Monday, 13 July 2009

ಅಣಕು ಶಾಯರಿ... ಕನ್ನಡದಲ್ಲಿ...

1.

ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ವೈಯ್ಯಾರಿ ನಿನ್ನ ಮೈಮಾಟ...
ಮಧುರಸ ಭರಿತ ಬಿಂದಿಗೆ..
ವ್ಹಾ... ವ್ಹಾ..
ಹುಣ್ಣಿಮೆ ಕಳೆದ ಮೇಲೆ...
ಪಾಡ್ಯ ಬಿದಿಗೆ ತದಿಗೆ...!!

2.

ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಆಹಾ..!! ನಿನ್ನ ಚೆಲುವ ವದನ..
ನೋಡಿದರೆ ಸಾಕು... ಎದೆಯ ಬಡಿತ
ಏರುತ್ತದೆ....
ವ್ಹಾ... ವ್ಹಾ...
ಬಳಸುವ ಸೌಂದರ್ಯ ವರ್ಧಕಗಳ
ಪಟ್ಟಿ ಮಾತ್ರ ಕೊಡಬೇಡ...
ನನ್ನ ಹೃದಯ ಬಡಿತ ನಿಲ್ಲುತ್ತದೆ....!!

3.

ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಹೇಳು ಪ್ರಿಯೆ...
ಕನಸಿನಲ್ಲಿ ಬರುವೆನೆಂದು
ನೀನು ಹೇಳಿದ್ದು ಏಕೆ...??
ವ್ಹಾ.. ವ್ಹಾ....
ಅಕ್ಕ ಪಕ್ಕದ ಮನೆಗೂ ಕೇಳ್ತಿದೆಯಂತೆ...
ನನ್ನ ಅಬ್ಬರದ ಗೊರಕೆ...!!

4.

ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ಮಿಂಚಾಗಿ ನೀನು ಬರಲು...
ನಿಂತಲ್ಲಿಯೇ ಮಳೆಗಾಲ...
ವ್ಹಾ... ವ್ಹಾ..
ನೀರು ನಿಂತಲ್ಲಿಯೇ ನಿಂತರೆ..
ಸೊಳ್ಳೇಗಾಲ...ಸೊಳ್ಳೇಗಾಲ...ಸೊಳ್ಳೇಗಾಲ...

5.

ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಹುಡುಗಾ... ಕೈ ಮುಗಿದು ಬೇಡುತ್ತೇನೆ...
ಬರಬೇಡ ನಮ್ಮ ಬೀದಿಗೆ..
ಹುಡುಗಿಯರೆಲ್ಲ ಮೂರ್ಛೆ ಹೋಗುತ್ತಾರೆ..
ಕೋಪ ಮಾಡ್ಕೊಳಲ್ಲಾ ಅಂದ್ರೆ ಒಂದು ಮಾತು..
ಮುಚ್ಚಿಡದೆ ಕೇಳುತ್ತೇನೆ...
ಹೌದೂ.. ನೀನು ಸ್ನಾನ ಮಾಡ್ದೇ ಎಷ್ಟು ದಿನಾ ಆಯ್ತು..??


ಹಿಂದಿಯಲ್ಲಿ ಅಣಕು ಶಾಯರಿಗಳು ಜನಪ್ರಿಯ... ಗಂಭೀರ ಶಾಯರಿಗಳು ಮನಸ್ಸಿಗೆ ಹತ್ತಿರವಾಗಿ ಸದಾಕಾಲ ನೆನಪಿನಲ್ಲಿ ಉಳಿದರೆ, ಈ ಅಣಕು ಶಾಯರಿಗಳು ತಕ್ಷಣಕ್ಕೆ ನಗೆ ಚಿಮ್ಮಿಸಿ ಮನಸ್ಸಿಗೆ ಆಹ್ಲಾದ ನೀಡುತ್ತವೆ... ಕನ್ನಡದಲ್ಲೂ ಬರೆಯಲು ಪ್ರಯತ್ನ ಮಾಡಿದೆ.. ಈ ಮೇಲಿನವು ಹುಟ್ಟಿಕೊಂಡವು... ಇಷ್ಟವಾಯ್ತಾ...?? ದಯವಿಟ್ಟು ಹೇಳಿ....

10 comments:

  1. wah,, wah,, sakkat..tumbaa tumbaa chennagide..:)

    ReplyDelete
  2. ಮಿಂಚಾಗಿ ನೀನು ಬರಲು...
    ನಿಂತಲ್ಲಿಯೇ ಮಳೆಗಾಲ...
    ವ್ಹಾ... ವ್ಹಾ..
    ಮಿಂಚಾಗಿ ನೀನು ಬರಲು...
    ನಿಂತಲ್ಲಿಯೇ ಮಳೆಗಾಲ...
    ವ್ಹಾ... ವ್ಹಾ..
    ನೀರು ನಿಂತಲ್ಲಿಯೇ ನಿಂತರೆ..
    ಸೊಳ್ಳೇಗಾಲ...ಸೊಳ್ಳೇಗಾಲ...ಸೊಳ್ಳೇಗಾಲ...

    ಈ ಹಾಡಂತೂ ಸೂಪರ್ ದಿಲೀಪ್...keep it up.

    ReplyDelete
  3. Good one dude , really enjoyed a kannada hanigalu after a long time .

    ReplyDelete
  4. Chetana...

    Tumbaa thanks...

    Shivu...

    nanagoo 5 shayarigalalli jaasti ishta aagiddu ide shayari... ishta pattiddakke tumbaa thanks...

    Sasi...

    Thanks for the appreciation mate...

    ReplyDelete
  5. ನಿಮ್ಮ ಬ್ಲೋಗ್ ಗೆ ನಾನು ಬಂದಿದ್ದು ಹೊಸತು.. ತುಂಬಾ ಖುಷಿಯಾಯ್ತು.

    ನಂಗಂತೂ ಎರಡನೆಯದು ತುಂಬಾ ಇಷ್ಟ ಆಯ್ತು :P

    ReplyDelete
  6. ಸುಮನ..

    Blog ಗೆ ಸ್ವಾಗತ... ಬಂದಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ, ಕವನಗಳನ್ನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್...

    ReplyDelete
  7. ತು೦ಬ ಇಷ್ಟವಾಯ್ತು.ನಿಮ್ಮೆಲ್ಲ ಬರಹಗಳೂ ಚೆನ್ನಾಗಿವೆ.

    ReplyDelete
  8. ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
    ..
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in (already site viewed 1,31,131+)
    &
    https://T.me/spn3187 (already Joined 500+)

    ReplyDelete
  9. ಸೂಪರ್ ಸರ್

    ReplyDelete