Thursday 3 December 2009

ಕಳೆದು ಹೋಗಿದ್ದೇನೆ...!!



ಮಿತಿಯಿಲ್ಲದಂತೆ
ಮತ್ತನೇರಿಸುವ
ನಿನ್ನ ನೋಟದ ನಶೆ ಜಾಮಿನಲ್ಲಿ..

ಮೈ-ಮನದ ತುಂಬ
ಕುಣಿದೆದ್ದು ಸಂಚರಿಸಿದ
ಭಾವನೆಗಳ ಟ್ರಾಫಿಕ್ ಜಾಮಿನಲ್ಲಿ..

ಮನದ ಮಳಿಗೆಯಲಿ
ಒಪ್ಪವಾಗಿ ಜೋಡಿಸಿಟ್ಟ
ನಿನ್ನ ನೆನಪ ಸರಂಜಾಮಿನಲ್ಲಿ..

ಮಿಲನವೋ-ಅಗಲಿಕೆಯೊ
ಜೀವನವೋ-ಮರಣವೋ
ತಿಳಿಯದ ಅಂಜಾಮಿನಲ್ಲಿ...

ಕಳೆದು ಹೋಗಿದ್ದೇನೆ...!


ಬರುವುದೋ ಬಿಡುವುದೋ
ನಿರ್ಧಾರ ನಿನಗೆ ಬಿಟ್ಟಿದ್ದು...
ಹೋಗುವ ಮುನ್ನ
ನಿನ್ನೆದೆಯ ಪುಟಗಳಲಿ
ನನ್ನ ವಿಳಾಸ
ಬರೆದು ಹೋಗಿದ್ದೇನೆ...!!


ಚಿತ್ರ ಕೃಪೆ : ಅಂತರ್ಜಾಲ

40 comments:

  1. ಕವನ ಮಸ್ತ್... ಹೀಗೆ ಹೇಳಿದರೆ ಸರಿಯಾದಿತಾ?

    ವಿಳಾಸ ಅಳಿಸುವ ಮುನ್ನ,
    ಪುಟ ಹರಿದು ಹಾರುವ ಮುನ್ನ,
    ನಿನ ಬಾಳ ಅ೦ಗಳಕೆ,
    ಬೆಳಗಿ ಬರಲಿ ಮು೦ಜಾವಿನಲಿ.

    ReplyDelete
  2. ದಿಲೀಪ್,

    ಈ ಪರಿ ಕಳೆದುಹೋಗುವುದು ಒಂಥರ ಮಜವೇ ಅನ್ನಿಸುತ್ತೆ ಅಲ್ಲವೇ!

    ReplyDelete
  3. ದೀಲೀಪ ಕವಿತಾ ಛಲೊ ಅದ ಓದಿ ಖುಷಿ ಆತು

    ReplyDelete
  4. ಕಳೆದು ಹೋದ ನಿಮ್ಮನ್ನು ಅವರು ಹುಡುಕಿ ತಂದು, ನೀವು ಅವರೆದೆಯಲ್ಲಿ ಬರೆದ ವಿಳಾಸಕ್ಕೆ ನಿಮ್ಮನ್ನು ತಲುಪಿಸಲಿ, ಅವರು ಕೂಡ ಬಂದು ಅಲ್ಲಿ ನೆಲೆಸಲಿ ಎಂದು ಆಶಿಸುತ್ತೇನೆ. ಕವನ ತುಂಬಾ ಚೆನ್ನಾಗಿದೆ.

    ReplyDelete
  5. ಬೇಜಾರ್ ಮಾಡ್ಕೊಬೇಡಿ..ಬರ್ತಾಳೆ ಅವಳು..ಬರ್‍ದೇ ಎಲ್ಲಿ ಹೋಗ್ತಾಳೆ?

    ಕವನ ತುಂಬಾ ಚೆನ್ನಾಗಿದೆ..

    ReplyDelete
  6. ದಿಲೀಪ್ ಅವರೇ...

    ವಿಳಾಸ ಅವಳೆದೆಯಲ್ಲಿ ಬರೆದ ನಂತರ, ಕಳೆದುಹೋಗೋದು ಹೇಗೆ ಅಂತ? ಅವಳು ಬೇರೆಲ್ಲೂ ಕಳೆದುಹೋಗದೆ, ನಿಮ್ಮೆದೆಯಲ್ಲಿ ಬರೆದಿರುವ, ಅವಳ ವಿಳಾಸಕ್ಕೇ ಬಂದು ಬೇಗ ಸೇರಲಿ... ;-) ಕವನ ಚೆನ್ನಾಗಿದೆ.

    ReplyDelete
  7. ದಿಲೀಪ್,
    ಕವನ ತುಂಬಾ ಚೆನ್ನಾಗಿದೆ...

    ReplyDelete
  8. ದಿಲೀಪ್,
    ಸಕತ್ ಇದ್ದು. ಮನದ ಭಾವನೆಗಳು , ಅಳಿಯದ ಅಕ್ಷರಗಳು , ಮರೆಯದ ನೆನಪುಗಳು ಹಾಗು ಎದೆಯಲ್ಲಿ ಬರೆದ
    ವಿಳಾಸ ಇರುವಾಗ ಅವಳು ನಿಮ್ಮನ್ನು ಹೇಗಾದರು ಹುಡುಕುತ್ತಾಳೆ ಬಿಡಿ.
    ಸಿಕ್ಕಿದಾಗ ನಾನಿಗ ಸಿಕ್ಕಿದ್ದೇನೆ ಕವನ ಬರೆಯುವದನ್ನ ಮರೆಯಬೇಡಿ. ಹ್ ಹ್ ಹ್ :) [ ಗೊಳ್ ಎಂದು ನಗು]

    ReplyDelete
  9. ಬರುವುದೋ ಬಿಡುವುದೋ
    ನಿರ್ಧಾರ ನಿನಗೆ ಬಿಟ್ಟಿದ್ದು...
    ಹೋಗುವ ಮುನ್ನ
    ನಿನ್ನೆದೆಯ ಪುಟಗಳಲಿ
    ನನ್ನ ವಿಳಾಸ
    ಬರೆದು ಹೋಗಿದ್ದೇನೆ...!!

    sakkat kavite sir..:)

    ReplyDelete
  10. ಬರುವುದೋ ಬಿಡುವುದೋ
    ನಿರ್ಧಾರ ನಿನಗೆ ಬಿಟ್ಟಿದ್ದು...
    ಹೋಗುವ ಮುನ್ನ
    ನಿನ್ನೆದೆಯ ಪುಟಗಳಲಿ
    ನನ್ನ ವಿಳಾಸ
    ಬರೆದು ಹೋಗಿದ್ದೇನೆ...!!

    sakkat kavite sir

    ReplyDelete
  11. ತುಂಬ ಚೆನ್ನಾಗಿದೆ ಸರ್ ಕವನ.. :)

    ReplyDelete
  12. ಕವನ ಸುಂದರವಾಗಿದೆ
    ಹಿಡಿಸಿತು

    ReplyDelete
  13. ತುಂಬಾ ಚೆನ್ನಾಗಿದೆ ದಿಲೀಪ್.
    ಓದ್ತಾ ಇದ್ದಾಗ ಯಾಕೋ 'ಕರೆದರೂ ಕೇಳದೇ' ಹಾಡು ನೆನಪಾಯ್ತು.

    ReplyDelete
  14. ವಿಳಾಸ ಗೊತ್ತಿದೆಯಲ್ಲಾ. ಮತ್ತಿನ್ನೇನು... ಬಂದೆ ಬರ್ತಾರೆ... ಒಮ್ಮೆ ನೀವು ಹಿಂದೆ ನೋಡಬೇಕಷ್ಟೇ... ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  15. ಪರಮ್..
    ನಮಸ್ತೆ...
    ನಿಮ್ಮ ಶುಭಾಹಾರೈಕೆಗಳಿಗಾಗಿ ಧನ್ಯವಾದಗಳು..
    ನಿಮ್ಮ ಸಾಲುಗಳೂ ಸುಂದರವಾಗಿವೆ.. :)

    ReplyDelete
  16. ಶಿವು ಸರ್..
    ನಮಸ್ಕಾರ...
    ನಿಜ.. ಕಳೆದು ಹೋಗೋದ್ರಲ್ಲೂ ಒಂಥರ ಮಜವಿದೆ...
    ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ಬರುತ್ತಿರಿ...

    ReplyDelete
  17. ಉಮೇಶ್ ದೇಸಾಯಿಯವರ..
    ಶರಣು...
    ನಿಮ್ಗ ಖುಷಿ ಆತು ಅಂತಂದ್ರ ನಮ್ಗೂ ಭಾಳ ಖುಷೀ ಆಗ್ತದ ನೋಡ್ರಿ...
    ಇನ್ನಷ್ಟು ಕವಿತಾ ಬರಿಯೋದಕ್ಕ ಪ್ರೇರಣಾ ಸಿಗ್ತೈತಿ...
    ಕವಿತಾ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕ ಧನ್ಯವಾದ..

    ReplyDelete
  18. ಜ್ಯೋತಿ...
    ಹಹಹ..
    ನಿಮ್ಮ ಆಶಯಕ್ಕೆ ಧನ್ಯವಾದಗಳು..
    ಬರುತ್ತಿರಿ... :)

    ReplyDelete
  19. ಚೇತನಾ..
    ನೀವು ಹೇಳಿದ ಮೇಲೆ ಆಯ್ತು ಬಿಡಿ..
    ಬೇಸರ ಮಾಡಿಕೊಳ್ಳೋದಿಲ್ಲ...
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

    ReplyDelete
  20. ಶಾಮಲಾ ಮೇಡಮ್...
    ನಮಸ್ತೆ...
    ಹಹಹ.. ನಿಜ... ಹೀಗಿದ್ದಾಗ ಕಳೆದು ಹೋಗೋದು ಕಷ್ಟ.. ಆದರೂ ಕಳೆದು ಹೋದ್ರೆ ಅಂತ ಭಯ... :P
    ನಿಮ್ಮ ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು... :)

    ReplyDelete
  21. ಮಹೇಶ್..
    ನಮಸ್ತೆ..
    ಧನ್ಯವಾದಗಳು..

    ReplyDelete
  22. ಶಿವಪ್ರಕಾಶ್...
    ನಮಸ್ಕಾರ...
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. :)

    ReplyDelete
  23. ಶ್ರೀಧರ್..
    ಹಹಹ.. ಅಡ್ದಿಲ್ಲೆ.. ಸಿಕ್ಕಿದ್ ಕೂಡ್ಲೇ "ನಾನೀಗ ಸಿಕ್ಕಿ ಬಿದ್ದಿದ್ದೇನೆ" ಹೇಳಿ ಬರೀತಿ... :)
    ಕವನ ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  24. ರಂಜೀತ್..
    ನಮಸ್ತೆ..
    ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..
    ಬರುತ್ತಿರಿ.. :)

    ReplyDelete
  25. ಸುಮಾ..
    ನಮಸ್ತೆ..
    ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  26. ಗುರುಮೂರ್ತಿ ಸರ್..
    ನಮಸ್ಕಾರ..
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ಬರುತ್ತಿರಿ.. :)

    ReplyDelete
  27. ಆನಂದ..
    ನಮಸ್ತೆ..
    ಕರೆದರೂ ಕೇಳದೇ ಹಾಡನ್ನು ನನಗೂ ನೆನಪಿಸಿದ್ದಕ್ಕೆ
    ಮತ್ತು ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

    ReplyDelete
  28. ರಘು..
    ನಮಸ್ತೆ..
    ವಿಳಾಸ ಗೊತ್ತಿದೆ ಅಂತ ಸ್ವಲ್ಪ ಧೈರ್ಯ..
    ಆದ್ರೆ ಆಗ್ಲಿಂದಾ ಹಿಂದೆ ತಿರುಗಿ ನೋಡ್ತಿದೇನೆ...
    ನೀವು ಹೇಳಿದಂತೆ ಆದಷ್ಟು ಬೇಗ ಬಂದ್ರೆ ತುಂಬಾ ಸಂತೋಷ..
    ಪ್ರತಿಕ್ರಿಯೆಗಾಗಿ ಧನ್ಯವಾದಗಳು... ಬರುತ್ತಿರಿ.. :)

    ReplyDelete
  29. ಎಂದಿನಂತೆ..ಕವನ ಸೂಪರ್ ಆಗಿದೆ...

    ಕನ್ನಡ, हिन्दी ಮತ್ತು english ಪದಗಳ 'ಮಿಕ್ಸಿಂಗ್' ಚೆನ್ನಾಗಿದೆ!

    ನಿಮ್ಮ ವಯಸ್ಸಿನಲ್ಲಿ ಈ ತರಹ ಕಳೆದು ಹೋಗಕ್ಕೆ ಎಲ್ಲರೂ ಬಯಸ್ತಾರೆ ಬಿಡಿ!!!

    ಆದ್ರೂ ನೀವು ಜಾಣರೇ..ವಿಳಾಸ ಬರೆಯಕ್ಕೆ ಮರೆತಿಲ್ಲ ನೋಡಿ!!!

    ReplyDelete
  30. ದಿಲಿಪ್...

    ಸೊಗಸಾಗಿದೆ...

    ಅವಳದೇ..
    ನೆನಪು..
    ಹೃದಯದ ತುಂಬ
    ಆವರಿಸಿದೆಯಲ್ಲ....
    ಅವಳ..
    ವರಿಸುವ...
    ಪ್ರಯತ್ನ ಮಾಡಿಬಿಡಿ...

    ಚಂದದ ಕವನಕ್ಕೆ ಅಭಿನಂದನೆಗಳು...

    ReplyDelete
  31. ವಾಹ್ ವಾಹ್... ಸೂಪರಾಗಿದೆ ಗುರು...

    ReplyDelete
  32. ಸುಮನಾ ಮೇಡಮ್...
    ಹಹಹ... ನಿಜ... ಎಲ್ಲರೂ ಕಳೆದು ಹೋಗೋಕೆ ಬಯಸ್ತಾರೆ.. ಕಳೆದು ಹೋಗ್ತಾರೆ ಕೂಡಾ...
    To be at safer side ವಿಳಾಸ ಬರೆದೆ...
    ಮಿಕ್ಸಿಂಗ್ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ತುಂಬಾ ತುಂಬಾ ಥ್ಯಾಂಕ್ಸ್.. :)

    ReplyDelete
  33. ಪ್ರಕಾಶಣ್ಣ..
    ಪ್ರಯತ್ನ ಮಾಡೇ ಬಿಡು ಅಂತ ಹರಸಿದ್ದಕ್ಕೆ ಧನ್ಯವಾದಗಳು..
    ಪ್ರತಿಕ್ರಿಯೆಗಾಗೆ ತುಂಬಾ ತುಂಬಾ ಥ್ಯಾಂಕ್ಸ್..

    ReplyDelete
  34. ರವಿಕಾಂತ ಸರ್..
    ತುಂಬಾ ಥ್ಯಾಂಕ್ಸ್.. :)

    ReplyDelete
  35. ದಿಲೀಪ್,
    ನೀವು ಕಳೆದು ಹೋದ ರೀತಿ ಸಖತ್ ಚೆನ್ನಾಗಿದೆ ! ವಿಳಾಸ ಇದ್ದ ಮೇಲೆ , ಹುಡುಕಿಕೊಂಡು ಬರಲು ಕಷ್ಟವಿಲ್ಲ ಬಿಡಿ ! ಬರುತ್ತಾರೆ !

    ReplyDelete
  36. ಚಿತ್ರಾ ಮೇಡಂ..
    ತುಂಬಾ ಥ್ಯಾಂಕ್ಸ್.. ಮೆಚ್ಚುಗೆಯ ನುಡಿಗಳಿಗೆ ಹಾಗೂ ಹಾರೈಕೆಗೆ..

    ReplyDelete
  37. Hi Hegade,
    sumne noDi hogoNa anta bande...
    but bandaga kamentisade iralagalilla...
    oLagina feelingsanne touch maaDtiddeeralla...!! abbaaa...
    nice!

    regards,
    giri

    ReplyDelete
  38. ಹಾಯ್. neevu kanuva kanasugalu nanasagali

    ReplyDelete