ಇಷ್ಟದ ಬಣ್ಣವೇನೋ ಹೌದು..
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು...?
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು...?
ಹಾಡು ಕುಣಿತ ಆಟ ಓಟ
ಅತ್ತೆ ಸೊಸೆ ಕಾದಾಟ
ಸುದ್ದಿ ವಾಹಿನಿಗಳ ದೊಂಬರಾಟ...
ಬದಬದಲಿಸಿ ಚಾನಲ್ಲು
ದೂರದರ್ಶನದೆದುರು ಹೊತ್ತು ದೂಡುವುದು..?
ಹೊರಗೆ ಗ್ಯಾಲರಿಯಲ್ಲಿ
ವಿಂಡ್ ಚೈಮ್ ನುಡಿಸುತಿರುವ
ತಣ್ಣನೆಯ ಗಾಳಿ ಒಳ ತೂರಬಹುದು...
ತಣ್ಣನೆಯ ಗಾಳಿ ಒಳ ತೂರಬಹುದು...
ಕವಿದ ಮಬ್ಬು ಸರಿಯುವಂತೆ
ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
ರಾತ್ರಿಯ ಸಿ ಎಫ್ ಎಲ್ ಬೆಳಕಿನ ಮೋಹದಿ
ಒಂದೆರಡು ಹುಳ ಹಪ್ಪಡೆ ಹಾರಿ ಬರಬಹುದು..
ಒಂದೆರಡು ಹುಳ ಹಪ್ಪಡೆ ಹಾರಿ ಬರಬಹುದು..
ಮೊದಲ ಮಳೆಗೆ ಹರಡಿದ ಮಣ್ಣಿನ ಕಂಪು
ಮೂಗಿಗೆ ಬಡಿದರೂ ಆಶ್ಚರ್ಯವಿಲ್ಲ..
ಮತ್ತೆ ಯೋಚನೆ ಬೇಡ...ಆಗಿದ್ದಾಗಲಿ..
ಮೂಗಿಗೆ ಬಡಿದರೂ ಆಶ್ಚರ್ಯವಿಲ್ಲ..
ಮತ್ತೆ ಯೋಚನೆ ಬೇಡ...ಆಗಿದ್ದಾಗಲಿ..
ಆ ಕಿಡಕಿಯ ಎರಡು ಬಾಗಿಲುಗಳನ್ನು ತೆಗೆದುಬಿಡು...
Nice deeleep ..ಸೂರ್ಯನ ಪುಗಸಟ್ಟೆ ಬೆಳಕು ಒಳ ಚಿಮ್ಮಬಹುದು...
ReplyDeleteದಾರಿಯಲ್ಲಿ ಹೋಗುವ ವಾಹನಗಳ ಸದ್ದು
ಪಾರ್ಕಿನಲ್ಲಿ ನಲಿವ ಮಕ್ಕಳ ಕೇಕೆ
ಕಿವಿಗೆ ಅಪ್ಪಳಿಸಲೂ ಬಹುದು..
.practical...lines...like it
ನಮಸ್ತೆ ವೆಂಕಟ್...:)
ReplyDeleteನಾಲ್ಕು ಗೋಡೆಗಳ ಮದ್ಯದಲ್ಲಿ ಭ್ರಮೆಯ ಸಾಮ್ರಾಜ್ಯ ಕಟ್ಟಿಕೊಂಡು ಬದುಕೋ ಬದಲು ಹೀಗೆ ವಾಸ್ತವದೊಂದಿಗೆ ಹೆಜ್ಜೆ ಮೇಳೈಸೋದು ಲೇಸಲ್ವಾ..?
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)
ದಿಲೀಪ್;ಸುಂದರ ಕವನ!ಅಭಿನಂದನೆಗಳು.
ReplyDeletetumba practical agide kavana...
ReplyDeletetumba istavaytu dileep..
ಕೃಷ್ಣಮೂರ್ತಿ ಸರ್ ಮತ್ತು ಸುಗುಣಾ ಮೇಡಂ
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಓದಿದ ಮೇಲೆ ಕಿಟಕಿ ತೆಗೆಯಲೇ ಬೇಕು ಈಗ....
ReplyDeleteಪುಗಸಟ್ಟೆ ಬೆಳಕು... ವಾಹನಗಳ ಸದ್ದು...ಮಕ್ಕಳ ಕೇಕೆ....
ಚೆನ್ನಾಗಿದೆ ಕವನ....
ಹಾಯ್..ಸರ್
ReplyDeleteನಿಮ್ಮ "ಆ ಬಾಗಿಲುಗಳ ತೆಗೆದುಬಿಡು..!!" ಕವಿತೆ ಯ
" ಇಷ್ಟದ ಬಣ್ಣವೇನೋ ಹೌದು..
ಆದರೆಷ್ಟು ದಿನ..?
ಜೇಡ ಕಟ್ಟಿದ.. ಬಣ್ಣ ಮಾಸಿದ..
ಅದೇ ನಾಲ್ಕು ಗೋಡೆಯನ್ನು
ತದೇಕಚಿತ್ತದಿಂದ ನೋಡುವುದು..."
ಯಾಕೋ ತುಂಭಾ ಇಷ್ಟವಾದವು
ದಿಲೀಪ,
ReplyDeleteಚಿತ್ರ ಮತ್ತು ಕವನ ಸೊಗಸಾಗಿವೆ.
ಅಭಿನಂದನೆಗಳು.
chendada kavana kattiddira.....
ReplyDeleteಚಂದದ ಸಾಲುಗಳು ದಿಲೀಪ್ !
ReplyDeleteನಿಜ , ಆ ಕಿಡಕಿಯ ಎರಡು ಬಾಗಿಲುಗಳನ್ನು ತೆರೆದು ಬಿಡು
ನಿನ್ನ ಮುದ್ದು ಮುಖ ಇನ್ನು ಸ್ಪಷ್ಟವಾಗಿ ಕಾಣ ಬಹುದು
ಆ ಬೊಗಸೆ ಕಂಗಳ ಭಾವವನ್ನು ಓದಬಹುದು
ತುಟಿಯ ಮೇಲೆ ಕಂಡೂ ಕಾಣದಂತೆ ಮೂಡುವ ಮುಗುಳ್ನಗುವನ್ನು ಮೋಹಿಸಬಹುದು.
ನಿಜಕ್ಕೂ ಆ ಕಿಡಕಿಯ ಎರಡು ಬಾಗಿಲುಗಳನ್ನು ತೆರೆದು ಬಿಡು !!
ಸು೦ದರ ಕವನ.......ಅಭಿನ೦ದನೆಗಳು ದಿಲೀಪ್.
ReplyDeleteಅನ೦ತ್
ತುಂಬಾ ಚೆನ್ನಾಗಿದೆ ದಿಲೀಪ್‍ರವರೇ..
ReplyDeleteಆ ಕಿಟಕಿಯ ಹಿಂದೆ ಹುಡುಗಿ ಚಿಂತಾಕ್ರಾಂತಳಾಗಿ ಹೊರ ನೋಡುತ್ತಿದ್ದಾಳೆ..
ತೆರೆದು ಸ್ವತಂತ್ರವಾಗಿರುವ ಮನಸ್ಸಿದೆ. ಆದರೆ ಚಿತ್ರವನ್ನು ಗಮನಿಸಿದರೆ ಆ ಕಿಟಕಿ ತೆರೆಯಲಾಗದಂತೆ ಮರದ ತುಂಡಿಂದ ಅಡ್ಡ ಹಾಕಲಾಗಿದೆ!
ಅದರಂತೆ ಹಿಂದೆ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಕಟ್ಟುಪಾಡುಗಳ ಬಂಧನಗಳಿದ್ದವು ಎಂಬುದರ ಸಂಕೇತ!
dileep really good
ReplyDeletechadada saalugalu
ಮಯೇಸಣ್ಣ, ಯಶು, ಸುನಾಥ್ ಸರ್, ಪ್ರವರ, ಚಿತ್ರಕ್ಕ, ಅನಂತರಾಜ್ ಸರ್, ಪ್ರದೀಪ್, ಉಮೇಶ್ ಸರ್.. ಎಲ್ಲರಿಗೂ ಧನ್ಯವಾದಗಳು..
ReplyDeleteದಿಲೀಪ್ ರವರೆ...
ReplyDeleteಚೆ೦ದದ ಚಿತ್ರ, ಸು೦ದರ ಕವನ :)
ಚೆಂದದ ಕವನ
ReplyDelete