Wednesday 29 August 2012

ಮತ್ತೆ ನಾ ಬರೆಯಬಾರದಿತ್ತು...!!

ಹೊದ್ದು ಮಲಗಿಹ ಮನಕೆ
ಕುಣಿವ ಆಸೆಯನುಣಿಸಿ
ನೆನಪುಗಳ ನಾದಸ್ವರ
ನುಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...

ಆಯ್ದು ಪದಕುಸುಮಗಳ
ಒಲವ ದಾರದಿ ಕಟ್ಟಿ
ಮುದದಿ ಮಡದಿಯ ಮುಡಿಗೆ
ಮುಡಿಸಬಾರದಿತ್ತು....
ಮತ್ತೆ ನಾ ಬರೆಯಬಾರದಿತ್ತು...

ಕದ್ದು ಕೆಲ ಕನಸುಗಳ
ಬರುವ ನಾಳೆಗಿರಲೆಂದು
ಬಚ್ಚಿಟ್ಟ ಭಾವದ ಬುತ್ತಿ
ಬಿಡಿಸಬಾರದಿತ್ತು...
ಮತ್ತೆ ನಾ ಬರೆಯಬಾರದಿತ್ತು...!

25 comments:

  1. ಬರೆಯ ಬಾರದಿತ್ತು..
    ಎಂದು ಬರೆದು..

    ನಮ್ಮ ಬಳಿಯೂ "ತುಂಬಾ ಸೊಗಸಾಗಿದೆ" ಎಂದು ಬರೆಸಿಬಿಟ್ಟಿದ್ದೀರಿ....

    ತುಂಬಾ ಇಷ್ಟವಾಯ್ತು...

    ReplyDelete
    Replies
    1. ಧನ್ಯವಾದಗಳು ಪ್ರಕಾಶಣ್ಣ.. :)

      Delete
  2. ಅದೇಗ್ರಿ ಅಂತೀರಾ ಹಾಗೆ.. ಇಷ್ಟು ಸೊಗಸಾಗಿ ಬರದು..

    ReplyDelete
    Replies
    1. ಧನ್ಯವಾದಗಳು ದೇಸಾಯಿ ಸರ್... ಇನ್ನು ಹಿಂಗೆಲ್ಲಾ ಅನ್ನಲ್ಲ... :)

      Delete
  3. ಕೆಲ ಬಾರಿ ಮುನಿವ ಕಾವ್ಯವನ್ನು ಕವಿ ಒಲಿಸಿಕೊಳ್ಳ ಬೇಕು. ಬರೆಯಬಾರದಿತ್ತು ಎನ್ನದಿರಿ ಅದು ಕವಿಗೆ ನೋವಿನ ಮಾತು.

    ಒಳ್ಳೆಯ ಕವನ ಕಟ್ಟಿಕೊಟ್ಟಿದ್ದೀರ.

    ReplyDelete
    Replies
    1. ಧನ್ಯವಾದಗಳು ಬದರಿನಾಥ್ ಸರ್.. ಇನ್ನು ಹುಸಿ ಮುನಿಸು ತೋರ್ಸೋ ಕವನಗಳನ್ನ ಪ್ರೀತಿಯಿಂದ ಒಲಿಸಿಕೊಳ್ಳುವ ಪ್ರಯತ್ನ ಮಾಡ್ತೇನೆ... :)

      Delete
  4. ಚಂದ ಬರೆದಿದ್ದೂ ಅಲ್ಲದೆ ಮತ್ತೆ ನಾ ಬರಿಬಾರದಿತ್ತು ಅಂತ ಪೋಸ್ ಕೊಡ್ತಿರಲ್ರಿ.... ಸೂಪರ್...

    ReplyDelete
  5. ಧನ್ಯವಾದಗಳು ಸಂಧ್ಯಾ... ಪೋಸು ಕೊಟ್ಟಿದ್ದು ಹಾಗೆ ಸುಮ್ಮನೆ.. ಬರೀಬಾರ್ದಿತ್ತು ಅಂತಾನೆ ಬರೆದೆ.. ಇನ್ಮೇಲು ಬರೀತೀನಿ... :)

    ReplyDelete
  6. ಹೊದ್ದು ಮಲಗಿಹ ಮನಕೆ
    ಕುಣಿವ ಆಸೆಯನುಣಿಸಿ
    ನೆನಪುಗಳ ನಾದಸ್ವರ
    ನುಡಿಸಬಾರದಿತ್ತು...
    ಮತ್ತೆ ನಾ ಬರೆಯಬಾರದಿತ್ತು...

    ಈ ಸಾಲುಗಳು ಮನಸಿಗೆ ತುಂಬಾ ಹತ್ತಿರವೆನಿಸಿದವು.
    ಒಳ್ಳೆಯ ಕವಿತೆ,
    ಹೌದು, ಕೆಲವೊಮ್ಮೆ ಬೇಡ ಅನ್ನುತ್ತಲೇ ಏನೇನೊ ಮಾಡಿ ಬಿಡ್ತಿವಿ.

    ReplyDelete
    Replies
    1. ಧನ್ಯವಾದಗಳು ನಿವೇದಿತಾ ಮೇಡಂ.. ಹೌದು.. ಮತ್ತೆ ಹಾಗೆ ಬೇಡ ಅನ್ನುತ್ತಲೇ ಮಾಡಿದ ಕೆಲವು ಸಂಗತಿಗಳು ಆಮೇಲೆ ಇಷ್ಟವಾಗುತ್ತವೆ.. ಖುಷಿ ಕೊಡುತ್ತವೆ.. ಪ್ರೋತ್ಸಾಹ ಹೀಗೆ ಇರಲಿ..

      Delete
  7. Replies
    1. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸೀತಾರಾಂ ಸರ್.. :)

      Delete
  8. ಇಂತಹ ಸುಂದರ ಕವನವನ್ನು ಬರೆಯುತ್ತಲೇ ಇರಿ!

    ReplyDelete
    Replies
    1. ಖಂಡಿತಾ.. ಧನ್ಯವಾದಗಳು ಸುನಾಥ್ ಸರ್..

      Delete
  9. ಬರಿಯಲೇಬೇಕಿತ್ತು .. ಮತ್ತು ನೀ ಬರೆದಿದ್ದು ಸರಿ ಇತ್ತು ... ಓದುವ ಪುಣ್ಯ ನಮ್ಮಲ್ಲಿತ್ತು ...
    ಕದ್ದು ಕೆಲ ಕನಸುಗಳ
    ಬರುವ ನಾಳೆಗಿರಲೆಂದು
    ಬಚ್ಚಿಟ್ಟ ಭಾವದ ಬುತ್ತಿ
    ಬಿಡಿಸಬಾರದಿತ್ತು...
    ಮತ್ತೆ ನಾ ಬರೆಯಬಾರದಿತ್ತು...!

    ತುಂಬಾ ಚೆನ್ನಾಗಿದ್ದೋ ..

    ReplyDelete
    Replies
    1. ಪ್ರವೀಣ್.. ನಿಮ್ಮೆಲ್ಲರ ಪ್ರೋತ್ಸಾಹ ಸಿಗೋದು ನಮ್ಮ ಪುಣ್ಯ..
      ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.. :)

      Delete
  10. ಇಷ್ಟು ಸುಂದರವಾಗಿ ಬರೆದ ಮೇಲೂ ಬರೆಯಬಾರದಿತ್ತು ಎಂದರೆ ಹ್ಯಾಂಗ್ ಮರ್ರೆ.....ಲೈಕ್ ಬರೀತ್ರಿ ನೀವ್....ಇನ್ನೂ ಬರೀನಿ....ಧನ್ಯವಾದಗಳು....

    ReplyDelete
  11. ಹ್ವಾಯ್ ಶೆಟ್ರೆ..ಹಾಂಗ್ ಅಂಬ್ರ್ಯಾ.. ಆತ್ ಕಾಣಿ.. ಅದೂ ಇದೂ ಕೆಲ್ಸಾ ಅಂತೇಳಿ ಬರೂದ್ ಕೈದ್ ಮಾಡಿನಾಯಿತ್ತ್ ಮಾರ್ರೆ.. ಇನ್ಮೇಲೆ ಹಿಂಗೇ ಬರೀತೆ ಅಕಾ...ನೀವ್ ಬಂದ್ ಓದಿ ಲಾಯ್ಕಿತ್ ಅಂದದ್ ರಾಶಿ ಖುಷಿ ಆತ್ ಕಾಣಿ..

    ReplyDelete
  12. ಬರೆಯಬಾರದಿತ್ತು ಅಂತಾನೆ ಬರೆದ ಕವನ ಸುಪರ್ಬ್ :) ಕೆಲವು
    ಆಯ್ದು ಪದಕುಸುಮಗಳ
    ಒಲವ ದಾರದಿ ಕಟ್ಟಿ
    ಮುದದಿ ಮಡದಿಯ ಮುಡಿಗೆ
    ಮುಡಿಸಬಾರದಿತ್ತು....
    ಅದೇನು ಸುಂದರ ರೂಪಕ !

    ReplyDelete
    Replies
    1. ಸೌಮ್ಯಾ.. ಕವನವನ್ನ.. ಕವನದಲ್ಲಿರೋ ರೂಪಕಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

      Delete
  13. ತುಂಬಾ ಚಂದದ ಕವನ...ಮತ್ತೆ ನೀವು ಬರೆಯಲೇಬೇಕು...

    ReplyDelete