Monday, 10 August 2009
ಅಲ್ಲಿ ಮಳೆ... ಇಲ್ಲಿ ತಂಗಾಳಿ...!!
ಚೆಲುವೇ...
ನನ್ನೆದುರು ನೀ ದಿನವೂ
ಬಾರದಿರೆ ಏನಂತೆ...??
ಕಣ್ಣಿನಲಿ ಖೈದಿಯಾದ
ನಿನ್ನದೇ ಮೊಗವಿದೆ...
ನಿನ್ನ ನೆನಪು ಜೊತೆಯಿರಲು
ಮುಷ್ಠಿಯಲೇ ಜಗವಿದೆ...
ಅದಕ್ಕೇ ಇರಬೇಕು...
ನೀನಲ್ಲಿ ದೀಪ ಬೆಳಗಿದರೆ..
ಇಲ್ಲಿ ಹೊಂಬೆಳಕು...!!
ಚೆಲುವೇ..
ನನ್ನೊಡನೆ ನೀ ಮಾತ
ಆಡದಿರೆ ಏನಂತೆ..??
ಕಿವಿಗಳಲಿ ನಿನ್ನ ದನಿ
ಹದವಾಗಿ ಕುಳಿತಿದೆ...
ಕವಿತೆಯ ಪ್ರತಿ ಸಾಲಿನಲೂ
ಪದವಾಗಿ ಅವಿತಿದೆ...
ಅದಕ್ಕೇ ಇರಬೇಕು...
ನೀನಲ್ಲಿ ಮಲ್ಲಿಗೆ ಮುಡಿದರೆ
ಇಲ್ಲೆಲ್ಲಾ ಸುಗಂಧ...
ಚೆಲುವೇ...
ನನ್ನಿಂದ ದೂರ..
ನೀನಿದ್ದರೆ ಏನಂತೆ...??
ನನ್ನೆದೆಯಲಿ ಉಸಿರಾಗಿ
ನಿನ್ನದೇ ಉಸಿರಿದೆ...
ಬಾಳ ಪ್ರತಿ ಪುಟದಲೂ
ನಿನ್ನದೇ ಹೆಸರಿದೆ...
ಅದಕ್ಕೇ ಇರಬೇಕು...
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!
Subscribe to:
Post Comments (Atom)
ತುಂಬಾ ಚಂದದ ಕಲ್ಪನೆ .. ಚೆನ್ನಾಗಿದೆ
ReplyDeleteದಿಲೀಪ್,
ReplyDeleteಕವನ ಸೊಗಸಾದ ಕಲ್ಪನೆ....ರೊಮ್ಯಾಂಟಿಕ್ ಆಗಿದೆ.
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!
ಈ ಸಾಲುಗಳು ಚೆನ್ನಾಗಿವೆ...
ವಾಹ್...
ReplyDeleteದಿಲೀಪ್....
"ಚೆಲುವೇ...
ನನ್ನಿಂದ ದೂರ..
ನೀನಿದ್ದರೆ ಏನಂತೆ...??
ನನ್ನೆದೆಯಲಿ ಉಸಿರಾಗಿ
ನಿನ್ನದೇ ಉಸಿರಿದೆ...
ಬಾಳ ಪ್ರತಿ ಪುಟದಲೂ
ನಿನ್ನದೇ ಹೆಸರಿದೆ...
ಅದಕ್ಕೇ ಇರಬೇಕು...
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!"
waah...!!
ತುಂಬಾ ಖುಷಿಯಾತು....
ಅಭಿನಂದನೆಗಳು....
ದಿಲೀಪ್,
ReplyDeleteಓಹ್ ! ಎಂಥಾ ಚೆಂದದ ಕವನ ! ಪ್ರೀತಿಯ ಮೋಹಕ ನವಿರು ಮನ ಸೆಳೆದುಬಿಟ್ಟಿತು.
ದಿಲೀಪ,
ReplyDeleteಚೆಲುವೆಯನ್ನ ಕಾವ್ಯದಲ್ಲಿ ಸೆರೆ ಹಿಡಿದು ಬಿಟ್ಟಿದ್ದೀರಿ. ನಿಮ್ಮಿಂದ ಅವಳು ದೂರ ಎಲ್ಲಿ ಹೋದಾಳು?
so nice.Chennagi barediddiri.
ReplyDelete"NINNA MANEYANGALADI MALE SURIDARE ILLI TANGAALI" :):) entha lines , maate ille:)
ReplyDelete