ಹೊದ್ದು ಮಲಗಿಹ ಮನಕೆ
ಕುಣಿವ ಆಸೆಯನುಣಿಸಿ
ನೆನಪುಗಳ ನಾದಸ್ವರ
ನುಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...
ಆಯ್ದು ಪದಕುಸುಮಗಳ
ಒಲವ ದಾರದಿ ಕಟ್ಟಿ
ಮುದದಿ ಮಡದಿಯ ಮುಡಿಗೆ
ಮುಡಿಸಬಾರದಿತ್ತು....
ಮತ್ತೆ ನಾ ಬರೆಯಬಾರದಿತ್ತು...
ಕದ್ದು ಕೆಲ ಕನಸುಗಳ
ಬರುವ ನಾಳೆಗಿರಲೆಂದು
ಬಚ್ಚಿಟ್ಟ ಭಾವದ ಬುತ್ತಿ
ಬಿಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...!
ಬರೆಯ ಬಾರದಿತ್ತು..
ReplyDeleteಎಂದು ಬರೆದು..
ನಮ್ಮ ಬಳಿಯೂ "ತುಂಬಾ ಸೊಗಸಾಗಿದೆ" ಎಂದು ಬರೆಸಿಬಿಟ್ಟಿದ್ದೀರಿ....
ತುಂಬಾ ಇಷ್ಟವಾಯ್ತು...
ಧನ್ಯವಾದಗಳು ಪ್ರಕಾಶಣ್ಣ.. :)
Deleteಅದೇಗ್ರಿ ಅಂತೀರಾ ಹಾಗೆ.. ಇಷ್ಟು ಸೊಗಸಾಗಿ ಬರದು..
ReplyDeleteಧನ್ಯವಾದಗಳು ದೇಸಾಯಿ ಸರ್... ಇನ್ನು ಹಿಂಗೆಲ್ಲಾ ಅನ್ನಲ್ಲ... :)
Deletewaw.....very nice lines.....
ReplyDeleteThanks a lot Dinakar
Deleteಕೆಲ ಬಾರಿ ಮುನಿವ ಕಾವ್ಯವನ್ನು ಕವಿ ಒಲಿಸಿಕೊಳ್ಳ ಬೇಕು. ಬರೆಯಬಾರದಿತ್ತು ಎನ್ನದಿರಿ ಅದು ಕವಿಗೆ ನೋವಿನ ಮಾತು.
ReplyDeleteಒಳ್ಳೆಯ ಕವನ ಕಟ್ಟಿಕೊಟ್ಟಿದ್ದೀರ.
ಧನ್ಯವಾದಗಳು ಬದರಿನಾಥ್ ಸರ್.. ಇನ್ನು ಹುಸಿ ಮುನಿಸು ತೋರ್ಸೋ ಕವನಗಳನ್ನ ಪ್ರೀತಿಯಿಂದ ಒಲಿಸಿಕೊಳ್ಳುವ ಪ್ರಯತ್ನ ಮಾಡ್ತೇನೆ... :)
Deleteಚಂದ ಬರೆದಿದ್ದೂ ಅಲ್ಲದೆ ಮತ್ತೆ ನಾ ಬರಿಬಾರದಿತ್ತು ಅಂತ ಪೋಸ್ ಕೊಡ್ತಿರಲ್ರಿ.... ಸೂಪರ್...
ReplyDeleteಧನ್ಯವಾದಗಳು ಸಂಧ್ಯಾ... ಪೋಸು ಕೊಟ್ಟಿದ್ದು ಹಾಗೆ ಸುಮ್ಮನೆ.. ಬರೀಬಾರ್ದಿತ್ತು ಅಂತಾನೆ ಬರೆದೆ.. ಇನ್ಮೇಲು ಬರೀತೀನಿ... :)
ReplyDeleteಹೊದ್ದು ಮಲಗಿಹ ಮನಕೆ
ReplyDeleteಕುಣಿವ ಆಸೆಯನುಣಿಸಿ
ನೆನಪುಗಳ ನಾದಸ್ವರ
ನುಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...
ಈ ಸಾಲುಗಳು ಮನಸಿಗೆ ತುಂಬಾ ಹತ್ತಿರವೆನಿಸಿದವು.
ಒಳ್ಳೆಯ ಕವಿತೆ,
ಹೌದು, ಕೆಲವೊಮ್ಮೆ ಬೇಡ ಅನ್ನುತ್ತಲೇ ಏನೇನೊ ಮಾಡಿ ಬಿಡ್ತಿವಿ.
ಧನ್ಯವಾದಗಳು ನಿವೇದಿತಾ ಮೇಡಂ.. ಹೌದು.. ಮತ್ತೆ ಹಾಗೆ ಬೇಡ ಅನ್ನುತ್ತಲೇ ಮಾಡಿದ ಕೆಲವು ಸಂಗತಿಗಳು ಆಮೇಲೆ ಇಷ್ಟವಾಗುತ್ತವೆ.. ಖುಷಿ ಕೊಡುತ್ತವೆ.. ಪ್ರೋತ್ಸಾಹ ಹೀಗೆ ಇರಲಿ..
Deleteತುಂಬಾ ಚೆಂದದ ಕವನ.
ReplyDeleteಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸೀತಾರಾಂ ಸರ್.. :)
Deleteಇಂತಹ ಸುಂದರ ಕವನವನ್ನು ಬರೆಯುತ್ತಲೇ ಇರಿ!
ReplyDeleteಖಂಡಿತಾ.. ಧನ್ಯವಾದಗಳು ಸುನಾಥ್ ಸರ್..
Deleteಬರಿಯಲೇಬೇಕಿತ್ತು .. ಮತ್ತು ನೀ ಬರೆದಿದ್ದು ಸರಿ ಇತ್ತು ... ಓದುವ ಪುಣ್ಯ ನಮ್ಮಲ್ಲಿತ್ತು ...
ReplyDeleteಕದ್ದು ಕೆಲ ಕನಸುಗಳ
ಬರುವ ನಾಳೆಗಿರಲೆಂದು
ಬಚ್ಚಿಟ್ಟ ಭಾವದ ಬುತ್ತಿ
ಬಿಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...!
ತುಂಬಾ ಚೆನ್ನಾಗಿದ್ದೋ ..
ಪ್ರವೀಣ್.. ನಿಮ್ಮೆಲ್ಲರ ಪ್ರೋತ್ಸಾಹ ಸಿಗೋದು ನಮ್ಮ ಪುಣ್ಯ..
Deleteಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.. :)
ಇಷ್ಟು ಸುಂದರವಾಗಿ ಬರೆದ ಮೇಲೂ ಬರೆಯಬಾರದಿತ್ತು ಎಂದರೆ ಹ್ಯಾಂಗ್ ಮರ್ರೆ.....ಲೈಕ್ ಬರೀತ್ರಿ ನೀವ್....ಇನ್ನೂ ಬರೀನಿ....ಧನ್ಯವಾದಗಳು....
ReplyDeleteಹ್ವಾಯ್ ಶೆಟ್ರೆ..ಹಾಂಗ್ ಅಂಬ್ರ್ಯಾ.. ಆತ್ ಕಾಣಿ.. ಅದೂ ಇದೂ ಕೆಲ್ಸಾ ಅಂತೇಳಿ ಬರೂದ್ ಕೈದ್ ಮಾಡಿನಾಯಿತ್ತ್ ಮಾರ್ರೆ.. ಇನ್ಮೇಲೆ ಹಿಂಗೇ ಬರೀತೆ ಅಕಾ...ನೀವ್ ಬಂದ್ ಓದಿ ಲಾಯ್ಕಿತ್ ಅಂದದ್ ರಾಶಿ ಖುಷಿ ಆತ್ ಕಾಣಿ..
ReplyDeleteಬರೆಯಬಾರದಿತ್ತು ಅಂತಾನೆ ಬರೆದ ಕವನ ಸುಪರ್ಬ್ :) ಕೆಲವು
ReplyDeleteಆಯ್ದು ಪದಕುಸುಮಗಳ
ಒಲವ ದಾರದಿ ಕಟ್ಟಿ
ಮುದದಿ ಮಡದಿಯ ಮುಡಿಗೆ
ಮುಡಿಸಬಾರದಿತ್ತು....
ಅದೇನು ಸುಂದರ ರೂಪಕ !
ಸೌಮ್ಯಾ.. ಕವನವನ್ನ.. ಕವನದಲ್ಲಿರೋ ರೂಪಕಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
Deleteತುಂಬಾ ಚಂದದ ಕವನ...ಮತ್ತೆ ನೀವು ಬರೆಯಲೇಬೇಕು...
ReplyDeleteSuperb ri :)))))))))))
ReplyDeleteSuperb ri :)))))))))))
ReplyDelete