ಅವನು ಒಬ್ಬ ಶಿಲ್ಪಿ.. ಕಲ್ಲಿನಲ್ಲಿ ಜೀವ ತುಂಬಬಲ್ಲ ಚತುರ... ಅವಳೋ ಅಪ್ಸರೆಯೇ ನಾಚಬೇಕು.. ಅಷ್ಟು ಸುಂದರಿ... ಈತ ಅವಳ ಚೆಲುವಿಗೆ ಮನಸೋತ... ಅವಳುಇವನಕಲೆಗೆಸೋತುಹೃದಯಒಪ್ಪಿಸಿದಳು.... ಇವಳಮೂರ್ತಿಯನ್ನೇಆತಕೆತ್ತತೊಡಗಿದ... ಹಗಲು-ಇರುಳು.. ಬಿಸಿಲು-ಮಳೆ.. ಯಾವುದನ್ನೂಲೆಕ್ಕಿಸದೆಕಲ್ಲುಕಡೆಯುವುದರಲ್ಲಿಮಗ್ನನಾದ...ದಿನ..ವಾರ.. ತಿಂಗಳು.. ವರ್ಷಗಳೇ ಗತಿಸಿದವು... ಅವಳ ಸುಂದರ ಪ್ರತಿಕೃತಿ ತಯಾರಾಯಿತು... ಅವಳು ಇವನಿಗಾಗಿ ಕಾದು ಕಾದು ಸುಸ್ತಾದಳು.. ನೊಂದಳು... ವಿರಹದಬೇಗೆಯಲ್ಲಿಬೆಂದಳು... ಕಲ್ಲಾಗಿಹೋದಳು...!!
ಪ್ರತಿ ಪುಟದಲ್ಲೂ ತುಂಬಿ ತುಳುಕುವ ಸರಕು ನಮ್ಮ ವಿಶೇಷ ವರದಿ, ಮೇಲಿಂದ ಬಹುಪರಾಕು..! ಕೊಲೆ ಸುಲಿಗೆ ರಾದ್ದಾಂತ... ಕಳ್ಳ ಸ್ವಾಮಿಯ ಪೊಳ್ಳು ವೇದಾಂತ... ರಾಜಕೀಯದವರ ದೊಂಬರಾಟ.. ಭಯೋತ್ಪಾದಕರ ಹಾರಾಟ.. ಕ್ರಿಕೆಟ್ಟಿನವರ ಜೂಜಾಟ.. ಅಸ್ತಮಾ, ಮೂಲವ್ಯಾದಿಗೆ ಹೊಸ ಮದ್ದು... ನಾಲ್ಕೇ ದಿನದಲ್ಲಿ ಬೊಕ್ಕ ತಲೆ ಮೇಲೆ ಮಾರುದ್ದದ ಕೇಶರಾಶಿ...! ಹಾಸಿಗೆ ಸುಖಕ್ಕಾಗಿ ಶಕ್ತಿಶಾಲಿ ಗುಳಿಗೆ..!! ಪುಟದ ತುಂಬಾ ಅರೆಬೆತ್ತಲೆ ಬಾಲೆ... ಬಡವರ ಬವಣೆಗೆ ಮಾತ್ರ ಸಿಗದ ಬೆಲೆ... ಇದೆಲ್ಲದರ ನಡುವೆ... ಇದೀಗ ಬಂದ ಸುದ್ದಿ... ಇಂದಿನ ನ್ಯೂಸ್ ಪೇಪರ್ ನಾಳಿನ ರದ್ದಿ...!!