Saturday 26 February 2011

ಎರಡು ಹನಿ..!

ವಜ್ರ (ಮುನಿ) Money

ಮಡದಿಗೆ ಕೊಟ್ಟಷ್ಟೂ
ಸಾಲದಂತೆ
ವಜ್ರ ಮತ್ತು Money..
ಪಾಪ..
ಅದಕ್ಕೇ ನಮ್ಮ ರಾಯರು
ಕಚೇರಿಯ ಸಿಬ್ಬಂದಿಗಳ
ಪಾಲಿಗೆ "ವಜ್ರಮುನಿ"..!!


ಮುಟ್ಟಿದರೆ Money

ಮದುವೆಗೆ ಮೊದಲು
ಪ್ರತಿ ಸ್ಪರ್ಶಕೂ ನುಲಿದು ನಲಿದು
ನಾಚಿ ನೀರಾಗುತಿದ್ಲು ಚೆಲುವೆ
ಸಾಕ್ಷಾತ್ ಮುಟ್ಟಿದರೆ ಮುನಿ....!
ಈಗ ಮುಟ್ಟುವದಾದರೆ
ಕೊಡಲೇ ಬೇಕಂತೆ
ಒಂದು ಮೂಟೆ Money..!

15 comments:

  1. dileep money matters kavana chennagide.

    ReplyDelete
  2. ಚೆಂದದ ಹನಿಗವನ.. ನಮ್ಮ ಕಚೇರಿಯಲ್ಲು ಅಂಥ "ವಜ್ರಮುನಿ"ಯೊಬ್ಬರಿದ್ದಾರೆ.. :)

    ReplyDelete
  3. ನಿಮ್ಮ ‘ಹನಿ’ಗಳಲ್ಲಿ punch ತುಂಬಿದೆ!

    ReplyDelete
  4. ದಿಲೀಪ್..

    ಚುಟುಕುಗಳು ಸೊಗಸಾಗಿದೆ..

    ಎರಡನೆಯದು ತುಂಬಾ ಇಷ್ಟವಾಯಿತು... ಹ್ಹಾ...ಹ್ಹಾ.. !

    ReplyDelete
  5. ದೀಲಿಪಣ್ಣ,
    MONEY ಯ ಹನಿಗಳು, ಮಸ್ತ್ ರೆ ಮಸ್ತ್ .. :)

    ReplyDelete
  6. ದಿಲೀಪ್ ,

    ಸ್ವಂತ ಅನುಭವ ಅಲ್ಲ ತಾನೇ? ಹಿ ಹಿ ಹಿ .. ತುಂಬಾ ಚೆನಾಗಿವೆ ಹನಿಗಳು !!

    ReplyDelete
  7. ಚೆನ್ನಾಗಿದೆ ಕಣ್ರಿ ಮೊನಿ ಹನಿ........

    ReplyDelete
  8. money kathe super...money ilde idre enu agalla ivagina kaladalli alva..

    ReplyDelete
  9. ಮೊದಲನೆ ಹನಿಗವನ ತುಂಬಾ ಇಷ್ಟವಾಯಿತು... ಅದೊಂದು ಕಾಲವಿತ್ತು, ವಜ್ರಮುನಿಯ ಕಾಲ. ವಜ್ರಮುನಿ ಹೆಸರು ಕೇಳಿದಾಗೆಲ್ಲ ವಜ್ರಮುನಿಯ ಕಳನಾಯಕ ನ ಅಭಿನಯವೇ ನೆನಪಾಗುತ್ತದೆ, ವಜ್ರಮುನಿಯ ಹೆಸರು ನೆನಪಿಸಿದ್ದಕ್ಕೆ ದನ್ಯವಾದಗಳು..

    ReplyDelete