Saturday 8 September 2012

ಸಖಿಯಿರದ ರಾತ್ರಿಗಳಲಿ...!
















ಸಖಿಯಿರದ ರಾತ್ರಿಗಳಲಿ 
ನಿದಿರೆಗೆ ಬರ ಬಡಿದಿದೆ...
ನೆನಪುಗಳ ಲೋಕದಲ್ಲಿ
ಮನವು ಕಳೆದು ಹೋಗಿದೆ...

ಅವಳ ನೋಟ, ಪ್ರೀತಿಯಾಟ
ಅವಳ ಮಾತು, ಮುತ್ತಿನೂಟ
ಸಿಗದೆ ಸುಡುವ ಶೋಕದಲ್ಲಿ
ಹೃದಯ ಮುಳುಗಿ ಹೋಗಿದೆ..

ಇಲ್ಲ ಮನದ ಮಳಿಗೆಯಲ್ಲಿ 
ಹೊಸ ಕನಸುಗಳ ಆವಕ...
ಮಾರಿ ಮುತ್ತ ಪಡೆಯುತಿದ್ದ 
ಆ ದಿನಗಳದೆಷ್ಟು ಮೋಹಕ...

ಹೊರಗೆ ಸುರಿವ ಸೋನೆ ಮಳೆ..

ಒಳಗೆ ಸುಡುವ ವಿರಹ ಪಾವಕ
ಕಾಯಿಸಿ ಸತಾಯಿಸುತಿಹನೆ..?
ಪಾಪಿ ಕಾಲ ಸಮಯ ಸಾಧಕ..


ಆವಕ = ಬರುವಿಕೆ
ಪಾವಕ = ಬೆಂಕಿ

ಚಿತ್ರ ಎತ್ತಿದ್ದು : http://www.benreed.net/index.php/2011/01/12/mostly-forgotten/ ಇಲ್ಲಿಂದ 

10 comments:

  1. ಅಮೋಘ ಪ್ರತಿಮೆಯನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟ ಕವನ.

    ReplyDelete
    Replies
    1. ಧನ್ಯವಾದಗಳು ಬದ್ರಿನಾಥ್ ಸರ್

      Delete
  2. super one this is what we look forward from you, dileep

    ReplyDelete
  3. ಶಬ್ದಗಳಲ್ಲಿ ಬಿಡಿಸಿಟ್ಟ
    ಭಾವಗಳ ಚಿತ್ರಣ ಸೊಗಸಾಗಿದೆ....

    ReplyDelete
    Replies
    1. ಧನ್ಯವಾದಗಳು ಪ್ರಕಾಶಣ್ಣ

      Delete
  4. ಮತ್ತೊಂದು ಸುಂದರ ಕವನ ದಿಲೀಪ್.....ಅಭಿನಂದನೆಗಳು....

    ReplyDelete
  5. ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ವಸಂತ್..

    ReplyDelete
  6. ದಿಲೀಪ್
    ಕವನದಲ್ಲಿ ಭಾವಾರ್ಥ ಇಷ್ಟವಾಯ್ತು.

    ReplyDelete