ಚಿಟಪಟನೆ ಸಾಕ್ಷಿಯಾಗೆ ಮುಂಗಾರಿನ ಮಳೆಹನಿ
ಅರ್ಭಟದಿ ಸಾಥ್ ನೀಡೆ ಆ ಗುಡುಗಿನ ಮಾರ್ಧನಿ
ಅರಿವಾಗದೆ ನಡೆಯಲಿ ಬಿಡು
ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ
ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತ
ಮರೆವ ಬಾ ಜಗವ ಜೊತೆಗೆ ಮುತ್ತ ಮಳೆಯ ಸುರಿಸುತ
ಉರಿದು ನಮ್ಮ ಹಳಿದರೇನು
ನನ್ನ ಒಲವ ನಿನ್ನ ಚೆಲುವ ನೋಡಿ ಜಗದ ಮಂದಿ
ನಶೆಗಡಲನು ಕಡೆಯಲಿ ಬಿಡು
ನನ್ನ ಅಧರ ನಿನ್ನ ಅಧರ ನಡೆಸಿ ಜುಗಲಬಂಧಿ
ಬರೆವ ಬಾ ಹೊಸದು ಗೀತೆ ಒಲವ ಉಯ್ಯಾಲೆಯ ಜೀಕುತ
ಕಲಿವ ಬಾ ಹೊಸದು ರಾಗ ನೂರು ವ್ಯಥೆಯ ದೂರ ನೂಕುತ
ಎದೆಯ ವೀಣೆ ತಂತಿ ಮಿಡಿದು
ನನ್ನ ನಿನ್ನ ಹೊಸ ಬಾಳ್ವೆಗೆ ಹಾಡುವ ನಾವ್ ನಾಂದಿ
ಎಡೆಬಿಡದೆ ನಡೆಯಲಿ ಬಿಡು
ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ
nimma jugalbandi uttama adake nanna salam...
ReplyDeleteಮಳೆಯಲ್ಲಿ ಸಂಗಾತಿಯೊಡನೆ ಜೋಕಾಲಿ ಜೀಕುತ್ತಾ ಜುಗಲ್ ಬಂದಿ ಹಾಡಿ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದೀರಿ.ಒಳ್ಳೆಯ, ಖುಷಿಕೊಡುವ ಕವನ.ಧನ್ಯವಾದಗಳು.
ReplyDeleteದಿಲಿಪ್...
ReplyDeleteವಹ್.. !!!
ಸಂಗಾತಿಯೊಡನೆಯ ನವಿರಾದ ಭಾವನೆಗಳು..
ಹೊಸ ಭರವಸೆಗಳು..ಕನಸುಗಳು..
ಬಹಳ ಚೆನ್ನಾಗಿ ವ್ಯಕ್ತವಾಗಿವೆ..
ಅಭಿನಂದನೆಗಳು ಚಂದದ ಕವನಕ್ಕೆ...
Superb :)
ReplyDeletechennaagide, Go ahead!
ReplyDeletenimmella kanasugalu, bayakegalu nanasaagali..
ReplyDeletechandada kavanakke dhanyavaadagalu.
ಇಂಥ ಮಳೆ, ಸಂಗಾತಿ, ಜೋಕಾಲಿ, ಜುಗಲ್‍ಬಂದಿ, ಎಲ್ಲವೂ ಸೂಪರ್. ಯಾವುದೋ ಲೋಕಕ್ಕೆ ಕರೆದೊಯ್ಯುವಂತಿದೆ.
ReplyDeleteಸೂಪರ್ ದಿಲೀಪ್.
Very romantic sir..
ReplyDeletetumba chennagide kava....really superb!!!!
ReplyDeleteಅಬ್ಬಬ್ಬಾ,ಏಷ್ಟು ಮಧುರ,ಮಾದಕ ಜುಗಲಬಂದಿಗಳನ್ನು ನೆನೆದಿದ್ದೀರಿ.
ReplyDeleteನಿಮ್ಮ ಆಸೆಗಳೆಲ್ಲಾ ಫಲಿಸಲಿ!
ದಿಲೀಪ್,
ReplyDeleteಸು೦ದರ ಕನಸುಗಳು ನನಸಾಗಿ, ಸು೦ದರ ನಲಿವಿನ ಜೀವನ ನಿಮ್ಮದಾಗಲಿ..ಕವನವನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.
ಮೊದಮೊದಲು ನನ್ನ ಇ೦ಟರ್ ನೆಟ್ ಸಮಸ್ಯೆ ಯಿ೦ದಾಗಿ ನಿಮ್ಮ ಬ್ಲೊಗ್ ಗೆ ಬರಲಾಗಿರಲಿಲ್ಲ..blog open agtiralilla.. :(
sakat song
ReplyDeletenice lines... simply superb...
ReplyDeletekya baat hai.........
ReplyDeletenice one
ಧನ್ಯವಾದಗಳು ಉದಯ್
ReplyDeleteನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ..!
ReplyDeletenice one Dileep..
ನಿಮ್ಮವ,
ರಾಘು.
ಜುಗಳಬಂಧಿಯ ಸುಂದರ ಕವನ ಮನವನ್ನ ಮುದಗೊಳಿಸಿತು. ಬಹು ಚೆಂದದ ಆಶಯದ ಕವನ. ಕೊನೆಯ ಸಾಲು ಖುಷಿಯಾಯಿತು.
ReplyDeleteದಿಲೀಪ್ ಸರ್,
ReplyDeleteತುಂಬಾ ಸುಂದರ ಸಾಲುಗಳು...ಕವನದಲ್ಲಿ ಅಡಗಿರುವ ನಿಮ್ಮ ಭಾವನೆಗಳು ಸುಂದರವಾಗಿವೆ. ನಿಮ್ಮ ಕನಸೆಲ್ಲ ನನಸಾಗಲಿ...
[ಕ್ಷಮಿಸಿ,ನಿಮ್ಮ ಬ್ಲಾಗ್ ನೋಡೇ ಇರಲಿಲ್ಲಾ. ಇವತ್ತೇ ನೋಡಿದ್ದು. ಎಲ್ಲಾ ಪೋಸ್ಟುಗಳನ್ನು ಓದ್ತಾ ಇದ್ದೀನಿ]
sir kavanavannu naavu oduvaaga nammannu elligo karedukondu hoda anubhava.....
ReplyDeleteನಮಸ್ತೆ ಮೂರ್ತಿ ಸರ್... ಮಳೆಯೇ ಹಾಗೆ.. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಪ್ರೇರೇಪಿಸುತ್ತದೆ.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ReplyDeleteನಮಸ್ತೆ ಪ್ರಕಾಶಣ್ಣ..
ReplyDeleteಹೊಸ ಭಾವನೆಗಳ, ಭರವಸೆಗಳ, ಕನಸುಗಳ ಜುಗಲ್ ಬಂಧಿ ಸಾಂಗೋಪಾಂಗವಾಗಿ ಸಾಗಿದೆ..
ಚೆಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಧನ್ಯವಾದಗಳು ಮಾನಸಾ ಮೇಡಂ..
ReplyDeleteಧನ್ಯವಾದಗಳು ವಿ. ಆರ್. ಭಟ್ ರವರೆ..
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು Go Ahead ಅಂತ ಹಸಿರು ನಿಶಾನೆ ನೀಡಿದ್ದಕ್ಕೆ..
ಚುಕ್ಕಿ ಚಿತ್ತಾರ..
ReplyDeleteಕವನ ಮೆಚ್ಚಿ ಹಾರೈಸಿದ್ದೀರಿ.. ಧನ್ಯವಾದಗಳು.. ತಮ್ಮ ಹಾರೈಕೆ ಸದಾಕಾಲ ನಮ್ಮೊಡನೆ ಇರಲಿ...
ಧನ್ಯೋಸ್ಮಿ ಶಿವು ಸರ್..
ReplyDeleteಕವನ ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ ಅಂತ ತಿಳಿದು ತುಂಬಾ ಖುಷಿಯಾಯ್ತು..
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
Uday..
ReplyDeleteThanks a ton.. :)
ಧನ್ಯವಾದಗಳು ಮನಸು ಮೇಡಂ..
ReplyDeleteನಮಸ್ತೆ ಸುನಾಥ್ ಸರ್..
ReplyDeleteಮಳೆಯಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದೇನೆ ಅಷ್ಟೇ..
ಮಧುರವಾಗಿಯೂ, ಮಾದಕವಗಿಯೂ ಮೂಡಿ ಬಂದಿದ್ದರೆ ನನ್ನ ಪ್ರಯತ್ನ ಫಲ ಕೊಟ್ಟಂತೆ..
ತಮ್ಮ ಆಶಿರ್ವಾದ, ಪ್ರೀತಿ ಹಾರೈಕೆಗಳು ಇನ್ನಷ್ಟು ಬರೆಯಲು ಪ್ರೇರಕ.. ಧನ್ಯವಾದಗಳು..
ದಿಲೀಪ್ ,
ReplyDeleteಚೆನ್ನಾಗಿದೆ ನಿಮ್ಮ ಕವನ .. ಜುಗಲಬಂಧಿ ಬರಿ ಕವನದಲ್ಲಷ್ಟೆ ಅಲ್ಲ .. ಜೀವನದಲ್ಲು ಇದೆ ..
ಅತ್ತ ನಿಮ್ಮಾಕೆಯದು ಮಲ್ಲಿಗೆ ಕವನ ಇತ್ತ ನಿಮ್ಮದು ಮಧುರ ಕನಸಿನ ಕವನ ..ಒಳ್ಳೆ ಸಾಥ ..ಒಳ್ಳೆ ಜುಗಲ್ ಬಂಧಿ :)
ದಿಲೀಪ್...
ReplyDeleteನಿಜ್ಜ ಕವನ ತುಂಬಾ ಸುಂದರವಾಗಿದೆ....
"ಬರೆವ ಬಾ ಹೊಸದು ಗೀತೆ ಒಲವ ಉಯ್ಯಾಲೆಯ ಜೀಕುತ...
ಕಲಿವ ಬಾ ಹೊಸದು ರಾಗ ನೂರು ವ್ಯಥೆಯ ದೂರ ನೂಕುತ...."
ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು... ಸೂಪರ್...
ಶ್ಯಾಮಲ
ಮನಮುಕ್ತಾ ಮೇಡಂ
ReplyDeleteನಮಸ್ತೆ.. ಇಂಟರ್ ನೆಟ್ ಸಮಸ್ಯೆ ಇದ್ರೂ ನನ್ನ ಕವನ ಓದಿ,ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ..
ತಮ್ಮ ಹಾರೈಕೆಗೆ ಧನ್ಯವಾದಗಳು...
ಗುರುಮೂರ್ತಿ ಸರ್..
ReplyDeleteಧನ್ಯವಾದಗಳು
ಪ್ರಗತಿ
ReplyDelete:)
ಪ್ರವೀಣ್
ReplyDeleteತುಂಬಾ ಥ್ಯಾಂಕ್ಸ್
ಸೀತಾರಾಮ್ ಸರ್..
ReplyDeleteಜುಗಲಬಂಧಿಯನ್ನು ಮುದದಿಂದ ಓದಿ ಪ್ರತಿಕ್ರಿಯಿಸಿ ನನ್ನನ್ನೂ ಮುದಗೊಳಿಸಿದ್ದಕ್ಕೆ ಅನಂತ ನಮನಗಳು..
ಅಶೋಕ್
ReplyDeleteಹನಿಹನಿಗೆ ಸ್ವಾಗತ
ನಮ್ಮ ಭೇಟಿ ಆಗಿದ್ದು ಕವನ ಪ್ರಪಂಚದಲ್ಲಿ.. ಅಲ್ಲಿ ಪೋಸ್ಟ್ ಮಾಡುವ ಕವನಗಳನ್ನೇ ಇಲ್ಲಿಯೂ ಮಾಡುತ್ತೇನೆ.. ಅಲ್ಲಿ ಪ್ರತಿಕ್ರಿಯಿಸಿ ನೀವು ಕೊಡುತ್ತಿರುವ ಪ್ರೋತ್ಸಾಹಕ್ಕೆ ಹಾಗು ಇದೀಗ ನನ್ನ ಬ್ಲಾಗ್ ಗೂ ಭೇಟಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್.. ಆಗಾಗ ಬರುತ್ತಿರಿ
ಪ್ರವರ
ReplyDeleteಹನಿಹನಿಗೆ ಸ್ವಾಗತ
ಕವನ ಮೆಚ್ಚಿ ನಿಮ್ಮ ಅನುಭವವನ್ನ ಹಂಚಿಕೊಂಡಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. ಆಗಾಗ ಬರುತ್ತಿರಿ...
ರಘು
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
ಶ್ಯಾಮಲಾ ಮೇಡಂ
ReplyDeleteನಮಸ್ತೆ.. ಮೊದಲ ಕೆಲವು ಸಾಲುಗಳನ್ನು ಬರೆದು ಕವನ ಮುಂದುವರೆಸಲಾಗದೆ ಹಾಗೇ ಬಿಟ್ಟಿದ್ದೆ..ನಂತರ ಮತ್ತೆ ಕುಳಿತು ಕವನ ಪೂರ್ತಿಗೊಳಿಸಿದೆ.. ಕವನದ ಸಾಲುಗಳು ಮತ್ತೆ ಮತ್ತೆ ಓದುವಂತಿವೆ ಅಂದರೆ ನನ್ನ ಪ್ರಯತ್ನ ಫಲಿಸಿತು ಅಂತಾಯ್ತು..ತಮ್ಮೆಲ್ಲರ ಹಾರೈಕೆ ಆಶೀರ್ವಾದ ಸದಾ ಹೀಗೆಯೇ ಇರಲಿ..
ಧನ್ಯವಾದಗಳು..
ಶ್ರೀಧರ್ ಸರ್..
ReplyDeleteಹಹ್ಹಹ್ಹ.. ಸರಿಯಾಗಿ ಗಮನಿಸಿದ್ದೀರಿ.. ಇಬ್ಬರ ಜುಗಲಬಂಧಿ ಅಬ್ಬರದಿಂದ ಸಾಗಿದೆ..ತಮ್ಮೆಲ್ಲರ ಪ್ರೀತಿಯ ಹಾರೈಕೆ ಜೊತೆಗಿದೆ...
ಧನ್ಯವಾದಗಳು
ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ..ಸಕತ್ ಕಲ್ಪನೆ!
ReplyDeleteಕವನ ಮನಕೆ ಮುದ ನೀಡಿತು ದಿಲೀಪ್.
ಶುಭಾಶಯಗಳು
ಅನ೦ತ್
Hi Dileep..
ReplyDeleteaha.. estu chandavagi kannu tuti... galu jugal bandiyadive.. neevu jugalbandi vivarisida reethi...super
istavaythu
pravi
ಈ 'ಜುಗಲ್ ಬ೦ಧಿ' ಎ೦ದಿಗೂ 'ಜಗಳ್ ಬ೦ಧಿ'ಯಾಗದಿರಲಿ ದಿಲೀಪ್! ಕವನ ಭಾವಪೂರ್ಣವಾಗಿದೆ
ReplyDeleteಅನಂತರಾಜ್ ಸರ್
ReplyDeleteಕವನ ಓದಿ ಮುದಗೊಂಡಿದ್ದು ತಿಳಿದು ತುಂಬಾ ಖುಷಿಯಾಯ್ತು
ಪ್ರತಿಕ್ರಿಯೆಗೆ ಧನ್ಯವಾಗಗಳು
ಪ್ರಭಾಮಣಿ ಮೇಡಂ
ReplyDeleteಹಾರೈಕೆಗೆ ಹಾಗೂ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಪ್ರವೀಣ್..
ReplyDeleteಜುಗಲಬಂಧಿಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು