Friday, 24 May 2013

ಅವನು ನನ್ನೊಳಗೇ ಇರಲಿ..!!

ಕಡಲ ತೀರದಿ
ಅವನ ಹೆಸರು ಬರೆದೆ
ಅಲೆ ಬಂದು ಅಳಿಸಿತು...
ಒಡಲ ಆಳದಿ ಇನ್ನು
ಅಲೆಗಳು ಏಳುವುದಿಲ್ಲ...!!

ಮಿನುಗುವ ನಕ್ಷತ್ರಕೆ
ಅವನ ಹೆಸರಿಟ್ಟೆ
ಮೋಡ ಬಂದು ಮರೆಸಿತು...
ಹೊಳೆವ ಕಣ್ಣುಗಳಲಿನ್ನು
ಮೋಡ ಕಟ್ಟುವುದಿಲ್ಲ...!!

ಮುಡಿದ ಮಲ್ಲಿಗೆ ಗಂಧ
ಅವಗೆ ಮುಡಿಪೆಂದೆ..
ಗಾಳಿ ಬಂದು ಹೊತ್ತೊಯ್ದಿತು..
ಮನದ ಕಿಡಕಿಯ ಕದವ
ಇನ್ನು ತೆರೆಯುವುದಿಲ್ಲ...!!

ಕವಿತೆಯ ಪ್ರತಿ ಸಾಲಲ್ಲು
ಅವನಿರುವ ಕಂಡೆ..
ಹಾಡುಗನ ಕಂಠದಲಿ ಲೀನವಾಯ್ತು..
ಎದೆಯ ಆಸೆಗಳಿನ್ನು
ಹಾಡಾಗುವುದಿಲ್ಲ...!!

25 comments:

  1. Replies
    1. ಥ್ಯಾಂಕ್ಸೊ ಥ್ಯಾಂಕ್ಸು ಹರೀಶ

      Delete
  2. Deepanna!!! Goodone!!

    ReplyDelete
    Replies
    1. ಅನಾಮಿಕ (ತಂಗಿಯೋ ತಮ್ಮನೋ ಗೊತ್ತಿಲ್ಲ).. ಧನ್ಯವಾದಗಳು

      Delete
  3. ಇದೇ ಕವನವನ್ನು ಅಲ್ಲಲ್ಲಿ ಅವಳು ಎಂದು ಬಂದಲಾಯಿಸಿ ಓಡಿಕೊಂಡೆ, ಮನಸ್ಸಿಗೆ ತುಂಬಾನೇ ಸಮಾಧಾನವಾಯಿತು.

    ಯಾಕೋ ಮದರಾಸಿನ ಧಗೆ, 90 ರ ದಶಕದ ಕ್ರೆಸೆಂಟ್ ಪಾರ್ಕ್, ಗುಲ್ಮೊಹಾರದ ಅಡಿಯ ಆ ಕಲ್ಲು ಬೆಂಚು, ಟೈಗರ್ ಕೇವ್ಸ್, ಪಕ್ಷಿ ತೀರ್ಥಂ ಮತ್ತು ಟಿ. ನಗರಿನಲ್ಲಿ ಆಗ ಇದ್ದ ನಾಗೇಶ್ ಥಿಯಟರ್ ನೆನಪಾದವು. ಮನಸು ರೋಧಿಸಿತು.

    ReplyDelete
    Replies
    1. ಬದರೀನಾಥ ಸರ್.. ತಮ್ಮ ಆಣತಿಯಂತೆ ಚಿಕ್ಕ ಬದಲಾವಣೆ ಮಾಡಿ ಹಾಕಿದ್ದ ಎರಡು ಸಾಲುಗಳು ರಾತ್ರಿ ಮತ್ತೆ ಓದಿದಾಗ ಇನ್ನಷ್ಟು ಸಾಲು ಬರೆಸಿದವು.. ಯಾಕೋ ಅವಳು ಅಂತಲೇ ಇದ್ದದ್ದು ಅವನು ಅಂತ ಬದಲಾಯ್ತು..

      ಮತ್ತೆ ತಮ್ಮನ್ನು ಹಳೆಯ ನೆನಪುಗಳ ಕಡೆ ವಾಲುವಂತೆ ಮಾಡಿದೆ ಎನ್ನುವ ಖುಷಿಗಿಂತ ಮನಸು ರೋಧಿಸುವಂತೆ ಮಾಡಿದೆನಲ್ಲಾ ಅಂತ ಬೇಸರವಾಗ್ತಿದೆ... :( :(

      Delete
  4. ತುಂಬಾ ಚೆನ್ನಾಗಿದೆ :)
    ಹೃದಯದಲಿ ಹೆಸರ ಬರೆದುಬಿಡಿ ...ಅಳಿಸೋಕೆ ಯಾರೂ ಇರಲ್ಲ ...
    ನಿಮ್ಮದೇ ಸರ್ವಾಧಿಕಾರ ಅಲ್ಲಿ ..ಅವನೇ ಒಡೆಯ ಅಲ್ಲಿಗೆ :)
    ನಿಮ್ಮೊಳಗೇ ಇದ್ದಂತಾದೀತು ...

    ಹೌದು ಅವಿನಿರಬೇಕು ..ನನ್ನೊಳಗೂ ;)

    ಇಷ್ಟವಾಯ್ತು ಭಾವ ಲಹರಿ

    ReplyDelete
    Replies
    1. ಭಾಗ್ಯ ಭಟ್.. ಧನ್ಯವಾದಗಳು ತಂಗ್ಯಮ್ಮ.. ಮೆಚ್ಚುಗೆಯ ಮಾತುಗಳಿಗೆ..

      Delete
  5. ತುಂಬಾ ಇಷ್ಟವಾಯ್ತು ದಿಲೀಪ್... ಭಾವ ಪೂರ್ಣ ಸಾಲುಗಳು!

    ReplyDelete
    Replies
    1. ನಮಸ್ತೆ ಪ್ರದೀಪ್ ರವರೆ
      ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು... :)

      Delete
  6. ದಿಲೀಪು..

    ಭಾವತುಂಬಿದ ಸಾಲುಗಳನ್ನು ಓದಿ ತುಂಬಾ ಖುಷಿ ಆಯ್ತು..

    ಮುಂದುವರೆಯಲಿ ನಿಮ್ಮ ಬ್ಲಾಗು..

    ವ್ಯಂಗ್ಯ ಚಿತ್ರಗಳು..
    ಕಥೆ.. ಲೇಖನಾಗಳೂ ಬರಲಿ...

    ReplyDelete
    Replies
    1. ನಮಸ್ಕಾರ... ಮೆಚ್ಚುಗೆಯ ಹಾರೈಕೆಯ ನುಡಿಗಳಿಗೆ ವಂದನೆಗಳು ಪ್ರಕಾಶಣ್ಣ.. ಖಂಡಿತ.. ಮುನಿಸಿಕೊಂಡಿರೋ ವ್ಯಂಗ್ಯಚಿತ್ರಗಳನ್ನು ಮತ್ತೆ ಒಲಿಸಿಕೊಳ್ಳಲು ಪ್ರಯತ್ನಿಸುವೆ.. :))

      Delete
  7. ಪೋಣಿಸಿದ ನುಡಿ ಮಣಿಗಳ ಭಾರ ಎತ್ತಿ ಹಿಡಿವ ಸಾಲುಗಳು...
    ಕವಿತೆಯ ಪ್ರತಿ ಸಾಲಲ್ಲು
    ಅವನಿರುವ ಕಂಡೆ..
    ಹಾಡುಗನ ಕಂಠದಲಿ ಲೀನವಾಯ್ತು..
    ಎದೆಯ ಆಸೆಗಳಿನ್ನು
    ಹಾಡಾಗುವುದಿಲ್ಲ...!!
    ............ಮೊದಲೆರಡು ನಂತರದ ಎರಡು ಸಂಬಂಧಗಳ ಕೊಂಡಿ- ಪಾದದ ಅಂತ್ಯ ಒಂದು ಚಿತ್ರಣ ಮೂಡಿಸುತ್ತೆ...ದಿಲೀಪ್..ಇಷ್ಟ ಆಯ್ತು

    ReplyDelete
    Replies
    1. ಶರಣು ಆಜಾದ ಸರ್..
      ಸುಮ್ಮನೆ ಮೊದಲ ಸಾಲುಗಳನ್ನು ಬರೆದಾಗ ಇದನ್ನು ಇನ್ನೂ ಬೆಳೆಸಬಹುದು ಅನಿಸಿರಲಿಲ್ಲ.. ಬೆಳಿಗ್ಗೆ ಬರೆದ ಸಾಲುಗಳನ್ನು ರಾತ್ರಿ ಮತ್ತೆ ಓದಿದಾಗ ಇನ್ನುಳಿದ ಸಾಲುಗಳು ಹುಟ್ಟಿಕೊಂಡವು.. ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..

      Delete
  8. Tumbaa chennasgide Dileep.... Badari sir heLiddu satya....

    ReplyDelete
    Replies
    1. ನಮಸ್ತೆ ದಿನಕರ ಸರ್.. ಮೊದಲ ಸಾಲುಗಳನ್ನು ಫೇಸ್ ಬುಕ್ಕಿನಲ್ಲಿ ಹಾಕಿದಾಗ ಒಂದು ಸಣ್ಣ ಬದಲಾವಣೆಯನ್ನೂ ಸಹ ಬದರಿ ಸರ್ ಸೂಚಿಸಿದ್ದರು.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

      Delete
  9. ಚಂದದ ಕವಿತೆ ದಿಲೀಪ್ ..

    ReplyDelete
    Replies
    1. ನಮಸ್ತೆ.. ಮೆಚ್ಚುಗೆಯ ನುಡಿಗೆ ಧನ್ಯವಾದಗಳು ದೇಸಾಯಿ ಸರ್..

      Delete
  10. ವಾವ್ ವಾವ್...
    ಉಪಮೆಗಳು ಹಿಡಿಸಿದವು :)

    ReplyDelete
    Replies
    1. ನಮಸ್ತೆ.. ಕವನ, ಉಪಮೆಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಚಿನ್ಮಯ..

      Delete
  11. Replies
    1. ಧನ್ಯವಾದಗಳು ಸುಗುಣ ಮೇಡಂ..

      Delete
  12. ಇದರ ಮೊದಲ ನಾಲ್ಕು ಸಾಲುಗಳು ತುಂಬಾ ಕಾಡಿದ್ದವು. ಅದರಲ್ಲೂ ಒಡಲ ಆಳದಲ್ಲಿ ಇನ್ನು ಅಲೆಗಳು ಏಳುವುದಿಲ್ಲ ...
    ಇಡೀ ಕವನವೂ ಅದೇ ಲಹರಿಯಲ್ಲಿದೆ ....

    ಚಂದ .... :) --

    ReplyDelete
  13. ತುಂಬಾ ಚೆನ್ನಾಗಿದೆ 👌🏻👌🏻👌🏻👌🏻👌🏻👌🏻👌🏻👌🏻👌🏻👏👏👏👏👏👏

    ReplyDelete