Tuesday 5 July 2011

ನೆನಪಿನ ಯಾತ್ರೆಗೆ

ಅದೋ..
ಇಷ್ಟು ಹೊತ್ತು ಗುಡುಗು ಮಿಂಚಿನ
ಜೊತೆ ತಾಲೀಮು ನಡೆಸಿದ್ದ
ಮಳೆರಾಯ ಬಂದೇ ಬಿಟ್ಟ..
ಚಿಟ ಪಟ.. ಪಟ ಚಿಟ...
ಹನಿಗಳ ಗೆಜ್ಜೆ ನಾದ ಬೇರೆ..
ಮತ್ತು ಮತಿಗೇರಿದಂತೆ
ಕುಣಿದೇ ಬಿಟ್ಟ..

ಆಗಿದ್ದಾಗಲಿ..ಬಿಡಬೇಡ..

ಕತ್ತಿಯಿಂದ ಕಡಿ...
ಹೆರೆಮಣೆಯಲ್ಲಿ ಉದ್ದುದ್ದಗೆ ಸಿಗಿ..
ಕುಡಿವ ಎಣ್ಣೆಯಲ್ಲಿ ಕರಿ..
ಅಚ್ಚ ಖಾರದ ಪುಡಿ ಸ್ವಲ್ಪ ಸೋಕು...
ವ್ಹಾರೆ ವ್ಹಾ...!
ತುಂಬದ ಬಾಯಿಯ ತಿರುಪತಿ ಹುಂಡಿಗೆ..
ಗರಿ ಗರಿ ಹಲಸಿನ ಸಂಡಿಗೆ..

ನೆನಪಿನ ಯಾತ್ರೆಗೆ 
ಮನಸಿನ ಜಾತ್ರೆಗೆ..
ಸಾಕಿಷ್ಟು ತಯಾರಿ..
ಹಾಂ... ಮರೆತೆ.. ಜೊತೆಗೊಂದು ಲೋಟ...
ಬಿಸಿ ಬಿಸಿ ಕಾಫಿ ಬೇಕೇ ಬೇಕು..

9 comments:

  1. ಕವನ ಚೆನ್ನಾಗಿದೆ.
    ಕಾಫ಼ಿ ಮರೆತರಲ್ಲ ಅಂದುಕೊಳ್ಳುತ್ತಿದ್ದೆ.ಕೊನೆಗೆ ಒಂದು ಡೋಸ್ ಇತ್ತು ಬಿಡಿ

    ReplyDelete
  2. ಗರಿಗರಿ ಹಲಸಿನ ಸಂಡಿಗೆ ಜೊತೆ ಕಾಫಿ... ಖಂಡಿತಾ ಮನಸಿಗೆ ನೆನಪಿನ ಯಾತ್ರೆಯ ಜಾತ್ರೆ...!! :-)


    ಶ್ಯಾಮಲ

    ReplyDelete
  3. Nice :) .. and Congrats [Reason nimge gottu bidi :) ]

    ReplyDelete
  4. ನೆನಪಿನ ಯಾತ್ರೆ ತುಂಬಾ ಚೆನ್ನಾಗಿ ಸಾಗಿದೆ..

    ReplyDelete
  5. ಮಳೆಲಿ ತೋಯ್ದು ಸಂಡಿಗೆ, ಜೊತೆಗೆ ಕಾಫಿ ಅಬ್ಬಾ..... ಚೆನ್ನಾಗಿದೆ ನಿಮ್ ಕವನ......

    ReplyDelete
  6. ತುಂಬದ ಬಾಯಿಯ ತಿರುಪತಿ ಹುಂಡಿಗೆ..
    ಗರಿ ಗರಿ ಹಲಸಿನ ಸಂಡಿಗೆ..

    best..:)

    ReplyDelete