ದೂರದೂರಿನ ಗೆಳತಿ...
ಮನದ ಭಾವನೆಗಳನೆಲ್ಲ
ನಿನ್ನಲ್ಲಿ ಹೇಳಿಕೊಳ್ಳುವ ಆಸೆ...
ಆದರೆ, ಪತ್ರ ಬರಿಯೆಂದು

ಮಾತ್ರ ನೀ ಹಠ ಮಾಡಬೇಡ...
ಭೂಮಿ ಮೇಲಿನ...
ಮುಕ್ಕಾಲು ಪಾಲು ಮರಗಳು...
ಖಾಲಿಯಾದಾವು....!!
ಮಿಂಚು ಕಂಗಳ ಒಡತಿ...
ನಿನ್ನೊಲುಮೆಯಿಂದಲೇ
ಬಾಳು ಬೆಳಗಿ ಮರೆಯಾಗುತಿರೆ ನಿಶೆ...
ಮತ್ತೆ, ದೀಪ ಬೆಳಗೆಂದು
ಮಾತ್ರ ನೀ ಗೋಗರೆಯಬೇಡ...
ಕಣಿವೆ ಕಾನನಗಳಲಿ
ಹರಿಯೊ ನದಿ ನೀರೆಲ್ಲ
ಬತ್ತಿ ಹೋದಾವು...!!
ದಿಲೀಪ್,
ReplyDeleteನಿಜಕ್ಕೂ ಆತ ಪರಿಸರ ಮತ್ತು ತನ್ನ ಪ್ರೇಮಿಯನ್ನು ಉಳಿಸಿಕೊಳ್ಳುತ್ತಾನೆ.
ಕಾರ್ಟೂನ್ ರೇಖೆಗಳು ಚೆನ್ನಾಗಿವೆ. ಕವನಗಳೂ ಹಿತವಾಗಿವೆ. ಹೀಗೇ ಬರೀತಾ ಇರಿ. ಗುಡ್ ಲಕ್
ReplyDeletetumbaa chennagide,,aata kagadagaLa neravillade tanna patravannu e-mail maaDabahudu..:p
ReplyDeleteಶಿವು...
ReplyDeleteನಿಮ್ಮ ಹಾರೈಕೆ ಆ ಪ್ರೇಮಿಗೆ ತಲುಪಿದೆ... ಖುಷಿಯಾಗಿದ್ದಾನೆ... ಧನ್ಯವಾದಗಳು...
ಏಕಾಂತ...
ReplyDeleteಇಷ್ಟ ಪಟ್ಟಿದ್ದಕ್ಕೆ ಮತ್ತು ಶುಭ ಹಾರೈಕೆಗೆ ತುಂಬಾ thanks..
ದಿಲೀಪ್ ಹೆಗಡೆ
ಚೇತನಾ....
ReplyDeleteತುಂಬಾ ತುಂಬಾ ಥ್ಯಾಂಕ್ಸ್... ಆದ್ರೆ e-mail ಮಾಡ್ತಾ ಕೂತ್ರೆ power ಸಾಕಾಗಲ್ವಂತೆ.... ಇಲ್ಲಿ ಮಿತಿಯಿಲ್ಲದ power cut ಬೇರೆ...
ದಿಲೀಪ್, ರೇಖೆಯಷ್ಟೇ ಸಮರ್ಥವಾಗಿ ಅಕ್ಷರವನ್ನೂ ಪದಗಳ, ಪಾದಗಳ, ಕವನಗಳಾಗಿ ಪೋಣಿಸಿ ಹೆಣೆಯುವ ಗುಣವಿದೆ ನಿಮ್ಮಲ್ಲಿ...ಪ್ರೇಮ ಪತ್ರ ಬರೆಯಲು ಧರೆಯಮೇಲಿನ ಮರಗಳನ್ನು ಖಾಲಿ ಮಾಡುವಂತಹ ಅಗಾಧತೆಯ ಪ್ರಸ್ತಾವನೆಯನ್ನು ಸೂಚ್ಯವಾಗಿ ಬರೆದಿದ್ದೀರಿ...ಮುಂದುವರೆಯಲಿ...ಜುಗಲ್ ಬಂದಿ...ಚಿತ್ರ-ಕವನದ್ದು....
ReplyDeleteತುಂಬಾ ಜಾಣ ಕಣ್ರೀ ಈ ಪ್ರೇಮಿ!
ReplyDeleteಚೆನ್ನಾಗಿದೆ ಕವನ ದಿಲೀಪ್, ಮುಂದುವರಿಸಿ
ReplyDeleteದಿಲೀಪ್,
ReplyDeleteಇಂಥಾ ಪ್ರೇಮಿಗಳು ಹೆಚ್ಚಾದರೆ , ಪ್ರಕೃತಿಯೂ ನಮ್ಮನ್ನು ಹೆಚ್ಚೆಚ್ಚು ಪ್ರೀತಿಸುತ್ತದೆಯೇನೋ ಅಲ್ಲವೇ .
ಅರ್ಥವತ್ತಾಗಿವೆ ಸಾಲುಗಳು .
ಜಲನಯನ...
ReplyDeleteಧನ್ಯೋಸ್ಮಿ...! ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸಿ ಕೊಳ್ಳೋದು ಈಗಿನ ಅಗತ್ಯತೆ... ಇಲ್ಲಾ ಅಂದ್ರೆ ಭಾರಿ ಬೆಲೆ ತೆರಬೇಕಾದೀತು... ಕವನ ಮತ್ತು ವ್ಯಂಗ್ಯ ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ thanks.. ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ...
ಧನ್ಯವಾದಗಳು..
ಸುನಾಥ್...
ReplyDeleteಜಾಣನಾದ್ರೂ ಪ್ರೇಯಸಿಯ ಕಾಟದಿಂದ ತಪ್ಪಿಸಿಕೊಳ್ಳೋದು ಕಷ್ಟ ಆಗ್ತಿದೆಯಂತೆ...!! ಪ್ರತಿಕ್ರಿಯೆಗೆ ಧನ್ಯವಾದಗಳು...
ಪರಾಂಜಪೆ ಸರ್..
ReplyDeleteಕವನ ಮೆಚ್ಚಿದ್ದಕ್ಕೆ ತುಂಬಾ thanks...
ಚಿತ್ರಾ..
ReplyDeleteನಿಜ... ಪರಿಸರದ ಬಗ್ಗೆ ನಾವು ಪ್ರೀತಿ ಬೆಳೆಸಿಕೊಂಡಷ್ಟೂ ಪರಿಸರಕ್ಕೆ ನಮ್ಮ ಮೇಲೆ ಪ್ರೀತಿ ಹೆಚ್ಚುತ್ತದೆ... ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಪ್ರೋತ್ಸಾಹ ಹೀಗೆ ಇರಲಿ..
ಕವನ ಚೆನ್ನಾಗಿದೆ ಅಂದ್ರೆ ಅದು ನಿಮಗೇನೂ ಹೊಸ 'ಫೀಡ್‌ಬ್ಯಾಕ್' ಆಗಲ್ಲ ಬಿಡಿ......ಆದರೆ ನಂಗೆ ಅನ್ನಿಸಿದ್ದು ಏನಂದ್ರೆ ಕವನ ಸ್ವಲ್ಪ ಅಪೂರ್ಣ ಅನ್ನಿಸ್ತು....ಇನ್ನೂ ಕೆಲವು ಎಲಿಮೆಂಟ್ಸ್ ಸೇರಿಸಿದ್ರೆ ಚೆನ್ನಾಗಿತ್ತೇನೋ....
ReplyDeleteಪರಿಸರ ಮತ್ತು ಪ್ರೇಯಸಿಯನ್ನ ಜೊತೆಗೂಡಿಸಿದ್ದು ಮಾತ್ರ ಅದ್ಭುತ ಕಲ್ಪನೆ...ಪ್ರಕೃತಿ ಮತ್ತು ಹೆಣ್ಣು ಒಂದೇ ಅಂತಾರಲ್ಲ ಹಾಗೆ!!
ಸುಮನಾ...
ReplyDeleteಇನ್ನಷ್ಟು elements ಗಳನ್ನ ಸೇರಿಸಿಕೊಂಡರೆ ಚೆನ್ನಾಗಿರ್ತಾ ಇತ್ತು ಅಂತ ನನಗೂ ಅನ್ನಿಸಿದೆ.. ಆದರೆ Post ಮಾಡೇ ಬಿಡಬೇಕು ಅನ್ನೋ ಧಾವಂತ... ಕೆಲವು ಸಾಲುಗಳು ಹೊಳೆದ ತಕ್ಷಣ ಬರೆದು ಬಿಡಬೇಕು ಅನ್ನೋ ಆತುರ... ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ... ಪ್ರತಿಕ್ರಿಯೆಗೆ ಧನ್ಯವಾದಗಳು... ಹೀಗೆ ಆಗಾಗ ಬಂದು ತಪ್ಪಿದ್ದರೆ ತಿದ್ದಲು ಮರೆಯಬೇಡಿ...
ದಿಲೀಪ್ ಹೆಗಡೆ
ತುಂಬಾ ಸುಂದರ ಮತ್ತು ಅರ್ಥಪೂರ್ಣ ಕವಿತೆ ದಿಲೀಪ್. ಪ್ರತ್ಯೇಕ ವಿವರಣೆಯ ಅಗತ್ಯವಿತ್ತಾ?
ReplyDeleteಜಯಲಕ್ಷ್ಮಿ...
ReplyDeleteನನಗ್ಯಕೋ ಚಿಕ್ಕ ವಿವರಣೆ ಇದ್ರೆ ಚೆನ್ನಾಗಿರತ್ತೆ ಅಂತ ಅನ್ಸ್ತು.... ಕವಿತೆ ಮೆಚ್ಚಿಕೊಂಡಿದ್ದಕ್ಕೆ ತುಂಬಾ Thanks...
ದಿಲೀಪ್ ಹೆಗಡೆ