ನನ್ನ ಪ್ರೀತಿ ಚಂದಿರನಂತೆ...
ಆಗಾಗ ಕ್ಷೀಣಿಸುತ್ತದೆ...
ಮತ್ತೆ ಮತ್ತೆ ವೃದ್ದಿಸುತ್ತದೆ..
ಒಮ್ಮೆ ಅತೀ ಎನಿಸುವಷ್ಟು...
ಬೆಳದಿಂಗಳ ಪೌರ್ಣಮಿ..
ಒಮ್ಮೊಮ್ಮೆ ಏನೂ ಇಲ್ಲ...
ಬರೀ ಶೂನ್ಯ ಅಮಾವಾಸ್ಯೆ...
ಜಗದ ಕೆಟ್ಟ ಕಣ್ಣು ಬಿದ್ದರೆ
ಒಂದರೆ ಕ್ಷಣದ ಗೃಹಣ...
ಆದರೆ ಒಂದು ನೆನಪಿರಲಿ..
ಚೆಲುವೇ..,
ಋತುಗಳು ಬದಲಾಗ ಬಹುದು...
ನೀ ನನ್ನ ಮರೆಯಲೂ ಬಹುದು...
ನೋವಲಿ ನಾ ಸಾಯಲೂ ಬಹುದು...
ಆದರೆ....,
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!
ವಾಹ್ ! ದಿಲೀಪ್,
ReplyDeleteಮತ್ತೊಂದು ಸುಂದರ ಕವನ !
" ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!! "
ಎಷ್ಟು ಚೆನ್ನಾಗಿ ಬರೀತೀರ !!! ನಿಮ್ಮ ಚೆಲುವೆ ಮೆಚ್ಚದಿರಲು ಸಾಧ್ಯವೇ ಇಲ್ಲ !
ಒಮ್ಮೊಮ್ಮೆ ಏನೂ ಇಲ್ಲ...
ReplyDeleteಬರೀ ಶೂನ್ಯ ಅಮಾವಾಸ್ಯೆ..
yaakri paapaa?? 'avaLige' nimma preetiya korate yavattoo aagadirali anta bayasteeni..
Dileep, Good effort and nice lines of expression to your love. nimma nakshatra shape-kavana sahA chennagide...sorry kannada type maadoke aglilla..adke...OK
ReplyDeleteಚಿತ್ರಾ..
ReplyDeleteಕವನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್...
ನನ್ನ ಚೆಲುವೆ ಬಲು ವಿಚಿತ್ರ ಕಣ್ರೀ...
ಒಮ್ಮೊಮ್ಮೆ ಎಷ್ಟು ಚಂದದ ಕವನ ಬರೆದು ಕೈಗಿತ್ತರೂ ನಿರೀಕ್ಷಿತ ಪ್ರತಿಕ್ರಿಯೆ ಬರೋದಿಲ್ಲ...
ಮತ್ತೆ ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಮೆಚ್ಚುಗೆ ಸಿಗುತ್ತದೆ...
ಆಗಾಗ ಬರುತ್ತಿರಿ...
ಚೇತನಾರವರೇ...
ReplyDeleteಏನು ಮಾಡೋದು..? ಕೆಲಸದ ಒತ್ತಡಗಳ ನಡುವೆ ಒಮ್ಮೊಮ್ಮೆ ಪ್ರೀತಿ ಶೂನ್ಯವಾಗಿಬಿಡುತ್ತದೆ... ಆದರೂ ಅದಕ್ಕೆ ಎಂದೆಂದಿಗೂ ಸಾವಿಲ್ಲ...!!
ಪ್ರತಿಕ್ರಿಯೆಗೆ ಧನ್ಯವಾದಗಳು...
ಆಜಾದ್ ಸರ್...
ReplyDeleteಅಕ್ಷರಗಳು ಯಾವ ಭಾಷೆಯದಾದ್ರೆ ಏನಂತೆ..? ಭಾವನೆ ಕನ್ನಡದ್ದೆ ತಾನೇ...? ತೊಂದರೆಯಿಲ್ಲ ಬಿಡಿ..
ಕವನಗಳನ್ನ ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಆಗಾಗ ಬರುತ್ತಿರಿ...