ಕೊರಗದಿರು, ಮರುಗದಿರು
ವಿರಹ ಸುಡುತಿಹುದೆಂದು..
ಕತ್ತಲೆಯ ಬೆನ್ನಲ್ಲೆ ಹಗಲೂ ಇದೆ...
ಕನಸುಗಳ ಕೊಲ್ಲದಿರು
ಎಲ್ಲ ಮುಗಿದಿಹುದೆಂದು
ಕಣ್ತೆರೆಯೆ ಕೈಯ್ಯಲ್ಲೇ ಮುಗಿಲೂ ಇದೆ...
ಕೈ ಬಳೆಯ ತಾಳಕ್ಕೆ,
ಬಿಸಿ ಉಸಿರ ಮೇಳಕ್ಕೆ,
ಮಾನಸದಿ ವೀಣೆ ನುಡಿಸುವದಿದೆ...
ಗೆಳತಿ, ತಾನನಕೆ ನಾವ್ ಕೂಡಿ ಕುಣಿಯುವದಿದೆ...
ಹುಸಿ ಮುನಿಸ ಮರೆತು,
ಮುಸಿ ನಗುತ ಬೆರೆತು,
ಯೌವನದ ಕಡಲ ಕಡೆಯುವದಿದೆ...
ಗೆಳತಿ, ಜೀವನದ ಪಥದಿ ಜೊತೆ ನಡೆಯುವದಿದೆ..
ಕರಗದಿರು, ಸೊರಗದಿರು
ಬಾಳ ಪಯಣದಿ ದಣಿದು..
ಕತ್ತಲೆಯ ಬೆನ್ನಲ್ಲೆ ಹಗಲೂ ಇದೆ
ಕಣ್ತೆರೆಯೆ ಕೈಯ್ಯಲ್ಲೇ ಮುಗಿಲೂ ಇದೆ..
ಚಿತ್ರ: http://www.mylot.com/w/keywords/flaws.aspx ಇಲ್ಲಿಂದ ಎತ್ತಿದ್ದು..
ಬಹಳ ಸುಂದರ ಸಾಲುಗಳು...ಒಂದರ ಹಿಂದೊಂದು... ಕರಗದಿರು ಸೊರಗದಿರು ಬಾಳ ಪಯಣದಿ ದಣಿದು ಕತ್ತಲೆ ಬೆನ್ನಲ್ಲೇ ಹಗಲೂ ಇದೆ ಕಣ್ತೆರೆಯೆ ಕೈಯಲ್ಲೇ ಮುಗಿಲೂ ಇದೆ....
ReplyDeleteಧನ್ಯವಾದಗಳು ಆಜಾದ್ ಭಯ್ಯಾ...
Deletewow....sundara kavana..
ReplyDeleteThanks a lot.. :)
Deleteಯೌವನದ ಕಡಲ ಕಡೆಯುವದಿದೆ...
ReplyDeleteಗೆಳತಿ, ಜೀವನದ ಪಥದಿ ಜೊತೆ ನಡೆಯುವದಿದೆ..
ಅದ್ಭುತ ಸಾಲುಗಳು.
ಸುಂದರ ಕವನ !!!!
ಧನ್ಯವಾದಗಳು ಸೀತಾರಾಮ ಸರ್
Deleteಕವನ ಇನ್ನೂ ಇದೆ .. ಇನ್ನೂ ಇರಲಿ ಅಂತ ಆಶಿಸುತ್ತಾ ಇದ್ದೆ ಆದರೆ ಮುಗಿದು ಹೋಯಿತು...
ReplyDeleteಕರಗದಿರು, ಸೊರಗದಿರು
ಬಾಳ ಪಯಣದಿ ದಣಿದು..
ಕತ್ತಲೆಯ ಬೆನ್ನಲ್ಲೆ ಹಗಲೂ ಇದೆ
ಕಣ್ತೆರೆಯೆ ಕೈಯ್ಯಲ್ಲೇ ಮುಗಿಲೂ ಇದೆ..
ಅರ್ಥ ಅಪಾರ ಅರ್ಥೈಸಿಕೊಂಡವರಿಗೆ ! ಚೆನ್ನಾಗಿದ್ದು
ಪ್ರವೀಣ.. ನನಗೂ ಹಾಗೆ ಅನ್ನಿಸಿತು.. ಕವನ ಮುಗಿಸೋ ಆತುರ ಆತಿಯಾಯ್ತೇನೋ ಅಂತ.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
Deletejust wow... !!!!
ReplyDeleteThanks Sandhya
Deletekoneya pyaaraa superb......
ReplyDeleteಧನ್ಯವಾದಗಳು ದಿನಕರ್
Deleteಇಷ್ಟವಾಯಿತು ಅಷ್ಟೆ...
ReplyDeleteಇಷ್ಟಪಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಶ್ರೀವತ್ಸ..
Deleteಕವನ ತುಂಬಾ ಚೆನ್ನಾಗಿದೆ...ಕೊನೆಯ ಸಾಲುಗಳಂತೂ ತುಂಬಾ ಇಷ್ಟವಾಯ್ತು.
ReplyDeleteಧನ್ಯವಾದಗಳು ಶಿವೂ ಸರ್
Deleteಸುಂದರ ...ಅತೀ ಸುಂದರ ಕವನ....ಎಲ್ಲಾ ಸಾಲುಗಳು ಇಷ್ಟ ಆದವು...ತುಂಬಾ ದಿನಗಳ ನಂತರ ನಿಮ್ಮ ಕವನಗಳನ್ನು ನೋಡಿ ನಿಜಕ್ಕೂ ಸಂತೋಷವಾಯಿತು.....'ಇನ್ನೂ ಇದೆ' ಅಲ್ಲವೇ???
ReplyDeleteಅಶೋಕ್ ಸರ್.. ಇದೆ.. ಇನ್ನೂ ಇದೆ.. ಈಗಷ್ಟೇ ಮತ್ತೆ ಶುರುವಾಗಿದೆ.. :) ಮೆಚ್ಚಿ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು...
ReplyDelete