Tuesday, 19 May 2009

ಹೆಸರಿಡದ ಹನಿಗಳು....!!

ಹಾಗೇ ಹೊಳೆದ ಕೆಲವು ಸಾಲುಗಳು... ಇವುಗಳಿಗೆ ಹೆಸರಿಡುವ ಸಾಹಸ ಮಾಡದೇ ಹಾಗೇ ಪೋಸ್ಟ್ ಮಾಡಿದ್ದೇನೆ... ಓದಿ ಏನನ್ನಿಸಿತು...?? ದಯವಿಟ್ಟು ಹೇಳಿ...

1.

ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ...
ನನ್ನ ಗಲ್ಲವ ಕಚ್ಛಾಯ್ತು...!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು.....!!

****************************
2.

ಮಂದಿರದ ಕೇಸರಿ ಪತಾಕೆ....
ಮಸೀದಿಯ ಹಸಿರು ಗೋಡೆ....
ಚರ್ಚಿನ ಬಿಳಿಯ ಬಾಗಿಲು....
ಸೂರ್ಯನುದಯಕ್ಕೆ ಕಾತರಿಸಿವೆ...
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ.....!!

****************************
3.

ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ...
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ...!!

7 comments:

  1. Wah,, first hani is simply superb..such a romantic idea..

    Second hani is good..very true..The creator never discriminated while creating us..

    Third hani is nice..fantastic imagination..
    Good going Dileep,, keep it up..

    ReplyDelete
  2. ಗೀಚೋ ಹವ್ಯಾಸಗಳನ್ನು ಮುಂದುವರೆಸಿ...ಗೀಚಿದ್ದನ್ನೆಲ್ಲಾ ಬ್ಲಾಗಿಸಿ..ತುಂಬಾ ಚೆನ್ನಾಗ್ ಬರೇತೀರಿ ಅನ್ನೋದು ನಾ ಕಂಡ ಸತ್ಯ. ಶುಭವಾಗಲಿ
    -ಧರಿತ್ರಿ

    ReplyDelete
  3. ದೀಲಿಪ್...

    ತುಂಬಾ ಚೆನ್ನಾಗಿರುತ್ತದೆ ನಿಮ್ಮ
    ಹನಿ... ಹನಿ.. ಕವನಗಳು...

    ಮುಂದುವರೆಸಿ...

    ಪ್ರೀತಿಯಿಂದ
    ಇಟ್ಟಿಗೆ ಸಿಮೆಂಟು...

    ReplyDelete
  4. Chetana,ಧರಿತ್ರಿ, ಇಟ್ಟಿಗೆ ಸಿಮೆಂಟು... (Prakash)

    ಪ್ರೋತ್ಸಾಹಕ್ಕೆ ಧನ್ಯವಾದಗಳು... ಹೀಗೆ ಓದಿ ಪ್ರತಿಕ್ರಿಯಿಸುತ್ತಿರಿ... :)

    ReplyDelete
  5. ದಿಲೀಪ್,

    ಮೊದಲನೆಯದು...ಮತ್ತದೇ ತುಂಟತನ, ಎರಡನೆಯದರಲ್ಲಿ ವಾಸ್ತವತೆ...ಮೂರನೆಯದರಲ್ಲಿ...ಪಟ್ಟನೆ ಕಣ್ಣು ಹೊಡೆದು ಹೇಳಬೇಕೆನ್ನುವ ತವಕ...ಕವನಗಳು ಇಷ್ಟವಾಗುತ್ತವೆ...

    ReplyDelete
  6. ella hanigalooo very very nice dileep....

    ReplyDelete