Thursday 16 July 2009

ಪ್ರೀತಿಯ ಲೆಕ್ಕಾಚಾರ...!!

ಅಧರ ಅಧರಗಳ
ಮಧುರ "ಸಂಕಲನ"...
ಸಮಕ್ಷಮ..ಸಮಾಗಮ
ವ್ಯಥೆಯ "ವ್ಯವಕಲನ"
ಮುತ್ತು ಗುಣಿಲೆ ಹತ್ತು..
ನಿಲ್ಲದ "ಗುಣಾಕಾರ"
ಮತ್ತು ಬಾಗಿಲೆ ಹೊತ್ತು
ಗೆಲ್ಲದ "ಭಾಗಾಕಾರ"...
ನಿನ್ನಲ್ಲಿ ನನ್ನ
ಕೂಡಿ-ಕಳೆದು..
ಗುಣಿಸಿ - ಭಾಗಿಸಿದರೂ..
ಉಳಿದಿದ್ದು..
ಒಂದೇ ಉಸಿರು…
ಒಂದೇ ಕನಸು…
ಒಂದೇ ಪ್ರಾಣ…

ಬಲು ವಿಚಿತ್ರ..
ಪ್ರೀತಿಯ ಲೆಕ್ಕಾಚಾರ

13 comments:

  1. ದಿಲೀಪ್,

    ಪ್ರೀತಿಯಲ್ಲಿ ಲೆಕ್ಕಾಚಾರವೇ..!

    ReplyDelete
  2. ಏನು ಮಾಡೋದು ಶಿವು ಸರ್..
    Recession ಆಲ್ವಾ...ಅದ್ಕೇ ಎಲ್ಲ ಕಡೇನೂ ಲೆಕ್ಕಾಚಾರ ಸರಿಯಾಗಿ ಇದ್ರೆ ಒಳ್ಳೇದು ಅನ್ನಿಸ್ತು...

    ReplyDelete
  3. ಲೆಕ್ಕಾಚಾರ ಚೆನ್ನಾಗಿದೆ!

    ReplyDelete
  4. Sunaath...

    Tumbaa thanks... aagaga bandu heege protsahisuttiri..

    Dileep Hegde

    ReplyDelete
  5. ಲೆಕ್ಕ ಅಂದ್ರೆ ನಂಗೆ ಗಾಬರಿ.. ನೀವು ನೋಡಿದ್ರೆ ಎಷ್ಟೆಲ್ಲಾ ಲೆಕ್ಕ ಹಾಕಿದ್ದೀರಲ್ಲ....ಒಂಥರ ಡಿಫರೆಂಟ್ ಅನ್ನಿಸ್ತು....

    keep writing!!

    ReplyDelete
  6. ಏನ್ ಬೇಕಾದ್ರೂ ಅನ್ನಿ 1,2,3 ಅ೦ತಾ ಲೆಕ್ಕ ಮಾತ್ರ ಕೇಳಬೇಡಿ ನಾ ಲೆಕ್ಕದಲ್ಲಿ ಸ್ವಲ್ಪ ಹಿಂದೆ .......
    ದಿಲೀಪ್ ತುಂಬಾ ಚೆನ್ನಾಗಿದೆ ಲೆಕ್ಕಾ.. ಹೀಗೆ ಬರಿತಾ ಇರಿ....ಒಂದಿಷ್ಟು ಮಾತು+ ಒಂದಿಷ್ಟು ಕವನ = (ಒಂದಿಷ್ಟು) ಹನಿ :p

    (ಹೀಗೆ ಒಂದಿಷ್ಟು ಹನಿ ಇರಲಿ)

    ReplyDelete
  7. ಸುಮನಾ....

    ತುಂಬಾ ಥ್ಯಾಂಕ್ಸ್... ಹೀಗೆ ಆಗಾಗ ಬರುತ್ತೀರಿ...

    ReplyDelete
  8. ರಂಜಿತಾ..

    ಸಿಲ್ಲಿ ಲಲ್ಲಿ ನೆನಪಿಸಿದ್ದಕ್ಕೆ, ಕವನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.. ನಿಮ್ಮ equation ಒಪ್ಪಲೇ ಬೇಕು...

    ReplyDelete
  9. ಆಹಾಹಾ ದಿಲೀಪ್,
    ಎಂಥಾ ಸುಂದರವಾದ ಲೆಕ್ಕಾಚಾರ !
    ಹನಿ ಹನಿ ಲೆಕ್ಕಾಚಾರ ಮಾಡದೆ , ಹೆಚ್ಚು ಹೆಚ್ಚು ಬರೆಯುತ್ತಿರಿ, ಚೆನ್ನಾಗಿದೆ

    ReplyDelete
  10. ಚಿತ್ರಾ..

    ಲೆಕ್ಕಾಚಾರ ಇಷ್ಟ ಪಟ್ಟಿದ್ದಕ್ಕೆ ತುಂಬಾ thanks... ಇನ್ನೂ ಹೆಚ್ಚು ಬರೆಯೋದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ...

    ಧನ್ಯವಾದಗಳು..

    ReplyDelete
  11. ಪ್ರೀತಿಯಲ್ಲೂ ವೃತ್ತಿಧರ್ಮವೆ?!" ನಾಕೊಂದ್ಲೆ ನಾಕು, ನಾಕೆರಡ್ಲೆ ಎಂಟು.." ಹಾಡು ನೆನಪಾಯ್ತು.. :-)

    ReplyDelete
  12. ಜಯಲಕ್ಷ್ಮಿ..

    ಈ ಕವಿತೆಯಲ್ಲಿ ಪ್ರೀತಿಯಲ್ಲೂ ವೃತ್ತಿಧರ್ಮ ನುಸುಳಲು ಪ್ರಯತ್ನಿಸಿ ಸೋತಿದೆ...!! ಕೊನೆಗೆ ಗೆದ್ಡಿದ್ದು ಪ್ರೀತಿ ಮಾತ್ರ...

    ಪ್ರತಿಕ್ರಿಯೆಗೆ ಧನ್ಯವಾದಗಳು...

    ದಿಲೀಪ್ ಹೆಗಡೆ

    ReplyDelete
  13. Lekkachara makes DIL Kaabra.....

    ReplyDelete