Wednesday 27 April 2011

ಕಣ್ಣೀರ ಕಡಲು...!!



ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ
ಧೋ..ಎಂದು ಸುರಿಯುತ್ತಿದೆ.. ಮಳೆ...
ಸುತ್ತಲೂ ಕತ್ತಲು... ಕಣ್ಣೀರ ಕಡಲು...

ಎಲ್ಲದಕ್ಕು ಕಾರಣ ಆ ಚಂದ್ರಮ...
ಪ್ರತಿ ಸಾರಿಯಂತೆ ನಿನ್ನೆ ಮತ್ತೆ...
ಪೌರ್ಣಮಿಯ ನೆವವೊಡ್ಡಿ..
ಲಲನೆಯರ ಸೆಳೆವ ತೆವಲು ಹೆಚ್ಚಿ
ಸೂರ್ಯನಿಂದ ಒಂದಿಷ್ಟು ಬೆಳಕು
ಕಡ ತಂದು ಮಿರ್ರನೆ ಮಿಂಚುತ್ತಿದ್ದ..

ಏನನಿಸಿತೋ ನನ್ನ ನೋಡಿ...
 ಒಮ್ಮೆ ತನ್ನತ್ತ ಸೆಳೆದ...
ಗೆಳೆಯಾ.. ಎನ್ನುತ್ತಾ ಮಾತಿಗೆಳೆದ...

ವಿರಹ.. ದುಃಖ.. ಏಕಾಂತ.. ಬೇಸರ...
ಎಲ್ಲ ತೋಡಿಕೊಂಡೆ.. 
ಪರಿಹರಿಸು ಗೆಳೆಯಾ..
ಪರಿ ಪರಿಯಾಗಿ ಬೇಡಿಕೊಂಡೆ..

ಪಾಪಿ.. ನನ್ನ ಕಥೆಯ 
ಹೋಗಿ ಹೋಗಿ ಮೋಡಗಳಿಗೆ ಹೇಳುವದೆ...??

ನಿಲ್ಲುವ ಮಾತೇ ಇಲ್ಲ...
ಒಂದೇ ಸಮನೆ ಸುರಿಸುತಿವೆ....
ಸುತ್ತೆಲ್ಲ ಕತ್ತಲು.. ಕಣ್ಣೀರ ಕಡಲು...

21 comments:

  1. very nice poem dileep :) superb ..!

    ReplyDelete
  2. ತುಂಬಾ ಸೊಗಸಾಗಿದೆ ದಿಲಿಪು...
    ಇಷ್ಟವಾಯಿತು... ಜೈ ಹೋ !

    ReplyDelete
  3. Wov.. soopero ranga... kattikotta shaili bachchittu konda bhava istavayitu..

    ReplyDelete
  4. dileep good one. change "KHADA" as "KADA". the former has different meaning.

    ReplyDelete
  5. ಚೆನ್ನಾಗಿದೆ ಕಣ್ಣೀರಿನ ಕಡಲು...

    ReplyDelete
  6. ಸೊಗಸಾಗಿದೆ ಕವನ.

    ReplyDelete
  7. nice!
    -sitaram

    ReplyDelete
  8. ಸೊಗಸಾದ ಕಲ್ಪನೆಯ ಸು೦ದರ ಕವನ ದಿಲೀಪ್, ಅಭಿನ೦ದನೆಗಳು.

    ReplyDelete
  9. ದಿಲೀಪ್,

    ಕವನದ ಶೈಲಿ ಇಷ್ಟವಾಯಿತು. ಟೈಟಲ್ ಕೂಡ..

    ReplyDelete
  10. ತುಂಬಾ ಚೆನ್ನಾಗಿ ಮೂಡಿಬಂದಿದೆ.ನಿಮ್ಮ ಕಾರ್ಟೂನ್ ಗಳೂ ಇಷ್ಟವಾದವು.

    ReplyDelete
  11. kavana uttmavaagide..

    ವಿರಹ.. ದುಃಖ.. ಏಕಾಂತ.. ಬೇಸರ... :( yaake dileep?

    ananth

    ReplyDelete
  12. ಚೆಂದದ ಕವನ. ಆ ಚಂದ್ರ ಮತ್ತೆ ಸಿಕ್ಕರೆ ಬಿಡಬೇಡಿ Dileep... :)

    ReplyDelete
  13. Nice lines..

    Nimmava
    Raghu.

    ReplyDelete