ಗಾಳಿ ತಂಪಿಗೆ.., ಮಣ್ಣ ಕಂಪಿಗೆ
ಹನಿಯ ಚಿಟ ಪಟ ಇಂಪಿಗೆ….
ಗುಡುಗೊ ಗುಡುಗಿಗೆ.., ಸುಳಿವ ಮಿಂಚಿಗೆ…
ಮಿಂದು ತಣಿದಿಹ ಹೆಂಚಿಗೆ….
ಸೋತರೂ.., ಮೈ ಮರೆತು ಕುಳಿತರೂ….
ಬಿಡದೆ ಕಾಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ಕೇದಿಗೆ ಸಂಪಿಗೆ…
ಹರಿಯೋ ನೀರಲಿ ಕಾಗದದ ದೋಣಿ…
ಕಾಗದದ ಮೇಲೆ ನನ್ನೆದೆಯ ವಾಣಿ…
ಬರೆದಿರುವೆ ಕೊನೆಗೆ ನಿನ್ಹೆಸರ ರಾಣಿ…
ಗುಟ್ಟಾಗಿ ಹೇಳಿರುವೆ ನೀನಿರುವ ಓಣಿ….
ದೋಣಿ ತೇಲುತ ಕಣ್ ತಪ್ಪಿ ಹೋದರೂ…
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ್ನೆದೆಯ ಬೀದಿಗೆ….
ಮುಸ್ಸಂಜೆ ಹೊಸ್ತಿಲಲಿ ಮಿನುಮಿನುಗೋ ದೀಪ….
ಅವನ ಒಲಿಸಲು ಜೊತೆಗೆ ಘಮ ಘಮದ ದೂಪ…
ತೊಟ್ಟಿಲಲಿ ಕಿಲ ಕಿಲನೆ ಕೇಕೆ ಹಾಕುವ ಪಾಪ…
ಕವಿಯ ಗರ್ಭದಲಿ ಕವಿತೆ ತಾ ತಳೆದು ರೂಪ…
ಶಬ್ದ ಕೈಸಿಗದೆ ಕಂಗೆಟ್ಟು ಕುಳಿತರೂ…
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ ಹಾಡ ಸಾಲಿಗೆ….
ಮಳೆ ಸುರಿದು ನೆಲ ಹಸಿರು…
ಧಣಿದ ಜಗಕೀಗ ಹೊಸ ಬಾಳು ಹೊಸ ಉಸಿರು…
ನೀನೀರದೆ ನಾನಿಲ್ಲ… ನೀನಿರದೆ ಏನಿಲ್ಲ…
ನಿನ್ಹೆಸರ ಜಪವೊ0ದೇ ನನ್ನೆದೆಗೆ ಉಸಿರು….
ಬೆಳಕ ನುಂಗಿ ಕಾಡುತಿರೆ ಕತ್ತಲೆ….
ಮತ್ತೆ ಮೂಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ನನ ಬಾಳ ದೀವಿಗೆ…..
ಹನಿಯ ಚಿಟ ಪಟ ಇಂಪಿಗೆ….
ಗುಡುಗೊ ಗುಡುಗಿಗೆ.., ಸುಳಿವ ಮಿಂಚಿಗೆ…
ಮಿಂದು ತಣಿದಿಹ ಹೆಂಚಿಗೆ….
ಸೋತರೂ.., ಮೈ ಮರೆತು ಕುಳಿತರೂ….
ಬಿಡದೆ ಕಾಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ಕೇದಿಗೆ ಸಂಪಿಗೆ…
ಹರಿಯೋ ನೀರಲಿ ಕಾಗದದ ದೋಣಿ…
ಕಾಗದದ ಮೇಲೆ ನನ್ನೆದೆಯ ವಾಣಿ…
ಬರೆದಿರುವೆ ಕೊನೆಗೆ ನಿನ್ಹೆಸರ ರಾಣಿ…
ಗುಟ್ಟಾಗಿ ಹೇಳಿರುವೆ ನೀನಿರುವ ಓಣಿ….
ದೋಣಿ ತೇಲುತ ಕಣ್ ತಪ್ಪಿ ಹೋದರೂ…
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ್ನೆದೆಯ ಬೀದಿಗೆ….
ಮುಸ್ಸಂಜೆ ಹೊಸ್ತಿಲಲಿ ಮಿನುಮಿನುಗೋ ದೀಪ….
ಅವನ ಒಲಿಸಲು ಜೊತೆಗೆ ಘಮ ಘಮದ ದೂಪ…
ತೊಟ್ಟಿಲಲಿ ಕಿಲ ಕಿಲನೆ ಕೇಕೆ ಹಾಕುವ ಪಾಪ…
ಕವಿಯ ಗರ್ಭದಲಿ ಕವಿತೆ ತಾ ತಳೆದು ರೂಪ…
ಶಬ್ದ ಕೈಸಿಗದೆ ಕಂಗೆಟ್ಟು ಕುಳಿತರೂ…
ಬಿಡದೆ ಕಾಡುತಿದೆ ನಿನ್ನಯಾ ನೆನಪು..
ನಿನ್ನೆನಪೆ ನನ ಹಾಡ ಸಾಲಿಗೆ….
ಮಳೆ ಸುರಿದು ನೆಲ ಹಸಿರು…
ಧಣಿದ ಜಗಕೀಗ ಹೊಸ ಬಾಳು ಹೊಸ ಉಸಿರು…
ನೀನೀರದೆ ನಾನಿಲ್ಲ… ನೀನಿರದೆ ಏನಿಲ್ಲ…
ನಿನ್ಹೆಸರ ಜಪವೊ0ದೇ ನನ್ನೆದೆಗೆ ಉಸಿರು….
ಬೆಳಕ ನುಂಗಿ ಕಾಡುತಿರೆ ಕತ್ತಲೆ….
ಮತ್ತೆ ಮೂಡುತಿದೆ ನಿನ್ನಯಾ ನೆನಪು….
ನಿನ್ನೆನಪೆ ನನ ಬಾಳ ದೀವಿಗೆ…..
wahh.. nice imagination... :)
ReplyDeletevery good, go forward
ReplyDeleteRaghu..
ReplyDeleteThanks a lot for liking my imagination and your valuable comments..
Sathish,
ReplyDeleteThanks a ton for your wishes.. :)
ಹೃದಯಸ್ಪರ್ಶಿ.....!!!
ReplyDeleteVery good
ReplyDeleteನಿಮ್ಮ ಭಾವನೆಗಳನ್ನ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಿರಾ ನಿವು ವ್ಯಕ್ತ ಪಡಿಸಿದ ರಿತಿ ನನಗೆ ತುಂಬಾ ಇಷ್ಟಾ ಆಯಿತು
ReplyDelete