ಬೇಡ..
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...
ನಿನ್ನೆ ರಾತ್ರಿ ನನ್ನನಪ್ಪಿ
ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..
ನೀ ಮತ್ತೆ ಮರಳಿ ಬರುವವರೆಗೆ
ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..
ಹೊಸ ಅಂಗಿ ಕಲೆಯಾಯ್ತೆಂದು
ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!
ಮುದ್ದೆಯಾಗಿ ಬಿದ್ದುದನ್ನು
ಎತ್ತಿ ಕುಡುಗಿ...
ಅರ್ಧ ಮೇಲೆ ಮಡಿಸಿದ
ಕೈ ಪೂರ್ತಿ ಬಿಡಿಸಿ
ಉಲ್ಟಾ ಮಾಡಿ
ಸಾಬೂನಿನ ಹಾಲ್ನೊರೆ
ನೀರಲ್ಲಿ ದಿನವಿಡೀ ನೆನೆಸಿ
ತಿಕ್ಕಿ ತೊಳೆದು
ನೀರಲ್ಲಿ ಅದ್ದದ್ದಿ ತೆಗೆದು
ಹಿಂಡಿ ತಂತಿ ಮೇಲೆಸೆದು
ಗಾಳಿಗೆ ಹಾರದಂತೆ
ಕ್ಲಿಪ್ಪಿನಿಂದ ಬಂದಿಸುವ ಮೊದಲು
ಒಮ್ಮೆ ಸರಿಯಾಗಿ ನೋಡು...
ನಿನ್ನೆ ರಾತ್ರಿ ನನ್ನನಪ್ಪಿ
ನೀನಿತ್ತ ಮುತ್ತು ಗುರಿ ತಪ್ಪಿ
ಅಂಗಿಯ ಮೇಲೆ
ಕೆಂದುಟಿಯ ಕಲೆ ಮೂಡಿದೆ..
ನೀ ಮತ್ತೆ ಮರಳಿ ಬರುವವರೆಗೆ
ಮುತ್ತ ಹೊತ್ತು ತರುವವರೆಗೆ
ನೋಡಿ ಸಂಭ್ರಮಿಸಬೇಕು ನಾನು...
ನೆನಪ ಮಳೆಯಲಿ ನೆನೆದು
ವಿರಹಾಗ್ನಿ ಸುಡದಂತೆ
ನಿನ್ನ ಕಾಯಬೇಕು ನಾನು..
ಹೊಸ ಅಂಗಿ ಕಲೆಯಾಯ್ತೆಂದು
ಬೇಸರ ಬೇಡ..
ಕಲೆಯಿಂದ ಒಳ್ಳೆಯದಾಗೋದಾದ್ರೆ
ಕಲೆ ಒಳ್ಳೆಯದು..!!
ಕಲೆ ಒಳ್ಳೆಯದೇ ಬಿಡಿ... ದಿಲೀಪ್
ReplyDelete'ಕಲೆ'ಗೂ ಬೆಲೆ ತರುವಂತಹ ನಿಮ್ಮ ಕವನ ಕಲೆ ಇಷ್ಟವಾಯ್ತು.
ReplyDeleteಕಲೆ ಒಳ್ಳೆಯದು..:):)
ReplyDeleteದಿಲೀಪ್ .. ನಿಮ್ಮ ಕಲೆ ಚೆನ್ನಾಗಿದೆ ... ಏನೇ ಆದ್ರೂ ಸರ್ಫ್ ಎಕ್ಸೆಲ್ ಇದ್ಯಲ್ಲ
ReplyDeletekale chennagide Dileep !!!
ReplyDeleteಕಲೆ ಒಳ್ಳೆಯದೇ ...
ReplyDeleteನಿಮ್ಮ ಜೀವನದಲ್ಲಿ ಹೀಗೆ ಸುಖ ನೀಡುವ ಹಲವರು ಕಲೆಗಳು ಮನಸಿನ ಪುಟದಲಿ ಮೂಡಲಿ ..
ಕವನ ತುಂಬ ಇಷ್ಟವಾಯಿತು .. ಅಭಿನಂದನೆ
Give it to Surf Excel ad makers .. it will defnitely be aired ... nice poem .... nice presentation ...
ReplyDeleteಕವಿತೆಯಾಗಿ ಮೂಡಿತೆ 'ಕಲೆ'!
ReplyDeleteನೀನಿತ್ತ ಮುತ್ತಿನ ಕಲೆ!!!!! ದಿಲೀಪ್ ರವರೆ ಕವನ ತು೦ಬ ಚೆನ್ನಾಗಿದೆ "ಕಲೆ ಒಳ್ಳೆಯದು"
ReplyDeleteದಿಲೀಪ್,
ReplyDeleteಕಲೆಯ ಕವನ ಚೆನ್ನಾಗಿದೆ. ಹೌದ್ ಕಲೆ ಒಳ್ಳೆಯದು.
ಕಲೆ, ಕಳೆ ತರಲಿ, ಕಳೆ ತೆಗೆಯಲಿ,ಜೈ ಹೋ!
ReplyDeleteಚೆಂದ ಇದ್ದು ಕಲೆ:-) ಕಲೆಯಿಂದ ಒಳ್ಳೆಯದಾಗೋದಾದ್ರೆ ಕಲೆ ಒಳ್ಳೆಯದು :-)
ReplyDeleteಮುತ್ತಿನ ಕಲೆಯಿಂದ ಒಳ್ಳೆದಾಗೊದಾದ್ರೆ ಕಲೆ ನಿಜಕ್ಕೂ ಒಳ್ಳೇದೆ..!!!! ..:)
ReplyDeleteಚಂದದ ಕವನ...