Saturday, 2 May 2009

ಹೃದಯವ ನೋಯಿಸುವೆ ಏಕೆ...??



ಕೈಗಳ ಹಿಂದೆ ನಿನ್ನಯ ಸುಂದರ

ಮುಖವನು ಮುಚ್ಚುವುದೇಕೆ...??
ನನ್ನನು ಕಂಡರೆ ನಾಚಿಕೆಯೆಂದಾದರೆ
ನೀ ಎದುರಿಗೆ ಬರುವುದು ಏಕೆ....??

ಕೋರೆಗಣ್ಣಲೀ ನೋಡುತ ನನ್ನಯ
ಹೃದಯವ ಚುಚ್ಚುವುದೇಕೆ...??
ನನ್ನನು ಕಂಡರೆ ಇಷ್ಟವೆಂದಾದರೆ
ನೀ ಪ್ರೀತಿಯ ಬಚ್ಚಿಡುವುದು ಏಕೆ...??

ನನ್ನಯ ಕಣ್ಣಿನ ತೇವವ ನೋಡಿ
ತಿರುಗಿ ಅಳುವೆ ನೀನೇಕೆ...??
ಹೃದಯದ ನೋವ ನೀ ಅರಿತಿದ್ದರು
ಹೃದಯವ ನೋಯಿಸುವೆ ಏಕೆ...??

2 comments:

  1. ಪ್ರೀತಿಸುತಿದ್ದರು ಅರುಹದೆ ನೀನು,
    ಮನದಲಿ ಕರುಬುವುದೇಕೆ.....???
    ಎದೆಯಲಿ ನೋವಿನ ಮಡುವನು ಇಟ್ಟು,
    ಮೊಗದಲಿ ನಗುವನು ಸೂಸುವೆ ಏಕೆ...???

    ಮಸ್ತ್ ಇದ್ದು.....ನಿನ್ ಕಥೆನನಾ.....ಸಂಶಯ ಏಕೆ?

    ReplyDelete
  2. ನನ್ನ ಕಥೆ ಅಲ್ದೋ... ಸುಮ್ನೇ ಕಲ್ಪನೆ ಅಷ್ಟೇ...
    ನಿನ್ನ ಲೈನ್ಸ್ ಚೊಲೋ ಇದ್ದು....
    Thanks...!

    ReplyDelete