ಉರಿವ ಎದೆಯಲಿ ಸಾವಿರ ಪ್ರಶ್ನೆ..
ಕಿವಿಯನು ತೆರೆದು ನೀ ಕೇಳಿಬಿಡು...
ಇನ್ನು ತಡೆಯೆ ನಾ ನಿನ್ನನು ಗೆಳತಿ..
ಹೋಗುವ ಮುನ್ನ ನೀ ಹೇಳಿಬಿಡು...
ಎದೆಯಂಗಳದಿ ನೂರು ಚುಕ್ಕಿಗಳನಿಟ್ಟು..
ರಂಗೋಲಿಯ ಮರೆತೆ ನೀ ಏಕೆ...??
ಬಾಳ ನೌಕೆಯ ಪ್ರೇಮ ಸಾಗರಕೆಳೆದು...
ಹುಟ್ಟನು ಕಸಿದೆ ನೀ ಏಕೆ...??
|| ಉರಿವ ಎದೆಯಲಿ ||
ಹೂದೋಟದಲಿ ನೀ ಹೂಗಳ ಚುಂಬಿಸಿ..
ಬೇರನೆ ಕಿತ್ತ ಪರಿಯದೇನು..??
ಮೂಖ ಹೃದಯಕೆ ಮಾತನು ಕಲಿಸಿ...
ನಾಲಿಗೆಯನೆ ಹರಿದೆ ಸರಿಯೇನು...??
|| ಉರಿವ ಎದೆಯಲಿ ||
ಹಣತೆಯ ಬೆಳಗಿಸಿ ನೀರನು ಸುರಿದೆ..
ಇನ್ನೆಲ್ಲಿ ಹುಡುಕಲಿ ನಾ ಬೆಳಕು...??
ನನ್ನ ಕವಿತೆಗಳ ಪದಗಳ ಕಸಿದೆ...
ಇನ್ನೆಲ್ಲಿಂದ ತರಲಿ ನಾ ಸರಕು...??
|| ಉರಿವ ಎದೆಯಲಿ ||
ದಿಲೀಪ್,
ReplyDeleteನೀವು ಕವನವನ್ನು ತುಂಬಾ ಚೆನ್ನಾಗಿ ಬರೆಯುತ್ತೀರಿ...ಅಭಿನಂದನೆಗಳು..
ಮುಂದುವರಿಸಿ...
ಬಿಡುವಾದಾಗ ನನ್ನ ಬ್ಲಾಗಿನ ಕಡೆ ಬನ್ನಿ....
http://www.chaayakannadi.blogspot.com/
ತುಂಬಾ ಚನಾಗಿದ್ದು ಅಣ್ಣ..ಬಃಅಳ ಅರ್ಥಪೊರ್ಣವಗಿ ಬರೆದಿದ್ದೆ..........
ReplyDeletekeep it up..and continue doing this.........
ತುಂಬಾ ಚನಾಗಿದ್ದು ಅಣ್ಣ..ಬಃಅಳ ಅರ್ಥಪೊರ್ಣವಗಿ ಬರೆದಿದ್ದೆ..........
ReplyDeletekeep it up..and continue doing this.........
thanks for returning to creativity. Ee Geelu munuvareyali.
ReplyDeleteUday.
Shivu, Shivashankar, Vaishnavi, Uday...
ReplyDeleteIshta pattiddakke tumbaa thanks... :)