Wednesday 23 June 2010

ವಿರಹ



ಮತ್ತೆ ಸುರಿಯಿತು ನಿನ್ನೆ
ಬಾನಿನೂರಿನ ಸೋನೆ..
ಕುಳಿತು ನೋಡಲು ಜೊತೆಗೆ ನೀನಿಲ್ಲ..
ಹೊಸತು ಗೀತೆಯ ಬರೆದು
ಹೃದಯ ವೀಣೆಯ ಮಿಡಿದು
ಬೆರೆತು ಹಾಡಲು ಗೆಳತಿ ನೀನಿಲ್ಲ..

ಕೈಬಳೆಯ ನಾದ
ಹುಸಿ ಮುನಿಸಿನಾ ವಾದ
ಹರುಷದಾ ಹೊಳೆಯಾಗಿ ನೀನಿಲ್ಲ...
ಸುಡುತಿಹುದು ವಿರಹ
ಸುಡುಗಾಡಿನಾ ತರಹ
ಜೀವದಾ ಸೆಲೆಯಾಗಿ ನೀನಿಲ್ಲ...

ಮನೆ ಮನವೆಲ್ಲ ಖಾಲಿ ಖಾಲಿ...
ಅರಸಿ ಸೋತಿಹೆ ಅರಸಿ..,
ನೀನಿಲ್ಲ.., ಇಲ್ಲೀಗ ನಾನೂ ಇಲ್ಲ...!

52 comments:

  1. ದಿಲಿಪ್....

    ಹೊತ್ತೊತ್ತು..
    ಬರುತಿಹದು....
    ಬರೀ...
    ಬರಿದಾಗದ..
    ನೆನಪುಗಳು..
    ಕನಸುಗಳು..
    ನೀ..
    ಇರದ..

    ಹೊತ್ತು..

    ಚಂದದ ಕವನಕ್ಕೆ ಅಭಿನಂದನೆಗಳು...

    ReplyDelete
  2. This comment has been removed by the author.

    ReplyDelete
  3. 'ನೀನಿಲ್ಲದ ನಾನು ,ಕರೆಂಟ್ ಇಲ್ಲದ ಫ್ಯಾನು!'ವಿರಹ ಗೀತೆ ಚೆನ್ನಾಗಿದೆ.

    ReplyDelete
  4. cool.... tumbaa chennaagide...... eegale yaake viraha anta artha aaglilla.....

    nanna blog kade banni.....

    ReplyDelete
  5. Sone andare enu? Oorinalli maavina kaayiya thottu muridaaga ondu tharahada strong sticky liquid ooze aagthade alwa, adannu naavu sone antha heluththeve..... Illi sone andre enu??? Poem's good with all the feel in it....

    Oh! yes, BTW..... Since many years I wanted to find out the Kannada word for the word Miss..... If I say I miss u, then what would it be in Kannada.... I have tried finding out, but in vain..... Actually that was my dad's query.... So if u could help I would be grateful..... Thanks :-)

    Ash...
    (http://asha-oceanichope.blogspot.com/)

    ReplyDelete
  6. ಮಸ್ತ್ ಬರೆದ್ಯಲೊಹುಡುಗ! ಆದ್ರೆ ವಿರಹ ಯಾಕೆ??????

    ReplyDelete
  7. ಹಾಯ್
    ಯಾಕೋ ಗೋತ್ತಿಲ್ಲ
    ನಿಮ್ಮ ಕವಿತೆ ತುಂಬಾ ಹಿಡಿಸಿತು

    ReplyDelete
  8. very very good. finishing line is superr. thank u.

    ReplyDelete
  9. ಓಹೊಹೊ..!. This is super Dilip.. ತುಂಬ ಇಷ್ಟವಾಯ್ತು.

    ReplyDelete
  10. ಹೊತ್ತು ಹೊತ್ತಿಗೆ
    ಹೊತ್ತೊತ್ತು ಬಂದಿದ್ದು
    ನಿನ್ನದೇ ನೆನಪಾ.?? ನನಗೆ ನೆನಪಿಲ್ಲ...
    ಕಾಣದೆ ನಿನ್ನ
    ಕಳೆದು ಹೋಗಿಹೆನು
    ಹಗಲೋ..ಇರುಳೋ...?? ನನಗೆ ನೆನಪಿಲ್ಲ...

    ಚೆಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು..

    ReplyDelete
  11. DR D.T.K ಮೂರ್ತಿ ಯವರೇ...
    ಹ ಹ ಹ್ಹ..

    "ನೀನಿಲ್ಲದ ನಾನು.. ಬ್ರೇಕು ಫೇಲಾದ ವ್ಯಾನು..."

    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  12. ದಿನಕರ್ ಸರ್
    ಮೇಡಂ ಊರಿಗೆ ಹೋಗಿದ್ದಾರೆ.. ಅದಕ್ಕೆ ಹೀಗೆ...
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು..
    ನಿಮ್ಮ ಬ್ಲಾಗ್ ಕಡೆ ಖಂಡಿತಾ ಬರುತ್ತೇನೆ.. ಆಗಾಗ ಬರುತ್ತಿರಿ...

    ReplyDelete
  13. ಆಶಾಲತಾ ರವರೆ..

    ಸೋನೆ ಅಂದ್ರೆ ನೀವು ಅಂದುಕೊಂಡಂತೆ ಮಾವಿನ ತೊಟ್ಟಿನಿಂದ ಒಸರುವ ದೃವವಲ್ಲ... ಅದಕ್ಕೆ ಸೊನೆ ಅಂತ ಕರೀತಾರೆ.. ಇದು ಸೋನೆ.. ಸೋನೆ ಅಂದ್ರೆ ಮಳೆ.. ತುಂತುರು ಮಳೆಗೆ ಸೋನೆ ಮಳೆ ಅಂತ ಕರೀತಾರೆ ಕನ್ನಡದಲ್ಲಿ...

    ಮತ್ತಿನ್ನು ನಿಮ್ಮ ಪ್ರಶ್ನೆ.. ಕನ್ನಡದಲ್ಲಿ I Miss You ಅಂತ ಹೇಳೋಕೆ ಏನಂತಾರೆ ಅಂತ.. ಅದನ್ನ ಯಥಾವತ್ ಕನ್ನಡದಲ್ಲಿ ತರ್ಜುಮೆ ಮಾಡಲು ಆಗದೆ ಇದ್ದರೂ ಸಹ "ನಿನ್ನ ನೆನಪು ಕಾಡುತ್ತಿದೆ" ಅಂತ ಹೇಳಬಹುದೇನೋ...

    (ಕನ್ನಡ ಪಾಠ ಮಾಡಿದ್ದಕ್ಕೆ ನನಗೊಂದು ಒಳ್ಳೆ Recipe ಕೊಡಬೇಕು ಮತ್ತೆ...!) :)


    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ.. :)

    ReplyDelete
  14. ಸುಬ್ರಹ್ಮಣ್ಯ
    ತುಂಬಾ ತುಂಬಾ ಧನ್ಯವಾದಗಳು..

    ReplyDelete
  15. ದಿಲೀಪ್
    ತುಂಬಾ ಸುಂದರ ವಿರಹ ಗೀತೆ
    ಮೊದಲ ಪ್ಯಾರ ಸೊಗಸಾಗಿದೆ

    ReplyDelete
  16. JUST wonderful...short yet sooooo sweet Dilip

    ReplyDelete
  17. Hoy Dileep..

    very very nice lines.. tumbane ista atu

    neenillada nanu halillada canu
    neenillada nanu connection illada phonu
    neenillada nanu adke sunna illada panu
    neenilada nanu maragale illada kaanu ( maragale illada mele kaanu heladille adru :):):) )

    Pravi

    ReplyDelete
  18. ನೆನಪುಗಳ ಮಾತು ಮಧುರ.....
    ಕಳೆದ ಆ ಕ್ಷಣಗಳು ಅತಿ ಮಧುರ.........
    ಚೆಂದದ ಕವನ.

    ReplyDelete
  19. ಬಹಳ ಚೆನ್ನಾಗಿದೆ ವಿರಹಹದ ಕವನ!!!!!!!

    ReplyDelete
  20. ಮತ್ತೆ ಸುರಿಯಿತು ನಿನ್ನೆ
    ಬಾನಿನೂರಿನ ಸೋನೆ.. ತುಂಬಾ ತುಂಬಾ ಚೆನ್ನಾಗಿದೆ ಸಾಲುಗಳು..
    ನಿಮ್ಮವ,
    ರಾಘು.

    ReplyDelete
  21. ದಿಲೀಪ್,

    ತುಂಬಾ ಚೆನ್ನಾಗಿದೆ. ನಿಮ್ಮ ವಿರಹದ ಕವನ.

    ReplyDelete
  22. ಸುಬ್ರಹ್ಮಣ್ಯ, ಸಾಗರಿ ಮತ್ತು ಪೂರ್ಣಿಮಾ ಮೇಡಂ, ಸೀತಾರಾಂ ಸರ್..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  23. ಸುಮನಕ್ಕ
    ಹೆಂಡ್ತಿ ಊರಿಗೆ ಹೋಗಿತ್ತು ನನ್ನ ಬಿಟ್ಟಿಕ್ಕೆ.. ಅದ್ಕೆ ಹೀಂಗೆ... ಕವನ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್..:)

    ReplyDelete
  24. ಕನಸು
    ಕವನ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. :)

    ReplyDelete
  25. Dilip ... enappa .. viraha geete ,,,
    maduve munche bardaddo ... ha ha ha ..
    sumne tamashe madade ...

    kavite chennagiddu ....

    ReplyDelete
  26. ಸಿಕ್ಕಾಪಟ್ಟೆ ಸೂಪರ್.. ಸೂಪರ್ ಡೂಪರ್ ದಿಲೀಪಣ್ಣ !!! :D
    ಬಹುಷ ಅತ್ಗೆ ಊರಿಗೆ ಹೋಗಿತ್ತು ಅನ್ನಸ್ತು :P

    ReplyDelete
  27. ಚೆನ್ನಾಗಿದೆ.

    ReplyDelete
  28. ಇಷ್ಟವಾಯ್ತು ಕವನ..ಜೀವದಸೆಲೆ ನೀನಿಲ್ಲ..
    ಮುಟ್ಟಿತು ಮನ..

    ಅನ೦ತ್

    ReplyDelete
  29. ಧನ್ಯವಾದಗಳು ಹರೀಶ್..

    ReplyDelete
  30. ಧನ್ಯವಾದಗಳು Snow White

    ReplyDelete
  31. ತುಂಬಾ ತುಂಬಾ ಥ್ಯಾಂಕ್ಸ್ NRK

    ReplyDelete
  32. ಸುಬ್ರಹ್ಮಣ್ಯ..
    ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.

    ReplyDelete
  33. ಗುರುಮೂರ್ತಿ ಸರ್..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  34. Venu Vinod...
    Thanks a lot.. :)

    ReplyDelete
  35. ಪ್ರವೀಣ್..
    ಹಹಹ.. ಸಕತ್ ಇದ್ದೋ... thanks a lot...

    ReplyDelete
  36. ಪ್ರವೀಣ್ ಗೌಡರೆ..
    ಬ್ಲಾಗ್ ಗೆ ಸ್ವಾಗತ..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

    ReplyDelete
  37. ಧನ್ಯವಾದಗಳು Creativity

    ReplyDelete
  38. ಧನ್ಯವಾದಗಳು ರಘು..

    ReplyDelete
  39. ಶಿವೂ ಸರ್..
    ವಿರಹದ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..

    ReplyDelete
  40. ಶ್ರೀಧರ್...
    ಹಹಹ.. ಮದುವೆ ಮುಂಚೆ ಬರ್ದಿದ್ದಲ್ಲ... ಹೆಂಡ್ತಿ ಒಂದೆರಡ್ ದಿನ ಊರಿಗ್ ಹೋದಾಗ ಬರ್ದಿದ್ದು... ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  41. ರಂಜಿತ..
    ಹೌದು.. ಊರಿಗ್ ಹೋದಾಗಲೇ ಬರ್ದಿದ್ದು.. ಕವನ ಮೆಚ್ಚಿ ಕಾಮೆಂಟ್ ಪೋಸ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್..

    ReplyDelete
  42. ಚೈತ್ರಿಕ
    ಧನ್ಯವಾದಗಳು...

    ReplyDelete
  43. ಅನಂತರಾಜ್ ಸರ್..
    ಬ್ಲಾಗ್ ಗೆ ಸ್ವಾಗತ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  44. ಇಷ್ಟೊಂದು ಅಭಿಪ್ರಾಯಗಳಲ್ಲಿ ನನ್ನದೆಲ್ಲಿ ಕಳೆದು ಹೋಗುತ್ತೋ ಅನ್ನೋ ಹಿಂಜರಿಕೆ.. ಆದರೂ ಅದ್ಭುತ ಕವನ.. ವಿರಹದ ಹಲವು ಛಾಯೆಗಳನ್ನು ತೋರಿದ್ದೀರಿ.
    ಮೆಚ್ಚುವ ಅರಸಿ ಇಲ್ಲದಾಗ ಸೋನೆ, ಹಾಡು, ಕವನ ಭಾವನೆ ಕಡೆಗೆ ನಮ್ಮ ಅಸ್ತಿತ್ವವು ನಿಷ್ಪ್ರಯೋಜಕವೆಂಬ ತುಡಿತ.. ಮನಸ್ಸಿಗೆ ಮುಟ್ಟಿತು.. ಹೀಗೆ ಬರೆಯುತ್ತಿರಿ.. ನಿಮ್ಮ ಕಾರ್ಟೂನ್ಗಳು ಬಹಳ ರಸವತ್ತಾಗಿದೆ. ಹೊಸ ಪರಿಚಯಕ್ಕೆ ಧನ್ಯವಾದ.. ಸಾಗಲಿ ಹೀಗೆ ಬಾಂಧವ್ಯ ನಿರಂತರ..

    ReplyDelete
  45. dileep ravare,yaava jenugoodininda hekkidiri nimma hanigalanna,heege innastu hanigalanna nimma blogge tumbuttiri........naanu eegaste blog lokakke haagu sahityakstetrakke ambegaliduttiruva kuusu.nanna blog link kavana-kalarava.blogspot.com

    ReplyDelete
  46. ತುಂಬಾ ಹಿಡಿಸಿತು

    ReplyDelete