ಮಧುರ "ಸಂಕಲನ"...
ಸಮಕ್ಷಮ..ಸಮಾಗಮ

ವ್ಯಥೆಯ "ವ್ಯವಕಲನ"
ಮುತ್ತು ಗುಣಿಲೆ ಹತ್ತು..
ನಿಲ್ಲದ "ಗುಣಾಕಾರ"
ಮತ್ತು ಬಾಗಿಲೆ ಹೊತ್ತು
ಗೆಲ್ಲದ "ಭಾಗಾಕಾರ"...
ನಿನ್ನಲ್ಲಿ ನನ್ನ
ಕೂಡಿ-ಕಳೆದು..
ಗುಣಿಸಿ - ಭಾಗಿಸಿದರೂ..
ಉಳಿದಿದ್ದು..
ಒಂದೇ ಉಸಿರು…
ಒಂದೇ ಕನಸು…
ಒಂದೇ ಪ್ರಾಣ…
ಬಲು ವಿಚಿತ್ರ..
ಈ ಪ್ರೀತಿಯ ಲೆಕ್ಕಾಚಾರ
ದಿಲೀಪ್,
ReplyDeleteಪ್ರೀತಿಯಲ್ಲಿ ಲೆಕ್ಕಾಚಾರವೇ..!
ಏನು ಮಾಡೋದು ಶಿವು ಸರ್..
ReplyDeleteRecession ಆಲ್ವಾ...ಅದ್ಕೇ ಎಲ್ಲ ಕಡೇನೂ ಲೆಕ್ಕಾಚಾರ ಸರಿಯಾಗಿ ಇದ್ರೆ ಒಳ್ಳೇದು ಅನ್ನಿಸ್ತು...
ಲೆಕ್ಕಾಚಾರ ಚೆನ್ನಾಗಿದೆ!
ReplyDeleteSunaath...
ReplyDeleteTumbaa thanks... aagaga bandu heege protsahisuttiri..
Dileep Hegde
ಲೆಕ್ಕ ಅಂದ್ರೆ ನಂಗೆ ಗಾಬರಿ.. ನೀವು ನೋಡಿದ್ರೆ ಎಷ್ಟೆಲ್ಲಾ ಲೆಕ್ಕ ಹಾಕಿದ್ದೀರಲ್ಲ....ಒಂಥರ ಡಿಫರೆಂಟ್ ಅನ್ನಿಸ್ತು....
ReplyDeletekeep writing!!
ಏನ್ ಬೇಕಾದ್ರೂ ಅನ್ನಿ 1,2,3 ಅ೦ತಾ ಲೆಕ್ಕ ಮಾತ್ರ ಕೇಳಬೇಡಿ ನಾ ಲೆಕ್ಕದಲ್ಲಿ ಸ್ವಲ್ಪ ಹಿಂದೆ .......
ReplyDeleteದಿಲೀಪ್ ತುಂಬಾ ಚೆನ್ನಾಗಿದೆ ಲೆಕ್ಕಾ.. ಹೀಗೆ ಬರಿತಾ ಇರಿ....ಒಂದಿಷ್ಟು ಮಾತು+ ಒಂದಿಷ್ಟು ಕವನ = (ಒಂದಿಷ್ಟು) ಹನಿ :p
(ಹೀಗೆ ಒಂದಿಷ್ಟು ಹನಿ ಇರಲಿ)
ಸುಮನಾ....
ReplyDeleteತುಂಬಾ ಥ್ಯಾಂಕ್ಸ್... ಹೀಗೆ ಆಗಾಗ ಬರುತ್ತೀರಿ...
ರಂಜಿತಾ..
ReplyDeleteಸಿಲ್ಲಿ ಲಲ್ಲಿ ನೆನಪಿಸಿದ್ದಕ್ಕೆ, ಕವನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.. ನಿಮ್ಮ equation ಒಪ್ಪಲೇ ಬೇಕು...
ಆಹಾಹಾ ದಿಲೀಪ್,
ReplyDeleteಎಂಥಾ ಸುಂದರವಾದ ಲೆಕ್ಕಾಚಾರ !
ಹನಿ ಹನಿ ಲೆಕ್ಕಾಚಾರ ಮಾಡದೆ , ಹೆಚ್ಚು ಹೆಚ್ಚು ಬರೆಯುತ್ತಿರಿ, ಚೆನ್ನಾಗಿದೆ
ಚಿತ್ರಾ..
ReplyDeleteಲೆಕ್ಕಾಚಾರ ಇಷ್ಟ ಪಟ್ಟಿದ್ದಕ್ಕೆ ತುಂಬಾ thanks... ಇನ್ನೂ ಹೆಚ್ಚು ಬರೆಯೋದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ...
ಧನ್ಯವಾದಗಳು..
ಪ್ರೀತಿಯಲ್ಲೂ ವೃತ್ತಿಧರ್ಮವೆ?!" ನಾಕೊಂದ್ಲೆ ನಾಕು, ನಾಕೆರಡ್ಲೆ ಎಂಟು.." ಹಾಡು ನೆನಪಾಯ್ತು.. :-)
ReplyDeleteಜಯಲಕ್ಷ್ಮಿ..
ReplyDeleteಈ ಕವಿತೆಯಲ್ಲಿ ಪ್ರೀತಿಯಲ್ಲೂ ವೃತ್ತಿಧರ್ಮ ನುಸುಳಲು ಪ್ರಯತ್ನಿಸಿ ಸೋತಿದೆ...!! ಕೊನೆಗೆ ಗೆದ್ಡಿದ್ದು ಪ್ರೀತಿ ಮಾತ್ರ...
ಪ್ರತಿಕ್ರಿಯೆಗೆ ಧನ್ಯವಾದಗಳು...
ದಿಲೀಪ್ ಹೆಗಡೆ
Lekkachara makes DIL Kaabra.....
ReplyDelete