ಮತ್ತೆ ಸುರಿಯಿತು ನಿನ್ನೆ
ಬಾನಿನೂರಿನ ಸೋನೆ..
ಕುಳಿತು ನೋಡಲು ಜೊತೆಗೆ ನೀನಿಲ್ಲ..
ಹೊಸತು ಗೀತೆಯ ಬರೆದು
ಹೃದಯ ವೀಣೆಯ ಮಿಡಿದು
ಬೆರೆತು ಹಾಡಲು ಗೆಳತಿ ನೀನಿಲ್ಲ..
ಕೈಬಳೆಯ ನಾದ
ಹುಸಿ ಮುನಿಸಿನಾ ವಾದ
ಹರುಷದಾ ಹೊಳೆಯಾಗಿ ನೀನಿಲ್ಲ...
ಸುಡುತಿಹುದು ವಿರಹ
ಸುಡುಗಾಡಿನಾ ತರಹ
ಜೀವದಾ ಸೆಲೆಯಾಗಿ ನೀನಿಲ್ಲ...
ಮನೆ ಮನವೆಲ್ಲ ಖಾಲಿ ಖಾಲಿ...
ಅರಸಿ ಸೋತಿಹೆ ಅರಸಿ..,
ನೀನಿಲ್ಲ.., ಇಲ್ಲೀಗ ನಾನೂ ಇಲ್ಲ...!
ದಿಲಿಪ್....
ReplyDeleteಹೊತ್ತೊತ್ತು..
ಬರುತಿಹದು....
ಬರೀ...
ಬರಿದಾಗದ..
ನೆನಪುಗಳು..
ಕನಸುಗಳು..
ನೀ..
ಇರದ..
ಈ
ಹೊತ್ತು..
ಚಂದದ ಕವನಕ್ಕೆ ಅಭಿನಂದನೆಗಳು...
This comment has been removed by the author.
ReplyDelete'ನೀನಿಲ್ಲದ ನಾನು ,ಕರೆಂಟ್ ಇಲ್ಲದ ಫ್ಯಾನು!'ವಿರಹ ಗೀತೆ ಚೆನ್ನಾಗಿದೆ.
ReplyDeletecool.... tumbaa chennaagide...... eegale yaake viraha anta artha aaglilla.....
ReplyDeletenanna blog kade banni.....
Sone andare enu? Oorinalli maavina kaayiya thottu muridaaga ondu tharahada strong sticky liquid ooze aagthade alwa, adannu naavu sone antha heluththeve..... Illi sone andre enu??? Poem's good with all the feel in it....
ReplyDeleteOh! yes, BTW..... Since many years I wanted to find out the Kannada word for the word Miss..... If I say I miss u, then what would it be in Kannada.... I have tried finding out, but in vain..... Actually that was my dad's query.... So if u could help I would be grateful..... Thanks :-)
Ash...
(http://asha-oceanichope.blogspot.com/)
dileep avare tumba chennagide...... :)
ReplyDeleteNice :-)
ReplyDeletevery nice :-)
ReplyDeleteExcellent poem/!! keep it up!!
ReplyDeleteಮಸ್ತ್ ಬರೆದ್ಯಲೊಹುಡುಗ! ಆದ್ರೆ ವಿರಹ ಯಾಕೆ??????
ReplyDeleteಹಾಯ್
ReplyDeleteಯಾಕೋ ಗೋತ್ತಿಲ್ಲ
ನಿಮ್ಮ ಕವಿತೆ ತುಂಬಾ ಹಿಡಿಸಿತು
nice
ReplyDeletekavana chennagide sir:)
ReplyDeletevery very good. finishing line is superr. thank u.
ReplyDeleteಓಹೊಹೊ..!. This is super Dilip.. ತುಂಬ ಇಷ್ಟವಾಯ್ತು.
ReplyDeleteಹೊತ್ತು ಹೊತ್ತಿಗೆ
ReplyDeleteಹೊತ್ತೊತ್ತು ಬಂದಿದ್ದು
ನಿನ್ನದೇ ನೆನಪಾ.?? ನನಗೆ ನೆನಪಿಲ್ಲ...
ಕಾಣದೆ ನಿನ್ನ
ಕಳೆದು ಹೋಗಿಹೆನು
ಹಗಲೋ..ಇರುಳೋ...?? ನನಗೆ ನೆನಪಿಲ್ಲ...
ಚೆಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು..
DR D.T.K ಮೂರ್ತಿ ಯವರೇ...
ReplyDeleteಹ ಹ ಹ್ಹ..
"ನೀನಿಲ್ಲದ ನಾನು.. ಬ್ರೇಕು ಫೇಲಾದ ವ್ಯಾನು..."
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ದಿನಕರ್ ಸರ್
ReplyDeleteಮೇಡಂ ಊರಿಗೆ ಹೋಗಿದ್ದಾರೆ.. ಅದಕ್ಕೆ ಹೀಗೆ...
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು..
ನಿಮ್ಮ ಬ್ಲಾಗ್ ಕಡೆ ಖಂಡಿತಾ ಬರುತ್ತೇನೆ.. ಆಗಾಗ ಬರುತ್ತಿರಿ...
ಆಶಾಲತಾ ರವರೆ..
ReplyDeleteಸೋನೆ ಅಂದ್ರೆ ನೀವು ಅಂದುಕೊಂಡಂತೆ ಮಾವಿನ ತೊಟ್ಟಿನಿಂದ ಒಸರುವ ದೃವವಲ್ಲ... ಅದಕ್ಕೆ ಸೊನೆ ಅಂತ ಕರೀತಾರೆ.. ಇದು ಸೋನೆ.. ಸೋನೆ ಅಂದ್ರೆ ಮಳೆ.. ತುಂತುರು ಮಳೆಗೆ ಸೋನೆ ಮಳೆ ಅಂತ ಕರೀತಾರೆ ಕನ್ನಡದಲ್ಲಿ...
ಮತ್ತಿನ್ನು ನಿಮ್ಮ ಪ್ರಶ್ನೆ.. ಕನ್ನಡದಲ್ಲಿ I Miss You ಅಂತ ಹೇಳೋಕೆ ಏನಂತಾರೆ ಅಂತ.. ಅದನ್ನ ಯಥಾವತ್ ಕನ್ನಡದಲ್ಲಿ ತರ್ಜುಮೆ ಮಾಡಲು ಆಗದೆ ಇದ್ದರೂ ಸಹ "ನಿನ್ನ ನೆನಪು ಕಾಡುತ್ತಿದೆ" ಅಂತ ಹೇಳಬಹುದೇನೋ...
(ಕನ್ನಡ ಪಾಠ ಮಾಡಿದ್ದಕ್ಕೆ ನನಗೊಂದು ಒಳ್ಳೆ Recipe ಕೊಡಬೇಕು ಮತ್ತೆ...!) :)
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ.. :)
ಸುಬ್ರಹ್ಮಣ್ಯ
ReplyDeleteತುಂಬಾ ತುಂಬಾ ಧನ್ಯವಾದಗಳು..
ದಿಲೀಪ್
ReplyDeleteತುಂಬಾ ಸುಂದರ ವಿರಹ ಗೀತೆ
ಮೊದಲ ಪ್ಯಾರ ಸೊಗಸಾಗಿದೆ
JUST wonderful...short yet sooooo sweet Dilip
ReplyDeleteHoy Dileep..
ReplyDeletevery very nice lines.. tumbane ista atu
neenillada nanu halillada canu
neenillada nanu connection illada phonu
neenillada nanu adke sunna illada panu
neenilada nanu maragale illada kaanu ( maragale illada mele kaanu heladille adru :):):) )
Pravi
ನೆನಪುಗಳ ಮಾತು ಮಧುರ.....
ReplyDeleteಕಳೆದ ಆ ಕ್ಷಣಗಳು ಅತಿ ಮಧುರ.........
ಚೆಂದದ ಕವನ.
ಬಹಳ ಚೆನ್ನಾಗಿದೆ ವಿರಹಹದ ಕವನ!!!!!!!
ReplyDeleteಮತ್ತೆ ಸುರಿಯಿತು ನಿನ್ನೆ
ReplyDeleteಬಾನಿನೂರಿನ ಸೋನೆ.. ತುಂಬಾ ತುಂಬಾ ಚೆನ್ನಾಗಿದೆ ಸಾಲುಗಳು..
ನಿಮ್ಮವ,
ರಾಘು.
ದಿಲೀಪ್,
ReplyDeleteತುಂಬಾ ಚೆನ್ನಾಗಿದೆ. ನಿಮ್ಮ ವಿರಹದ ಕವನ.
ಸುಬ್ರಹ್ಮಣ್ಯ, ಸಾಗರಿ ಮತ್ತು ಪೂರ್ಣಿಮಾ ಮೇಡಂ, ಸೀತಾರಾಂ ಸರ್..
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..
ಸುಮನಕ್ಕ
ReplyDeleteಹೆಂಡ್ತಿ ಊರಿಗೆ ಹೋಗಿತ್ತು ನನ್ನ ಬಿಟ್ಟಿಕ್ಕೆ.. ಅದ್ಕೆ ಹೀಂಗೆ... ಕವನ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್..:)
ಕನಸು
ReplyDeleteಕವನ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. :)
Dilip ... enappa .. viraha geete ,,,
ReplyDeletemaduve munche bardaddo ... ha ha ha ..
sumne tamashe madade ...
kavite chennagiddu ....
ಸಿಕ್ಕಾಪಟ್ಟೆ ಸೂಪರ್.. ಸೂಪರ್ ಡೂಪರ್ ದಿಲೀಪಣ್ಣ !!! :D
ReplyDeleteಬಹುಷ ಅತ್ಗೆ ಊರಿಗೆ ಹೋಗಿತ್ತು ಅನ್ನಸ್ತು :P
ಚೆನ್ನಾಗಿದೆ.
ReplyDeleteಇಷ್ಟವಾಯ್ತು ಕವನ..ಜೀವದಸೆಲೆ ನೀನಿಲ್ಲ..
ReplyDeleteಮುಟ್ಟಿತು ಮನ..
ಅನ೦ತ್
ಧನ್ಯವಾದಗಳು ಹರೀಶ್..
ReplyDeleteಧನ್ಯವಾದಗಳು Snow White
ReplyDeleteತುಂಬಾ ತುಂಬಾ ಥ್ಯಾಂಕ್ಸ್ NRK
ReplyDeleteಸುಬ್ರಹ್ಮಣ್ಯ..
ReplyDeleteಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಗುರುಮೂರ್ತಿ ಸರ್..
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
Venu Vinod...
ReplyDeleteThanks a lot.. :)
ಪ್ರವೀಣ್..
ReplyDeleteಹಹಹ.. ಸಕತ್ ಇದ್ದೋ... thanks a lot...
ಪ್ರವೀಣ್ ಗೌಡರೆ..
ReplyDeleteಬ್ಲಾಗ್ ಗೆ ಸ್ವಾಗತ..
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಧನ್ಯವಾದಗಳು Creativity
ReplyDeleteಧನ್ಯವಾದಗಳು ರಘು..
ReplyDeleteಶಿವೂ ಸರ್..
ReplyDeleteವಿರಹದ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
ಶ್ರೀಧರ್...
ReplyDeleteಹಹಹ.. ಮದುವೆ ಮುಂಚೆ ಬರ್ದಿದ್ದಲ್ಲ... ಹೆಂಡ್ತಿ ಒಂದೆರಡ್ ದಿನ ಊರಿಗ್ ಹೋದಾಗ ಬರ್ದಿದ್ದು... ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..
ರಂಜಿತ..
ReplyDeleteಹೌದು.. ಊರಿಗ್ ಹೋದಾಗಲೇ ಬರ್ದಿದ್ದು.. ಕವನ ಮೆಚ್ಚಿ ಕಾಮೆಂಟ್ ಪೋಸ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್..
ಚೈತ್ರಿಕ
ReplyDeleteಧನ್ಯವಾದಗಳು...
ಅನಂತರಾಜ್ ಸರ್..
ReplyDeleteಬ್ಲಾಗ್ ಗೆ ಸ್ವಾಗತ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಇಷ್ಟೊಂದು ಅಭಿಪ್ರಾಯಗಳಲ್ಲಿ ನನ್ನದೆಲ್ಲಿ ಕಳೆದು ಹೋಗುತ್ತೋ ಅನ್ನೋ ಹಿಂಜರಿಕೆ.. ಆದರೂ ಅದ್ಭುತ ಕವನ.. ವಿರಹದ ಹಲವು ಛಾಯೆಗಳನ್ನು ತೋರಿದ್ದೀರಿ.
ReplyDeleteಮೆಚ್ಚುವ ಅರಸಿ ಇಲ್ಲದಾಗ ಸೋನೆ, ಹಾಡು, ಕವನ ಭಾವನೆ ಕಡೆಗೆ ನಮ್ಮ ಅಸ್ತಿತ್ವವು ನಿಷ್ಪ್ರಯೋಜಕವೆಂಬ ತುಡಿತ.. ಮನಸ್ಸಿಗೆ ಮುಟ್ಟಿತು.. ಹೀಗೆ ಬರೆಯುತ್ತಿರಿ.. ನಿಮ್ಮ ಕಾರ್ಟೂನ್ಗಳು ಬಹಳ ರಸವತ್ತಾಗಿದೆ. ಹೊಸ ಪರಿಚಯಕ್ಕೆ ಧನ್ಯವಾದ.. ಸಾಗಲಿ ಹೀಗೆ ಬಾಂಧವ್ಯ ನಿರಂತರ..
dileep ravare,yaava jenugoodininda hekkidiri nimma hanigalanna,heege innastu hanigalanna nimma blogge tumbuttiri........naanu eegaste blog lokakke haagu sahityakstetrakke ambegaliduttiruva kuusu.nanna blog link kavana-kalarava.blogspot.com
ReplyDeleteತುಂಬಾ ಹಿಡಿಸಿತು
ReplyDelete