Friday 13 August 2010

ನಾಲ್ಕು ಹನಿಗಳು


ನಿಶೆ ಬಂದು
ನಕ್ಷತ್ರಗಳನೆಲ್ಲ
ನಿನ್ನ ಕಣ್ಣುಗಳಲ್ಲಿ ಬಚ್ಚಿಟ್ಟಿತು
ಪಾಪ..!
ಅಲ್ಲಿ ಆಗಸದಲ್ಲಿ
ಚಂದ್ರ ಏಕಾಂಗಿ


ತುಟಿಯ ತುದಿಗೆ
ನಡೆದು ನಡಿಗೆ
ನಗುವು ಕುಳಿತು ಅತ್ತಿತು

ಬನದಿ ಅರಳಿ
ನಗುವ ಮೊದಲೇ
ಸುಮವು ಮುದುಡಿ ಸತ್ತಿತು


ಚಳಿ ನೀಗಿಸಿದ ಖುಷಿಯಲ್ಲಿ
ಬಿಗಿದು ಅಪ್ಪಲಾದೀತೇ..?
ಬೆಂಕಿ ಸುಡುತ್ತದೆ..

ನೋವ ಮರೆಸಿದ ನೆಪದಲ್ಲಿ
ನಂಟ ಬೆಳೆಸಲಾದೀತೇ..?
ನಶೆ ಕೊಲ್ಲುತ್ತದೆ..!!


ಕೋಟಿ ಮಿಂಚುಳ್ಳಿ
ಮಿನುಗಿದರೂ
ಮೂಡಲಾರದು ಹೊಂಬೆಳಕು

ಇಬ್ಬನಿಯ ಹನಿ
ಎಂದಿಗೂ
ತೊಳೆಯಲಾರದು ಮೈ ಕೊಳಕು




51 comments:

  1. ಇಬ್ಬನಿಯ ಹನಿ
    ಎಂದಿಗೂ
    ತೊಳೆಯಲಾರದು ಮೈ ಕೊಳಕು
    very nice feeling

    ReplyDelete
  2. ನಾಲ್ಕು ಮುತ್ತಿನ ಹನಿಗಳು ದಿಲೀಪ್. ಚಳಿ ನೀಗಿಸಿದ ಖುಷಿಯಲ್ಲಿ ಬಿಗಿದು ಅಪ್ಪಲಾದೀತೇ..?ಬೆಂಕಿ ಸುಡುತ್ತದೆ..ನನಗಿಷ್ಟವಾದ ಸಾಲುಗಳು.

    ಶುಭಾಶಯಗಳು
    ಅನ೦ತ್

    ReplyDelete
  3. ಇಬ್ಬನಿಯ ಹನಿ
    ಎಂದಿಗೂ
    ತೊಳೆಯಲಾರದು ಮೈ ಕೊಳಕು

    enthaha meening...super agide. Odhi Kushi aithu.

    ReplyDelete
  4. ದಿಲೀಪ್ ಸರ್, ನಿಮ್ಮ ಜುಗಲ್ ಬಂದಿಗಿಂತ ಈ ಹನಿಗವನ ಬಹಳ ಉತ್ತಮವೆನಿಸಿತು, ಬಹಳ ಅರ್ಥವತ್ತಾಗಿಯೂ ರಸವತ್ತಾಗಿಯೂ ಇತ್ತು, ನಯಾಜ್ವಾಗಿ ನಿಮಗೆ ಆಪ್ತ ಭಾಷೆಯಲ್ಲಿ ಹೇಳುವುದಾದರೆ ಊಟದ ನಂತರ ಸಿಕ್ಕ ಒಂದೊಳ್ಳೇ ಕವಳದಂತಿತ್ತು ! ಧನ್ಯವಾದಗಳು

    ReplyDelete
  5. ನಾಲ್ಕೂ ಹನಿಗಳು ಮುತ್ತಿನ ಹನಿಗಳು!ಮತ್ತಿನ ಹನಿಗಳೂ ಕೂಡ!ಇನ್ನೂ ಅದೇ ಮತ್ತಿನಲ್ಲಿದ್ದೀನಿ.ಮತ್ತಿನ್ನೇನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯುತ್ತಿಲ್ಲ.ಧನ್ಯವಾದಗಳು.

    ReplyDelete
  6. ಆಹಾ ! ತುಂಬ ಇಷ್ಟವಾಯಿತು.

    ReplyDelete
  7. ದಿಲೀಪ್
    ಕೊನೆಯ ಸಾಲುಗಳು ತುಂಬಾನೇ ಹಿಡಿಸಿತು

    ಸುಂದರ ಕವನ

    ReplyDelete
  8. ದಿಲೀಪ,
    ಇವನ್ನು ಕನ್ನಡದ ಗಝಲ್ ಎಂದು ಕರೆಯೋಣವೆ? ತುಂಬ ಸೊಗಸಾಗಿವೆ.

    ReplyDelete
  9. ದಿಲೀಪ್...
    ನಿಜಕ್ಕೂ ಮುತ್ತಿನ ಹನಿಗಳೇ... ಅದೆಷ್ಟು ಅರ್ಥವತ್ತಾಗಿದೆ... ಮೊದಲೆರಡಕ್ಕಿಂತ ನಂತರದೆರಡು ಬಹಳ ಇಷ್ಟವಾಯಿತು... ನಾಗರ ಪಂಚಮಿಯ ಶುಭಾಶಯಗಳು....

    ಶ್ಯಾಮಲ

    ReplyDelete
  10. ವೆಂಕಟೇಶ್ ಹೆಗಡೆಯವರೇ
    ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  11. ಅನಂತರಾಜ್ ಸರ್
    ಹನಿಗಳಿಗೆ ಮುತ್ತಿನ ಹನಿಗಳ ದರ್ಜೆ ನೀಡಿ ಹರಸಿದ್ದಕ್ಕೆ ಧನ್ಯವಾದಗಳು

    ReplyDelete
  12. ಶಿವು ಸರ್ ..
    ಓದಿ ಖುಷಿ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್

    ReplyDelete
  13. ವಿ. ಆರ್. ಭಟ್ ಸರ್
    ಹನಿಗಳನ್ನು ಆಸ್ವಾದಿಸಿ ಆಪ್ತ ಭಾಷೆಯಲ್ಲಿ ಹರಸಿದ್ದಕ್ಕೆ ಧನ್ಯವಾದಗಳು

    ReplyDelete
  14. ಡಾ| ಮೂರ್ತಿ ಸರ್...
    ಧನ್ಯೋಸ್ಮಿ..
    ಮುತ್ತಿನ ಹನಿಗಳ ಮತ್ತು ಸವಿದಿದ್ದಕ್ಕೆ ಅನಂತ ನಮನಗಳು

    ReplyDelete
  15. ಸುಬ್ರಹ್ಮಣ್ಯರವರೆ
    ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  16. ಡಾ| ಗುರುಮೂರ್ತಿ ಸರ್
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್

    ReplyDelete
  17. ಸುನಾಥ್ ಸರ್
    ಇವು ಗಝಲ್ ಆಗಲು ಒಪ್ಪದೇ ಹಠ ಹಿಡಿದು ಕುಳಿತ ಶೇರ್ ಗಳು
    ಗಝಲ್ ಬರೆಯುವ ಹಂಬಲ ನನಗೂ ಇದೆ... ಆದರೆ ಒಂದೆರಡು ಶೇರ್ ಗಳ ನಂತರ ಎಲ್ಲ ಖಾಲಿ ಖಾಲಿ. ಮುಂದೆ ಏನು ಬರೆಯುವದೋ ತಿಳಿಯುವದಿಲ್ಲ
    ಹಾರೈಕೆಗಳಿಗೆ ಧನ್ಯವಾದಗಳು

    ReplyDelete
  18. ಶ್ಯಾಮಲ ಮೇಡಂ
    ತಮಗೂ ನಾಗರ ಪಂಚಮಿಯ ಶುಭಾಶಯಗಳು
    ಹನಿಗಳನ್ನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  19. excellent poems. want more and more!

    ReplyDelete
  20. ಎಲ್ಲಾ ಸಾಲುಗಳು ಸೂಪರ್..... ತುಂಬಾ ತುಂಬಾ ಇಷ್ಟ ಆಯ್ತು.....

    ReplyDelete
  21. ದಿಲೀಪ್ ನಂಬರ್ ಒಂದು ಮತ್ತು ಮೂರು ಸೂಊಊಊಪರ್....ಚಂದ್ರನನ್ನು ಒಂಟಿಯಾಗಿ ಬಿಡಬೇಡಿ...ಹಹಹ...ಮತ್ತೆ ಮೂರನೇದು ಬಹಳ ಅನುಭವಿಸಿ ಬರೆದದ್ದು ..ಹಹಹ ಅಲ್ಲವಾ...ನಿಮ್ಮ ಸಾಲುಗಳು ತುಂಬಾ ಮೆಚುಗೆಯಾದವು

    ReplyDelete
  22. ತುಂಬಾ ಚೆನಾಗಿವೆ ಚುಟುಕುಗಳು! ಕೋಟಿ ಮಿಂಚುಳ್ಳಿ ಮೂಡಿದರು ಮುದ್ದು ಹೊಂಬೆಳಕು ತುಂಬಾ ಇಷ್ಟವಾಯಿತು.

    ReplyDelete
  23. ಹಾಯ್
    ಸರ್ ,
    ನಿಮ್ಮ 1,3 ಮತ್ತು 4 ಹನಿಗಳು
    ಸ್ವೀಟ ಸ್ವೀಟ..!!
    ಎನ್ ಮಾಡಿತ್ತಿರೋ ಗೋತ್ತಿಲ್ಲ ಇನ್ನಷ್ಟು ಇಂತ
    ಹನಿಗಳು ಬೇಕು..!!
    ಬರಿತ್ತಿರಲ್ಲಾ..?

    ReplyDelete
  24. ದಿಲೀಪ್..

    Great lines !!
    ವಾಹ್ !!

    ಒಂದಕ್ಕಿಂತ ಒಂದು ಸುಂದರ.. ಸಾಲುಗಳು..!!

    ನಿಮ್ಮ ಪ್ರತಿಭೆಗೆ ನನ್ನದೊಂದು ಸಲಾಮ್.. !!

    ReplyDelete
  25. ಮ್ರತ್ಯುಂಜಯ ಸರ್..
    ಬ್ಲಾಗ್ ಗೆ ಸ್ವಾಗತ.. ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  26. ದಿನಕರ ಸರ್
    ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  27. ದಿವ್ಯಾ

    ತುಂಬಾ ದಿನಗಳ ನಂತರ ಬ್ಲಾಗ್‌ನಲ್ಲಿ ನಿಮ್ಮ ಕಮೆಂಟ್ ನೋಡಿ ಖುಷಿಯಾಯ್ತು.. ಥ್ಯಾಂಕ್ಸ್...

    ReplyDelete
  28. ಆಜಾದಣ್ಣಾ
    ಧನ್ಯೋಸ್ಮಿ.. ಮೆಚ್ಚಿ ಹಾರೈಸಿದ್ದಕ್ಕೆ ವಂದನೆಗಳು

    ReplyDelete
  29. ಹರೀಶ
    ಕಾಮೆಂಟ್ ನೋಡಿ ಖುಷಿ ಆತು.. ಆಗಾಗ ಬರ್ತಾ ಇರು...

    ReplyDelete
  30. ಮನಮುಕ್ತಾ ಮೇಡಮ್
    ಧನ್ಯವಾದಗಳು... ಆಗಾಗ ಬರುತ್ತಿರಿ..

    ReplyDelete
  31. ಸೀತಾರಾಮ ಸರ್
    ತುಂಬಾ ಥ್ಯಾಂಕ್ಸ್..

    ReplyDelete
  32. ಧನ್ಯವಾದಗಳು ನಾಗರಾಜ್ ಸರ್

    ReplyDelete
  33. ಕನಸು...
    ಸ್ವೀಟ್ ಸ್ವೀಟ್ ಹನಿಗಳನ್ನು ಸವಿದಿದ್ದಕ್ಕೆ ಥ್ಯಾಂಕ್ಸ್..
    ಮತ್ತೆ ಬರೆಯುವ ಪ್ರಯತ್ನ ಖಂಡಿತಾ ಮುಂದುವರೆಯುತ್ತದೆ..
    ತಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಎಂದು ಆಶಿಸುತ್ತೇನೆ.. ಧನ್ಯವಾದಗಳು...

    ReplyDelete
  34. ಪ್ರಕಾಶಣ್ಣ..
    ಧನ್ಯೋಸ್ಮಿ... ನಿಮ್ಮ ಪ್ರೀತಿಪೂರ್ವಕ ಹಾರೈಕೆ ಒಂದೇ ಸಾಕು.. ಸಲಾಮ್ ಎಲ್ಲ ಬೇಡ.. :)ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  35. bahala ಚೆನ್ನಾಗಿದೆ... sooper ...

    ReplyDelete
  36. ತುಟಿಯ ತುದಿಗೆ
    ನಡೆದು ನಡಿಗೆ
    ನಗುವು ಕುಳಿತು ಅತ್ತಿತು.....

    ಈ ಸಾಲುಗಳು ತುಂಬಾ ಇಷ್ಟವಾಯಿತು....ಜೊತೆಗೆ ಎಲ್ಲ ಹನಿಗಳು.ತುಂಬ ಸಲ ಓದಿಕೊಂಡೆ....
    ತುಂಬ ತುಂಬ ತುಂಬ ಚೆನ್ನಾಗಿದೆ.....

    ReplyDelete
  37. ಕೋಟಿ ಮಿಂಚುಳ್ಳಿ
    ಮಿನುಗಿದರೂ
    ಮೂಡಲಾರದು ಹೊಂಬೆಳಕು
    ಇಬ್ಬನಿಯ ಹನಿ
    ಎಂದಿಗೂ
    ತೊಳೆಯಲಾರದು ಮೈ ಕೊಳಕು..
    Adbutavaagide. Kavanada hanigalu tunturu maleyanthe nirantara hariyutta irali
    ---Sriii:-)

    ReplyDelete
  38. ivugalu hanigalalla...jaladhaare...Tumbaa Cennagive...

    ReplyDelete
  39. hani hani koodi kerene tumbi hotu... sakkattagiddu dileep..

    ಕೋಟಿ ಮಿಂಚುಳ್ಳಿ
    ಮಿನುಗಿದರೂ
    ಮೂಡಲಾರದು ಹೊಂಬೆಳಕು

    ಇಬ್ಬನಿಯ ಹನಿ
    ಎಂದಿಗೂ
    ತೊಳೆಯಲಾರದು ಮೈ ಕೊಳಕು

    sakkat ista atu...

    Pravi

    ReplyDelete
  40. ರವಿಕಾಂತ ಸರ್
    ಹನಿಗವನಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಸಂತೋಷ.. ಧನ್ಯವಾದಗಳು..

    ReplyDelete
  41. ಗುರು..
    ತುಂಬಾ ಸಲ ಓದಿ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್..
    ಬಹಳ ದಿನಗಳ ನಂತರ ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯ್ತು..
    ಬರುತ್ತಿರಿ.. ಹರಸುತ್ತಿರಿ..
    ಧನ್ಯವಾದಗಳು

    ReplyDelete
  42. ಹನಿಹನಿಯ ಅಂಗಳಕ್ಕೆ ಸ್ವಾಗತ Srii
    ಹಾರೈಕೆಗೆ ಮತ್ತು ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್...

    ReplyDelete
  43. ಹನಿಗಳಲ್ಲಿ ಜಲಧಾರೆಯನ್ನು ಕಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಅಶೋಕ್ ಸರ್..

    ReplyDelete
  44. ಪ್ರವೀಣ್..
    ಹನಿಗಳನ್ನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  45. ಆಹಾ.. ಸುಮಧುರ ಹನಿಗಳು... ಥಟ್ಟನೆ ಸೆಳೆದವು... ಮನವನ್ನು ಕಾಡಿದವು....
    http://nenapinasanchi.wordpress.com/

    ReplyDelete