹೀಗಿರಲಿಲ್ಲ..
ಮುಖದಲ್ಲಿ ಮುಗ್ಧತೆ..
ತುಟಿಯಂಚಲ್ಲಿ ಕಿರುನಗೆ..
ಕಣ್ಣುಗಳಲ್ಲಿ ಕುತೂಹಲ..
ನಿನ್ನೆಯಷ್ಟೇ ಆತ ಕೇಳಿದ ನೆನಪು...
ನೋಡಿಯೇನ ಅಕ್ಕ..?
ಪಾತರಗಿತ್ತಿ ಪಕ್ಕ..??
ಕಾಲ ಚಕ್ರ ಉರುಳಿದೆ...
ಮಗು ಈಗ ಮಗುವಲ್ಲ...
ಮುಗ್ದತೆ ಎಲ್ಲೋ ಮಾಯವಾಗಿದೆ..
ಮುಖದಲ್ಲೀಗ ಕಪಟ ನಗು..
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ..ತೀರದ ದಾಹ..
ಮತ್ತೀಗ ಆತ ಯಾರ ಕೈಗೂ ಸಿಕ್ಕ..
ಈಗಲೂ ಬಟ್ಟೆ ಕಳಚಿ ಬಿದ್ದಿರಬೇಕು
ಅದೋ..ಅಲ್ಲೇ..
ದುಡ್ದೆಂಬ ಹಾದರಗಿತ್ತಿಯ ಪಕ್ಕ...!!!
ಪರಿವರ್ತನೆ ಜಗದ ನಿಯಮ...!!
ದಿಲೀಪ್ ವಾಸ್ತವತೆಯ ಚಿತ್ರಣ ಸೊಗಸಾಗಿದೆ
ReplyDeleteಹುಹ್.. ನಿಜ ನಿಜ... ಪರಿವರ್ತನೆ ಜಗದ ನಿಯಮ.. ಆದರೆ ಇಂಥಾ ಪರಿವರ್ತನೆ..??? ಕವನ ಚೆನ್ನಾಗಿದೆ..
ReplyDeletetumba chennagide.... nija... parivartane jagada niyama...
ReplyDeleteNice one
ReplyDeleteದುಡ್ಡೇ ಎಲ್ಲಾ ಅಲ್ಲ, ಆದರೆ ದುಡ್ಡಿಲ್ದೆ ಏನೂ ಇಲ್ಲ ಅಲ್ವಾ..
ReplyDeleteಎಷ್ಟು ವಿಚಿತ್ರ!
ದುಡ್ಡಿನ ಹಿಂದೆ ಹೊರಟರೆ ನೀ ಕೆಟ್ಟೆ ... ಅಂತ ಸೊಗಸಾಗಿ ಹೇಳಿದ್ದಿರ..
ReplyDeleteತುಂಬಾ ಚೆನ್ನಾಗಿದೆ....
ನಿಮ್ಮವ,
ರಾಘು.
ಚೆನ್ನಾಗಿದೆ.
ReplyDelete"ದುಡ್ದೆಂಬ ಹಾದರಗಿತ್ತಿಯ ಪಕ್ಕ...!!!". ವಾಹ್!
ReplyDeleteನಿಜ ದಿಲೀಪ್,,ದುಡ್ಡೆನ್ನುವ ವಸ್ತು ಎಂತಹ ಸಂಬಂಧಗಳನ್ನೂ ಹಾಳು ಮಾಡುತ್ತದಲ್ವಾ? ಖೇದಕರವಾದ ಸಂಗತಿ..
ReplyDeleteAs usual ತುಂಬಾ ಚೆನ್ನಾಗಿ ಬರೆದಿದ್ದೀರ,, ಇಷ್ಟವಾಯ್ತು..
ದುಡ್ಡೇ ದೊಡ್ಡಪ್ಪ ಅ೦ದು ಕೊ೦ಡವರಿಗೆ ಒಳ್ಳೇ ಏಟು.
ReplyDeleteಹಾಯ್ ದಿಲೀಪ್...
ReplyDeleteಸೊಗಸಾಗಿದೆ ನಿಮ್ಮ ಬ್ಲಾಗ್. ಎಲ್ಲದರಲ್ಲಿ ನೀವು ಉಳಿಸಿಕೊಂಡಿರುವ ಆಸಕ್ತಿ ಮೆಚ್ಚಬೇಕು. ಮಾಸ್ಟರ್ ಆಫ್ ವನ್ ಆಗಬಹುದು ಆದ್ರೆ ಜ್ಯಾಕ್ ಆಫ್ ಆಲ್ ಆಗೋದು ಸ್ವಲ್ಪ ಕಷ್ಟ. ಬ್ಲಾಗು ಬೆಳಗಲಿ.
ಜೀವನ ನಡೆಯಲು ದುಡ್ಡೆಂಬ ಹಾದರಗಿತ್ತಿ ಬೇಕೇ ಬೇಕು ಆದರೆ ಜೀವನ 'ಜೀವಿಸಲು' ಉಳಿದೆಲ್ಲವೂ ಬೇಕು ಅಲ್ವಾ? ತುಂಬಾನೆ ಚೆನ್ನಾಗಿದೆ.
ReplyDeleteಹೌದು, ಪರಿವರ್ತನೆ ಜಗದ ನಿಯಮ. ನೋಡುನೋಡುತ್ತಲೇ ನಮ್ಮೆದುರಿಗಿನ ವ್ಯಕ್ತಿ ಬದಲಾಗುತ್ತಾನೆ. ನಾವು ಕೂಡ ಬದಲಾಗಿರುತ್ತೇವೆ. ಅದು ನಮಗೆ ತಿಲಿದಿರಿವುದಿಲ್ಲ!
ReplyDeletenice one
keep it up!
ಅದ್ಭುತವಾಗಿದೆ ಕವನ..ಭಾವಾರ್ಥ..ಹೊಂದುವ ಚಿತ್ರ...
ReplyDelete