Thursday, 9 July 2009

ಹೀಗೊಂದು ಸಂಜೆ

ಅವಳೆದೆಯೊಳಗಡಿಯಿಡೊ ಘಳಿಗೆ...
ಬರ ಹೇಳಿಹೆ ತುಂತುರು ಮಳೆಗೆ..
ತೆರೆದಿರುವೆನು ಮುತ್ತಿನ ಮಳಿಗೆ..
ಬಂದರೆ ಕ್ಷಣ ಕ್ಷಣವೂ ರಸದೀವಳಿಗೆ...

ನೀ ತೋರದಿರೂ ಇಂದವಸರ...
ಮರೆಯಾಗದೆ ನಿಲ್ಲು ಓ ನೇಸರ...
ಬರಿ ಬಾನೆoದರೆ ಬಲು ಬೇಸರ..
ಮಳೆ ಬಿಲ್ಲಿಗೆ ಕೊಡು ತುಸು ಉಸಿರ...

ತಂಗಾಳಿಯೆ ಬೀಸು ನೀ ಮೆಲ್ಲ..
ಮುಂಗುರುಳ ನರ್ತನಕೆ ಬರಿ ಸೊಲ್ಲ..
ನಾಚಿ ಕೆಂಪಿಡುತಿರೆ ಸಖಿ ಗಲ್ಲ..
ಕದ್ದು ಮುತ್ತಿಡುವೆ ನಾ ಕಳ್ಳ...

6 comments:

  1. ದಿಲೀಪ್,

    ಕವನ ರೋಮ್ಯಾಂಟಿಕ್ ಆಗಿದೆ....

    ReplyDelete
  2. ನಿಮ್ಮದೇ ಅನುಭವವೋ ಹೇಗೆ???

    its too romantic!!

    ReplyDelete
  3. ಶಿವಶಂಕರ್..

    ತುಂಬಾ thanks...

    ReplyDelete
  4. ಸುಮನಾ..

    ಅನುಭವ ಅಲ್ಲಾ ಕಣ್ರೀ.. ಕಲ್ಪನೆ ಅಷ್ಟೇ...

    ReplyDelete