ಆಗಾಗ ಅವರಿವರ ಕೈನಲ್ಲಿ ಸಿಲುಕಿ ಕುರೂಪಗೊಳ್ಳೋದು ಕನ್ನಡಕ್ಕೆ ಅಂಟಿದ ಶಾಪ ಅಂತ ಅನಿಸುತ್ತದೆ... ನೋಡಿ.. ಇಲ್ಲೊಬ್ಬ ಮಹಾಶಯ "ಆಸ್ಥಾ" ಅಂತ ಇರೋದನ್ನ ಹೇಗೆ ಬರೆದಿದ್ದಾನೆ ಅಂತ... ಬಹುಷಃ ಈತ "ಹ" ಕಾರ ಪ್ರಿಯನಾಗಿರಬೇಕು...!
ಇತ್ತೀಚೆಗಷ್ಟೆ ರೂಪಶ್ರಿ ಯವರು ತಮ್ಮ ಬ್ಲಾಗ್ ನಲ್ಲಿ Designer ಕವಿತೆಗಳ ಬಗ್ಗೆ ಬರೆದಿದ್ದರು.. ಹಾಗೆ ಕೆಲವು ಕವನಗಳ sample ಸಹಾ ನೀಡಿದ್ದರು.. ಅದರಿಂದ ಪ್ರಭಾವಿತಗೊಂಡು ಆವತ್ತೇ ನಾನಿದನ್ನು ಬರೆದಿದ್ದೆ.. ಆದರೆ ಇಲ್ಲಿ ಪ್ರಕಟಿಸುವ ಸಾಹಸ ಮಾಡಿರಲಿಲ್ಲ.. ನಂತರ ಆಜಾದ್ ಸರ್ ಸಹಾ ತಮ್ಮ ಬ್ಲಾಗಿನಲ್ಲಿ ಚೆಂದದ ಮೀನಿನ ಕವಿತೆ ಪ್ರಕಟಿಸಿದರು.... ಮತ್ತಿವತ್ತು ರೂಪಶ್ರಿ ಯವರು ಇನ್ನೆರಡು ಕವಿತೆಗಳಿಗೆ ಆಕಾರ ಕೊಟ್ಟಿದ್ದಾರೆ.... ತಡೆಯಲಾಗದೆ ನಾನಿದನ್ನು ಪೋಸ್ಟ್ ಮಾಡ್ತಿದೇನೆ.... ಹೇಗನಿಸಿತು...??ಮಿನುಗು ತಾರೆ...!!
ನನ್ನ ಪ್ರೀತಿ ಚಂದಿರನಂತೆ...
ಆಗಾಗ ಕ್ಷೀಣಿಸುತ್ತದೆ...
ಮತ್ತೆ ಮತ್ತೆ ವೃದ್ದಿಸುತ್ತದೆ..
ಒಮ್ಮೆ ಅತೀ ಎನಿಸುವಷ್ಟು...
ಬೆಳದಿಂಗಳ ಪೌರ್ಣಮಿ..
ಒಮ್ಮೊಮ್ಮೆ ಏನೂ ಇಲ್ಲ...
ಬರೀ ಶೂನ್ಯ ಅಮಾವಾಸ್ಯೆ...
ಜಗದ ಕೆಟ್ಟ ಕಣ್ಣು ಬಿದ್ದರೆ
ಒಂದರೆ ಕ್ಷಣದ ಗೃಹಣ...
ಆದರೆ ಒಂದು ನೆನಪಿರಲಿ..
ಚೆಲುವೇ..,
ಋತುಗಳು ಬದಲಾಗ ಬಹುದು...
ನೀ ನನ್ನ ಮರೆಯಲೂ ಬಹುದು...
ನೋವಲಿ ನಾ ಸಾಯಲೂ ಬಹುದು...
ಆದರೆ....,
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!
ಚೆಲುವೇ...
ನನ್ನೆದುರು ನೀ ದಿನವೂ
ಬಾರದಿರೆ ಏನಂತೆ...??
ಕಣ್ಣಿನಲಿ ಖೈದಿಯಾದ
ನಿನ್ನದೇ ಮೊಗವಿದೆ...
ನಿನ್ನ ನೆನಪು ಜೊತೆಯಿರಲು
ಮುಷ್ಠಿಯಲೇ ಜಗವಿದೆ...
ಅದಕ್ಕೇ ಇರಬೇಕು...
ನೀನಲ್ಲಿ ದೀಪ ಬೆಳಗಿದರೆ..
ಇಲ್ಲಿ ಹೊಂಬೆಳಕು...!!
ಚೆಲುವೇ..
ನನ್ನೊಡನೆ ನೀ ಮಾತ
ಆಡದಿರೆ ಏನಂತೆ..??
ಕಿವಿಗಳಲಿ ನಿನ್ನ ದನಿ
ಹದವಾಗಿ ಕುಳಿತಿದೆ...
ಕವಿತೆಯ ಪ್ರತಿ ಸಾಲಿನಲೂ
ಪದವಾಗಿ ಅವಿತಿದೆ...
ಅದಕ್ಕೇ ಇರಬೇಕು...
ನೀನಲ್ಲಿ ಮಲ್ಲಿಗೆ ಮುಡಿದರೆ
ಇಲ್ಲೆಲ್ಲಾ ಸುಗಂಧ...
ಚೆಲುವೇ...
ನನ್ನಿಂದ ದೂರ..
ನೀನಿದ್ದರೆ ಏನಂತೆ...??
ನನ್ನೆದೆಯಲಿ ಉಸಿರಾಗಿ
ನಿನ್ನದೇ ಉಸಿರಿದೆ...
ಬಾಳ ಪ್ರತಿ ಪುಟದಲೂ
ನಿನ್ನದೇ ಹೆಸರಿದೆ...
ಅದಕ್ಕೇ ಇರಬೇಕು...
ನಿನ್ನ ಮನೆಯಂಗಳದಿ ಮಳೆ ಸುರಿದರೆ..
ಇಲ್ಲಿ ತಂಗಾಳಿ...!!