ಹುಣ್ಣಿಮೆಯ ರಾತ್ರಿಯಲಿ
ಚೊಂಬುಗೆನ್ನೆಯ ತುಂಬು ಚಂದ್ರನ
ಒಲಿಸಲು ತಾರೆಗಳು ಜಮಾಯಿಸಿದರೆ
ನನ್ನ ನಿದಿರೆಗೆ ಗರಿ ಮೂಡುತ್ತದೆ...
ಕಣ್ಣ ಕೋಟೆಯ ದಾಟಿ
ಗುರಿಯ ಹಂಗನು ಮೀರಿ
ದಣಿಯದೆ ಮನ ತಣಿಯದೆ
ದೂರ ದೂರಕೆ ಹಾರುತ್ತದೆ
ಒಳ್ಳೆಯದೇ ಆಯ್ತು..
ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..
ನಿನ್ನ ಬಾಹು ಬಂಧನದಲ್ಲೀಗ
ನನ್ನ ಕಣ್ಣುಗಳಿಗೆ ಸುಖನಿದ್ರೆ..
ದಿಲೀಪ,
ReplyDeleteತುಂಬ romantic ಕವನ. ಕಾಲ್ಪನಿಕವೊ ಅಥವಾ.....?
ನಮಸ್ತೆ ಸುನಾಥ್ ಸರ್...
ReplyDeleteವಾಸ್ತವಕ್ಕೆ ಸಣ್ಣದೊಂದು ಕಾಲ್ಪನಿಕತೆಯ ಸ್ಪರ್ಶ ಕೊಡೊ ಪ್ರಯತ್ನ ಅಷ್ಟೇ.. ನನ್ನ ಪ್ರಯತ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಆಹಾ , ಓಹೋ . . . ಸೂಪರ್
ReplyDeletemost of the Time, ಗುರಿಯನ್ನ ತಲುಪುವುದು ಅಂತಿಮ ನಿರ್ಧಾರವಾಗುತ್ತದೆ.
ನೀವು "ಗುರಿಯ ಹಂಗನು ಮೀರಿ " ಅಂತ ಹೇಳಿದ್ರಲ್ಲ, Beautiful . . .
ದಿಲೀಪ್ ಕವಿತೆ ರೋಮಾಂಟಿಕಾಗಿ ಚೆನ್ನಾಗಿದೆ
ReplyDeleteದಿಲೀಪ್;ತುಂಬಾ ಇಷ್ಟ ಆಯಿತು .ಕವಿತೆ ಭಾವಪೂರ್ಣವಾಗಿದೆ.
ReplyDeletewow..nice poem...:)
ReplyDeletesuper dileep. sada sukha nidreyalliri
ReplyDelete"ಕಣ್ಣ ಕೋಟೆಯ ದಾಟಿ
ReplyDeleteಗುರಿಯ ಹಂಗನು ಮೀರಿ
ದಣಿಯದೆ ಮನ ತಣಿಯದೆ
ದೂರ ದೂರಕೆ ಹಾರುತ್ತದೆ"..... ಸುಂದರ ಸಾಲುಗಳು.. ಇಷ್ಟವಾಯಿತು ದಿಲೀಪ್
ಶ್ಯಾಮಲ
ದಿಲೀಪ್,
ReplyDeleteನಿಮ್ಮ ಈಗಿನ ಸಂದರ್ಭದಲ್ಲಿ ಇಂಥ ರೊಮ್ಯಾಂಟಿಕ್ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ..
ದಿಲೀಪ್ ಸೊಗಸಾದ ಕವನ...ಸುಖ ನಿದ್ದೆ ನಿಮಗೆ ಬರಲಿ..
ReplyDeleteದಿಲೀಪ್,
ReplyDeleteಕವನ ತುಂಬಾ ರೊಮ್ಯಾಂಟಿಕ್ ಆಗಿದೆ. ಇದರ ಹಿಂದಿನ ರಹಸ್ಯವೇನು???
ಸೂಪರ್......
nice dileep
ReplyDeleteದಿಲೀಪ್ ,
ReplyDeleteರಾಶಿ ಚಂದ ಇದ್ದು . ಈ ತರದ ಸುಖ ನಿದ್ರೆಯಿಂದ ಆಗಾಗ ಎದ್ದು ಚಂದದ ಕವನಗಳನ್ನು ಬರೀತಾ ಇರಿ !
ನಾಗರಾಜ್
ReplyDeleteಇಲ್ಲಿ ನಿದ್ರೆಗೆ ಗರಿ ಮೂಡಿದೆ.. ಮನಸೋ ಇಚ್ಛೆ ಹಾರಾಡ್ತಿದೆ.. ಗುರಿ ತಲುಪುವ ಯಾವುದೇ ಇರಾದೆ ಅದಕ್ಕಿಲ್ಲ.. ಅವಳು ತೆಕ್ಕೆಗೆಳೆದು ರೆಕ್ಕೆ ಕತ್ತರಿಸಿದಾಗಲೇ ನಿದ್ರೆಯ ಸ್ವೇಚ್ಚೆಗೆ ಕಡಿವಾಣ..
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)
ದೇಸಾಯಿ ಸರ್..
ReplyDeleteಚಿಕ್ಕ ಪ್ರಯತ್ನ ಅಷ್ಟೇ.. ರೋಮ್ಯಾಂಟಿಕ್ ಆಗಿದೆ ಮತ್ತು ನಿಮಗೆಲ್ಲ ಇಷ್ಟವಾಗಿದೆ ಅಂತಾದ್ರೆ ನನಗಷ್ಟೇ ಖುಷಿ.. ಧನ್ಯವಾದಗಳು..
ಕೃಷ್ಣಮೂರ್ತಿ ಸರ್..
ReplyDeleteನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆಗಳೇ ಇಂತಹ ಇನ್ನಷ್ಟು ಭಾವಪೂರ್ಣ ಕವನ ಬರೆಯಲು ಸ್ಫೂರ್ತಿ.. ಧನ್ಯವಾದಗಳು..
ಚುಕ್ಕಿ ಚಿತ್ತಾರ
ReplyDeletethanks a lot.. :)
ಮನಸು..
ReplyDeleteಹೌದು.. ನಿದ್ರೆಯ ಸುಖದ ಗಮ್ಮತ್ತೆ ಬೇರೆ... ತಮ್ಮ ಹಾರೈಕೆಗೆ ಧನ್ಯವಾದಗಳು..
ಶ್ಯಾಮಲ ಮೇಡಂ..
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಶಿವಣ್ಣ...
ReplyDeleteನೀವು ಹೇಳಿದ್ದು ಸರಿ.. ಈಗೀಗ ಇದೇ ತರದ ಕವನಗಳನ್ನ ಬರೆಯೋಣಾ ಅಂತ ಅನಿಸೋದು ಜಾಸ್ತಿಯಾಗಿದೆ.. ಸಂದರ್ಭ ದೋಷ ಅಂತೀರಾ..? ಹಹಹ.. ಧನ್ಯವಾದಗಳು..
ಶಿವಣ್ಣ...
ReplyDeleteನೀವು ಹೇಳಿದ್ದು ಸರಿ.. ಈಗೀಗ ಇದೇ ತರದ ಕವನಗಳನ್ನ ಬರೆಯೋಣಾ ಅಂತ ಅನಿಸೋದು ಜಾಸ್ತಿಯಾಗಿದೆ.. ಸಂದರ್ಭ ದೋಷ ಅಂತೀರಾ..? ಹಹಹ.. ಧನ್ಯವಾದಗಳು..
ಪ್ರವೀಣ್..
ReplyDeleteಅಂತಾ ರಹಸ್ಯ ಏನೂ ಇಲ್ಲಾ ಅಂದ್ರೆ ನೀವು ನಂಬೊಲ್ಲ... ಪ್ರಕಾಶಣ್ಣ ನಿಮ್ಮೆಲ್ಲರ ಕಲ್ಯಾಣ ಮಾಡುವ ಪಣ ತೊಟ್ಟಿದ್ದಾರೆ ಅಂತ ಗೊತ್ತಾಯ್ತು.. ಅದಾದ ಮೇಲೆ ಗೊತ್ತಾಗತ್ತೆ ರಹಸ್ಯ... ಅಲ್ಲಿವರೆಗೂ ಸ್ವಲ್ಪ ತಾಳ್ಮೆ ಇರಲಿ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಚಿತ್ರಕ್ಕ..
ReplyDeleteಹಹಹ.. ಈಗೀಗ ನಿದ್ದೆ ಸಲ್ಪ ಜಾಸ್ತಿನೆ ಆಗೋತೇನ ಕಾಣ್ತು. ಬ್ಲಾಗಿನ್ ಬಾಗ್ಲು ತೆಗ್ಯದೆ ಕಮ್ಮಿ ಆಗೋಯ್ದು.. ನೀವ್ ಹೇಳ್ದಂಗೆ ಬರ್ಯಲೆ ಪ್ರಯತ್ನ ಮಾಡ್ತಿ.. ಕವನ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್..
Venkatesh..
ReplyDeleteThanks a lot.. :)
ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ವಸಂತ್..
ReplyDeleteನಿನ್ನ ಬಾಹು ಬಂಧನದಲ್ಲೀಗ
ReplyDeleteನನ್ನ ಕಣ್ಣುಗಳಿಗೆ ಸುಖನಿದ್ರೆ..
ಸಾಲುಗಳು ಚೆನ್ನಾಗಿವೆ,ಇಷ್ಟವಾಯ್ತು.
ಸುಮಧುರ ಭಾವನೆಗಳು ಸೊಗಸಾಗಿ ಮೂಡಿಬಂದಿದೆ.
ಅಭಿನಂದನೆಗಳು.
ದಿಲೀಪ್,
ReplyDeleteಸುಂದರ, ಭಾವಪೂರ್ಣ, ರೋಮ್ಯಾಂಟಿಕ್ ಕವನ, ಇಷ್ಟ ಆಯಿತು....
ಸಕತ್ ರೋಮಾಂಟಿಕ್ ಕವನ ಸರ್
ReplyDeleteತುಂಬಾ ಇಷ್ಟ ಆಯಿತು
ಮೊದಲ ಪ್ಯಾರ ಸೂಪರ್
ನಿಮ್ಮ ಹಿಂದಿನ ಪೋಷ್ಟಿಗೂ ಈ ಕವನಕ್ಕೂ ಏನೋ ಸಂಬಂಧ ಇದ್ದ ಹಾಗೆ ಇದೆ!!!!
ReplyDeleteಹ ಹಾ..
ವೆಂಕಟಕೃಷ್ಣ ಸರ್
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು....
ಅಶೋಕ್ ಸರ್..
ReplyDeleteಧನ್ಯವಾದಗಳು
ಗುರುಮೂರ್ತಿ ಸರ್
ReplyDeleteನೀವು ಬರೆದಿರೋ ಕವನ ಅದ್ಭುತ.. ಓದಿ ತುಂಬಾ ಖುಷಿ ಆಯ್ತು..
ನನ್ನ ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಬಾಲು ಸರ್..
ReplyDeleteಹಹಹ.. ಸರಿಯಾಗಿ ಲಿಂಕಿಸಿದ್ದೀರಿ...!!
ನಿಮ್ಮ 40GB ಫೋಟೋಗಳಲ್ಲಿ ಆದಷ್ಟು ಬೇಗ ಕೆಲವು ನಮ್ಮ ದರ್ಶನಕ್ಕೆ ಲಭ್ಯವಾಗಲಿ.. ಹನಿಹನಿಗೆ ಆಗಾಗ ಬರುತ್ತಿರಿ...
dileepanna kavana super :)
ReplyDeleteನಿನ್ನ ಬಾಹು ಬಂಧನದಲ್ಲೀಗ
ನನ್ನ ಕಣ್ಣುಗಳಿಗೆ ಸುಖನಿದ್ರೆ.. wah :)
'ನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..' ಬ೦ಧನದಲ್ಲೂ, ಸ್ವಾತ೦ತ್ರ್ಯ ರಾಹಿತ್ಯದಲ್ಲೂ, ಸುಖವನರಸುವ ಮನಸು! ಕವನ ಭಾವಪೂರ್ಣ
ReplyDeleteಹಾಗೂ ಅರ್ಥಪೂರ್ಣವಾಗಿದೆ. ನನ್ನ ಬ್ಲಾಗ್ ಗೊಮ್ಮೆ ಬನ್ನಿ.
ರಸಮಯ ಕವನ. ಕೊನೆಯ ಸಾಲುಗಳು ಅರ್ಥಪೂರ್ಣ.
ReplyDeleteಒಳ್ಳೆಯದೇ ಆಯ್ತು..
ReplyDeleteನೀನು ತೆಕ್ಕೆಗೆಳೆದು ರೆಕ್ಕೆಗಳ ಕಡಿದೆ..
.... romantic kavite... bhaavada neera nudi .... tumbaa chennagide
ರಂಜಿತಾ, ಪ್ರಭಾಮಣಿ ಮೇಡಂ, ಸೀತಾರಾಮ್ ಸರ್, ಚಂದ್ರಿಕಾ ಮೇಡಂ, ವೀ, ಆರ್, ಭಟ್ ಸರ್.. ಎಲ್ಲರಿಗೂ ಧನ್ಯವಾದಗಳು..
ReplyDelete