ಅದೋ ಅಲ್ಲಿ ಮೂಲೆಯಲ್ಲಿ
ಧೂಳು ಹತ್ತಿ ಬಿದ್ದಿದೆಯಲ್ಲ...
ನಾನು ಹುಟ್ಟಿದಾಗಿನಿಂದ
ಕಟ್ಟಿದ ದೊಡ್ಡ ದೊಡ್ಡ ಕನಸುಗಳ ಮೂಟೆ...
ಅಂದುಕೊಂಡಿದ್ದು ಇಷ್ಟೇ..
ಒಂದು ದಿನ ದೊಡ್ಡ ಖುಷಿಯ ಖರೀದಿಸಬೇಕು
ಈ ಕೂಡಿಟ್ಟ ಕನಸುಗಳ ಬಿಂದಾಸ್ ಉಡಾಯಿಸಬೇಕು..!
ಎಷ್ಟೋ ವರ್ಷಗಳಿಂದ ಕೂಡಿಟ್ಟ ಕನಸುಗಳವು
ಸಾವಿರ ಸಾವಿರ ರುಪಾಯಿಯ ನೋಟಿನಂತವು
ಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ಖರೀದಿಗೇ ಖಾಲಿಯಾದೀತೆಂಬ ಭಯ...
ಅದೆಷ್ಟೋ ಮಂದಿ ನನ್ನವರು
ನನ್ನ ಆಪ್ತರು, ನನ್ನ ಪರಿಚಯದವರು
ಕನಸುಗಳ ಸಾಲ ಕೇಳಿದರು
ಪ್ರತಿ ಸಾರಿಯೂ ನನ್ನ ಉತ್ತರ ಒಂದೇ ..
"ಇಲ್ಲ.. ದೂರವಾಗಿ ನನ್ನಿಂದ..
ದೊಡ್ಡ ಖುಷಿಯ ಖರೀದಿ ಮಾಡ ಬೇಕಿದೆ ನಾನು..
ನಿಮಗಾಗಿ ಒಂದು ಕನಸೂ ಇಲ್ಲ.. "
ಅದೆಷ್ಟೋ ಬಾರಿ..
ದಾರಿ ಬದಲಿಸಿ ತಿರುಗಿಹೆನೋ ಗೊತ್ತಿಲ್ಲ..
ಅಲ್ಲೆಲ್ಲಾದರೂ ಸಾಲ ಕೇಳುವವರು ಇರಬಹುದೆಂಬ ಶಂಕೆ..
ಅನುಕ್ಷಣ ಮನದಲ್ಲಿ ದೊಡ್ಡ ಖುಷಿಯ ಮಾಯಾ ಜಿಂಕೆ..
ಈಗ... ಇಷ್ಟು ವರ್ಷದ ನಂತರ..
ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!
ಇಂದು ಆಸೆಯಾಗುತ್ತಿದೆ..
ನನ್ನೆಲ್ಲ ದೊಡ್ಡ ಕನಸುಗಳ ಮೂಟೆಯನ್ನು ಖಾಲಿ ಮಾಡಬೇಕು..
ಎಲ್ಲ ಚಿಕ್ಕ ಚಿಕ್ಕ ಖುಶಿಗಳನ್ನು ದೊಚಬೇಕು..
ಬಾಚಿ ಎದೆಗವಚಿಕೊಳ್ಳಬೇಕು...
ಆದರೆ ಯಾರ ಬಳಿಯೂ ನನ್ನ ಸಾವಿರ ಸಾವಿರ ರುಪಾಯಿಯ
ನೋಟಿನಂತಹ ದೊಡ್ಡ ಕನಸುಗಳಿಗೆ ಚಿಲ್ಲರೆ ಇಲ್ಲವಂತೆ...!!
(ಹಿಂದೆಲ್ಲೋ ಓದಿದ ಹಿಂದಿ ಕವಿತೆಯೊಂದರಿಂದ ಪ್ರಭಾವಿತ)
ಧೂಳು ಹತ್ತಿ ಬಿದ್ದಿದೆಯಲ್ಲ...
ನಾನು ಹುಟ್ಟಿದಾಗಿನಿಂದ
ಕಟ್ಟಿದ ದೊಡ್ಡ ದೊಡ್ಡ ಕನಸುಗಳ ಮೂಟೆ...
ಅಂದುಕೊಂಡಿದ್ದು ಇಷ್ಟೇ..
ಒಂದು ದಿನ ದೊಡ್ಡ ಖುಷಿಯ ಖರೀದಿಸಬೇಕು
ಈ ಕೂಡಿಟ್ಟ ಕನಸುಗಳ ಬಿಂದಾಸ್ ಉಡಾಯಿಸಬೇಕು..!
ಎಷ್ಟೋ ವರ್ಷಗಳಿಂದ ಕೂಡಿಟ್ಟ ಕನಸುಗಳವು
ಸಾವಿರ ಸಾವಿರ ರುಪಾಯಿಯ ನೋಟಿನಂತವು
ಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ಖರೀದಿಗೇ ಖಾಲಿಯಾದೀತೆಂಬ ಭಯ...
ಅದೆಷ್ಟೋ ಮಂದಿ ನನ್ನವರು
ನನ್ನ ಆಪ್ತರು, ನನ್ನ ಪರಿಚಯದವರು
ಕನಸುಗಳ ಸಾಲ ಕೇಳಿದರು
ಪ್ರತಿ ಸಾರಿಯೂ ನನ್ನ ಉತ್ತರ ಒಂದೇ ..
"ಇಲ್ಲ.. ದೂರವಾಗಿ ನನ್ನಿಂದ..
ದೊಡ್ಡ ಖುಷಿಯ ಖರೀದಿ ಮಾಡ ಬೇಕಿದೆ ನಾನು..
ನಿಮಗಾಗಿ ಒಂದು ಕನಸೂ ಇಲ್ಲ.. "
ಅದೆಷ್ಟೋ ಬಾರಿ..
ದಾರಿ ಬದಲಿಸಿ ತಿರುಗಿಹೆನೋ ಗೊತ್ತಿಲ್ಲ..
ಅಲ್ಲೆಲ್ಲಾದರೂ ಸಾಲ ಕೇಳುವವರು ಇರಬಹುದೆಂಬ ಶಂಕೆ..
ಅನುಕ್ಷಣ ಮನದಲ್ಲಿ ದೊಡ್ಡ ಖುಷಿಯ ಮಾಯಾ ಜಿಂಕೆ..
ಈಗ... ಇಷ್ಟು ವರ್ಷದ ನಂತರ..
ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!
ಇಂದು ಆಸೆಯಾಗುತ್ತಿದೆ..
ನನ್ನೆಲ್ಲ ದೊಡ್ಡ ಕನಸುಗಳ ಮೂಟೆಯನ್ನು ಖಾಲಿ ಮಾಡಬೇಕು..
ಎಲ್ಲ ಚಿಕ್ಕ ಚಿಕ್ಕ ಖುಶಿಗಳನ್ನು ದೊಚಬೇಕು..
ಬಾಚಿ ಎದೆಗವಚಿಕೊಳ್ಳಬೇಕು...
ಆದರೆ ಯಾರ ಬಳಿಯೂ ನನ್ನ ಸಾವಿರ ಸಾವಿರ ರುಪಾಯಿಯ
ನೋಟಿನಂತಹ ದೊಡ್ಡ ಕನಸುಗಳಿಗೆ ಚಿಲ್ಲರೆ ಇಲ್ಲವಂತೆ...!!
(ಹಿಂದೆಲ್ಲೋ ಓದಿದ ಹಿಂದಿ ಕವಿತೆಯೊಂದರಿಂದ ಪ್ರಭಾವಿತ)
ವಾಹ್! ತು೦ಬಾ ಚೆನ್ನಾಗಿ ಬರೆದಿದ್ದೀರಿ.
ReplyDeleteಚಿಲ್ಲರೆಯಾದರೆ ಚಿಕ್ಕ ಚಿಕ್ಕ ಖುಷಿಯ
ReplyDeleteಖರೀದಿಗೇ ಖಾಲಿಯಾದೀತೆಂಬ ಭಯ...
............e saalu tumbaa istavaayitu
chennagide........
ReplyDeleteಧನ್ಯವಾದಗಳು ಮನಮುಕ್ತಾ ಮೇಡಂ.. :)
ReplyDeleteಸಾಲುಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಡಾ| ಚಂದ್ರಿಕಾ ಮೇಡಂ.. :)
ReplyDeleteಧನ್ಯವಾದಗಳು ಅನಂತರಾಜ್ ಸರ್.. :)
ReplyDeleteWoW..!!! super...
ReplyDeleteಧನ್ಯವಾದಗಳು ಮನಸು ಮೇಡಂ.. :)
ReplyDeleteದೀಲಿಪಣ್ಣ,
ReplyDeleteಮಸ್ತ್ :) :)
ಹಾಯ್ ಸರ್
ReplyDeleteನಿಮ್ಮ ಕವಿತೆಯ ಮೊದಲ ಮತ್ತು ಎರಡನೇಯ ಪ್ಯಾರಾಗಳು
ತುಂಭಾ ಚೆನ್ನಾಗಿವೆ .ನಂಗೆ ತುಂಭಾ ಇಷ್ಟಾ ಆದವು
ಬರೆದು ಕೊಟ್ಟಿದ್ದಕ್ಕೆ ಧನ್ಯವಾದಗಳು
ದಿಲೀಪ್,
ReplyDeleteವಾಹ್ ! ತುಂಬಾ ಚಂದದ ಸಾಲುಗಳು . ಅರ್ಥಬದ್ಧ ! ದೊಡ್ಡ ಖುಷಿಯ ಭ್ರಮೆಯಲ್ಲಿ ಚಿಕ್ಕ ಪುಟ್ಟ ಖುಶಿಗಳತ್ತ ಕಣ್ಣೆತ್ತಿಯೂ ನೋಡಬಯಸುವುದಿಲ್ಲ ನಾವು. ಹನಿ ಹನಿಗೂಡಿದರೆ ಮಾತ್ರ ಹಳ್ಳ ಎಂಬ ಸಾಲುಗಳೇ ಮರೆತು ಹೋಗಿವೆ.
"ಪರಿಸ್ಥಿತಿಯ ಕೈ ಗೊಂಬೆಯಾಗಿ
ಕುಣಿದು ದಣಿದ ನಂತರ ಅರಿವಾಗಿದೆ...
ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!! "
ಕವನ ಖುಷಿಕೊಟ್ಟಿತು !
ದಿಲೀಪ,
ReplyDeleteಸೊಗಸಾಗಿದೆ ಕವನ. ಚಿಕ್ಕ ಚಿಕ್ಕ ಕನಸುಗಳನ್ನು ಸಾರ್ಥಕಪಡಿಸಿಕೊಳ್ಳುತ್ತ ಹೋಗುವದೇ
ವಾಸ್ತವಮಾರ್ಗ ಎನ್ನುವ ತತ್ವವನ್ನು ಕುಶಲತೆಯಿಂದ ಕವನಿಸಿದ್ದೀರಿ
ವಾಹ್! ಸುಂದರವಾದ ಅರ್ಥ ತುಂಬಿದ ಕವನ! ದೊಡ್ಡ ದೊಡ್ಡ ಖುಷಿಗಾಗಿ ನಾವು ಎಷ್ಟೋ ಬಾರಿ ಸಣ್ಣ ಸಣ್ಣ ಖುಷಿಗಳನ್ನು ಬಲಿ ಕೊಟ್ಟಿರುತ್ತೇವೆ. ನಿಮಗೆ ಎಲ್ಲಾದರೂ ಚಿಲ್ಲರೆ ಸಿಕ್ಕರೆ ಹೇಳಿ.. ನನ್ನ ಬಳಿಯೂ ಬಹಳಷ್ಟು ದೊಡ್ಡ ದೊಡ್ಡ ಕನಸುಗಳಿವೆ.. :)
ReplyDeleteUltimate Dileep.. nanu ode irle.. hmm est nija ...
ReplyDeleteSuper... Very very nice........
ReplyDeletesuper.....:)
ReplyDeleteWell Said dileep...
ReplyDeleteNice one :)
WOwwww.....tumbaa chennagide....Very Nice....
ReplyDelete`ಚಿಕ್ಕ ಚಿಕ್ಕ ಖುಷಿಯಿಂದಲೇ ದೊಡ್ಡ ಖುಷಿ ಸಿಗುವುದಂತೆ..!!' ಬಹಳ ಮೌಲ್ಯಯುತವಾದ ಸತ್ಯ! ಕವನ ಚೆನ್ನಾಗಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.
ReplyDeleteಚೆನ್ನಾಗಿದೆ ಕವನ
ReplyDelete