Sunday 28 July 2013

ಹೊತ್ತು ಜಾರುವ ಮುನ್ನ...!!

ಮಕ್ಕಳ ಬಣ್ಣ ಬಣ್ಣದ
ಕಾನ್ವೆಂಟ್ ಪುಸ್ತಕಗಳ ನಡುವೆ
ಅಜ್ಜಿಯ ಕಥೆಗಳ ಬೆರಗ
ಮರೆಯದೆಲೆ ಮುಚ್ಚಿಡಿ..
ಕತ್ತಲಲಿ ಕಳೆದು ಹೋದಾವು
ಕಂದಮ್ಮಗಳು.. ಅಜ್ಜನ
ಆದರ್ಶಗಳ ಲಾಂದ್ರ
ಹೊತ್ತು ಜಾರುವ ಮುನ್ನ ಹಚ್ಚಿಡಿ...

ಹವಾನಿಯಂತ್ರಕಗಳ ನೆರಳಲ್ಲಿ
ಸುಖದ ನಿದಿರೆಗೆ ಜಾರಿ
ಬಂಧ ಕಳಚಿಕೊಳ್ಳುವ ಮುನ್ನ
ಅಮ್ಮನ ಸೀರೆಯಲಿ ಹೊಲಿದ
ದುಪ್ಪಡಿಯನ್ನು ಬಿಚ್ಚಿಡಿ...

ಪೋಸ್ಟರಿನ ಸ್ಟಾರುಗಳು 
ಕೋಟಿ ಬೆಲೆಯ ಕಾರುಗಳು 
ಚಿತ್ತ ಭಿತ್ತಿಯಲಿ ಅಚ್ಚಾಗುವ ಮುನ್ನ
ಆಜಾದ್, ಭಗತ್, ವಿವೇಕರ ಪಟಗಳನು
ಗೋಡೆಗಳ ಮೇಲೆ ಹಚ್ಚಿಡಿ..

6 comments:

  1. ಮೊಬೈಲ್ ಲ್ಯಾಪ್‌ಟಾಪ್ಗಳಲ್ಲಿ
    ಕಣ್ಣನಿಟ್ಟು ಬೆರಳಾಡಿಸುವ ಮುನ್ನ
    ಮಣ್ಣಿನ ಗಂಧವ ಅರಿಯುವಂತೆ ಮಾಡಿ..

    ಬ್ರೆಡ್ ಬರ್ಗರ್ಗಳಿಗೆ ಮರುಳಾಗುವ ಮುನ್ನ
    ಕಡುಬು ಕಜ್ಜಾಯಗಳ ಮಹತ್ವವ ಬಣ್ಣಿಸಿಬಿಡಿ..

    ಮಮ್ಮಿ ಡ್ಯಾಡಿ ಎಂದು ಹೇಳುವ ಮುನ್ನ
    ಅಪ್ಪ ಅಮ್ಮ ಎನ್ನಲು ಕಲಿಸಿಬಿಡಿ..!

    ReplyDelete
  2. ವಾಹ್..!! ಸೂಪರ್ ದಿಲೀಪ್ ಸುಂದರ ಸಾಲುಗಳು ಬಹಳ ದಿನಗಳ ನಂತರ ಬರೆಯಲಿಟ್ಟೆ ಪ್ರಾರಂಭಿಸಿದ್ದೀರಿ. ಕಾರ್ಟೂನ್ ಗಳೂ ಸಹ ಬರುತ್ತಿವೆ ಶುಭವಾಗಲಿ

    ReplyDelete
  3. Choooperro chooper ... Hottu jaruva munnane Hanateya hachchiddeeri .. Belaku noduvavarige kandeetu !

    ReplyDelete
  4. ಆಧುನಿಕತೆಯ ಭರದಲ್ಲಿ ಕೊಚ್ಚಿಹೋಗಿರುವ ಮಾನವ ಸಂಬಂಧಗಳು ಮತ್ತು ಮನೆಗಳಾಳದಲ್ಲಿ ಕಳೆಯಚಿಕೊಂಡಿರುವ ಮಾನವ ಸಂಬಂಧಗಳ ಸ್ಪಷ್ಟ ನಿರೂಪಣೆ.
    http://badari-poems.blogspot.in/

    ReplyDelete
  5. ಅಮ್ಮನ ಸೀರೆಯಲಿ ಹೊಳಿದ ದುಪ್ಪಡಿಯನ್ನು ಬಿಚ್ಚಿಡಿ... ತುಂಬಾ ಸುಂದರ ಸುಂದರ ಸಾಲು.

    ReplyDelete
  6. deepu thanks...tumba chennagiddu.

    ReplyDelete