Wednesday, 22 July 2009

ಮಾತನಾಡುವ ಕಣ್ಣುಗಳು...!!

ಅಂದ ಸುಗಂಧ ಹೂಗಳ ಭಾಷೆ...
ಜುಳು-ಜುಳು ಕಲರವ ನದಿಗಳ ಭಾಷೆ...

ಮುಚ್ಚಿ ತೆರೆದರೆ ಉಷೆ...
ತೆರೆದು ಮುಚ್ಚಿದರೆ ನಿಶೆ...
ಅತಿ ಶೀತಲ.. ಅತಿ ಕೋಮಲ...


ನೋಡಿ ತಣಿವುದು ತೃಷೆ...
ಮತ್ತೆ ಮತ್ತೇರಿ ನಶೆ...
ಅವು ಮಾದಕ... ಸಂವಾಹಕ....


ಕಣ್ಣ ನೋಟದಲೆ ಕವಿತೆ..
ನೋಟದಾಟದಲೆ ಚರಿತೆ...
ಅತಿ ರೋಚಕ.. ಮನ ಮೋಹಕ...


ಹೌದು ಚೆಲುವೆ....
ನಿನ್ನ ನಯನಗಳೂ ಮಾತನಾಡುತ್ತವೆ...
ಆದರೆ, ಯಾವುದು ಅವುಗಳ ಭಾಷೆ...??
ನಾನೇನು ಮಹಾ...
ಅರಿಯದೇ ಕುಳಿತಿರುವನಂತೆ ಸ್ವತಃ ಬ್ರಹ್ಮ..
ಹೋಲಿಕೆಗೆ ನಿಂತರೆ ಪ್ರತಿ ಶಬ್ದವೂ ಕ್ಲಿಶೆ...

20 comments:

  1. tumbaa chennagide..sakkat ishTa aaytu kanri..:)

    ReplyDelete
  2. ವೌ!!!ಎಷ್ಟು ಚೆನ್ನಾಗಿ ಬರೆದಿದ್ದೀರಿ.. ನಾನು ಹುಡುಗ ಆಗಿದ್ರಂತೂ 'fultoo agree' ಮಾಡಿಬಿಡ್ತಿದ್ದೆ....ಈಗ ಖುಷಿ ಪಡ್ತಿದೀನಿ...
    ಅಂದಹಾಗೆ ಈ 'ಕಣ್ಣಿನ ಚೆಲುವೆ' ಯಾರು??? :P

    ReplyDelete
  3. ದಿಲೀಪ್,
    ತುಂಬಾ ರೊಮ್ಯಾಂಟಿಕ್ ಆಗಿದೆ...

    ಮುಚ್ಚಿ ತೆರೆದರೆ ಉಷೆ...
    ತೆರೆದು ಮುಚ್ಚಿದರೆ ನಿಶೆ... ಇವೆರಡು ಸಾಲುಗಳು ಸೂಪರ್...

    ReplyDelete
  4. ವಾಹ್! ವಾಹ್ !!

    ReplyDelete
  5. ದಿಲೀಪ್
    ಅದ್ಭುತ....ಸಾಲುಗಳು...
    ಮುಚ್ಚಿ ತೆರೆದರೆ ಉಷೆ
    ತೆರೆದು ಮುಚ್ಚಿದರೆ ನಿಶೆ.....
    ಒಪ್ಪಿದೆ...ನಿಮ್ಮ ಕಾರ್ಟೂನ್ ನಿಮ್ಮನ್ನು ತೋರಿದರೆ ..ಈ ಸಾಲುಗಳು ನಿಮ್ಮ ಸಾಮರ್ಥ್ಯವನ್ನು ಹೇಳುತ್ತವೆ...

    ReplyDelete
  6. Very nice! keep going....!

    ReplyDelete
  7. ದಿಲೀಪ್...

    ಬಹಳ ಸುಂದರವಾಗಿದೆ...!

    ಶಬ್ಧಗಳಲ್ಲಿ..
    ಭಾವಗಳನ್ನು ಸಮರ್ಥವಾಗಿ ಸೆರೆ ಹಿಡಿದ್ದೀರಿ...

    ಅಭಿನಂದನೆಗಳು...

    ReplyDelete
  8. tumbaa chennagide dileep nimma kavite.... ushe nishe saalugalu sooooper!!!!!!!!!!!

    ReplyDelete
  9. Super... Modalige nimma cartoon nodide... eega ee sundara kavite... u r genious... keep it up...

    ReplyDelete
  10. ಚೇತನಾ..

    ಸಕ್ಕತ್ ಇಷ್ಟಾ ಪಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್...!

    ReplyDelete
  11. ಸುಮನ...

    ಆ ಕಣ್ಣಿನ ಚೆಲುವೆ ನನಗಿನ್ನೂ ಸಿಕ್ಕಿಲ್ಲ... ಸಿಕ್ಕಾಗ ಖಂಡಿತಾ ಹೇಳ್ತೇನೆ... ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು....

    ReplyDelete
  12. ಶಿವು...

    ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ...

    ReplyDelete
  13. ಜಲನಯನ...

    ನನ್ನ ಕಾರ್ಟೂನ್ ಕೇವಲ ನನ್ನನ್ನ ಮಾತ್ರವಲ್ಲ.... ನಿಮ್ಮನ್ನೂ ತೋರಬಹುದು...!!
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  14. ಪ್ರಕಾಶಣ್ಣ...

    ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  15. ರೂಪಾ ಶ್ರೀ...

    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್

    ReplyDelete
  16. ರವಿಕಾಂತ್ ಸರ್...

    Genious ಅಂತೆಲ್ಲಾ ಹೊಗಳ್ಬೇಡಿ ಸರ್... ತಲೆ ಮೇಲೆ ಕೊಂಬು ಬಂದ್ರೆ ಕಷ್ಟ ಆಮೇಲೆ... ಪ್ರೋತ್ಸಾಹಕ್ಕೆ, ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್..

    ReplyDelete
  17. Dileep,
    Tumbaane ishtavaayitu nimma blog.... and e-kavana saha tumbaa chennaagide.
    nimmashtu oLLe kannada bareyoke barodilla nanage, i enjoyed reading ur work.
    sooperb cartoons and thoughts ri, keep up, keep up...!!
    Roopa Satish (3K)

    ReplyDelete
  18. ರೂಪಾಜಿ...
    ನನ್ನ ಬ್ಲಾಗ್ ಗೆ ಸ್ವಾಗತ..

    ಬ್ಲಾಗ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ thanks..

    ನಿಮ್ಮ ಕವನಗಳೂ ಸೂಪರ್.. ಸುಮ್ಮನೆ ಕನ್ನಡ ಚೆನ್ನಾಗಿ ಬರೋದಿಲ್ಲ ಅಂತೆಲ್ಲ ಹೇಳಬೇಡಿ..

    ಆಗಾಗ ಬರುತ್ತಿರಿ... ಪ್ರೋತ್ಸಾಹಿಸುತ್ತಿರಿ..

    ಧನ್ಯವಾದಗಳು...

    ReplyDelete