Tuesday, 15 June 2010

ಮಳೆ ಸಾಲು..!!ಬೇಸಿಗೆಯ ಬೇಗೆಯಲಿ
ಬಿಡದೇ ಬೇಯಿಸಿದ
ಸೂರ್ಯ
ಇಂದೇಕೋ ಮೋಡಗಳ
ಮರೆಯಲ್ಲಿ ಅವಿತಿದ್ದಾನೆ....

ಮಳೆಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ
ವರುಣ
ಮತ್ಯಾಕೋ ಮಧುರ ನೆನಪುಗಳ
ಹೊತ್ತು ತಂದಿದ್ದಾನೆ...

ಮನದಂಗಳದಿ
ನೆನಪ ಹನಿ ವರ್ಷ
ಕಳೆದು ಹೋಗಲು ಸಾಕು...
ತೋಳ ತೆಕ್ಕೆಯಲಿ ನೀನಿರಲು ಸಖಿ
ಮತ್ತಿನ್ನೇನು ಬೇಕು...??

54 comments:

 1. ದಿಲೀಪ್ ಅವರೇ,, ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ನಲ್ಲಿ ಕವನ ನೋಡಿ ತುಂಬಾ ಖುಷಿ ಆಯಿತು..
  ಮಳೆಯ ನೆನಪೇ ತುಂಬಾ ಖುಷಿ,,
  ಅದರೊಡನೆ ಬೆಸೆದಿರುವ ನೆನಪುಗಳು ಮಧುರಾತಿ ಮಧುರ..

  ತುಂಬಾ ಸುಂದರವಾದ ಕವನ,ಅದಕ್ಕೆ ತಕ್ಕ ಚಿತ್ರ..
  ಭಾವನೆಗಳನ್ನು ಪದಗಳ ಮೂಲಕ ಉಣಬಡಿಸಿದ್ದಕ್ಕೆ ಧನ್ಯವಾದಗಳು..

  ReplyDelete
 2. ಮಳೆಯಲ್ಲಿ ಮತ್ತೇರಿಸುವ ಕವನ!

  ReplyDelete
 3. YES YES, MATTINNENU BEKU ! CHENNAGIDE MAARAYARE !

  ReplyDelete
 4. ಮದುವೆಯಾದ ಹೊಸತರಲ್ಲಿ ಇರುವ ಮತ್ತು ಮಳೆಗಾಲದಲ್ಲಿ ಇನ್ನೂ ಏರು ಅಲ್ದ ದಿಲೀಪ್?? :P
  ಸೊಗಸಾಗಿ ಬರದ್ದೆ ..ಹೀಗೆ ಇನ್ನಷ್ಟು ಕವನಗಳ ನಿರೀಕ್ಷೆಯಲ್ಲಿ!!

  ReplyDelete
 5. A perfect one for a rainy date..... Sure is rocking!!!!! Kudos!!!!

  Ash....
  (http://asha-oceanichope.blogspot.com/)

  ReplyDelete
 6. ಮಳೆ ಹನಿಯ ಸಿಂಚನದಂತೆ, ಸೊಗಸಾಗಿದೆ ಈ ಕವನ.

  ReplyDelete
 7. ಮಳೆಯ ಆಗಮನದೊ೦ದಿಗೆ ಕವನಗಳು ಮಳೆಗರೆದ೦ತೆ ಮಳೆಯ ಸುತ್ತಾ ಎಲ್ಲಾ ಬ್ಲೊಗ್-ನಲ್ಲಿ ಕಾಣಿಸುತ್ತಿವೆ. ಕವನ ಚೆನ್ನಾಗಿದೆ.

  ReplyDelete
 8. Very nice...

  First rain, New umbrella, Smell of New bag and Books always remind my school days and the people linked to it.

  Thanks for reminding those days one again....

  ReplyDelete
 9. awesome lines..tumba tumba chennagide :)

  ReplyDelete
 10. chennaagide dileep..... barali innoo kavanagalu........

  ReplyDelete
 11. ಚೇತನಾ..
  ಹೌದು.. ತಣ್ಣನೆಯ ಮಳೆಯಲ್ಲಿ ಆತ್ಮೀಯರ ಜೊತೆಗೂಡಿ ಒಂದಿಷ್ಟು ಮಧುರ ನೆನಪುಗಳನ್ನು ಹರಡಿಕೊಂಡು ಕುಳಿತರೆ ಹೊತ್ತು ಕಳೆದದ್ದೆ ಗೊತ್ತಾಗುವದಿಲ್ಲ..
  ಬಹಳ ದಿನಗಳ ನಂತರ ಬ್ಲಾಗ್ ನತ್ತ ಮುಖ ಮಾಡಿರುವ ನನ್ನನ್ನ ಪ್ರೋತ್ಸಾಹ, ಹಾರೈಕೆಯ ನುಡಿಗಳಿಂದ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು..

  ReplyDelete
 12. ಸುನಾಥ್ ಸರ್..
  ಮಳೆ ಮತ್ತೇರಿಸುತ್ತದೆ.. ಮತ್ತಿನಲ್ಲಿ ಒಂದಷ್ಟು ಸಾಲುಗಳು ಹುಟ್ಟಿಕೊಳ್ಳುತ್ತವೆ.. ಹಾಗೆ ಹುಟ್ಟಿದ ಈ ಸಾಲುಗಳನ್ನ ಮೆಚ್ಚಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

  ReplyDelete
 13. ವೀ.ಆರ್.ಭಟ್ ರವರೆ..
  ನಿಜ.. ಮತ್ತಿನ್ನೇನೂ ಬೇಡ.. ನಿಮ್ಮ ಪ್ರತಿಕ್ರಿಯೆ, ಹಾರೈಕೆ ಮಾತ್ರ ಖಂಡಿತಾ ಬೇಕು.. ಧನ್ಯವಾದಗಳು..

  ReplyDelete
 14. ಸುಮನಕ್ಕ...
  ಹಿ. ಹಿ.. ಹೌದೆನ ಕಾಣ್ತು ನಂಗೂವ.. ಮಳೆಲ್ಲಿ ಮತ್ತು ಏರ್ತಾ ಇದ್ದು..:P ಮೆಚ್ಚುಗೆಯ ನುಡಿಗೆ ಹಾರೈಕೆಗೆ ಅನಂತ ಧನ್ಯವಾದಗಳು..

  ReplyDelete
 15. ಜ್ಯೋತಿ..
  ಪ್ರತಿಕ್ರಿಯೆಗಾಗಿ ತುಂಬಾ ತುಂಬಾ Thanks

  ReplyDelete
 16. Ash..

  Thanks a ton for liking and commenting on my post.. :)

  ReplyDelete
 17. SSK...

  ತುಂಬಾ ಧನ್ಯವಾದಗಳು...

  ReplyDelete
 18. ಸೀತಾರಾಮ ಸರ್..

  ಹೌದು.. ಎಲ್ಲೆಡೆ ಮಳೆಯ ಆಗಮನ ಆಗುತ್ತಿದೆ.. ನನ್ನ ಬ್ಲಾಗ್ ಅಂಗಳದಲ್ಲೂ ಆಗಿ ಬಿಡ್ತು ನೋಡಿ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.. ಬರುತ್ತಿರಿ..

  ReplyDelete
 19. ದಿಲೀಪ್,
  ಸೊಗಸಾದ ಕವನ...
  ಮತ್ತಷ್ಟು ಬರಲಿ....

  ReplyDelete
 20. ದಿಲೀಪ್ ಸರ್

  ಚೆನ್ನಾಗಿದೆ ಕವನ

  ReplyDelete
 21. ಆಹಾಹಾ
  ಸುರಿಯುತ್ತಿರುವ ಮಳೆಯಲ್ಲಿ , ಪ್ರಾಣಸಖಿ ನಿಮ್ಮ ತೋಳಲ್ಲಿ.... ನಿಜಕ್ಕೂ ಇನ್ನೇನು ಯಾಕೆ ಬೇಕು ಹೇಳಿ !!!!
  ಬಹುದಿನಗಳ ನಂತರ ಬರಹ ನೋಡಿ ಖುಷಿಯಾಯಿತು.

  ReplyDelete
 22. This comment has been removed by the author.

  ReplyDelete
 23. ’copy paste’ ಸ್ವಲ್ಪ ಕೈ ಕೊಟ್ಟಿದ್ದರಿಂದ ಹಿಂದಿನ ಕಾಮೆಂಟನ್ನು ಡಿಲೀಟಿಸಿದ್ದೇನೆ.
  ಕವನ ಬಹಳ ಚೆನ್ನಾಗಿದೆ, ಸುಮುಧುರವಾದ ಭಾವನೆಯನ್ನು ನವಿರಾಗಿ ಕವನದಲ್ಲಿ ಹಿಡಿದಿಟ್ಟೀದ್ದೀರಿ

  ReplyDelete
 24. Uday..
  That's true... First rain always takes us back to those golden moments.. Thanks a lot for the comments

  ReplyDelete
 25. Jayaram Sir..

  ಧನ್ಯವಾದಗಳು

  ReplyDelete
 26. ದಿನಕರ್ ಸರ್..
  ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್... ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇದ್ದರೆ ಖಂಡಿತ ಇನ್ನಷ್ಟು ಬರೆಯುವ ಇರಾದೆಯಿದೆ..

  ReplyDelete
 27. ಮಹೇಶ್ ಸರ್..
  ಧನ್ಯವಾದಗಳು.. :)

  ReplyDelete
 28. ಗುರು ಮೂರ್ತಿ ಸರ್..
  ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. :)

  ReplyDelete
 29. ಚಿತ್ರಾ ಮೇಡಮ್..
  ನಿಜ ನಿಜ ಅಷ್ಟಿದ್ದರೆ ಮತ್ತೇನೂ ಬೇಡ...
  ಬರಹ ನೋಡಿ ಖುಷಿ ಪಟ್ಟಿದ್ದಕ್ಕೆ ಮತ್ತು ಖುಷಿಯನ್ನು ಪ್ರತಿಕ್ರಿಯೆಯ ಮೂಲಕ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು... :)

  ReplyDelete
 30. ಸಾಗರಿಯವರೇ..
  ನೀವು ಡಿಲೀಟ್ ಮಾಡೋ ಮೊದ್ಲು ಕಾಮೆಂಟ್ ನೋಡಿ ನನಗೂ ಒಮ್ಮೆ ಕನ್ಫ್ಯೂಸ್ ಆಯ್ತು.. ಪರವಾಗಿಲ್ಲ.. ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

  ReplyDelete
 31. "ಕಳೆದು ಹೋಗಲು ಸಾಕು...
  ತೋಳ ತೆಕ್ಕೆಯಲಿ ನೀನಿರಲು ಸಖಿ
  ಮತ್ತಿನ್ನೇನು ಬೇಕು...??"
  ಪ್ರಶ್ನೆಯಂತ ಉತ್ತರ
  ಉತ್ತರದಂತ ಪ್ರಶ್ನೆ.
  ಕವನ ತುಂಬಾ ಇಷ್ಟ ಆಯಿತು ದಿಲೀಪ್

  ReplyDelete
 32. This comment has been removed by the author.

  ReplyDelete
 33. ದಿಲೀಪ್ರರವರೆ ನಿಮ್ಮ ಮಳೆಯ ಸಾಲಿನ ಕವಿತೆಯಲ್ಲಿ

  ಮಳೆಹನಿಯ ಮತ್ತಲ್ಲಿ
  ಮೈ ಮನವ ತೋಯಿಸಿದ
  ವರುಣ
  ಮತ್ಯಾಕೋ ಮಧುರ ನೆನಪುಗಳ
  ಹೊತ್ತು ತಂದಿದ್ದಾನೆ...

  ತುಂಬಾ ಚನ್ನಾಗಿದೆ. ಸಾರ್.

  ReplyDelete
 34. Hi Dileep..

  tumba dinada nantara adbhuta kavanadondige bandiddera.. maleya chaliyali.. sakhiya hita sparsha.. super

  pravi

  ReplyDelete
 35. NRK ಸರ್
  ತಣ್ಣನೆ ಮಳೆ ಬೀಳ್ತಾ ಇದ್ರೆ ಹಾಗೆ.. ಪ್ರಶ್ನೆ ಕೇಳಬೇಕೋ ಉತ್ರಾ ಹೇಳಬೇಕೋ ಗೊತ್ತಾಗದೆ ಪ್ರಶ್ನೆ ಉತ್ರಾ ಆಗತ್ತೆ... ಉತ್ರಾ ಪ್ರಶ್ನೆ ಆಗತ್ತೆ... ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

  ReplyDelete
 36. ಹರೀಶ್ ರವರೆ
  ಕವನದ ಸಾಲುಗಳ ಬಗ್ಗೆ ಮೆಚ್ಚುಗೆಯ ನುಡಿಗೆ ಧನ್ಯವಾದಗಳು

  ReplyDelete
 37. ಪ್ರವೀಣ್
  ತುಂಬಾ ತುಂಬಾ ಥ್ಯಾಂಕ್ಸ್..

  ReplyDelete
 38. ರವಿಕಾಂತ್ ಸರ್..
  ಧನ್ಯವಾದಗಳು..

  ReplyDelete
 39. ಕವನ ತುಂಬಾ ಚೆನ್ನಾಗಿದೆ ದಿಲೀಪ್...
  ಬಹಳ ದಿನಗಳ ಅಂತರದಲ್ಲಿ ಮಳೆ ನಿಮ್ಮಲ್ಲಿ ಸ್ಫೂರ್ತಿ ತರಿಸಿ, ಜನ್ಮಿಸಿದ ಸುಂದರ ಸಾಲುಗಳು. ಬರೀತಾ ಇರಿ ಹೀಗೆ....

  ಶ್ಯಾಮಲ

  ReplyDelete
 40. ಮನದಂಗಳದಿ
  ನೆನಪ ಹನಿ ವರ್ಷ
  ಕಳೆದು ಹೋಗಲು ಸಾಕು...
  ಉತ್ತಮ ಸಾಲುಗಳು. ನನ್ನದೊ೦ದು 'ಮಳೆ...' ಕವನ ನೆನಪಾಗುತ್ತಿದೆ. ನನ್ನ ಬ್ಲಾಗ್ ಗೆ ಹಾಕುತ್ತೇನೆ. ಭೇಟಿ ಕೊಡಿ.

  ReplyDelete
 41. ಶ್ಯಾಮಲ ಅವರೇ..
  ನೀವು ಹೇಳಿದಂತೆ ಬಹಳ ದಿನದ ಜಡತ್ವವನ್ನ ಮಳೆ ಒದ್ದು ಓಡಿಸಿರುವುದು ನಿಜ.. ಮತ್ತೆ ಬ್ಲಾಗ್ ಕಡೆ ಮುಖ ಮಾಡಿದ್ದೇನೆ..
  ಮಳೆಯ ಸಾಲುಗಳನ್ನು ಮೆಚ್ಚಿ ಪ್ರೋತ್ಸಾಹಕ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು..

  ReplyDelete
 42. ಪ್ರಭಾಮಣಿಯವರೇ..
  ಹನಿಹನಿ ಬ್ಲಾಗ್ ಗೆ ಸ್ವಾಗತ..
  ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ನಿಮ್ಮ ಬ್ಲಾಗ್ ನಲ್ಲಿ ಪ್ರಕಟಿತ ಮಳೆಯ ಕವನ ಓದಿದೆ.. ತುಂಬಾ ಇಷ್ಟವಾಯ್ತು.. ಆಗಾಗ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ..

  ReplyDelete
 43. ಅಬ್ಬ ಒಮ್ಮೆ ಮಳೆಯಲ್ಲಿ ನೆನೆದ ಅನುಭವ. ಅದ್ಭುತ ಕಲ್ಪನೆ ವರ್ಣಸಲಾದಷ್ಟು ಅನುಭವಕ್ಕೆ ಏನೆನ್ನಬೇಕೊ ತಿಳಿಯುತ್ತಿಲ್ಲ... ಧನ್ಯವಾದಗಳು

  ReplyDelete
 44. ದಿಲಿಪ್...

  ಹೊಸ ಬಾಳು..
  ಹೊಸ ಕನಸು...
  ಬದುಕಿಗೊಂದು ಹೊಸ ಭರವಸೆ ಕೊಡುವ ಸಂಗಾತಿ ಬಳಿಯಲ್ಲಿರಲು..
  ಜಗವೆಲ್ಲ ಸುಂದರ...
  ಪ್ರತಿ ಕ್ಷಣ ಮಧುರ...
  ಸುಮಧುರ...!

  ಚಂದದ ಕವನಕ್ಕೆ ಅಭಿನಂದನೆಗಳು...

  ಸ್ಸಾರಿ ತುಂಬಾ ತಡವಾಗಿ ಬಂದೆ...

  ReplyDelete
 45. ವಸಂತ್
  ವರ್ಣಿಸಲಾರದಷ್ಟು ಅನುಭವವನ್ನ ಈ ಕವನ ನಿಮಗೆ ಕೊಟ್ಟಿದೆ ಅಂದರೆ ನಾನು ಧನ್ಯ..
  ಕವಿತೆ ಮೆಚ್ಚಿ ಪ್ರತಿಕ್ರಿಯಿಸಿ ವರ್ಣಿಸಲಾರದಷ್ಟು ಸಂತಸ ನನಗೆ ನೀಡಿದ್ದಕ್ಕೆ ಧನ್ಯವಾದಗಳು..

  ReplyDelete
 46. ಪ್ರಕಾಶಣ್ಣ..
  ತಡವಾಗಿ ಸುರಿದರೂ ಮಳೆಯ ಸೊಬಗು, ಬೆಡಗು ಕಡಿಮೆಯಾಗದು..
  ನೀವು ತಡವಾಗಿ ಬಂದಿರೆಂದು ಖಂಡಿತಾ ಬೇಸರವಿಲ್ಲ... ಬಿಡುವಾದಾಗಲೆಲ್ಲ ಬಂದು ಹೀಗೆ ಪ್ರೋತ್ಸಾಹಿಸುತ್ತಿರಿ..
  ಧನ್ಯವಾದಗಳು...

  ReplyDelete
 47. Subrahmanya..
  Thanks a lot.. :)

  ReplyDelete
 48. ಬಹಳ ಚೆನ್ನಾಗಿದೆ !!!!!!! ನಿಮ್ಮ ಪ್ರತಿಯೊಂದು ಕವನ ಬಹಳ ಅದ್ಬುತ ವಾಗಿದೆ...ಒಂದ್ ಒಂದು ಕವನದಲ್ಲೂ ಸೊಗಸಾದ ಇಂಪಾದ ಸಾಲುಗಳು, ಪದಗಳು...ಪ್ರತಿಒಂದು ಕವನ, ಬೇರೆ ಬೇರೆ ತರದ ಜೀವನದ ರೇಖೆಯ ಬಗ್ಗೆ, ಜೀವನದ ಬಗ್ಗೆ, ಬಹಳ ಚೆನ್ನಾಗಿ ಹೇಳಿದ್ಹಿರಿ. ಬಹಳ ಅಂದ ಚಂದವಾದ ಬ್ಲಾಗ್. ನಿಮ್ಮ ಕವನಗಳು ಸಹ ಬಹಳ ಸುಂದರವಾಗಿದೆ :) :)

  ಹೀಗೆ ಬರಿಯುತ್ಹಿರಿ.

  ReplyDelete
 49. Creativity...
  ನನ್ನೆಲ್ಲ ಕವನಗಳನ್ನು ಓದಿ ಮೆಚ್ಚುಗೆಯ ಹಾಗೂ ಪ್ರೋತ್ಸಾಹದಾಯಕ ಮಾತುಗಳನ್ನ ಪೋಸ್ಟ್ ಮಾಡಿದ್ದಕ್ಕೆ ಅನಂತ ಧನ್ಯವಾದಗಳು...
  ಆಗಾಗ ಬ್ಲಾಗ್ ಗೆ ಭೇಟಿ ಕೊಡುತ್ತಿರಿ...

  ReplyDelete