Friday, 16 July 2010
ದಿಲ್ ತೋ ಬಚ್ಚಾ ಹೈ ಜಿ..!!
ಹಸಿರು.. ಕೆಂಪು.. ಹಳದಿ... ನೀಲಿ.. ಆಹಾ.. ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...! ನೋಡಿದ ತಕ್ಷಣ ಮನ ಸೂರೆಗೊಂಡುಬಿಟ್ಟಿತ್ತು.. ಹಠ ಮಾಡಿ, ಉಪವಾಸ ಸತ್ಯಾಗೃಹ ಮಾಡಿ, ಕಾಡಿ ಬೇಡಿ, ಏನೇನು ಸಾಧ್ಯವೋ ಎಲ್ಲವನ್ನೂ ಮಾಡಿದ ಮೇಲೆಯೇ ಅಪ್ಪ ಅದನ್ನು ನನಗೆ ಕೊಡಿಸಿದ್ದು... ಅದು ಕೈಗೆ ಸಿಕ್ಕಾಗ ನನಗಾದ ಸಂತಸ ಅಪರಿಮಿತ.. ಅಗಣಿತ.. ಸ್ವರ್ಗವೇ ನನ್ನ ಕೈನಲ್ಲಿ ಎಂಬ ಭ್ರಮೆ ಯಲ್ಲಿ ತೇಲತೊಡಗಿದ್ದೆ..
ಎದೆಗೊತ್ತಿ ಮುದ್ದು ಮಾಡಲು... ಅಮ್ಮ ಬೈದರೆ ದುಃಖ ಹೇಳಿಕೊಳ್ಳಲು... ಖುಷಿಯ ಖಬರ್ ಏನಾದರೂ ಇದ್ರೆ ಹಂಚಿಕೊಳ್ಳಲು.. ಮತ್ತೆ ಕೋಪ ಬಂದ್ರೆ ಎತ್ತಿ ಎಸೆಯಲು ಅದೇ ಬೇಕಿತ್ತು.. ಅದನ್ನ ಎದೆಗಪ್ಪಿ ಮಲಗಿ ಕಂಡ ಕನಸುಗಳಿಗೆ ಲೆಕ್ಕವೇ ಇಲ್ಲ... ಕೀಲಿ ಕೊಟ್ರೆ ಕುಣಿಯುತ್ತಿತ್ತು.. ಅದುಮಿದರೆ ಉಲಿಯುತಿತ್ತು... ನಡೆಯುತ್ತಿತ್ತು.. ಉರುಳುತಿತ್ತು.. ಒಟ್ಟಿನಲ್ಲಿ ಟೋಟಲ್ ಟೈಮ್ ಪಾಸ್..ನನ್ನ ಬಳಿ ಮಾತ್ರ ಇದ್ದಿದ್ರಿಂದ ಗೆಳೆಯರೆದುರು ಗರ್ವ ಪಡ್ತಾ ಇದ್ದೆ.. ಕೊಡೋದಿಲ್ಲ ಅಂತ ಆಟ ಆಡಿಸ್ತಿದ್ದೆ.. ಕೊಟ್ಟು ಹಾಗೇ ಕಸಿದು ಕೊಳ್ತಿದ್ದೆ.. ಅದಕ್ಕಾಗಿ ಗೆಳೆಯರ ಜೊತೆ ಬೇಜಾನ್ ಜಗಳ ಕೂಡ ಆಗಿ ಹೋಗಿತ್ತು ಅನ್ನಿ.. ಆದ್ರೆ ಒಂದಿನ ಆ ಆಟಿಕೆ ಮುರಿದು ಹೋಯ್ತು... ಅತ್ತೆ.. ಕಣ್ಣೀರು ಕಾಲಿಯಾದರೂ ಅತ್ತೆ.. ಅಪ್ಪ ಅಮ್ಮ ಎಷ್ಟು ಹೇಳಿದರೂ, ರಮಿಸಿದರೂ, ಬೈದರೂ ಕೇಳದೇ ಅತ್ತೆ.. ಊಟ ನಿದ್ರೆ ಆಟ ಪಾಠ ಎಲ್ಲ ಮರೆತು ಅತ್ತೆ...
ಸ್ವಲ್ಪ ದಿನದ ನಂತರ ಮನೆಗೆ ಮತ್ತೊಂದು ಹೊಸ ಆಟಿಕೆ ಬಂತು... ಆಹಾ..!! ಕಾಮನ ಬಿಲ್ಲಿನ ಎಲ್ಲ ಬಣ್ಣಗಳೂ ಅದರಲ್ಲಿ ಸೇರಿಕೊಂಡಿತ್ತೋ ಏನೋ...!! ಆಕರ್ಷಕ.. ಮನ ಮೋಹಕ..!!
ಕಾಲ ಯಾರಿಗೂ ನಿಲ್ಲೋದಿಲ್ಲ.. ನಮಗೀಗ "ದೊಡ್ಡವರು" ಅನ್ನೋ ಬೇಡದ, ಬಯಸದ ಪದವಿ ತಾನಾಗೆ ಅಂಟಿಕೊಂಡಿದೆ... ಆದ್ರೇನು ಮಾಡ್ತೀರಿ..?? ದಿಲ್ ತೋ ಅಭೀ ಬಚ್ಚಾ ಹೈ..!! ಕೈನಲ್ಲಿನ ಆಟಿಕೆಗಳು ಮಾತ್ರ ಬದಲಾಗಿವೆ...!!
.
.
Subscribe to:
Post Comments (Atom)
ಎಲ್ಲರ ಮನಸಲ್ಲೂ ,ಎಷ್ಟೇ ವಯಸ್ಸಾದರೂ ಒಂದು ಮಗು ಇದ್ದೇ ಇರುತ್ತದೆ.ಮೇಲೆ ಕಾಣಿಸಿಕೊಳ್ಳದೆ ಇರಬಹುದು ಆದರೂ ದಿಲ್ ತೋ ಬಚ್ಚಾ ಹೈ!ನಿಮ್ಮ ಬರವಣಿಗೆ ಬಹುತ್ ಅಚ್ಛಾ ಹೈ.
ReplyDeleteಬರವಣಿಗೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಡಾ|| ಮೂರ್ತಿಯವರೇ..
ReplyDeleteಎಲ್ಲರ ಮನಸಿನಲ್ಲೂ ಇರುವ ಆ ಮಗುವಿನ ಕಾರಣದಿಂದಲೇ ಜೀವನ ಇತ್ನಾ ಅಚ್ಚಾ ಹೈ...!
nimma matu nija adu yavagalu maguvina manasinaddu navu adanna bandisidavae astae...nimma baravanigae channagidae
ReplyDeleteನಮ್ಮೆಲ್ಲರ ಮನದಲ್ಲಿಯೂ ಅವಿತಿರುವ ’ಬಚ್ಚಾ’ ಅವಕಾಶ ಸಿಕ್ಕಾಗಲೆಲ್ಲಾ ಹೊರಗೆ ಇಣುಕುತ್ತಲೇ ಇರುತ್ತೆ.... ಎಷ್ಟು ಸವಿದರೂ ಸಾಲದು ಬಾಲ್ಯದ ನೆನಪು. ಚೆನ್ನಾಗಿದೆ ದಿಲೀಪ್....
ReplyDeleteಶ್ಯಾಮಲ
ಹೌದು ಸರಿಯಾದ ಮಾತು.
ReplyDeleteಹಠ ಮಾಡ್ಲಿಕ್ಕೆ ಶುರು ಮಾಡಿದರೆ ಅಸ್ಟೆ ಕತೆ.
ನಿಮ್ಮವ,
ರಾಘು.
Dil to bachcha hai hi.... Hum bhi hamesha bachche hi rahenge.... Kya kare koi hamein bada hone hi nahi deta!!!! I love being pampered... then, now & forever..... :)
ReplyDeleteAsh...
(http://hastkala-oceanichope.blogspot.com/)
ದಿಲಿಪ್...
ReplyDelete" ಮನುಷ್ಯರನ್ನು..
ಮನುಷ್ಯರಾಗಿ ನೋಡುವದು ದೊಡ್ಡತನ..
ಅದು ಮುಗ್ಧ..
ಮಕ್ಕಳಿಂದ ಮಾತ್ರ ಸಾಧ್ಯ..
ನಾವೆಲ್ಲ ದೊಡ್ಡವರಾಗಿಬಿಟ್ಟಿದ್ದೇವೆ..."
ಇದು "ನಾನೂ.. ನನ್ನ ಕನಸು" ಸಿನೇಮಾದಲ್ಲಿ ಬರುವ ಮಾತುಗಳು..
ನಿಮ್ಮ ಲೇಖನ ಓದಿ ನೇನಪಾಯಿತು..
ನಾವು ನಮ್ಮೊಳಗಿನ ಮಗುವಿಗೆ ಬದುಕಲು ಬಿಡುತ್ತಿಲ್ಲ.. ಅಲ್ಲವಾ?
ಚಂದದ ಲೇಖನಕ್ಕೆ ಅಭಿನಂದನೆಗಳು...
ದಿಲೀಪ್,
ReplyDeleteನಿಮ್ಮ ಲೇಖನ ನನ್ನೊಳಗಿನ ಮಗುವನ್ನು ಮುಗ್ದತೆಯನ್ನು ಬಡಿದೆಚ್ಚರಿಸಿತು.
nimma maatu nija sir..ellarolagu obba maguviruttade :)
ReplyDeleteಅಭೀ ತೊ ಬಚ್ಚೇ ಹೋ, ಅಭೀ ತೊ ಸಚ್ಚೇ ಹೊ!
ReplyDeleteಎಲ್ಲರ ಮನಸ್ಸಿನಲ್ಲೂ ಬೆಚ್ಚಗೆ ಬಚ್ಚಿಟ್ಟುಕೊ೦ಡಿರುವ ಬಚ್ಚನ ಬಗ್ಗೆ ಮತ್ತು ಬೇಡದ "ದೊಡ್ಡವರು" ಪದವಿಯ ಬಗ್ಗೆ ಸು೦ದರ ಚಿತ್ರಣ ಕೊಟ್ಟಿದ್ದೀರಿ ದಿಲೀಪ್. " A saint live childlike..." ಎನ್ನುವ ಮಾತು ಜ್ಞಾಪಕಕ್ಕೆ ಬ೦ತು.
ReplyDeleteಶುಭಾಶಯಗಳು
ಅನ೦ತ್
ಹಾಗೆ ಬಂಧಿಸುತ್ತ, ನಮ್ಮ ಸುತ್ತ ಸಭ್ಯತೆಯೆಂಬ, ನಾಗರಿಕತೆಯೆಂಬ ಚೌಕಟ್ಟು ಕಟ್ಟಿಕೊಳ್ಳುತ್ತ, ನಾವು ದೊಡ್ಡವರು ಎಂದು ಸಾಧಿಸುವ ವ್ಯರ್ಥ ಪ್ರಯತ್ನ ಮಾಡುತ್ತಾ ನಾವು ನಮ್ಮೊಳಗಿನ ಮಗುವನ್ನು ಉಸಿರುಗಟ್ಟಿಸುತ್ತೇವೆ..
ReplyDeleteಬರವಣಿಗೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶ್ರೀಕಾಂತ್...
ನಿಜವಾದ ಮಾತು ಶ್ಯಾಮಲಾ ಮೇಡಂ.. ಅವಕಾಶ ಸಿಕ್ಕಾಗಲೆಲ್ಲ ಹೀಗೆ ಹೊರಗಿಣುಕಿ ನಮಗೆ ನೋವು ಮರೆವ ಶಕ್ತಿ ನೀಡೋದೇ ಈ ಮಗುವಿನ ಮನಸು... ಬಾಲ್ಯದ ಸವಿನೆನಪುಗಳೇ ಹಾಗೆ.. ಸವಿದಷ್ಟೂ ಸಾಲದು...ಧನ್ಯವಾದಗಳು...
ReplyDeleteರಘು..
ReplyDeleteಹಠ ಮಾಡಿದಾಗ ಅದನ್ನ ಹಾಗೆ ಬೆದರಿಸಿ ಹೆದರಿಸಿ ಸುಮ್ಮನಾಗಿಸೋ ಪ್ರಯತ್ನ ಮಾಡ್ತೀವಲ್ಲ ಅಲ್ಲೇ ನಾವು ಎಡವೋದು... ಅದನ್ನ ಅದರಷ್ಟಕ್ಕೆ ಬಿಟ್ಟು ಬಿಡಬೇಕು ಅನ್ನೋದೇ ನನ್ನ ಅನಿಸಿಕೆ.. ಪ್ರತಿಕ್ರಿಯೆಗೆ ಧನ್ಯವಾದಗಳು...
Hahaha.. Sahi farmaya Aashaji.. Aur sach baat yeh hai ki bada hona is soooooooo boring.. hamein aise hi jeena hai... bachchon ki tarah.. bahut bahut shukriya aap ka ke aapne mera blog post padh ke pyara sa comment post kiya...
ReplyDeleteಸತ್ಯವಾದ ಮಾತು ಪ್ರಕಾಶಣ್ಣ...
ReplyDeleteನಮ್ಮೊಳಗಿನ ಮಗುವಿನ ಕತ್ತು ಹಿಸುಕೋ ಪ್ರಯತ್ನವನ್ನ ನಾವು ಆಗಾಗ ಮಾಡ್ತಿರ್ತೇವೆ...ಆದ್ರೆ ಅದು ಚಿರಾಯು ಅನ್ನೋ ಸತ್ಯವನ್ನ ನಾವು ಮರೆತು ಬಿಡ್ತೇವೆ...ನಾನು ನನ್ನ ಕನಸು ಚಿತ್ರವನ್ನ ನಾನೂ ನೋಡಿದ್ದೇನೆ.. ಅದ್ಭುತ ಚಿತ್ರವದು..
ಪ್ರೋತ್ಸಾಹಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು...
ಶಿವು ಸರ್
ReplyDeleteನಿಮ್ಮೊಳಗಿನ ಮಗುವನ್ನ ನನ್ನ ಲೇಖನ ಬಡಿದೆಬ್ಬಿಸಿತು ಅಂದ್ರೆ ತುಂಬಾ ಸಂತೋಷ.. ಅದು ಹಾಗೆಯೇ.. ಆಗಾಗ ಹಾಗೆ ಎಚ್ಚರಗೊಳ್ಳುತ್ತಿರುತ್ತದೆ.. ಪ್ರತಿಕ್ರಿಯೆಗಾಗಿ ಧನ್ಯವಾದಗಳು..
ಧನ್ಯವಾದಗಳು Snow White..
ReplyDeleteಸುನಾಥ್ ಸರ್
ReplyDeleteಬಿಲ್ಕುಲ್ ಸಹಿ ಫರ್ಮಾಯಾ ಆಪ್ ನೆ.. ಬಚ್ಚೇ ಹೈ.. ಇಸೀ ಲಿಯೇ ತೋ ಸಚ್ಚೆ ಹೈ... ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು.. ಹಾರೈಕೆ, ಪ್ರೀತಿ ಸದಾ ಹೀಗೆಯೇ ಇರಲಿ...
ಆ ಪುಟ್ಟ ಪುಟ್ಟ ನೆನಪುಗಳೇ ನಮ್ಮ ಪುಟ್ಟ ಹೃದಯದೊಳಗಿನ ಪುಟ್ಟ ಮಗುವನ್ನು ಜಾಗೃತಗೊಳಿಸುತ್ತವೆ... ಕಾಲದ ಒಡಲಲ್ಲಿ ನಾವು ಸಾಗಲೇ ಬೇಕು.. ಆದರೆ ಕಾಲ ಬಂದಾಗ ಮತ್ತೆ ಗತಿಸಿದ ಕಾಲದಲ್ಲಿ ಬದುಕಬೇಕು...ಚೆಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ವಸಂತ್...
ReplyDeleteಅನಂತರಾಜ್ ಸರ್...
ReplyDeleteಎಲ್ಲ ಸಂತರೂ ಮಗುವಿನ ಮನಸಿನವರೆ ಆಗಿದ್ದರೆ ಸಂತರ ಸಂತತಿಗೆ ಈಗಿರುವ ಅಪಖ್ಯಾತಿ ಬರ್ತಾ ಇರ್ಲಿಲ್ವೇನೋ... ಅವರೂ "ದೊಡ್ದವರಾಗಲು" ಹೋಗಿ ಮಾಧ್ಯಮಗಳ ಕೈಲಿ ಮಕ್ಕಳಾ ಟಿಕೆಯ ವಸ್ತುವಿನಂತೆ ಆಗಿ ಹೋಗಿದ್ದಾರೆ... ಚೆಂದದ ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು...
dileep nimma matu nija manasu haage.....
ReplyDeletedileep nimma cartoongaLannu naavu marala malligeyalli bittarisalu tegedukondiddeve nimma abyantaravenillavendu bhaavisuttene
ದಿಲೀಪ್,
ReplyDeleteಚಂದದ ಬರಹ ! ನಿಜ , ಎಷ್ಟೇ ದೊಡ್ಡವರಾದರೂ ಮನದ ಮೂಲೆಯಲ್ಲೆಲ್ಲೋ ಎಲ್ಲರೂ ಮಕ್ಕಳೇ . ಪೂರ್ತಿಯಾಗಿ ' ದೊಡ್ಡವರಾಗಿ " ಬಿಡುವುದು ಯಾರಿಗೂ ಬೇಡದ್ದು .
ಹಾಗೆ ಮಗುವಿನ ಮನಸು ನಮ್ಮಲ್ಲಿ ಜೀವಂತವಾಗಿದ್ದರೆ ಮಾತ್ರ ಬಹುಶಃ ಜೀವನವನ್ನು ಸರಿಯಾದ ರೀತಿಯಿಂದ ಆನಂದಿಸಬಹುದೇನೋ !
ತುಂಬಾ ಇಷ್ಟವಾಯ್ತು ಬರಹ .
" दिल तो बच्चा है जी...
उस दिल को ऐसे ही रहने दो जी ...
ಮನಸು...
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು..
ಮರಳ ಮಲ್ಲಿಗೆ ಪತ್ರಿಕೆಗೆ ಪ್ರತ್ಯೇಕ ಚಿತ್ರಗಳನ್ನು ಬಿಡಿಸಿ ಕಳಿಸಬೇಕು ಅಂದುಕೊಂಡಿದ್ದೆ..
ಬ್ಲಾಗ್ ನಲ್ಲಿ ಪ್ರಕಟಿಸಿದ ಚಿತ್ರಗಳನ್ನೇ ಆಯ್ದುಕೊಂಡಿದ್ದಾರೆ ನನ್ನ ಅಭ್ಯಂತರವೇನೂ ಇಲ್ಲ...
ಚಿತ್ರಾ ಮೇಡಂ..
ReplyDeleteಚೆಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು...
Very true sir, because of our position and status we try to ignore that kid in side us.
ReplyDeleteಮನದೊಳಗಿನ ಮಗುವಭಾವವನ್ನ ಕಾಣದಂತೆ ರಕ್ಷಿಸುವದೇ ದೊಡ್ದವರಾಗಿರಲು ಎಲ್ಲರು ಪಡುವ ಪ್ರಯತ್ನ! ಅದರಲ್ಲಿ ನಾವು ಪಡದದ್ದೇನು? ಕಳೆದುಕೊಂಡದ್ದೇನು?
ReplyDeleteಚೆಂದದ ಲೇಖನ!
ನೀವು ಹೇಳಿದ್ದು ನಿಜ.. ಲೇಖನ ಚೆನ್ನಾಗಿತ್ತು..
ReplyDeleteಇನ್ನೂ ಒಳ್ಳೆ ಚಿಕ್ಕಮಕ್ಕಳಂತೆ ಆಡ್ತೀಯಾ ಅಂತ ಯಾರನ್ನಾದರೂ ಹೀಯಾಳಿಸುವುದು ಕಂಡರೆ ರೇಗುವವರ ಮೇಲೆ ಕನಿಕರ ಬರುತ್ತದೆ, ಮಕ್ಕಳಂತೆ ಮುಗ್ಧರಾಗಿರುವುದು ಕಷ್ಟ..
ReplyDeleteಹೌದು ದಿಲೀಪ್ ಹೃದಯ ಸಣ್ಣ ಮಗು ....ನಾವು ಎಷ್ಟೇ ದೊಡ್ಡವರಾದರೂ , ಅದಕ್ಕೆ ಬೇಕಾದ್ದನ್ನು ಪಡೆಯಲು ಅದು ಚಿಕ್ಕ ಮಗುವಿನಂತೆ ಹಠ ಹಿಡಿದೇ ಹಿಡಿಯುತ್ತೆ
ReplyDeleteದಿಲೀಪ್ ,
ReplyDeleteಸಕತ್ತಾಗಿದೆ ,,, ಎಷ್ಟು ದೊಡ್ಡವರಾದ್ರೇನು .. ಮನಸು ಮಗುವಂತೆ ಅಲ್ವೆ.
hegde avre ,, lekhana tumba chennagide,, Dil to bachha hi rahega,,only we grow up,,,
ReplyDelete*********************************
http://bhuminavilu.blogspot.com/
*********************************
ನಮಸ್ತೆ ಉದಯ್
ReplyDeleteಮುಜುಗರದಿಂದ ನಾವು ದೊಡ್ಡವರಂತೆ ಆಡ್ತಾ ಮನಸಿನೊಳಗಿನ ಮಗುವನ್ನು ಆಚೆ ಬರಗೊಡೋದೇ ಇಲ್ಲ...ನಮ್ಮ ಹುದ್ದೆ, ಪದವಿ ಹೇಗೆ ನಮ್ಮೊಳಗಿನ ಮಗುವನ್ನ ಕಟ್ಟಿಹಾಕಿ ಬಿಡುತ್ತದೆ ಅಲ್ಲವೇ.. ಧನ್ಯವಾದಗಳು..
ನಮಸ್ಕಾರ ಸೀತಾರಾಮ್ ಸರ್..
ReplyDeleteಮನಸಿನೊಳಗಿನ ಮಗುವನ್ನು ಆಚೆಬರಗೊಡದೆ ನಾವು ಪಡಕೊಂಡಿದ್ದು ಸಲ್ಪ ಉದ್ವೇಗ, ಅಶಾಂತಿ.. ಕಳಕೊಂಡಿದ್ದು ನೆಮ್ಮದಿ..
ಪ್ರತಿಕ್ರಿಯೆಗಾಗಿ ಧನ್ಯವಾದಗಳು...
ಧನ್ಯವಾದಗಳು ರವಿಕಾಂತ್ ಸರ್
ReplyDeleteನಿಜ ಸಾಗರಿಯವರೇ..
ReplyDeleteಮಕ್ಕಳಂತೆ ಮುಗ್ದರಾಗಿರೋದು ತುಂಬಾನೇ ಕಷ್ಟ.. ಚಿಕ್ಕವರಂತೆ ಆಡ್ತೀಯಾ ಅಂತ ರೇಗುವವರ ಭಯದಿಂದ, ಮುಜುಗರದಿಂದ ನಾವು ದೊಡ್ಡವರಂತೆ ನಾಟಕ ಆಡಲೇ ಬೇಕು.. ಇಷ್ಟ ಇಲ್ದೆ ಇದ್ರೂ ಸಹ.. ಕಷ್ಟವಾದರೂ ಸಹ..
ಪ್ರತಿಕ್ರಿಯೆಗೆ ಧನ್ಯವಾದಗಳು..
ವೆಂಕಟೇಶ್ ಹೆಗಡೆಯರೇ..
ReplyDeleteನಮಸ್ಕಾರ...
ಹನಿಹನಿ ಬ್ಲಾಗ್ ಗೆ ಸ್ವಾಗತ..
ಹಠ ಮಾಡೋ ಮಗುವಿನಂತ ಮನಸನ್ನ ಹತೋಟಿಗೆ ತರುವ ನೆಪದಲ್ಲಿ ನಾವು ಅದಕ್ಕೆ ಬಗೆ ಬಗೆ ಮುಖವಾಡ ತೊಡಿಸ್ತೀವಲ್ಲಾ.. ಪಾಪ ಮನಸು.
ಪ್ರತಿಕ್ರಿಯೆಗೆ ಧನ್ಯವಾದಗಳು..
ಶ್ರೀಧರ್ ಸರ್..
ReplyDeleteನಮಸ್ತೆ..
ಎಷ್ಟೇ ದೊಡ್ಡವರಾದರೂ ಮನಸಿನಲ್ಲಿ ಒಂದು ಮಗುವನ್ನ ಜತನದಿಂದ ಜೋಪಾನ ಮಾಡ್ಕೊಂಡು ಬಂದ್ರೆ ನಾವು ನಿಜವಾದ ಅರ್ಥದಲ್ಲಿ ದೊಡ್ದವರಾಗ್ತೇವೆ.. ಇಲ್ಲಾಂದ್ರೆ ದಡ್ದರಾಗ್ತೇವೆ.. ಧನ್ಯವಾದಗಳು...
ನಮಸ್ತೆ ಮಹೇಶ್
ReplyDeleteಹನಿಹನಿ ಗೆ ಸ್ವಾಗತ..
ಸತ್ಯವಾದ ಮಾತು.. ಹೃದಯ ಮಗುವೇ ಆಗಿರತ್ತೆ.. ನಾವು ದೊಡ್ದವರಾಗ್ತೇವೆ.. ಅಥವಾ ದೊಡ್ಡವರ ಸೋಗು ಹಾಕ್ತೇವೆ...
ಧನ್ಯವಾದಗಳು..
NIjaa... Dil yaawagalu bachane ne... tumbaa chenaagi barediddiri.... AbhinandanegaLu :)
ReplyDeleteಧನ್ಯವಾದಗಳು ಮಾನಸಾ ಮೇಡಂ...
ReplyDelete